Asianet Suvarna News Asianet Suvarna News

ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು

13 ಜನೆವರಿ 2020 ರ ಭವಿಷ್ಯ| ಇಂದು ನಿಮ್ಮ ಭವಿಷ್ಯ ಹೇಗಿದೆ? ಯಾರಿಗೆ ಶುಭ? ಇಲ್ಲಿದೆ ವಿವರ

Daily Astrology in Kannada 13 Jan 2020 Horoscope
Author
Bengaluru, First Published Jan 13, 2020, 7:15 AM IST
  • Facebook
  • Twitter
  • Whatsapp

ಮೇಷ: ಆಗುವ ಕೆಲಸ ಆಗುತ್ತದೆಂದು ಸುಮ್ಮನೆ ಇದ್ದರೆ ಯಾವುದು ಆಗದು. ಅದರಲ್ಲಿ ನಿಮ್ಮ ಶ್ರಮ ಇರಬೇಕು. ಆಗ ಮಾತ್ರ ಜಯ ಸಿಗುತ್ತದೆ.

ವೃಷಭ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ. ದಿನದಂತ್ಯದಲ್ಲಿ ಧನ ಲಾಭ. ಮಕ್ಕಳಿಂದ ಮನೆಯಲ್ಲಿ ನೆಮ್ಮದಿ. ಮಕ್ಕಳಿಗೆ ಶುಭ ದಿನ.

ಮಿಥುನ: ಇಷ್ಟು ದಿನ ನೀವು ಪ್ರಯತ್ನಿಸುತ್ತಿದ್ದ ವಿಷಯದಲ್ಲಿ ಸಫಲರಾಗುವಿರಿ. ಮನೆಯವರಿಂದ ಪ್ರಶಂಸೆಗೆ ಪಾತ್ರರಾಗುವಿರಿ. ಶುಭದಿನ.

ಕಟಕ: ಬೆಂಕಿ ಬಗ್ಗೆ ಎಚ್ಚರ ಇರಲಿ. ಮನಸ್ಸಲ್ಲಿ ಭಯ, ಆತಂಕವಿದ್ದಲ್ಲಿ ಅದನ್ನು ಧ್ಯಾನದಿಂದ ಮಾತ್ರ ದೂರಾಗಿಸಲು ಸಾಧ್ಯ. ಮಕ್ಕಳಿಗೆ ಶುಭದಿನ

ಸಿಂಹ: ಇಂದು ತುಂಬಾ ಮೌನವಾಗಿರುವಿರಿ. ಆದರೆ ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಯಶಸ್ಸು ಸಿಗಲಿದೆ. ಸಂತೋಷ ಹೆಚ್ಚಲಿದೆ.

ಒಂದು ರಾಶಿಗೆ ಲಾಭದೊಂದಿಗೆ ಒಳ್ಳೆಯ ವಿಚಾರ ಕಾದಿದೆ : ವಾರ ಭವಿಷ್ಯ

ಕನ್ಯಾ: ಮನುಷ್ಯನೂ ವಿಷ ಜಂತುವಿದ್ದಂತೆ. ಹಾಗಾಗಿ ತಕ್ಷಣಕ್ಕೆ ಯಾರನ್ನೂ ನಂಬದಿರುವುದು ಒಳಿತು. ಮನೆಯಲ್ಲಿ ನೆಮ್ಮದಿ ಇರಲಿದೆ. ಶುಭಫಲ.

ತುಲಾ: ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿ ಕೊಂಡು ಮುಂದೆ ಸಾಗಿ. ಆತುರ ಇರಲಿ. ಅತಿ ಯಾದ ಆತುರ ಬೇಡ. ಜವಾಬ್ದಾರಿ ಇರಲಿದೆ.

ವೃಶ್ಚಿಕ: ದೂರದ ಪ್ರಯಾಣದಿಂದ ಆಯಾಸವಾಗಲಿದೆ. ಮಹತ್ವದ ವಿಚಾರವಗಳನ್ನು ಮನೆಯವರ ಜೊತೆ ಸೇರಿ ನಿರ್ಧರಿಸಿದರೆ ಒಳಿತು.

ಧನಸ್ಸು: ಆರೋಗ್ಯದ ಕಡೆ ಗಮನವಿರಲಿ. ದೇಹಕ್ಕೆ ಒಗ್ಗುವ ಆಹಾರ ಪದಾರ್ಥಗಳನ್ನು ಸೇವಿಸಿ. ದಿನದಂತ್ಯದಲ್ಲಿ ಸಿಹಿ ಸುದ್ದಿ ಕೇಳಲಿದ್ದೀರಿ.

ಮಕರ: ಮಕ್ಕಳಿಗೆ ಓದಿನಲ್ಲಿ ಸ್ವಲ್ಪ ಅಡೆತಡೆ ಬಂದರೂ ದಿನದಂತ್ಯದಲ್ಲಿ ನಿರಾಳರಾಗಿ ಪೂರ್ಣಗೊಳಿಸುವಿರಿ. ಶ್ರಮದ ದಿನ ನಿಮ್ಮದಾಗುತ್ತದೆ.

ಕುಂಭ: ಹೊಸ ಸ್ನೇಹಿತರು ಸಿಗಲಿದ್ದು, ಹಳೆಯ ಸ್ನೇಹಿತರ ಭೇಟಿ ಸಾಧ್ಯತೆ. ಪುರುಷರಿಗೆ ಆರೋಗ್ಯದಲ್ಲಿ ವ್ಯತ್ಯಯವಾಗಬಹುದು.

ಮೀನ: ಕೆಲಸ ಕಾರ್ಯಗಳಲ್ಲಿ ಗಡಿಬಿಡಿ ಬೇಡ. ಎಲ್ಲಾ ಕಾರ್ಯ ಸುಗಮವಾಗಿ ಆಗಲಿದೆ. ತಲೆಕೆಡಿಸಿ ಕೊಂಡರೆ ಆರೋಗ್ಯದಲ್ಲಿ ಏರುಪೇರಾಗಲಿದೆ.

Follow Us:
Download App:
  • android
  • ios