ಕೃಷ್ಣನ ಕತೆಗಳನ್ನು ಭಾರತೀಯ ಶಾಸನಗಳ ಆರಂಭದಿಂದಲೂ ಕಾಣಬಹುದು. ಹಾಗೆ ವಿಷ್ಣುವಿನ 8 ಅವತಾರಗಳು, ಅದಕ್ಕೆ ಸಂಬಂಧಿಸಿದ ಕತೆಗಳನ್ನು ಅಡಗಿಸಿಕೊಂಡಿರುವ ಒಂದು ಅತ್ಯುತ್ತಮ ಗ್ರಂಥ ಪದ್ಮ ಪುರಾಣ. ಇದರ ಪಟಾಲಾ ಖಾಂಡದಲ್ಲಿ ಬರುವ ಒಂದು ಕತೆ ಬಹಳ ಆಸಕ್ತಿಕರವಾಗಿದೆ. ತನ್ನ ಬೆಸ್ಟ್ ಫ್ರೆಂಡ್ ಕೃಷ್ಣನೆಡೆಗೆ ಗೋಪಿಯರು ಹಾಗೂ ರಾಧೆಯ ಅನ್‌ಕಂಡಿಶನಲ್ ಲವ್ ಬಗ್ಗೆ ತಿಳಿಯಲು ಅರ್ಜುನ ಮಹಿಳೆಯ ವೇಷ ಧರಿಸಿದ ಕತೆಯದು. 

ಯಮುನಾ ನದಿ ದಂಡೆಯಲ್ಲಿ ಒಂದು ದಿನ ಕೃಷ್ಣ ಹಾಗೂ ಅರ್ಜುನ ಮಾತನಾಡುತ್ತಿದ್ದಾಗ, ಅರ್ಜುನ ಕೃಷ್ಣನ ಬಳಿ ಹೀಗೆ ಹೇಳುತ್ತಾನೆ, 'ನಿನಗೆ ಗೋಪಿಯರ ಮೇಲಿರುವ ಪ್ರೇಮ ನನಗೆ ಅರ್ಥವಾಗುವುದಿಲ್ಲ, ಅಥವಾ ಗೋಪಿಯರು ನಿನ್ನ ಪ್ರೀತಿಸುವ ಬಗೆ ಕೂಡಾ. ನೀನು ಗೋಪಿಯರ ಜೊತೆ ಅಷ್ಟೊಂದು ಸಲಿಗೆಯಿಂದ ವರ್ತಿಸುವುದನ್ನು ರಾಧ ನೋಡಿಕೊಂಡು ಹೇಗೆ ಸಹಿಸಿಕೊಳ್ಳುತ್ತಾಳೆ? ಅವರೆಲ್ಲರೂ ನಿನ್ನನ್ನು ಹಂಚಿಕೊಳ್ಳಲು ಒಪ್ಪುವುದಾದರೂ ಹೇಗೆ?'

ಲಾಕ್‌ಡೌನ್ ಎಫೆಕ್ಟ್: ನಿಮ್ಮ ಎಕ್ಸ್ ಪದೇ ಪದೆ ಕನಸಿನಲ್ಲಿ ಬರುತ್ತಿದ್ದಾ ...

ಅದಕ್ಕೆ ಕೃಷ್ಣ ಹೀಗೆ ಹೇಳುತ್ತಾನೆ, 'ಈ ಸಂಗತಿಗಳು ನಾನು, ರಾಧ ಹಾಗೂ ಗೋಪಿಯರಿಗಷ್ಟೇ ಅರ್ಥವಾಗುವುದು. ಅದನ್ನು ಹೊರತುಪಡಿಸಿ ನಿನಗಿರಲಿ, ಬ್ರಹ್ಮ, ಶಿವನಿಂದಲೂ ಈ ಹೊಂದಾಣಿಕೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ,'.

ಶಕ್ತಿ ಮಾತೆ ಸಹಾಯ
ಅರ್ಜುನನಿಗೆ ಈ ಉತ್ತರ ಸಮಾಧಾನ ನೀಡುವುದಿಲ್ಲ. ಆತ ತನಗೆ ಸರಿಯಾದ ಉತ್ತರ ಬೇಕೇ ಬೇಕು ಎಂದಿದ್ದಕ್ಕೆ ಕೃಷ್ಣ, ಇದಕ್ಕಾಗಿ ಯೋಗಮಾಯ(ಶಕ್ತಿ) ತಾಯಿಯ ಸಹಾಯ ಪಡೆವಂತೆ ಹೇಳುತ್ತಾನೆ. ಯೋಗಮಾಯ ತಾಯಿಯು ತನ್ನ ಸಖಿಯರೊಡನೆ ಹೋಗುವಂತೆ ಅರ್ಜುನನಿಗೆ ತಿಳಿಸುತ್ತಾಳೆ. ಸಖಿಯರು ಅರ್ಜುನನನ್ನು ಕೊಳದ ಬಳಿ ಕರೆದುಕೊಂಡು ಹೋಗಿ ಸ್ನಾನ ಮಾಡಿಸುತ್ತಾರೆ. ಯೋಗಮಾಯ ಹೇಳಿದಂತೆ ಅರ್ಜುನ ಕೆಲ ಮಂತ್ರಗಳನ್ನು ಹೇಳುತ್ತಾ ಪೂಜೆಪುನಸ್ಕಾರ ನಡೆಸುತ್ತಾನೆ. ನಂತರದಲ್ಲಿ ಶಕ್ತಿ ದೇವತೆಯನ್ನು ಆರಾಧಿಸು, ಆಕೆ ಒಲಿದಾಗ ಅರ್ಥವಾಗುತ್ತದೆ ಎಂದು ಹೇಳಿ ಯೋಗಮಾಯ ಮರೆಯಾಗುತ್ತಾಳೆ. ಹೀಗೆ ತಾಯಿಯ ನಿರ್ದೇಶನದಂತೆ ಅರ್ಜುನ ನಡೆದುಕೊಂಡ ಬಳಿಕ ಒಮ್ಮೆ ಯೋಗಮಾಯ ಆತನನ್ನು ಕರೆದು, ವೃಂದಾವನಕ್ಕೆ ಹೋಗು, ಈಗ ಅಲ್ಲಿ ರಾಸಲೀಲೆ ಹಬ್ಬ ನಡೆಯುತ್ತಿದೆ ಎನ್ನುತ್ತಾಳೆ. 

ಅರ್ಜುನಿ
ಅರ್ಜುನ ವೃಂದಾವನದ ಕೊಳದಲ್ಲಿ ಮುಳುಗೆದ್ದಾಗ ಸುಂದರ ಸ್ತ್ರೀಯಾಗಿ ಹೊರಬರುತ್ತಾನೆ. ತನ್ನನ್ನು ತಾನು ಅರ್ಜುನಿ ಗೋಪಿ, ತನಗೆ ತನ್ನವರಾರೂ ಇಲ್ಲ, ತನ್ನ ಬಗ್ಗೆ ಏನೂ ನೆನಪಿಲ್ಲ ಎಂದು ಹೇಳಿಕೊಂಡು ರಾಧೆಯ ಬಳಿಗೆ ಹೋಗುತ್ತಾನೆ. ರಾಧ ಅರ್ಜುನನಿಗೆ ಶುದ್ಧವಾದ ಭಕ್ತಿ, ಒಬ್ಬರು ಇನ್ನೊಬ್ಬರಲ್ಲಿ ಸಂಪೂರ್ಣವಾಗಿ ಲೀನವಾಗುವುದರ ಕುರಿತು ಹೇಳಿಕೊಡುತ್ತಾಳೆ. ನಂತರ ಅರ್ಜುನಿಯನ್ನು ಕೃಷ್ಣನ ಬಳಿಗೆ ಕರೆದೊಯ್ಯುತ್ತಾಳೆ. 

ಕೃಷ್ಣನ ಮಾಯಮಂತ್ರಕ್ಕೆ ಕುರುಡಾಗಿ, ಮರುಳಾಗುವ ಅರ್ಜುನಿ ತಕ್ಷಣದಲ್ಲಿ ಆತನೊಂದಿಗೆ ಪ್ರೇಮಕ್ಕೆ ಬೀಳುತ್ತಾಳೆ. ಕೃಷ್ಣನ ಜೊತೆಯಿಲ್ಲದ ಮತ್ಯಾವುದೂ ಸಂತೋಷ ಕೊಡುವುದಿಲ್ಲ ಎಂದು ಅರ್ಜುನಿಗೆ ಅನಿಸತೊಡಗುತ್ತದೆ.  ಕೃಷ್ಣನಿಗೆ ಅರ್ಜುನಿ ಯಾರೆಂದು ತಿಳಿದಿರುತ್ತದೆ. ಆತ ಆಕೆಯ ಕೈ ಹಿಡಿದು ಖಾಸಗಿ ಉದ್ಯಾನಕ್ಕೆ ಕರೆದುಕೊಂಡು ಹೋಗುತ್ತಾನೆ. ತಿರುಗಿ ಬರುವಾಗ ಅಪೂರ್ವ ಆನಂದದಲ್ಲಿ ತೇಲುತ್ತಿದ್ದ ಅರ್ಜುನಿಯನ್ನು ಕೊಳಕ್ಕೆ ಕರೆದುಕೊಂಡು ಹೋಗುವಂತೆ ಗೋಪಿಯೊಬ್ಬಳಿಗೆ ಕೃಷ್ಣ ಹೇಳುತ್ತಾನೆ. ಈ ಬಾರಿ ಅರ್ಜುನಿ ನೀರಿನಲ್ಲಿ ಮುಳುಗೇಳುವಾಗ ಅರ್ಜುನನಾಗಿರುತ್ತಾನೆ.  ಅರ್ಜುನಿಯಾದ ತನ್ನ ಅನುಭವ ನೆನೆಸಿಕೊಂಡಾಗ ಆತನಿಗೆ ಕೃಷ್ಣ ಜೀವನಕ್ಕಿಂತ ಹೆಚ್ಚಿನ ಪ್ರೀತಿ ಎನಿಸುತ್ತಾನೆ. ಇದೇ ನೆನಪಿನಲ್ಲಿ ಅರ್ಜುನ  ವೃಂದಾವನದಿಂದ ಹೊರಡುತ್ತಾನೆ.

ಉದ್ಯೋಗಸ್ಥ ದಂಪತಿಗೆ ಲಾಕ್‍ಡೌನ್ ಚಾಲೆಂಜ್ ಏನ್ ಗೊತ್ತಾ?

ಕೃಷ್ಣಾರ್ಜುನರ ಬಂಧ
ಅರ್ಜುನನಿಗೆ ಸದಾ ಗೆಳೆಯ, ಫಿಲಾಸಫರ್ ಹಾಗೂ ಗೈಡ್ ಆಗಿದ್ದ ಕೃಷ್ಣ. ಕೃಷ್ಣ ಮನಸ್ಸಾಗಿದ್ದರೆ, ಅರ್ಜುನ ಆತ್ಮ(ಪ್ರಜ್ಞಾವಸ್ಥೆ)ವಾಗಿದ್ದ. ಕೃಷ್ಣನ ಮಾತನ್ನು ಅರ್ಜುನ ಎಂದಿಗೂ ಮೀರಿರಲಿಲ್ಲ. ಕೃಷ್ಣನನ್ನು ಆತ ಭಕ್ತಿಯಿಂದ, ಗುರು ಎಂಬ ಗೌರವದಿಂದ, ಗೆಳೆಯ ಎಂಬ ಸ್ನೇಹದಿಂದ ನಡೆಸಿಕೊಳ್ಳುತ್ತಿದ್ದ. ಅಂಥ ಊಹೆಗೂ ಮೀರಿದ ಅನ್‌ಕಂಡಿಶನಲ್ ಪ್ರೀತಿ ಅವರಿಬ್ಬರ ನಡುವೆ ಇತ್ತು. ಈ ನರನಾರಾಯಣ ಬಂಧವು ಮಹಾಭಾರತದಲ್ಲಿ ಮಹತ್ವದ ಸ್ಥಾನ ಪಡೆದಿದೆ.