ಮೇಷ
ಸ್ನೇಹಿತನ ಕಷ್ಟಕ್ಕೆ ನೆರವಾಗುವಿರಿ. ಸಮಯಕ್ಕೆ
ಸರಿಯಾಗಿ ಅಂದುಕೊಂಡ ಕಾರ್ಯಗಳನ್ನು
ಮುಗಿಸುವ ಎಲ್ಲಾ ಪ್ರಯತ್ನಗಳನ್ನೂ ಮಾಡಲಿ
ದ್ದೀರಿ. ಹೊಸ ವ್ಯಕ್ತಿಗಳ ಪರಿಚಯ. ಆರೋಗ್ಯದಲ್ಲಿ ಸಣ್ಣ
ವ್ಯತ್ಯಯವಾಗಲಿದೆ. ನಂಬಿದ ವ್ಯಕ್ತಿಗಳೇ ಸೂಕ್ತ ಸಮಯ
ದಲ್ಲಿ ಕೈ ಕೊಡಲಿದ್ದಾರೆ. ವಾಹನ ಚಾಲನೆ ವೇಳೆ ಎಚ್ಚರ.

ವೃಷಭ
ಜೀವನ ಎಂದ ಮೇಲೆ ಸಣ್ಣ ಪುಟ್ಟ
ತಪ್ಪುಗಳಾಗುವುದು ಸಾಮಾನ್ಯ. ಅದರ ಬಗ್ಗೆಯೇ
ಹೆಚ್ಚು ಚಿಂತೆ ಮಾಡುವುದು ಬೇಡ. ಹಳೆಯದ್ದನ್ನು
ಮರೆತು ಹೊಸತನದತ್ತ ಹೆಜ್ಜೆ ಇಡಿ. ಮೊದಲು ನಿಮ್ಮ ಶಕ್ತಿ
ಸಾಮರ್ಥ್ಯವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ.
ಇಂದಿನ ಸೋಲು ನಾಳೆ ಗೆಲುವಾಗಿ ಬದಲಾಗಲಿದೆ.

ಮಿಥುನ
ನಿಮ್ಮನ್ನು ಅತಿಯಾಗಿ ಪ್ರೀತಿ ಮಾಡುವ ವ್ಯಕ್ತಿಗಳಿಗೆ
ನೋವು ನೀಡಬೇಡಿ. ಸಮಯ ಸಾಧಕರಿಂದ
ಅಂತರ ಕಾಯ್ದುಕೊಳ್ಳಿ. ಓದಿನಲ್ಲಿ ಆಸಕ್ತಿ
ಹೆಚ್ಚಾಗಲಿದೆ. ದೂರ ದೃಷ್ಟಿ ಇಟ್ಟುಕೊಂಡು ಮುಂದಿನ
ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿ.
ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಶುಭಫಲ.

ಕಟಕ
ಒಳ್ಳೆಯ ಸಮಯಕ್ಕಾಗಿ ಕಾದು ಕೂರುವುದು
ಬೇಡ. ಇಂದಿನಿಂದಲೇ ಶುಭ ಕಾರ್ಯವನ್ನು
ಕೈಗೆತ್ತಿಕೊಳ್ಳಿ. ಮನೆಯಲ್ಲಿ ಹಬ್ಬದ ವಾತಾವರಣ.
ಬಂಧುಗಳು ಮನೆಗೆ ಆಗಮಿಸಲಿದ್ದಾರೆ. ತಂದೆ ತಾಯಿಯ
ಆರೋಗ್ಯದಲ್ಲಿ ಸುಧಾರಣೆ. ವ್ಯಾಪಾರಿಗಳಿಗೆ ಲಾಭ.
ಸರಕಾರಿ ಉದ್ಯೋಗಿಗಳಿಗೆ ಖರ್ಚು ಹೆಚ್ಚಾಗಲಿದೆ.

ಸಿಂಹ
 ಸಾಲದ ಹೊರೆ ಕಡಿಮೆ ಆಗಲಿದೆ. ನಿಮ್ಮ ಶಕ್ತಿ
ಹೆಚ್ಚಾಗಲಿದೆ. ಆಸಕ್ತಿಯ ಕ್ಷೇತ್ರದಲ್ಲಿ ಪ್ರಗತಿ,
ಮಾಡಿದ ಕೆಲಸಕ್ಕೆ ಹಿರಿಯರಿಂದ ಮೆಚ್ಚುಗೆ
ದೊರೆಯಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವ
ಕಾಶಗಳು ದೊರೆಯಲಿವೆ. ಅಂದುಕೊಂಡ ಕಾರ್ಯಗಳಲ್ಲಿ
ನಿರೀಕ್ಷಿತ ಯಶಸ್ಸು ಪಡೆಯಲಿದ್ದೀರಿ. ಶುಭಫಲ.

ಕನ್ಯಾ
ಹೊಸ ವಿಚಾರಗಳನ್ನು ಕಲಿಯುವ ಮನಸ್ಸು
ಮಾಡಲಿದ್ದೀರಿ. ಯಾರನ್ನೂ ಸುಲಭವಾಗಿ
ನಂಬುವುದು ಬೇಡ. ಹಳ್ಳ ಇರುವ ಕಡೆ ನೀರು
ಹರಿಯುವ ಹಾಗೆ ಒಳ್ಳೆಯದರ ಕಡೆ ನಿಮ್ಮ ಮನಸ್ಸು
ಹರಿಯಲಿದೆ. ನಿಮ್ಮ ಪಾಲಿಗೆ ಬಂದ ಕರ್ಮವನ್ನು ಮಾಡಿ
ಮುಗಿಸಿ. ಈ ವಾರ ಸಂತೋಷ ಹೆಚ್ಚಾಗಲಿದೆ.

ತುಲಾ
ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಹೊಸ
ಅವಕಾಶಗಳು ದೊರೆಯಲಿವೆ. ನಿಮ್ಮದಲ್ಲದ
ತಪ್ಪಿಗೆ ನೀವು ತಲೆಯೊಡ್ಡುವ ಅವಶ್ಯಕತೆ ಇಲ್ಲ.
ದೇವಾಲಯಗಳಿಗೆ ಹೋಗಿ ಬರಲಿದ್ದೀರಿ. ಹೊಸ ಊರು,
ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಶುಭ ವಾರ್ತೆ
ತಿಳಿಯಲಿದೆ. ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿರಿ.

ವೃಶ್ಚಿಕ
ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ
ವಹಿಸುವುದು ಸೂಕ್ತ. ಮನೆಯಲ್ಲಿ ಸಣ್ಣ ಪುಟ್ಟ
ಗೊಂದಗಳು ಉಂಟಾದರೂ ಅವು ವಾರಾಂತ್ಯ
ದಲ್ಲಿ ಸರಿಯಾಗಲಿವೆ. ಅಕ್ಕ ಪಕ್ಕದ ಮನೆಯವರೊಂದಿಗೆ
ಸೌಹಾರ್ಧ ಉಂಟಾಗಲಿದೆ. ಕೆಲಸದಲ್ಲಿ ಶ್ರದ್ಧೆ ಹೆಚ್ಚುವುದು,
ವಿದ್ಯಾಭ್ಯಾಸದಲ್ಲಿ ಪ್ರಗತಿ. ಮೌನದಿಂದ ಲಾಭ ಹೆಚ್ಚು.

ಧನಸ್ಸು
ಪ್ರೀತಿ ಪಾತ್ರರಿಂದ ನಿಮ್ಮ ಕಾರ್ಯಗಳಿಗೆ
ಮೆಚ್ಚುಗೆ ದೊರೆಯಲಿದೆ. ಮಕ್ಕಳ ಸಾಧನೆಯಿಂದ
ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ನಿಮ್ಮಿಂದ
ಸಾಧ್ಯವಾಗಬಹುದಾದ ಕಾರ್ಯಗಳನ್ನು ಮಾತ್ರ ಒಪ್ಪಿ
ಕೊಳ್ಳಿ. ಆರೋಗ್ಯದ ಬಗ್ಗೆ ಚಿಂತೆ ಮಾಡುವುದು ಬೇಡ.

ಮಕರ
ರಾಜಕೀಯ ವಲಯದಲ್ಲಿ ಇರುವವರಿಗೆ
ಲಾಭವಾಗಲಿದೆ. ಇತರರ ಬಗ್ಗೆ ಅಸಹನೆ ಬೇಡ.
ವಾರ ಪೂರ್ತಿ ಕೆಲಸದ ಒತ್ತಡ ಹೆಚ್ಚಲಿದೆ.
ಮಹಿಳೆಯರ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರವಾಗಲಿದೆ.
ಆರ್ಥಿಕ ವಿಚಾರಗಳಲ್ಲಿ ಹೆಚ್ಚು ಲಾಭವಾಗಲಿದೆ.

ಕುಂಭ
ನಿಮ್ಮಲ್ಲಿರುವ ಪ್ರತಿಭೆಯೇ ನಿಮ್ಮನ್ನು ಸಮಾಜ
ದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ.
ಮಾತಿನಲ್ಲಿ ಹೆಚ್ಚು ಹಿಡಿತವಿದ್ದಷ್ಟೂ ಒಳ್ಳೆಯದು.
ಯಾರನ್ನೂ ಹೆಚ್ಚಾಗಿ ನಂಬುವುದು ಬೇಡ. ಶೀಘ್ರದಲ್ಲಿಯೇ
ಹೊಸ ಅವಕಾಶಗಳು ಬರಲಿವೆ. ಮಕ್ಕಳ ಆರೋಗ್ಯ ಮತ್ತು
ಶಿಕ್ಷಣಕ್ಕಾಗಿ ಹೆಚ್ಚು ಚಿಂತೆ ಮಾಡಲಿದ್ದೀರಿ. ಆರೋಗ್ಯ ಸ್ಥಿರ.

ಮೀನ
ಅತಿಯಾದ ಆತ್ಮವಿಶ್ವಾಸ ಬೇಡ. ನಿಮ್ಮ ಮಿತ್ರರು
ಎಂದುಕೊಂಡವರಿಂದಲೇ ಹೆಚ್ಚು ತೊಂದರೆ
ಯಾಗುವ ಸಾಧ್ಯತೆ. ಮಕ್ಕಳ ಬಗ್ಗೆ ನಿರ್ಧಾರ
ಮಾಡುವಾಗ ಹೆಚ್ಚು ಆಲೋಚನೆ ಮಾಡುವುದು
ಒಳ್ಳೆಯದು. ಶುಭ ಕಾರ್ಯಕ್ಕೆ ಸಂಬಂಧಿಸಿದ ಮಾತು
ಕತೆಗಳು ಆರಂಭವಾಗಲಿವೆ. ಆಗುವುದೆಲ್ಲಾ ಒಳ್ಳೆಯದ್ದಕ್ಕೆ.