ವ್ಯಕ್ತಿಯ ಗುಣ ಲಕ್ಷಣಗಳು, ಆತನ ನಡವಳಿಕೆ ಆತನ ರಾಶಿ ಆಧರಿಸಿ ಇರುತ್ತದೆ ಎಂಬುದು ಹಲವು ಸಾರಿ ಸಾಬೀತಾಗಿದೆ.  ಹಾಗಾದರೆ ವೃಶ್ಚಿಕ ರಾಶಿಯವರ ಕುರಿತಾದ ಈ ಕೆಳಗಿನ 14 ಲಕ್ಷಣಗಳನ್ನು ತಿಳಿದುಕೊಳ್ಳಲೇಬೇಕು. 

1. ತಮ್ಮ ಹಾಜರಿ ಗುರುತು ಮಾಡುತ್ತಾರೆ: ವೃಶ್ಚಿಕ ರಾಶಿಯವರು ಅದು ಎಷ್ಟೇ ದೊಡ್ಡ ಕ್ರೌಡ್ ನಲ್ಲಿ ಇರಲಿ ತಮ್ಮ ಹಾಜರಿ ಗುರುತು ಮಾಡುತ್ತಾರೆ. ಬೇರೆಯವರ ಗಮನ ತಮ್ಮ ಕಡೆ ಸೆಳೆಯುವ ಚಾಕಚಕ್ಯತೆ ಇವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ.

2. ನೇರವಾದ ಮಾತು: ತಮಗೆ ಏನು ಅನ್ನಿಸುತ್ತದೆಯೋ ಅದನ್ನು ನೇರವಾಗಿ ಹೇಳಬಲ್ಲರು. ಉದಾಹರಣೆಗೆ ನೀವು ಈ ಡ್ರೆಸ್ ನಲ್ಲಿ ದಪ್ಪ ಕಾಣುತ್ತೀರಿ ಎಂದು ಯಾವ ಮುಲಾಜಿಲ್ಲದೆ ಹೇಳುತ್ತಾರೆ. ನೀವು ಅವರ ಬಗ್ಗೆ ಏನು ಅಂದುಕೊಳ್ಳುತ್ತಿರೋ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದೇ ಇಲ್ಲ. 

ಸೌಂಡ್ ಸ್ಲೀಪ್‌ಗೆ ಹೀಗೆ ಮಾಡಿ ಎನ್ನುತ್ತದೆ ವಾಸ್ತು ಶಾಸ್ತ್ರ

3. ಕೆಟ್ಟದಾಗಿ ನಡೆದುಕೊಂಡರೆ ಜಾಗವಿಲ್ಲ: ಇವರ ಜೀವನದಲ್ಲಿ ಒಮ್ಮೆ ಕೆಟ್ಟದಾಗಿ ನಡೆದುಕೊಂಡರೆ, ನಂಬಿಕೆಗೆ ದ್ರೋಹ ಮಾಡಿದರೆ ಮತ್ತೆ ಅವರನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದೇ ಇಲ್ಲ.

4.ಎಲ್ಲದರಲ್ಲಿಯೂ ವೇಗ: ಕಾಯುವಿಕೆ ಇವರಿಗೆ ಒಗ್ಗಿ ಬರುವುದೇ ಇಲ್ಲ. ಕಾಯುವಿಕೆ ತಾಳ್ಮೆ ಇವರಿಗೆ ಉಳಿದ ಎಲ್ಲ ರಾಶಿಯವರಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ.

5. ದಬ್ಬಾಳಿಕೆ ಸಹಿಸಲ್ಲ: ತಮ್ಮ ಮೇಲೆ ದಬ್ಬಾಳಿಕೆ ನಡೆಯಲು ಬಿಡುವುದೇ ಇಲ್ಲ. ಬೇರೆಯವರನ್ನೇ ಕೊಂಚ ಬೆದರಿಸಿ ಬಾಸ್ ತರಹವೇ ವರ್ತಿಸುತ್ತಾರೆ.

 ಜಗಳ ಆಡೋದ್ ಬಿಟ್ಹಾಕಿ, ಚೆನ್ನಾಗಿ ಲೈಫ್ ಲೀಡ್ ಮಾಡಲು ಹೀಗ್ ಮಾಡಿ!

6. ವಾದ ಮಾಡಲು ಸಾಧ್ಯವೇ ಇಲ್ಲ: ಇವರ ಬಳಿ ವಾದ ಮಾಡಿ ಗೆಲ್ಲಲು ಸಾಧ್ಯವೇ ಇಲ್ಲ. ಎಂಥಂದ್ದೆ ವಾದ ಮಂಡಿಸಿದರೂ ಇವರ ಬಳಿ ಉತ್ತರ ಸಿದ್ಧವಾಗಿರುತ್ತದೆ.

7. ಹಾಸಿಗೆಯಲ್ಲಿ ಇವರ ಮೀರಿಸುವವರೇ ಇಲ್ಲ! ಸದಾ ರೋಮ್ಯಾಂಟಿಕ್ ಆಗಿರುವ ಇವರು ಸಂಗಾತಿಗೆ ಸಕಲ ಸುಖ ನೀಡುತ್ತಾರೆ. 

8. ಮೋಸ ಮಾಡಲು ಸಾಧ್ಯವೇ ಇಲ್ಲ: ಇವರು ಸದಾ ಜಾಗೃತರಾಗಿರುವುದರಿಂದ ಮೋಸ ಮಾಡಿ ಅಥವಾ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

9. ಸ್ವಾಭಿಮಾನಿಗಳು: ಇವರು ಸ್ವಾಭಿಮಾನಿಗಳು ಜತೆಗೆ ಅವರದ್ದೇ ಆದ ಒಂದಷ್ಟು ವಿಶೇಷ ಆಸಕ್ತಿಗಳನ್ನು ಹೊಂದಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಅತ್ಯುತ್ತಮ ಪೋಟೋ ಹಾಕಿ ಮೆಚ್ಚುಗೆ ಪಡೆಯುವುದರಲ್ಲಿ ಎತ್ತಿದ ಕೈ.

10. ವಿಡಂಬನೆ ಮತ್ತು ಹಾಸ್ಯ: ಯಾವುದೇ ವಿಚಾರದ ಬಗ್ಗೆ ವಿಡಂಬನಾತ್ಮಕವಾಗಿ ಹಾಸ್ಯದಿಂದಲೇ ಟೀಕಿಸಬಲ್ಲರು.

11. ಗುರಿಯ ಕಡೆ ಓಟ: ಇವರು ತಮ್ಮ ಗುರಿ ಸಾಧನೆಯ ಕಡೆ ಸದಾ ಓಡುತ್ತಲೇ ಇರುತ್ತಾರೆ. ಎಂಥ ಕಷ್ಟದ ಸಂದರ್ಭ ಬಂದರೂ ಹೆಜ್ಜೆ ಹಿಂದಿಟ್ಟು ಗೊತ್ತಿಲ್ಲ.

12. ಅಸಲಿ ಭಾವನೆ ಹೊರಕ್ಕೆ ಹಾಕಲ್ಲ: ಕೆಲವೊಂದು ವಿಚಾರಗಳನ್ನು, ಗುಟ್ಟನ್ನು ಕೊನೆಯವರೆಗೂ ಬಿಟ್ಟು ಕೊಡುವುದೇ ಇಲ್ಲ. ಜನರಿಂದ ದೂಷಣೆಗೂ ಗುರಿಯಾಗದಂತೆ ನೋಡಿಕೊಳ್ಳುತ್ತಾರೆ.

13. ಗೆಲ್ಲುವುದಕ್ಕಾಗಿಯೇ ಆಡುತ್ತಾರೆ: ಆಟದ ವಿಚಾರಕ್ಕೆ ಬಂದರೆ ಗೆಲ್ಲುವುದಕ್ಕಾಗಿಯೇ ಆಡುತ್ತಾರೆ. 

14. ಅದೃಷ್ಟ ಹೊಡೆದಂತೆ: ಇಷ್ಟೆಲ್ಲ ಗುಣಲಕ್ಷಣ ಇದ್ದರೂ ಒಂದು ವೇಳೆ ವೃಶ್ಚಿಕ ರಾಶಿಯವರು ನಿಮ್ಮನ್ನು ಪ್ರೀತಿ ಮಾಡಿದರೆ ಅದಕ್ಕಿಂತ ದೊಡ್ಡ ಸಂತಸದ ಸಂಗತಿ ನಿಮ್ಮ ಜೀವನದಲ್ಲಿ ಮತ್ತೊಂದಿಲ್ಲ. ಯಾಕಂದ್ರೆ ಎಂಥ ವೇಳೆಯೂ ನಿಮ್ಮನ್ನು ಬಿಟ್ಟು ಕೊಡಲಾರರು.