Asianet Suvarna News Asianet Suvarna News

ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡುವುದೇಕೆ?

ನಮ್ಮ ದೇಶದ ಅತಿ ಶ್ರೀಮಂತ ದೇಗುಲ ಎನಿಸಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭಾರತದಾದ್ಯಂತ ಭಕ್ತರಿದ್ದಾರೆ. ಆದರೆ, ಇಷ್ಟು ಖ್ಯಾತಿ ಪಡೆದ ದೇವಸ್ಥಾನದ ಹಲವಾರು ಆಸಕ್ತಿಕರ ಸಂಗತಿಗಳು ಬಹುತೇಕರಿಗೆ ತಿಳಿದಿಲ್ಲ

10 fascinating facts about Tirupati Temple unknown to people
Author
Bangalore, First Published Jun 14, 2019, 2:45 PM IST

ತಿರುಪತಿ ಬಾಲಾಜಿ ದೇವರ ತಲೆಯಲ್ಲಿರುವುದು ನಿಜವಾದ ಕೂದಲು! ಈ ದೇವರ ಮೂರ್ತಿಯು ಆಗಾಗ ಬೆವರುತ್ತದೆ. ಅರೆ ಎಷ್ಟು ಆಸಕ್ತಿಕರವಾಗಿದೆಯಲ್ಲ! ತಿರುಪತಿ ದೇವಾಲಯದ ಕುರಿತ ಇಂಥ ಹತ್ತು ಹಲವಾರು ಕುತೂಹಲಕರ ವಿಷಯಗಳಿವೆ. ಆದರೆ ಸ್ವತಃ ತಿಮ್ಮಪ್ಪ ಭಕ್ತರಿಗೇ ಇವೆಲ್ಲವುಗಳ ಬಗ್ಗೆ ತಿಳಿದಿಲ್ಲ. ಅವು ಯಾವುವು ಗೊತ್ತಾ?

1. ಅಪರಿಚಿತ ಹಳ್ಳಿಯಿಂದ ಬರುತ್ತೆ ದೇವರಿಗೆ ಹೂವು
ತಿರುಪತಿ ಬಾಲಾಜಿ ದೇವಸ್ಥಾನದಲ್ಲಿರುವ ಮೂರ್ತಿಗಳ ಪೂಜೆಗೆ ಬರುವ ಹೂವುಗಳು, ಬೆಣ್ಣೆ, ಹಾಲು, ಮಜ್ಜಿಗೆ, ಪತ್ರೆ ಇತ್ಯಾದಿಗಳು ತಿರುಪತಿಯಿಂದ 22 ಕಿ.ಮೀ. ದೂರದ ಸಣ್ಣ ಹಳ್ಳಿಯೊಂದರಿಂದ ಬರುತ್ತವೆ. ಈ ಪುಟ್ಟ ಹಳ್ಳಿಯ ಹೆಸರನ್ನು ದೇವಾಲಯವು ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ಇಲ್ಲಿನ ಜನರ ಹೊರತಾಗಿ, ಹೊರಗಿನವರು ಈ ಹಳ್ಳಿಗೆ ಭೇಟಿ ನೀಡಿಲ್ಲ.

ವಿದೇಶಕ್ಕೆ ತೆರಳಲು ವೀಸಾ ಸಿಕ್ತಾ ಇಲ್ವಾ? ಇಲ್ಲಿ ಹರಕೆ ತೀರಿಸಿ...

2. ಬಾಲಾಜಿ ವಿಗ್ರಹ ಮಧ್ಯದಲ್ಲಿಲ್ಲ
ತಿರುಪತಿ ತಿಮ್ಮಪ್ಪನ ವಿಗ್ರಹವು ಗರ್ಭಗುಡಿಯ ಮಧ್ಯದಲ್ಲಿರುವಂತೆ ಕಾಣಬಹುದು. ಆದರೆ, ನಿಜವಾಗಿ ಈ ವಿಗ್ರಹವು ಗರ್ಭಗುಡಿಯ ಬಲಭಾಗದಲ್ಲಿದೆ. 

3. ತಿಮ್ಮಪ್ಪನ ತಲೆಯಲ್ಲಿರುವುದು ನಿಜವಾದ ಕೂದಲು
ವೆಂಕಟೇಶ್ವರನ ತಲೆಯಲ್ಲಿರುವ ಕೂದಲು ಪೂರ್ತಿ ಸಿಲ್ಕಿ ಸ್ಮೂತ್ ಆಗಿದ್ದು, ಸಿಕ್ಕಿಲ್ಲದ ನಿಜವಾದ ಕೂದಲಾಗಿದೆ. ಈ ರೀತಿ ಲೋಪವಿಲ್ಲದ ಕೂದಲ ಹಿಂದೊಂದು ಕತೆಯಿದೆ- ಬಾಲಾಜಿಯು ಭೂಮಿಯಲ್ಲಿದ್ದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕೂದಲು ಕಳೆದುಕೊಳ್ಳುತ್ತಾನೆ. ಆಗ ಗಂಧರ್ವ ದೇವತೆ ನೀಲಾ ದೇವಿ ಎಂಬಾಕೆ ತನ್ನ ಕೂದಲನ್ನೇ ಕತ್ತರಿಸಿ ಬಾಲಾಜಿಗೆ ನೀಡಿ, ಅದನ್ನು ತಲೆಯಲ್ಲಿ ಸಿಕ್ಕಿಸಿಕೊಳ್ಳುವಂತೆ ಕೋರಿಕೊಳ್ಳುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿದ ಬಾಲಾಜಿ, ಅವಳ ಕೋರಿಕೆಯನ್ನು ಮನ್ನಿಸುತ್ತಾನೆ. ಅಷ್ಟೇ ಅಲ್ಲ, ತನ್ನ ದೇಗುಲಕ್ಕೆ ಬಂದು ಯಾರು ತಮ್ಮ ಕೂದಲನ್ನು ಕೊಡುತ್ತಾರೋ ಅವರನ್ನು ಆಶೀರ್ವದಿಸುವುದಾಗಿ ಮಾತು ಕೊಡುತ್ತಾನೆ. ಅಂದಿನಿಂದ ಇಂದಿನವರೆಗೂ ಜನರು ಕೋರಿಕೆಗಳನ್ನು ಈಡೇರಿಸುವಂತೆ ಹರಕೆ ಕಟ್ಟಿ ತಿರುಪತಿಗೆ ಬಂದು ಕೂದಲು ಕೊಡುವುದು ನಡೆದುಕೊಂಡು ಬಂದಿದೆ.

4. ತಿಮ್ಮಪ್ಪನ ವಿಗ್ರಹದ ಹಿಂದೆ ಸಮುದ್ರದಲೆಗಳ ಮೊರೆತ!
ನೀವಿದನ್ನು ಕೇಳುವವರೆಗೆ ನಂಬುವುದಿಲ್ಲ, ಆದರೆ, ಈ ದೇವಾಲಯದಲ್ಲಿರುವ ತಿಮ್ಮಪ್ಪನ ಚಿತ್ರದ ಹಿಂದೆ ಕಿವಿಗೊಟ್ಟರೆ ಸಮುದ್ರದಲೆಗಳ ಮೊರೆತ ಕೇಳಿಸುತ್ತದೆ.

5. ಎಂದೂ ಆರದ ದೀಪಗಳು
ಭಕ್ತರ ಹೃದಯದಲ್ಲಿ ಭಕ್ತಿಯ ದೀಪಗಳು ಹೇಗೆ ಸದಾ ಪ್ರಜ್ವಲಿಸುತ್ತವೆಯೋ ಹಾಗೆಯೇ ತಿರುಪತಿ ದೇವಾಲಯದ ಗರ್ಭಗುಡಿಯಲ್ಲಿ ದೇವರ ವಿಗ್ರಹದ ಮುಂದಿನ ದೀಪಗಳು ಆರುವುದೇ ಇಲ್ಲ. ಯಾವಾಗ ಯಾರು ಈ ದೀಪಗಳನ್ನು ಹಚ್ಚಿದರೆಂಬ ಬಗ್ಗೆ ಮಾಹಿತಿ ಇಲ್ಲವಾದರೂ, ಬಹಳ ಹಿಂದಿನಿಂದಲೂ ಈ ದೀಪಗಳು ನಿಮಿಷವೂ ಆರದೆ ಉರಿಯುತ್ತಿವೆ. ಮುಂದೆಯೂ ಉರಿಯುತ್ತಲೇ ಇರುತ್ತವೆ.

ರೂಪ ಬದಲಿಸಿದ ಆಂಜನೇಯ, ವಿಸ್ಮಯಕಾರಿ ಮಂದಿರದ ಹಿಂದಿದೆ ರೋಚಕ ಕತೆ

6. ಒಮ್ಮೆ ವೆಂಕಟೇಶ್ವರ ಪ್ರತ್ಯಕ್ಷನಾಗಿದ್ದ!
19ನೇ ಶತಮಾನದಲ್ಲೊಮ್ಮೆ, ತಿರುಪತಿ ಭಾಗದ ರಾಜ, 12 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದ. ಆ 12 ಜನರನ್ನು ಬಾಲಾಜಿ ದೇಗುಲದ ಗೋಡೆಗಳಲ್ಲಿ ಕುತ್ತಿಗೆಗೆ ನೇತು ಹಾಕಿ ಕೊಲ್ಲಲಾಯಿತು. ಆ ಬಳಿಕ ಶವಗಳು ಅಲ್ಲಿಯೇ ನೇತಾಡುತ್ತಿದ್ದವು. ಆ ಸಂದರ್ಭದಲ್ಲಿ ತಿಮ್ಮಪ್ಪ ಸ್ವಾಮಿ ಪ್ರತ್ಯಕ್ಷನಾಗಿದ್ದ ಎನ್ನಲಾಗುತ್ತದೆ.

7. ತಿಮ್ಮಪ್ಪನ ಬೆನ್ನು ಒದ್ದೆ
ಕಾರಣವೇನೋ ಗೊತ್ತಿಲ್ಲ, ದೇವಾಲಯದ ಅರ್ಚಕರು ಅದೆಷ್ಟೇ ಪ್ರಯತ್ನ ಹಾಕಿ ತಿಮ್ಮಪ್ಪನ ವಿಗ್ರಹವನ್ನು ಒಣಗಿಸಿಡಲು ಪ್ರಯತ್ನಿಸಿದರೂ, ವಿಗ್ರಹದ ಹಿಂಭಾಗ ಸದಾ ಒದ್ದೆಯಾಗಿಯೇ ಇರುತ್ತದೆ.

8. ದೇವರಿಗೆ ಹಾಕಿದ ಹೂ ವೆರ್ಪುಡುವಿನಲ್ಲಿ ಹೊರಬರುತ್ತವೆ!
ದೇವಾಲಯದ ನಿಯಮಾವಳಿಯಂತೆ, ಅರ್ಚಕರು ತಿಮ್ಮಪ್ಪನ ವಿಗ್ರಹಕ್ಕೆ ಬೆಳಗಿನ ಪೂಜೆಯಲ್ಲಿ ನೇರವಾಗಿ ಹೂವನ್ನು ಏರಿಸುವುದಿಲ್ಲ. ಅವರು ಅದನ್ನು ವಿಗ್ರಹದ ಹಿಂಬದಿಯಲ್ಲಿ ಹರಿವ ಜಲಪಾತಕ್ಕೆ ಎಸೆಯುತ್ತಾರೆ. ದಿನದ ಉಳಿದ ಭಾಗ ಅವರು ವಿಗ್ರಹದ ಹಿಂಭಾಗ ನೋಡುವುದಿಲ್ಲ. ಆಶ್ಚರ್ಯವೆಂದರೆ ಇಲ್ಲಿ ಹಾಕಿದ ಹೂಗಳು ಸುಮಾರು 20 ಕಿಲೋಮೀಟರ್ ದೂರದ ವೆರ್ಪೆಡು ಎಂಬ ಊರಿನಲ್ಲಿ ಕಂಡುಬರುತ್ತವೆ.

9. ಬೆವರುವ ದೇವರು
ಬಾಲಾಜಿಯ ವಿಗ್ರಹವನ್ನು ಕಲ್ಲಿನಿಂದ ಕೆತ್ತಲಾಗಿದೆಯಾದರೂ ಅದಕ್ಕೆ ಜೀವವಿದೆ ಎಂಬುದನ್ನು ಸಾಬೀತುಪಡಿಸುವುದು ಅದರ ಉಷ್ಣತೆ. ಈ ವಿಗ್ರಹವು ಸದಾ ಕಾಲ 110 ಡಿಗ್ರಿ ಫ್ಯಾರನ್‌ಹೀಟ್ ಇರುತ್ತದೆ. ಇದು ಬೆಟ್ಟದ ಮೇಲಿರುವುದರಿಂದ ಸುತ್ತಲ ವಾತಾವರಣ ಪೂರ್ತಿ ತಣ್ಣಗಿದ್ದರೂ ವಿಗ್ರಹದ ತಾಪಮಾನ ಹೆಚ್ಚಿರುವುದು ಆಶ್ಚರ್ಯ ಮೂಡಿಸುತ್ತದೆ. ಗುರುವಾರದಂದು ಅರ್ಚಕರು ಪವಿತ್ರ ಸ್ನಾನಕ್ಕೆ ಮೂರ್ತಿಯ ಆಭರಣಗಳನ್ನೆಲ್ಲ ತೆಗೆದಾಗ ಅವರಿಗೆ ವಿಗ್ರಹದಲ್ಲಿ ಮೈ ಬೆಚ್ಚನೆಯ ಅರಿವಾಗಿದೆ. 

Follow Us:
Download App:
  • android
  • ios