ಮನೆ ಕಟ್ಟುವಾಗ ವಾಸ್ತು ಪ್ರಕಾರವೇ ಇರಬೇಕು ಎಂದು ಹೇಳುವುದುಂಟು. ಸಾವಿರಾರು ವರ್ಷಗಳ ಹಿಂದೆ ಕಟ್ಟಡಗಳ ನಿರ್ಮಾಣಕ್ಕೆಂದು ರೂಪಿಸಿದ ವೈಜ್ಞಾನಿಕ ಶಾಸ್ತ್ರವಿದು. ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ನಿರ್ವಹಿಸಿದ್ದರಿಂದಲೇ ಸಾವಿರಾರು ವರ್ಷದಷ್ಟು ಹಳೆಯ ದೇವಸ್ಥಾನಗಳು ಇಂದಿಗೂ ಗಟ್ಟಿಮುಟ್ಟಾಗಿ ನಿಂತಿವೆ.

ವಾಸ್ತು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾಸ್ತುಶಾಸ್ತ್ರವೆಂಬುದು ಪೃಥ್ವಿ, ನೀರು, ಅಗ್ನಿ, ಗಾಳಿ ಹಾಗೂ ಆಕಾಶ ಎಂಬ ಪಂಚಭೂತಗಳನ್ನು ಆಧರಿಸಿದ ಶಾಸ್ತ್ರ. ಸರಳವಾದ ವಾಸ್ತು ಏನೆಂದರೆ, ಮನೆಯನ್ನು ಚೆನ್ನಾಗಿ ಗಾಳಿ-ಬೆಳಕು ಬರುವಂತೆ, ಜಲ, ಅಗ್ನಿ ಹಾಗೂ ಪೃಥ್ವಿಯ ಶಕ್ತಿಗಳ ಸಂಚಾರಕ್ಕೆ ಸರಿಯಾದ ಸ್ಥಳವಕಾಶವಿರುವಂತೆ ನಿರ್ವಹಿಸುವುದು. ಹೀಗೆ ಮನೆ ಕಟ್ಟಿದಾಗ ಅಲ್ಲಿ ಸೂರ್ಯನ ಶಕ್ತಿ ಹಾಗೂ ಪ್ರಕೃತಿ ದತ್ತವಾದ ಇತರೆ ಶಕ್ತಿಗಳ ಲಭ್ಯತೆ ಹೆಚ್ಚುತ್ತದೆ. ಆಗ ಅಲ್ಲಿ ವಾಸಿಸುವವರ ಆರೋಗ್ಯ, ಮನಸ್ಥಿತಿ ಹಾಗೂ ಅದೃಷ್ಟ ಚೆನ್ನಾಗಿರುತ್ತದೆ. ಆದರೆ ಇಂದು ವಾಸ್ತುವಿನ ಹೆಸರಲ್ಲಿ ಮೌಢ್ಯ ಬಿತ್ತುವವರೂ ಸಾಕಷ್ಟಿದ್ದಾರೆ. ಅವರ ಬಗ್ಗೆ ಎಚ್ಚರದಿಂದಿರಬೇಕಷ್ಟೆ. 

ಧನ ಲಾಭ ತರೋ ಪೆಂಗ್‌ಶ್ಯೂಯಿ ಗಿಡಗಳಿವು..

ಏನು ಹೇಳುತ್ತೆ ಈ ಶಾಸ್ತ್ರ?


- ವಾಸ್ತುಶಾಸ್ತ್ರದಲ್ಲಿ ಬಾಗಿಲು ಪೂರ್ವ ಅಥವಾ ಪಶ್ಚಿಮಕ್ಕೆ ಇರಬೇಕು. 
- ಸೂರ್ಯನ ಬೆಳಕು ಮತ್ತು ಶಾಖ ಬೆಳಗ್ಗೆ ಮತ್ತು ಸಂಜೆ ಮನೆಯೊಳಗೆ ಬಂದರೆ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ಮುಂತಾದವು ನಾಶವಾಗುತ್ತವೆ. ಮನೆ ಮಂದಿ ಆರೋಗ್ಯವಾಗಿರುತ್ತಾರೆ. 
- ಭಾರತದಲ್ಲಿ ಗಾಳಿ ಚಲನೆ ನೈಋತ್ಯದಿಂದ ಈಶಾನ್ಯದ ಕಡೆಗೆ ಇರುತ್ತದೆ. ಹಾಗಾಗಿ ನೈಋತ್ಯ ಇಲ್ಲವೇ ಈಶಾನ್ಯ ದಿಕ್ಕಿನಲ್ಲಿ ಒಲೆಯನ್ನು ಹೂಡಿದರೆ, ಅಕಸ್ಮಾತ್ ಅಗ್ನಿ ಅವಘಡ ಸಂಭವಿಸಿದರೆ,  ಬೆಂಕಿ ತ್ವರಿತವಾಗಿ ಹಬ್ಬಿ ಮನೆಯು ಸುಟ್ಟು ಬೂದಿಯಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿ ಗಾಳಿಯ ಚಲನೆ ಸ್ವಲ್ಪ ಕಡಿಮೆ. ಹಾಗಾಗಿ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿರಬೇಕು. 
- ವಾಸ್ತುವಿನಲ್ಲಿ ಮನೆಯ ನೈಋತ್ಯ ಭಾಗ ಎತ್ತರದಲ್ಲಿರಬೇಕು ಹಾಗೂ ಈಶಾನ್ಯ ಭಾಗ ತಗ್ಗಿನಲ್ಲಿರಬೇಕು. ಭಾರತದಲ್ಲಿ ಮಾನ್ಸೂನ್ ಮಳೆಯನ್ನು ತರುತ್ತದೆ. ಮಾನ್ಸೂನ್ ಬರುವುದು ನೈಋತ್ಯದಿಂದ. ಹಾಗಾಗಿ ನೈಋತ್ಯದಿಂದ ಬರುವ ಮಳೆಯ ನೀರನ್ನೆಲ್ಲ ಈಶಾನ್ಯ ದಿಕ್ಕಿನ ಕೆರೆ ಅಥವಾ ಬಾವಿಯಲ್ಲಿ ಸುಲಭವಾಗಿ ಸಂಗ್ರಹಿಸಬಹುದು. 

- ಮಹಾಬಲ ಸೀತಾಳಬಾವಿ