ಮೇಷ
ಮಾತಿನ ಮೇಲೆ ನಿಗಾ ಇರಲಿ. ವಿವಾದಕ್ಕೆ
ಸಿಲುಕುವ ಸಂಭವವಿದೆ. ಮಾತಿನಲ್ಲಿ ತೂಕ
ವಿದ್ದರೆ ಕ್ಷೇಮ. ವಿನಾಕಾರಣ ಕೋಪ ಬೇಡ.

ವೃಷಭ
ಯಾರೋ ಕಳಿಸಿದ ಸಂದೇಶದಿಂದ ಆತಂಕ
ಪಡದಿರಿ. ಅದು ನಿಮ್ಮನ್ನು ಕುರಿತಾಗಿದ್ದಲ್ಲ.
ಅದರ ಬಗ್ಗೆ ಹೆಚ್ಚು ಯೋಚಿಸದೇ ಇದ್ದು ಬಿಡಿ.

ಮಿಥುನ
ಮಕ್ಕಳ ಮದುವೆಯ ಮಾತುಕತೆಗಳು
ನಡೆಯಲಿವೆ. ಆತಂಕ ಪಡುವಂಥದ್ದೇನಿಲ್ಲ.
ಹೊಸ ಸಂಬಂಧಗಳು ಕೂಡಿ ಬರಲಿದೆ.

ಕಟಕ
ಕಷ್ಟದ ದಿನಗಳೇ ಎಂದು ಇರದು ಎಂಬುದನ್ನು
ಅರಿಯಿರಿ. ಸಮರ್ಥವಾಗಿ ಎದುರಿಸುವವರಿಗೆ
ಸವಾಲುಗಳು ಎದುರಾದಷ್ಟು ಒಳ್ಳೆಯದೆ.

ಸಿಂಹ
ಆಸ್ತಿಯ ವಿವಾದಗಳು ಸುಲಭವಾಗಿ ಬಗೆ
ಹರಿಯುವುದಿಲ್ಲ. ನಿರ್ಧಾರಗಳು ಖಚಿತ
ವಾಗಿರಲಿ. ಸತ್ಯಕ್ಕೆ ಮೊದಲ ಆದ್ಯತೆ ನೀಡಿರಿ

ಕನ್ಯಾ
ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳಿ. ಮುನಿಸಿ
ನಿಂದ ಏನೂ ಮಾಡಲು ಆಗುವುದಿಲ್ಲ. ಕಾರ್ಯ
ಸಿದ್ಧಿಗಾಗಿ ಕಠಿಣ ಶ್ರಮ ಬೇಕಾಗುತ್ತದೆ.

ತುಲಾ 
ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಾಗಿದೆ.
ಅದರಿಂದ ನಿಮ್ಮ ಮನಃಶಾಂತಿಗೆ ಧಕ್ಕೆಯೂ
ಬರಬಹುದು. ಹಾಗಾಗಿ ಧ್ಯಾನಾಸಕ್ತರಾಗಿ.

ವೃಶ್ಚಿಕ
ಸಣ್ಣಪುಟ್ಟ ಕೆಲಸ ಮಾಡುವ ವರಿಗೂ ದೊಡ್ಡ
ಹೆಸರು ಬರುವ ದಿನವಿದು. ನಿಮ್ಮ ಕಾರ್ಯ
ದಕ್ಷತೆಯೆ ನಿಮಗೆ ಶ್ರೀರಕ್ಷೆ. ಶುಭಫಲವಿದೆ. 

ಧನುಸ್ಸು
ಪ್ರೀತಿಪಾತ್ರರ ಜೊತೆ ವಿವಾದಗಳಿಗೆ ಅವಕಾಶ
ನೀಡದಿರಿ. ಅವರನ್ನು ಗೌರವದಿಂದ ಕಾಣಿರಿ.
ಚಿಕ್ಕವರೊಂದಿಗೂ ಪ್ರೀತಿ-ಪ್ರೇಮಗಳಿದಿಂದಿರಿ.

2020ರಲ್ಲಿ ಕೊನೆಯ ಆರು ರಾಶಿಗಳ ಲವ್‌ ಭವಿಷ್ಯ ಹೇಗಿದೆ ನೋಡಿ?...

ಮಕರ
ದುಡ್ಡು-ಕಾಸಿನ ವಿಷಯದಲ್ಲಿ ತುಂಬಾನೇ
ಶಿಸ್ತುಬದ್ಧವಾಗಿರುವುದು ಒಳಿತು. ಜುಗ್ಗ
ಆಗದಿರಿ. ಅವಶ್ಯವಿದ್ದಲ್ಲಿ ಖರ್ಚು ಮಾಡಿರಿ.

ಕುಂಭ
ಮನೆಯಲ್ಲಿ ಕಲಹ-ವಿರಸಗಳು ಕಡಿಮೆ
ಆಗುವ ದಿನಗಳು ಹತ್ತಿರದಲ್ಲೇ ಇವೆ. ನಿಮ್ಮ
ಬಂಧು ಬಾಂಧವರ ಸಹಕಾರವೂ ಸಿಗಲಿದೆ.

ಮೀನ 
ವಾಸ್ತು ದೋಷದ ಬಗ್ಗೆ ಹೆಚ್ಚು ಚಿಂತೆ ಬೇಡ.
ಸುಖಾಸುಮ್ಮನೆ ಖರ್ಚು ಮಾಡಬೇಡಿ. ಸಾಧ್ಯ
ಆದಲ್ಲಿ ಒಂದಿಷ್ಟು ಜನರಿಗೆ ಒಳಿತು ಮಾಡಿರಿ.