ಮೇಷ: ಹೆಚ್ಚು ಚಿಂತಿಸುತ್ತೀರಿ, ಸಣ್ಣ ಸಣ್ಣ ವಿಚಾರಗಳನ್ನು ನಿಮಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತೀರಿ. ನಿಮ್ಮ ಚಿಂತೆ ಹೆಚ್ಚಲು ಕಾರಣ ಈ ಸ್ವಭಾವವೇ. ಈಗ ನಿಮಗೆ ಉತ್ತಮ ಯೋಗವಿದೆ. ಹಳಸಲು ಚಿಂತೆಗಳಿಂದ ಹೊಸಬಂದು ಹೊಸ ಯೋಚನೆಗಳಿಗೆ ಚೈತನ್ಯ ತುಂಬಿ. ಸಾವಧಾನದಿಂದ ಅವಲೋಕಿಸುವುದನ್ನು ರೂಢಿಸಿ. 

ವೃಷಭ: ಹಾಡುವುದು ಹಕ್ಕಿಗಿಷ್ಟ. ಯಾರಾದರೂ ಕೇಳಿದರೂ ಕೇಳದಿದ್ದರೂ ಹಕ್ಕಿ ಹಾಡುತ್ತೆ. ನಿಮ್ಮ ಸ್ವಭಾವವೂ ಸ್ವಲ್ಪ ಹೀಗೆ. ನಿಮ್ಮಷ್ಟಕ್ಕೆ ನಿಮ್ಮ ಆತ್ಮತೃಪ್ತಿಗೆ ಕೆಲಸ ಮಾಡೋದನ್ನ ಹೆಚ್ಚು ಇಷ್ಟಪಡುತ್ತೀರಿ. ಇದೇ ನಿಮ್ಮ ದುಃಖ ಕಡಿಮೆ ಮಾಡುತ್ತೆ. ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ. ಗಣಪನನ್ನು ಆರಾಧಿಸಿ.

ಮಿಥುನ: ನಿಮಗೆ ಮೇಲರಿಮೆ ಹೆಚ್ಚು. ಸದ್ಯಕ್ಕೆ ಅದೇ ನಿಮ್ಮ ಶತ್ರು. ಕಷ್ಟಗಳು ಹೆಚ್ಚಿವೆ. ಅದನ್ನೇ ನೋಡುತ್ತಿದ್ದರೆ ಮತ್ತೂ ಹೆಚ್ಚಾಗುತ್ತದೆ. ಮನಸ್ಸನ್ನು ಬೇರೆಡೆ ತಿರುಗಿಸಿ, ಖುಷಿಯಾಗಿರಲು ಪ್ರಯತ್ನಿಸಿ. ಹಣಕಾಸಿನ ಸಮಸ್ಯೆ ಆಗಬಹುದು. ಕಣ್ಣಿನ ಸಮಸ್ಯೆ ಬರಬಹುದು. ಹುಷಾರಾಗಿರಿ. 

ಕಟಕ: ನಿಮ್ಮ ಆಸಕ್ತಿಗಳು, ಹವ್ಯಾಸಗಳೇ ನಿಮ್ಮನ್ನೀಗ ಕಾಯಬೇಕು. ಗ್ರಹ ಗತಿಗಳು ಪೂರಕವಾಗಿಲ್ಲ. ನೀವಂದುಕೊಂಡದ್ದು ಉಲ್ಟಾ ಆಗಬಹುದು. ಏನೇ ಆದರೂ ನಿಮ್ಮ ನಡೆಯ ಬಗ್ಗೆ ಸ್ಪಷ್ಟತೆ ಇರುವಂತೆ ನೋಡಿಕೊಳ್ಳಿ. ಯಾರ ಬಗ್ಗೆಯೂ ಹೆಚ್ಚು ನಿರೀಕ್ಷೆ ಬೇಡ. ದುರ್ಗೆಯನ್ನು ನೆನೆಯಿರಿ. 

ಸಿಂಹ: ನಿಮಗೀಗ ಶುಭವಿದೆ. ಹಿಂಜರಿಕೆ ಬೇಡ, ನಾಳೆ ಮಾಡಬೇಕೆನ್ನುವ ಕೆಲಸವನ್ನು ಇಂದೇ ಮಾಡಿ. ಭವಿಷ್ಯದ ಬಗ್ಗೆ ಹೆಚ್ಚು ಯೋಚನೆ ಬೇಡ. ಸದಾ ಇತರರ ಬಗ್ಗೆಯೇ ಯೋಚಿಸುತ್ತಿರಬೇಡಿ. ಅವರ ಸ್ವಂತ ನಡೆಗೆ ಅಡ್ಡಿ ಬರಬೇಡಿ. ನಿಮಗಾಗಿ ಸ್ವಲ್ಪ ಟೈಮ್ ಕೊಡಿ. ಹ್ಯಾಪಿಯಾಗಿರಿ. ಇತರರನ್ನೂ ಖುಷಿಯಿಂದಿರಲು ಬಿಡಿ. 

ಕನ್ಯಾ: ನಿಮ್ಮ ಸೃಜನಶೀಲತೆ ಹೊರ ಜಗತ್ತಿಗೆ ತೆರೆದುಕೊಳ್ಳುವ ಸಮಯ. ಅದನ್ನು ಬಳಸಿಕೊಳ್ಳಿ. ಸೋಮಾರಿತನ ಬಿಟ್ಟು ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತನ್ನಿ. ಖುಷಿ ಹೆಚ್ಚಲಿದೆ. ಆರೋಗ್ಯದ ಬಗೆಗೂ ಚಿಂತೆ ಬೇಡ. ಖರ್ಚು ಮಾಡುವುದರಲ್ಲಿ ಹಿಡಿತವಿರಲಿ. 

ತುಲಾ: ಹಿಂಜರಿಕೆಯ ಗುಣ ಬಿಡಿ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಒಂದು ಹೆಜ್ಜೆ ಇಡಲು ಹತ್ತು ಸಾರಿ ಯೋಚಿಸಿದರೂ ಏನಾಗಬೇಕೋ ಅದಾಗಿಯೇ ಆಗುತ್ತದೆ. ಬಾಸ್ ಬೈದರೆ ತಲೆ ಕೆಡಿಸಿಕೊಳ್ಳಬೇಡಿ. ಉದ್ಯೋಗದಲ್ಲಿ ಕಷ್ಟವಿದೆ. ಆರ್ಥಿಕವಾಗಿ ಸಮಸ್ಯೆ ಬರಬಹುದು. 

ಗ್ರಹಕ್ಕೂ ಶನಿ ಪ್ರದೋಷಕ್ಕೂ ಏನೀ ಸಂಬಂಧ?

ವೃಶ್ಚಿಕ: ವಿಚಾರಗಳನ್ನು ಮನಸ್ಸಿನಲ್ಲಿಟ್ಟು ಕೊರಗಬೇಡಿ. ಮುಕ್ತವಾಗಿ ಚರ್ಚಿಸಿ, ಯಾರಿಗೊತ್ತು, ಅಲ್ಲೇ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು. ವೈಯುಕ್ತಿಕ ಬದುಕಿನಲ್ಲಿ ಏರುಪೇರಾಗಬಹುದು, ಉದ್ಯೋಗದಲ್ಲಿ ನೆಮ್ಮದಿ, ಸಂಗಾತಿಯ ಜೊತೆಗೆ ವಿರಸ. ವಿಷ್ಣುವನ್ನು ಭಜಿಸಿ, ನಿಮ್ಮ ಕಷ್ಟ ನಿವಾರಣೆಯಾಗುವುದು. 

ಧನಸ್ಸು: ಅವಮಾನ, ಸೋಲು ನಿಮ್ಮನ್ನು ಪರೀಕ್ಷಿಸಲು ಬಂದಿದೆ ಎಂದೇ ತಿಳಿದುಕೊಳ್ಳಿ. ಮುಂದೆ ಒಳ್ಳೆಯ ದಿನಗಳಿವೆ. ಅವಸರ ಬೇಡ, ಇತರರ ಬಗ್ಗೆ ತುಸು ಆಲೋಚಿಸಿ ಮುನ್ನಡೆಯಿರಿ. ಈ ವಾರ ನಿಮ್ಮ ಟೆನ್ಶನ್ ಕಡಿಮೆಯಾಗಲಿದೆ.

ಮಕರ: ಆರೋಗ್ಯದ ಕಡೆ ಗಮನ ಹರಿಸಿ. ಆರ್ಥಿಕವಾಗಿ ಚೇತರಿಕೆ ಕಂಡು ಬರಬಹುದು. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲ ಸಿಗಲಿದೆ. ಸದಾ ಕೊರಗಿಕೊಂಡೇ ಇರಬೇಡಿ, ಕಷ್ಟ ಮುಗಿದು ಸುಖದ ದಿನಗಳು ಮುಂದಿವೆ.  

ಕುಂಭ: ನನಗೆ ಸುಸ್ತಾಗಿದೆ ಅಂದುಕೊಂಡರೆ ಆಯಾಸ ಇನ್ನೂ ಹೆಚ್ಚು. ಮೈ ಕೊಡವಿ ಕೆಲಸದಲ್ಲಿ ತೊಡಗಿಸಿ. ಎಲ್ಲಾ ಕಡೆಯಿಂದ ನೆರವು ಹರಿದು ಬರಲಿದೆ. ಹೆಚ್ಚು ಉಲ್ಲಾಸದಿಂದಿರಲು ಪ್ರಯತ್ನಿಸಿ. ಸದಾ ಸೋತ ಮುಖಭಾವ ಬೇಡ. ಸ್ವಾರ್ಥಕ್ಕೋಸ್ಕರ ದೇವರಿಗೆ ಕೈ ಮುಗಿಯೋದರಲ್ಲಿ ಅರ್ಥವಿಲ್ಲ. 

ಮೀನ: ಸಣ್ಣ ಪುಟ್ಟ ಕಿರಿಕಿರಿಗಳು ಇದ್ದದ್ದೇ. ಆದರೆ ನಿಮ್ಮ ನಿಷ್ಕಲ್ಮಷ ಮನೋಭಾವ ಎಲ್ಲ ಕಷ್ಟಗಳನ್ನೂ ಎದುರಿಸುವ ಧೈರ್ಯ ಕೊಡುವುದು. ಸಂಗಾತಿಯ ಬಗ್ಗೆ ಕಾಳಜಿ ಇರಲಿ. ಬಗಲಲ್ಲೇ ಇರುವ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಹವ್ಯಾಸಗಳನ್ನು ಮುಂದುವರಿಸಿ, ಖುಷಿಯಿಂದಿರಿ.