ಲಾಕ್‌ಡೌನ್ ಎಫೆಕ್ಟ್: ನಿಮ್ಮ ಎಕ್ಸ್ ಪದೇ ಪದೆ ಕನಸಿನಲ್ಲಿ ಬರುತ್ತಿದ್ದಾರಾ?

ಲಾಕ್‌ಡೌನ್ ಸಂದರ್ಭದಲ್ಲಿ ಎಕ್ಸ್ ಕುರಿತು ಕನಸು ಕಾಣುವವರ ಸಂಖ್ಯೆ ಹೆಚ್ಚಿದೆ ಎನ್ನುತ್ತಿದೆ ಅಧ್ಯಯನ. ಇದಕ್ಕೇನು ಕಾರಣ?

Are you dreaming about your ex-lover during the quarantine

ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ, ಈ ಬದಲಾವಣೆಗಳು ನಮ್ಮ ಕನಸುಗಳನ್ನೂ ಇನ್ಫ್ಲುಯೆನ್ಸ್ ಮಾಡಬಲ್ಲವಾ? ಬಹುಷಃ ಸಾಧ್ಯವಿದೆ. ಹಾಗಾಗಿಯೇ ಕ್ವಾರಂಟೈನ್ ಸಂದರ್ಭದಲ್ಲಿ ಎಕ್ಸ್ ಕುರಿತ ಕನಸುಗಳು ಬೀಳುವವರ ಸಂಖ್ಯೆ ಹೆಚ್ಚಿದೆ. ನೀವು ಕೂಡಾ ಬೆಳಗ್ಗೆದ್ದು, ಅರೆ, ಅವನೇಕೆ/ಅವಳೇಕೆ ಕನಸಿನಲ್ಲಿ ಬಂದಿದ್ದಳು, ಕನಸಿನ ಅರ್ಥವೇನು ಎಂದೆಲ್ಲ ತಲೆ ಕೆಡಿಸಿಕೊಂಡಿದ್ದರೆ, ನೀವು ಖಂಡಿತಾ ಒಂಟಿಯಲ್ಲ. ಸಾವಿರಾರು ಜನರು ಇದೇ ಅನುಭವ ಹೊಂದುತ್ತಿದ್ದಾರೆ. 

ಅಧ್ಯಯನ

ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿ ಎಜಿವೈ47 ನಡೆಸಿದ ಸಂಶೋಧನೆಯ ಪ್ರಕಾರ, 'ನನ್ನ ಎಕ್ಸ್ ಕುರಿತ ಕನಸುಗಳೇಕೆ ಬೀಳುತ್ತಿವೆ' ಎಂಬ ಪ್ರಶ್ನೆಯನ್ನು ಗೂಗಲ್‌ನಲ್ಲಿ ಕೇಳುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.2,450ರಷ್ಟು ಹೆಚ್ಚಿದೆ. ಅಂದರೆ ಕನಸಿನಲ್ಲಿ ಎಕ್ಸ್ ಬರುವುದು ಬಹಳಷ್ಟು ಜನರಿಗೆ ಹೆಚ್ಚಾಗಿದೆ ಎಂದಾಯಿತು. ಇನ್ನೂ ಬಹಳಷ್ಟು ಜನ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ತಮ್ಮ ಎಕ್ಸ್‌ನ್ನು ನೆನೆಸಿಕೊಳ್ಳುವುದೂ ಜಾಸ್ತಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಇಷ್ಟು ದಿನ ಸಿಗದಿದ್ದ ಸಮಯ ಈಗ ಸಿಕ್ಕಿರುವುದು, ಒಂಟಿತನ, ಹಾಗೂ ಈಗಿನ ಸಂಗಾತಿಯೊಂದಿಗಿನ ಜಗಳ ಇತ್ಯಾದಿ. ಹೀಗೆ ಸಮಯ ಸಿಕ್ಕಿದ್ದರಿಂದಾಗಿ ಎಕ್ಸ್ ಕುರಿತು ಹಗಲುಗನಸು ಕಾಣುವುದು, ಅವರ ಜೊತೆಗಿನ ಅನುಭವಗಳನ್ನು ನೆನೆಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಇವರು ಕೂಡಾ ಗೂಗಲ್‌ನಲ್ಲಿ ಮೇಲಿನದೇ ಪ್ರಶ್ನೆ ಹಾಕುತ್ತಿದ್ದಾರೆ. 

ರಾಶಿ ಪ್ರಕಾರ, ನೀವು ವೃಥಾ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಹೇಗೆ?

ನಿಮಗೂ ಕೂಡಾ ಎಕ್ಸ್ ಕುರಿತು ಕನಸುಗಳು ಬೀಳುತ್ತಿದ್ದರೆ ಆ ಕನಸುಗಳ ಅರ್ಥವೇನಿರಬಹುದು ನೋಡೋಣ.

ನಿಮ್ಮ ಎಕ್ಸ್‌ನಿಂದ ದೂರ ಓಡುತ್ತಿರುವಂತೆ ಕನಸು

ಎಕ್ಸ್ ನಿಮ್ಮನ್ನು ಅಟ್ಟಿಸಿಕೊಂಡು ಬಂದಂತೆ ಕನಸು ಬಿದ್ದರೆ ಹೆದರಬೇಡಿ, ಇದರರ್ಥ ಅವರು ನಿಮ್ಮ ಜೀವನದಲ್ಲಿ ಮತ್ತೆ ಬರಲು ಪ್ರಯತ್ನಿಸುತ್ತಿದ್ದಾರೆಂದಲ್ಲ. ಇದರರ್ಥ ನಿಮ್ಮ ಜೀವನದಲ್ಲಿ ಸ್ವಲ್ಪ ಕಮಿಟ್‌ಮೆಂಟ್ ಇಶ್ಯೂಸ್ ಇದೆ ಎಂದು. ಮತ್ತೊಂದು ಸಂಬಂಧದೊಲಗೆ ಸಿಲುಕುವ ಮುನ್ನ ನಿಮಗೆ ಸ್ವಲ್ಪ ಸಮಯ ಬೇಕಾಗಿರಬಹುದು. 

ನಿಮ್ಮ ಎಕ್ಸ್ ಸತ್ತು ಹೋದಂತೆ ಕನಸು

ಇನ್ನೊಬ್ಬರ ಸಾವು ಕನಸಿನಲ್ಲಿ ಬರುವುದು ಯಾರಿಗಾದರೂ ಹಿಂಸೆಯೇ. ಅದರಲ್ಲೂ ಪ್ರೀತಿಪಾತ್ರರ ಸಾವು ಬಂದರೆ ಬಹಳ ಭಯವಾಗುತ್ತದೆ. ಆದರೆ, ಎಕ್ಸ್ ಸಾವಿನ ಬಗ್ಗೆ ಕನಸಿನಲ್ಲಿ ಬಂದಿದ್ದನ್ನು ಪಾಸಿಟಿವ್ ಆಗಿ ನೋಡಲಾಗುತ್ತದೆ. ಇದರರ್ಥ ನೀವು ಭೂತಕಾಲದಿಂದ ಕಳಚಿಕೊಂಡು ಮುನ್ನುಗ್ಗುತ್ತಿದ್ದೀರಿ ಎಂದು ಗ್ರಹಿಸಲಾಗುತ್ತದೆ. 

ಎಕ್ಸ್‌ನ್ನು ಅನಿರೀಕ್ಷಿತ ಭೇಟಿಯಾದಂತೆ ಕನಸು

ಸಾಮಾನ್ಯವಾಗಿ ಸಂಬಂಧ ಬ್ರೇಕಪ್ ಆಗಿ ಹೆಚ್ಚು ಸಮಯವಾಗದಿದ್ದಾಗ, ಗಾಯ ಇನ್ನೂ ಹಸಿಯಾಗಿರುವಾಗ ಇಂಥ ಕನಸುಗಳು ಬೀಳುತ್ತವೆ. ಎಲ್ಲೋ ಹೋದಾಗ ಅನಿರೀಕ್ಷಿತವಾಗಿ ಎಕ್ಸ್‌ನ್ನು ಭೇಟಿಯಾದಂತೆ. ಇನ್ನೂ ನಿಮ್ಮಿಬ್ಬರ ನಡುವೆ ಮುಗಿಯದ ಕೆಲ ಮಾತುಗಳಿವೆ, ಕೆಲ ವಿಷಯಗಳನ್ನು ಸರಿಯಾಗಿ ಮಾತನಾಡಿಕೊಂಡಿಲ್ಲ ಎಂದರ್ಥ. 

ಎಕ್ಸ್‌ನ್ನು ವಿವಾಹವಾದಂತೆ ಕನಸು

ಇನ್ನೊಬ್ಬರನ್ನು ವಿವಾಹವಾಗಿರುವಾಗ ಅಥವಾ ಮತ್ತೊಬ್ಬರ ಜೊತೆ ಡೇಟಿಂಗ್‌ನಲ್ಲಿರುವ ಸಂದರ್ಭದಲ್ಲಿ ನಿಮ್ಮ ಎಕ್ಸನ್ನು ವಿವಾಹವಾದಂತೆ ಕನಸು ಬೀಳುವುದು ಏನೋ ತಪ್ಪು ಮಾಡಿದ ಭಾವಕ್ಕೆ ದೂಡುತ್ತದೆ. ಜೊತೆಗೆ, ತೆಗೆದುಕೊಂಡ ನಿರ್ಧಾರಗಳು ತಪ್ಪೇನೋ ಎಂದು ಶಂಕಿಸುವಂತೆ ಮಾಡುತ್ತವೆ. ಈ ಕನಸಿನ ಬಗ್ಗೆ ಚಿಂತೆ ಮಾಡುವ ಬದಲು, ಇದರ ಪಾಸಿಟಿವ್ ಸೈಡ್ ನೋಡೋಣ. ಇದರರ್ಥ ನೀವು ಬದುಕಿನಲ್ಲಿ ಅರ್ಥಬದ್ಧವಾದ ಹಾಗೂ ಆಳವಾದ ಕಮಿಟ್‌ಮೆಂಟ್‌ಗೆ ಸಿದ್ಧವಾಗಿದ್ದೀರಿ ಎಂದು. 

ತಾಯಿಯೊಂದಿಗಿನ ಸಲುಗೆ ವ್ಯಕ್ತಿಯ ವಿವಾಹ ಜೀವನದ ಮೇಲೆ ಪರಿಣಾಮ ಬೀರಬಲ್ಲದ ...

ಎಕ್ಸ್ ಜೊತೆ ಮತ್ತೆ ಹಿಂತಿರುಗಿದಂತೆ

ನಿಮ್ಮ ಎಕ್ಸ್ ಲವರ್ ಜೊತೆ ಬ್ರೇಕಪ್ ಮುರಿದುಕೊಂಡು ಮತ್ತೆ ಅವರತ್ತ ಮರಳಿದಂತೆ ಕನಸು ಬಿದ್ದರೆ ಇದಕ್ಕೆ ಹಲವು ಅರ್ಥಗಳಿರಬಹುದು. ಆದರೆ, ನೀವು ಯೋಚಿಸಬೇಕಾದುದೇನೆಂದರೆ, ಪ್ರಸ್ತುತ ಸಂಬಂಧದಲ್ಲಿ ಏನಾದರೂ ಸಮಸ್ಯೆಗಳಿವೆಯೇ, ಹಳೆಯ ಸಂಬಂಧದಲ್ಲಿದ್ದ ಯಾವುದೋ ಪ್ರಮುಖ ವಿಷಯ ಈಗಿನದ್ದರಲ್ಲಿ ಮಿಸ್ ಆಗಿದೆಯೇ? ನೀವು ನಿಮ್ಮ ಈಗಿನ ಪ್ರೇಮಿಯನ್ನು ಹಳೆಯ ಪ್ರೇಮಿಯೊಂದಿಗೆ ಹೋಲಿಸಿ ನೋಡುತ್ತಿದ್ದೀರಾ ಎಂಬುದು. ಈ ಬಗ್ಗೆ ಮಾತನಾಡಿ ಸರಿ ಮಾಡಿಕೊಳ್ಳಬಹುದು. 

Latest Videos
Follow Us:
Download App:
  • android
  • ios