ಬೆಂಗಳೂರು (ಆ.15):ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮಾನದಂಡ ಉಲ್ಲಂಘಿಸಿ ಪಡೆಯಲಾಗಿರುವ ಬಿಪಿಎಲ್ ಪಡಿತರ ಚೀಟಿ ಗಳ ರದ್ದು ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಮಾನದಂಡ ಉಲ್ಲಂಘಿಸಿ ಪಡೆದಿರುವ 7.65 ಲಕ್ಷ ಪಡಿತರ ಚೀಟಿಗಳನ್ನು ಶಂಕಾಸ್ಪದ ಪಟ್ಟಿಗೆ ಸೇರಿಸಿ ರಾಜ್ಯಕ್ಕೆ ಕಳುಹಿಸಿತ್ತು. ಹಣದುಬ್ಬರ ಹಿನ್ನಲೆ ಹಳೇ ನಿಯಮ ಪಾಲನೆ ಕಷ್ಟ ಎಂದು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವುದಾಗಿ ರಿಜ್ವಾನ್ ಆರ್ಷದ್ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.
11:32 PM (IST) Aug 15
ಕರ್ನಾಟಕ ಶಿಕ್ಷಕರ ನೇಮಕಾತಿ 2026ರಲ್ಲಿ ವಯೋಮಿತಿ ಸಡಿಲಿಕೆ, ಗಣಿತ ಶಿಕ್ಷಕರ ಖಾಲಿ ಹುದ್ದೆಗಳ ಸೇರ್ಪಡೆ ಹಾಗೂ ಭಾಷಾ ವೈವಿಧ್ಯತೆಯ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವಂತೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಆಗ್ರಹಿಸಿದೆ.
11:28 PM (IST) Aug 15
'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ 'ಟಾಕ್ಸಿಕ್' ಸಿನಿಮಾ ಕುರಿತ ಪ್ರಶ್ನೆಗಳಿಗೆ ರಾಕಿಂಗ್ ಸ್ಟಾರ್ ಯಶ್ ಖಡಕ್ ಉತ್ತರ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ರಜತ್ ಅವರು ಯಶ್‌ಗೆ ‘ಟಾಕ್ಸಿಕ್’ ಸಿನಿಮಾದಲ್ಲಿನ ಒಂದು ದೃಶ್ಯದ ಕುರಿತು ನಕಾರಾತ್ಮಕ ಕಾಮೆಂಟ್ ಬಂದಿದೆ ಎಂದು ಹೇಳಲು ಮುಂದಾದರು. ಆಗ ಯಶ್ ಹೇಳಿದ ಮಾತೊಂದು ಈಗ ವೈರಲ್ ಆಗಿದೆ.
11:08 PM (IST) Aug 15
ಮಂಗಳೂರು ಮತ್ತು ಮೈಸೂರಿನ ಕೆಎಫ್‌ಸಿ ಹಾಗೂ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, ದೊಡ್ಡ ಪ್ರಮಾಣದ ಕೊಳೆತ ಮತ್ತು ಅವಧಿ ಮುಗಿದ ಮಾಂಸವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಳಿಗೆಗಳ ಗೋಡೌನ್ ಸೀಜ್ ಮಾಡಲಾಗಿದ್ದು, ಆಹಾರದ ಮಾದರಿಗಳನ್ನು ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
10:46 PM (IST) Aug 15
ಭ್ರಷ್ಟಾಚಾರದಂತಹ ಸವಾಲುಗಳ ನಡುವೆಯೂ ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡಿದ ಎಂಟು ಪ್ರಾಮಾಣಿಕ ಐಎಎಸ್ ಅಧಿಕಾರಿಗಳ ಸ್ಪೂರ್ತಿದಾಯಕ ಕಥೆಯಿದು. ಇದರಲ್ಲಿದ್ದಾರೆ ಒಬ್ಬ ಕನ್ನಡದ ಕಲಿ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ
09:58 PM (IST) Aug 15
ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತರು ಕಳೆದುಹೋದ ಹಸುಗಳನ್ನು ಹುಡುಕಲು ಹೋಗಿದ್ದರು ಎಂದು ಕುಟುಂಬಸ್ಥರು ದೂರು ನೀಡಿದ್ದರೆ ಅವರು ಪ್ರಾಣಿ ಬೇಟೆಗೆ ಬಂದು ನಮ್ಮ ಮೇಲೆಯೇ ಮೊದಲು ದಾಳಿ ನಡೆಸಿದ್ದರೆಂದು ಅರಣ್ಯ ಸಿಬ್ಬಂದಿ ಆರೋಪಿಸಿದ್ದಾರೆ.
09:32 PM (IST) Aug 15
Yash 700 Fans Selfie: ಸಂದರ್ಶನವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಒಂದೇ ಕಾರ್ಯಕ್ರಮದಲ್ಲಿ ಸುಮಾರು 700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಸೆಲ್ಫಿ ನೀಡಿದ ಬಗ್ಗೆ ಪ್ರಶ್ನೆ ಕೇಳಲಾಗಿದೆ.
09:11 PM (IST) Aug 15
ಅಪರೂಪದ ಕಾಯಿಲೆಯಿಂದ ವೀಲ್ ಚೇರ್ ಗೆ ಸೀಮಿತವಾಗಿದ್ದ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿನಿ ನಿವೇದಿತಾ, ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಪವಾಡಸದೃಶವಾಗಿ ಗುಣಮುಖರಾಗಿದ್ದಾರೆ. ವೈದ್ಯಕೀಯ ವಿಜ್ಞಾನವೇ ಕೈಚೆಲ್ಲಿದ್ದ ಈ ಕಾಯಿಲೆಯು ರಾಯರ ಮಂತ್ರಾಕ್ಷತೆಯ ಮಹಿಮೆಯಿಂದ ಕೇವಲ ಮೂರೇ ವಾರಗಳಲ್ಲಿ ವಾಸಿಯಾಗಿದ್ದು, ಯುವತಿ ಈಗ ಮೊದಲಿನಂತೆ ಓಡಾಡುತ್ತಿದ್ದಾಳೆ.
08:56 PM (IST) Aug 15
08:12 PM (IST) Aug 15
ಸುತ್ತಮುತ್ತ ಸಾಕಷ್ಟು ಖಾಲಿ ಜಾಗವಿದ್ದರೂ ನಾಯಿಗಳು ಬಂದು ವಾಹನದ ಟೈರ್, ವಿದ್ಯುತ್ ಕಂಬ, ಗೋಡೆ ಅಥವಾ ಮರದಂತಹ ಲಂಬವಾದ ಜಾಗಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡುವುದನ್ನು ಗಮನಿಸಿರಬಹುದು.
08:10 PM (IST) Aug 15
'ಹೆಚ್ಚಿನ ಮನೆಗಳಲ್ಲಿ ನನ್ನ ವಯಸ್ಸಿನ ಹುಡುಗರಿಗೆ 'ಓದು' ಎಂದು ಹೇಳಿದರೆ, ನಮ್ಮ ಮನೆಯಲ್ಲಿ ಮಾತ್ರ 'ಸಿನಿಮಾ ನೋಡು' ಎಂದು ಪ್ರೋತ್ಸಾಹಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಮನೆಯೇ ನನ್ನ ಮೊದಲ ಪಾಠಶಾಲೆ' ಎಂದಿದ್ದಾರೆ ಜ್ಯೇಷ್ಠವರ್ಧನ್. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ.
08:06 PM (IST) Aug 15
07:47 PM (IST) Aug 15
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿತ್ರದ ತಾರಾಗಣದ ಹೇಳಿಕೆಗಳು ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿವೆ.
06:50 PM (IST) Aug 15
ಮುಂಬೈನಲ್ಲಿ ನಡೆದ ಚಿತ್ರದ ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ರುಕ್ಮಿಣಿ ವಸಂತ್, ‘ಟಾಕ್ಸಿಕ್’ ತಮ್ಮ ವೃತ್ತಿಜೀವನದ ಅತ್ಯಂತ ವಿಭಿನ್ನ ಸಿನಿಮಾಗಳಲ್ಲಿ ಒಂದು ಎಂದು ಹೇಳಿದ್ದಾರೆ.
06:44 PM (IST) Aug 15
ಕೇವಲ ಕನ್ನಡ ಮಾತ್ರವಲ್ಲ, ತೆಲುಗಿನಲ್ಲೂ ಶ್ರೀನಿಧಿ ಶೆಟ್ಟಿ ಹವಾ ಜೋರಾಗಿದೆ. ತೆಲುಗಿನ ‘ವಿಕ್ಟರಿ’ ವೆಂಕಟೇಶ್ ನಟನೆಯ ‘ಆದರ್ಶ ಕುಟುಂಬಂ’ ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 2 ರಂದು ಈ ಚಿತ್ರ ತೆರೆಗೆ ಬರಲಿದೆ. ಇದರ ನಡುವೆಯೇ ಕನ್ನಡಕ್ಕೆ ಮರಳಿದ್ದಾರೆ ಶ್ರೀನಿಧಿ ಶೆಟ್ಟಿ!
06:18 PM (IST) Aug 15
06:15 PM (IST) Aug 15
ಅಭಿವೃದ್ಧಿಗೆ ಮೀಸಲಾದ ಹಣ ದುರುಪಯೋಗ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾಗಿರುವ ವಿಚಾರ ಮುಂದಿಟ್ಟುಕೊಂಡು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
06:07 PM (IST) Aug 15
'ಇರುವುದನ್ನೆಲ್ಲಾ ಅತ್ಯಂತ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ. ಪ್ರತಿಯೊಂದು ಫ್ರೇಮ್ ಕೂಡ ಒಂದು ಕಥೆ ಹೇಳುತ್ತದೆ. ಸಿನಿಮಾದ ಒಂದು ತುಣುಕನ್ನು ನೋಡಿ ಇಡೀ ಸಿನಿಮಾವನ್ನು ಜಡ್ಜ್ ಮಾಡುವುದು ತಪ್ಪು' ಎಂದಿದ್ದಾರೆ ಯಶ್. ಟಾಕ್ಸಿಕ್‌ನಲ್ಲಿ ಹೇಳಿರುವ ಅಜ್ಜಿಯ ಕಥೆ ಏನು ಹಾಗಿದ್ರೆ..?
06:03 PM (IST) Aug 15
Anjanadri: ಶ್ರಾವಣ ಮಾಸದ ಮೊದಲ ಶನಿವಾರ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಭಕ್ತರ ದಂಡೇ ಹರಿದುಬಂದಿದೆ. ಹನುಮಂತನ ಜನ್ಮಸ್ಥಳವೆಂದು ನಂಬಲಾಗುವ ಅಂಜನಾದ್ರಿ ಬೆಟ್ಟದ..
05:54 PM (IST) Aug 15
ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಭದ್ರತೆಯನ್ನು ತೀವ್ರಗೊಳಿಸಿ ಹೈಪ್ರೊಫೈಲ್ ಕೈದಿಗಳ ಮೇಲೆ ಬಿಗಿ ಕಣ್ಗಾವಲು ಇಡಲಾಗಿದೆ. ಹೊಸ ನಿಯಮಗಳ ಭಾಗವಾಗಿ, ನಟ ದರ್ಶನ್ ಅವರ ಬ್ಯಾರಕ್ ಸುತ್ತ ಸಿಸಿಟಿವಿ ಕಣ್ಗಾವಲು ಹೆಚ್ಚಿಸಲಾಗಿದ್ದು, ಸಹ-ಆರೋಪಿ ಪವಿತ್ರಾಗೌಡ ಅವರನ್ನು 16 ಕೈದಿಗಳಿರುವ ದೊಡ್ಡ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ.
05:50 PM (IST) Aug 15
05:41 PM (IST) Aug 15
Jai Hanuman Rishab Shetty: ‘ಹನು-ಮಾನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ ಬಳಿಕ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಸಿನಿಮಾಟಿಕ್ ಯೂನಿವರ್ಸ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ.
05:40 PM (IST) Aug 15
ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (IREL) ತನ್ನ ತಮಿಳುನಾಡಿನ ಕನ್ಯಾಕುಮಾರಿ ಘಟಕದಲ್ಲಿ 39 ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ITI, ಡಿಪ್ಲೊಮಾ, ಮತ್ತು B.E/B.Tech ಪದವೀಧರರು ಈ ಹುದ್ದೆಗಳಿಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯು ಟ್ರೇಡ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಆಯ್ಕೆಯು ಟ್ರೇಡ್ ಟೆಸ್ಟ್ ಮತ್ತು ನೇರ ಸಂದರ್ಶನದ ಮೂಲಕ ನಡೆಯಲಿದೆ.
05:24 PM (IST) Aug 15
ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ 20 ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಮಾಸಿಕ ₹25,500 ರಿಂದ ₹81,100 ವೇತನ ಶ್ರೇಣಿ ಇರಲಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 11, 2026 ಕೊನೆಯ ದಿನಾಂಕವಾಗಿದೆ.
05:19 PM (IST) Aug 15
‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ಚಿತ್ರದ ‘ತಬಾಹಿ’ ಹಾಡು ಹೊರಬಂದ ಬಳಿಕವಂತೂ ಹಾಡಿನ ದೃಶ್ಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.
05:01 PM (IST) Aug 15
Charge Sheet 03-08 Review: ಪ್ರೀತಿ- ಪ್ರೇಮ, ಕೊಲೆ, ಪೊಲೀಸು ಮತ್ತು ತನಿಖೆ ಇದಿಷ್ಟೇ ಅಂಶಗಳ ಸುತ್ತಾ ಸಾಗುವ ಸಿನಿಮಾ ‘ಚಾರ್ಜ್ ಶೀಟ್ 03-08’. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ವೃತ್ತಿ ಅನುಭವದ ಕಥನ.
04:49 PM (IST) Aug 15
'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ, ನಟ ಯಶ್ ತಮ್ಮ 'ಟಾಕ್ಸಿಕ್' ಸಿನಿಮಾದ ಕುರಿತಾದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಚಿತ್ರವು ಅಶ್ಲೀಲತೆ ಅಥವಾ ಗ್ಯಾಂಗ್‌ಸ್ಟಾರ್ ಸಂಸ್ಕೃತಿಯನ್ನು ವೈಭವೀಕರಿಸುವುದಿಲ್ಲ, ಬದಲಿಗೆ ಇಂದಿನ ಜೆನ್-ಜಿ ಪೀಳಿಗೆಯ ಸಮಸ್ಯೆಗಳು ಮತ್ತು ಅವರ ಆಲೋಚನೆಗಳಿಗೆ ಕನ್ನಡಿ ಹಿಡಿಯುವ ಕಲಾತ್ಮಕ ಪ್ರಯತ್ನ ಎಂದು ಅವರು ವಿವರಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
04:39 PM (IST) Aug 15
RSS Karnataka: ನಮ್ಮ ಗೃಹಮಂತ್ರಿಯವರು ಹೇಳುವುದರಲ್ಲಿ ಅಸಂವಿಧಾನಿಕ ಅಂತ ಏನಿದೆ. ಕಾನೂನು ಬಾಹಿರವಾದ ವಿಚಾರವನ್ನೇನಾದರೂ ಮುಂದಿಟ್ಟಿದ್ದಾರಾ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಪ್ರಶ್ನಿಸಿದರು.
04:27 PM (IST) Aug 15
ಭಾರತ ಒಂದು ಒಕ್ಕೂಟದ ರಾಷ್ಟ್ರ, ಎಲ್ಲಾ ರಾಜ್ಯಗಳು ಎಲ್ಲ ಪರಿಸ್ಥಿತಿಯನ್ನು ಹಂಚಿಕೊಳ್ಳಬೇಕಾಗಿದೆ. ಈಗ ಸಿಡಬ್ಲ್ಯೂಆರ್ ಸಿ ಮತ್ತು ಸಿಡಬ್ಲ್ಯೂಎಂಎ ನೀಡಿರುವ ಆದೇಶವನ್ನು ನಾವು ಪಾಲಿಸಬೇಕಲ್ವಾ. ಅದರ ನಡುವೆ..
04:22 PM (IST) Aug 15
ಬಾಗಲಕೋಟೆ ಜಿಲ್ಲೆಯ ಸೂಳೇಭಾವಿಯ ಮುತ್ತಪ್ಪ ಹಡಪದ ಎಂಬುವವರು ಕಳೆದ 21 ವರ್ಷಗಳಿಂದ ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಉಚಿತವಾಗಿ ಕ್ಷೌರ ಸೇವೆ ನೀಡುವ ಮೂಲಕ ದೇಶಭಕ್ತಿ ಮೆರೆಯುತ್ತಿದ್ದಾರೆ. ಪ್ರಮುಖವಾಗಿ ಗ್ರಾಮದ ಹಿರಿಯರು, ಅಶಕ್ತರು ಹಾಗೂ ವಿಕಲಚೇತನರಿಗೆ ಯಾವುದೇ ಶುಲ್ಕವಿಲ್ಲದೆ ಅಕ್ಕರೆಯಿಂದ ಸೇವೆ ಒದಗಿಸುತ್ತಿರುವ ಮುತ್ತಪ್ಪ ಅವರ ಈ ವಿಶಿಷ್ಟ ದೇಶಪ್ರೇಮಕ್ಕೆ ಇಡೀ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
04:20 PM (IST) Aug 15
04:12 PM (IST) Aug 15
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ 19 ಕಿ.ಮೀ. ಉದ್ದದ ಹಳದಿ ಮಾರ್ಗವು ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೆಟ್ರೋ ನಿಲ್ದಾಣದಿಂದಲೇ ನೇರ ಆಫೀಸ್‌ಗೆ ತಲುಪಲು ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ಬಿಎಂಟಿಸಿಯೊಂದಿಗೆ ಸೇರಿ 28 ಫೀಡರ್ ಬಸ್‌ಗಳನ್ನು ಕೂಡ ರಸ್ತೆಗೆ ಇಳಿಸಿದೆ.
03:50 PM (IST) Aug 15
ಚಿಕ್ಕಮಗಳೂರಿನ ಕಳಸದಲ್ಲಿ ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಬೆಂಗಳೂರು ಮೂಲದ ಪ್ರವಾಸಿ ದಂಪತಿಯ ಕಾರು ಸೋಮಾವತಿ ನದಿಗೆ ಬಿದ್ದು, ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನದಿಯಲ್ಲಿದ್ದ ಬೃಹತ್ ಬಂಡೆಯೊಂದು ಕಾರಿಗೆ ಅಡ್ಡ ಸಿಕ್ಕಿದ್ದರಿಂದ ಅದು ನೀರಿನ ರಭಸಕ್ಕೆ ಕೊಚ್ಚಿ ಹೋಗದೆ ಬದುಕುಳಿದಿದ್ದು, ಸ್ಥಳೀಯರು ತಕ್ಷಣವೇ ದಂಪತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
02:42 PM (IST) Aug 15
02:19 PM (IST) Aug 15
ಜೀವಾವಧಿ ಶಿಕ್ಷೆ ಮುಗಿಸಿ ಜೈಲಿನಿಂದ ಬಿಡುಗಡೆಯಾಗಿದ್ದ ತಂದೆಯನ್ನು ಮಗನೇ ಕೊಲೆ ಮಾಡಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ತಂದೆಯ ಕಿರುಕುಳಕ್ಕೆ ಬೇಸತ್ತು ಮಗ ಕೃತ್ಯ ಎಸಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
01:27 PM (IST) Aug 15
01:26 PM (IST) Aug 15
ಆರ್‌ಎಸ್‌ಎಸ್ ನೋಂದಣಿಯಾಗುವುದಿಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರು ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್ ಅನ್ನು 'ಭಂಡರು' ಎಂದು ಕರೆದ ಅವರು, ಕಳ್ಳ ದುಡ್ಡನ್ನು ರಕ್ಷಿಸಿಕೊಳ್ಳಲು ನೋಂದಣಿ ಮಾಡಿಸುತ್ತಿಲ್ಲ ಎಂದು ಆರೋಪಿಸಿದರು.
12:58 PM (IST) Aug 15
12:34 PM (IST) Aug 15
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರದ ಕ್ರಮವನ್ನು ವಿರೋಧಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ರಹಸ್ಯವಾಗಿ ನೀರು ಬಿಡುಗಡೆ ಮಾಡಿ, ಅಧಿಕೃತ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
12:32 PM (IST) Aug 15
12:16 PM (IST) Aug 15
ಕೊಡಗಿನ ಪಾನೀಯವಾದ 'ಭತ್ತದ ಸಾರಾಯಿ' ಈಗ 'ಹುಲಿ ರೈಸ್ ಮಾಲ್ಟ್ ವಿಸ್ಕಿ' ಎಂಬ ಪ್ರೀಮಿಯಂ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ. ಅರುಣ್ ಅರಸ್ ಅವರು 100% ಮಾಲ್ಟೆಡ್ ಭತ್ತದಿಂದ ತಯಾರಿಸಿದ ಈ ವಿಸ್ಕಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ಲಭ್ಯವಿದ್ದು, ತನ್ನ ವಿಶಿಷ್ಟ ತಯಾರಿಕಾ ವಿಧಾನದಿಂದ ಗಮನ ಸೆಳೆದಿದೆ.