ಮೇಷ
ಇಂದಿನ ಕೆಲಸ ಕಾರ್ಯಗಳನ್ನು ನಾಳೆಗೆ
ಮುಂದೂಡುವುದು ಬೇಡ. ಇಡೀ ದಿನ
ಮನಸ್ಸು ಶಾಂತವಾಗಿ ಇರಲಿದೆ. ಶುಭಫಲ.

ವೃಷಭ
ಶತ್ರುಗಳು ಎಂದುಕೊಂಡವರೂ ಇಂದು
ನಿಮಗೆ ಸಹಾಯ ಮಾಡುತ್ತಾರೆ. ಸರಕಾರದ
ಮಟ್ಟದಲ್ಲಿ ನಿಮ್ಮ ಕೆಲಸಗಳು ಆಗಲಿವೆ.

ಮಿಥುನ
ಹೆಚ್ಚು ಸಮಯ ಓದಿನಲ್ಲಿಯೇ ಕಳೆಯಲಿ
ದ್ದೀರಿ. ಸ್ನೇಹಿತರೊಂದಿಗೆ ಹಣಕಾಸಿನ
ವ್ಯವಹಾರ ಬೇಡ. ಆರೋಗ್ಯದಲ್ಲಿ ಚೇತರಿಕೆ.

ನಿಮ್ಮ ಅದೃಷ್ಟದ ಹರಳು - ಸಂಖ್ಯೆ ಯಾವುದು ?...

ಕಟಕ
ನಿಮ್ಮಿಂದ ಮತ್ತೊಬ್ಬರಿಗೆ ತೊಂದರೆ ಆಗದಂತೆ
ಎಚ್ಚರಿಕೆ ವಹಿಸಿ. ನೀವು ನಡೆಯುವ ದಾರಿ
ಸರಿಯಾಗಿ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ.

ಸಿಂಹ
ಹಣಕ್ಕಿಂತ ಗುಣಕ್ಕೆ ಹೆಚ್ಚು ಬೆಲೆ ನೀಡಿ. ನಿಮ್ಮ
ಸಹಾಯಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಗೌರವ
ಇರಲಿ. ಎಲ್ಲವೂ ಒಳ್ಳೆಯದ್ದೇ ಆಗಲಿ

ಕನ್ಯಾ
ನಿಧಾನವೇ ಪ್ರಧಾನವಾಗಿರಲಿ. ಮಕ್ಕಳ
ವಿಚಾರದಲ್ಲಿ ಆತುರ ಪಡುವುದು ಬೇಡ.
ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ.

ತುಲಾ 
ಕೆಲಸದಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿ
ಕೊಳ್ಳುವಿರಿ. ಅರ್ಹರಾದವರಿಗೆ ಸಹಾಯ
ಮಾಡಿರಿ. ಹೊಸದನ್ನು ಕಲಿಯಲಿದ್ದೀರಿ

ವೃಶ್ಚಿಕ
ಅಂದುಕೊಂಡ ಕಾರ್ಯಗಳನ್ನು ಸಮಯಕ್ಕೆ
ಸರಿಯಾಗಿ ಮಾಡಿ ಮುಗಿಸಿ. ಗೊಂದಲಗಳಿಗೆ
ತೆರೆ ಬೀಳಿದೆ. ಅವಕಾಶಗಳು ಹೆಚ್ಚಾಗಲಿವೆ. 

ಧನುಸ್ಸು
ಒಮ್ಮೆ ಒಬ್ಬ ವ್ಯಕ್ತಿಯಿಂದ ಪೆಟ್ಟು ತಿಂದ ಮೇಲೆ
ಮತ್ತೆ ಅವನ ಬಳಿಗೆ ಹೋಗುವುದು
ಸರಿಯಲ್ಲ. ದೇವಸ್ಥಾನಗಳ ಭೇಟಿ ಹೆಚ್ಚಲಿದೆ.

ಮಕರ
ಹಾಡುತ್ತಾ ಹಾಡುತ್ತಾ ರಾಗ ಸಿದ್ಧಿಯಾಗುವ
ಹಾಗೆ. ಕೆಲಸ ಮಾಡುತ್ತಾ ಮಾಡುತ್ತಾ ಪರಿಣತಿ
ಸಾಧಿಸಲಿದ್ದೀರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ.

ಕುಂಭ
ತಾಯಿಯ ಮಾತಿಗೆ ಮನ್ನಣೆ ನೀಡುವಿರಿ.
ವಿದ್ಯಾರ್ಥಿಗಳ ಪಾಲಿಗೆ ಇದು ಒಳ್ಳೆಯ ದಿನ.
ಖರ್ಚಿನ ಮೇಲೆ ಹಿಡಿತ ಇರಲಿ. ಶುಭಫಲ.

ಮೀನ 
ಯಾವುದೇ ಪ್ರಮುಖ ನಿರ್ಧಾರ
ಕೈಗೊಳ್ಳುವಾಗ ಆತುರಪಡುವುದು ಬೇಡ.
ಯಾರ ಮನಸ್ಸಿಗೂ ನೋವುಂಟುಮಾಡದಿರಿ.