Published : Jul 03, 2026, 07:20 AM ISTUpdated : Jul 03, 2026, 10:49 PM IST

State News Live: Honey Facts - 3000 ವರ್ಷವಾದರೂ ಜೇನುತುಪ್ಪ ಕೆಡುವುದಿಲ್ಲವೇ? ಇಲ್ಲಿದೆ ಅಚ್ಚರಿಯ ಸತ್ಯ!

ಸಾರಾಂಶ

ಬೆಂಗಳೂರು (ಜು.3): 'ತೀವ್ರ ಜಲಕ್ಷಾಮದ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀರು, ವಿದ್ಯುತ್ ಅಭಾವ ಸೃಷ್ಟಿಯಾಗಲಿದೆ. ರಾಜ್ಯಾದ್ಯಂತ ಬಹುತೇಕ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿದ್ದು, ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ' ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಎಲ್‌ನಿನೊ ಪರಿ ಣಾಮದಿಂದ ಉಂಟಾಗಲಿರುವ ಬರದ ಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

Honey Facts

10:49 PM (IST) Jul 03

Honey Facts - 3000 ವರ್ಷವಾದರೂ ಜೇನುತುಪ್ಪ ಕೆಡುವುದಿಲ್ಲವೇ? ಇಲ್ಲಿದೆ ಅಚ್ಚರಿಯ ಸತ್ಯ!

Ancient Egyptian Honey: ಆದಿಮಾನವರು ಜೇನುತುಪ್ಪವನ್ನು ಕೇವಲ ಆಹಾರವಾಗಿ ನೋಡಲಿಲ್ಲ. ಸುಮಾರು 10,000 ವರ್ಷಗಳ ಹಿಂದೆ ಸ್ಪೇನ್‌ನ ಗುಹಾ ವರ್ಣಚಿತ್ರಗಳಲ್ಲಿ, ಮನುಷ್ಯರು ಜೇನು ಬೇಟೆಯಾಡುವ ದೃಶ್ಯಗಳಿವೆ.

Read Full Story

10:30 PM (IST) Jul 03

ಬಾಳೆಹಣ್ಣ ಯಾಕೆ ಯಾವಾಗಲೂ ಬಾಗಿರುತ್ತವೆ, ದುಂಡಗೆ ಅಥವಾ ನೆಟ್ಟಗೆ ಇರೋಲ್ಲ?

ನೀವು ಮಾರ್ಕೆಟ್‌ನಲ್ಲಿ ನೋಡಿರಬಹುದು ಸೇಬು, ದ್ರಾಕ್ಷಿ, ಆರಂಜ್, ಪೇರಲದಂತಹ ಹಣ್ಣುಗಳು ಸಾಮಾನ್ಯವಾಗಿ ದುಂಡಾಗಿರುತ್ತವೆ. ಆದರೆ ಬಾಳೆಹಣ್ಣು ಮಾತ್ರ ಯಾವಾಗಲೂ ಬಾಗಿದ ಆಕಾರದಲ್ಲೇ ಕಾಣಿಸುತ್ತದೆ. ಇದು ಪ್ರಕೃತಿಯ ವಿಶೇಷತೆ ಮಾತ್ರವಲ್ಲ, ಅದರ ಹಿಂದೆ ಒಂದು ಕುತೂಹಲಕಾರಿ ವಿಜ್ಞಾನದ ಕಾರಣವೂ ಇದೆ ಅದೇನು?

Read Full Story

09:58 PM (IST) Jul 03

Tea And Snacks - ಚಹಾದ ಜೊತೆ ಬಜ್ಜಿ, ವಡೆ ತಿನ್ನುವ ಅಭ್ಯಾಸವಿದೆಯೇ? ಹಾಗಿದ್ರೆ ಮೊದಲು ಇದನ್ನೊಮ್ಮೆ ಓದಿ!

ಚಹಾದ ಜೊತೆ ಬಜ್ಜಿ, ವಡೆ ತಿನ್ನುವುದು ಹಲವರ ಸಾಮಾನ್ಯ ಅಭ್ಯಾಸ. ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಇದರಿಂದಾಗುವ ಸಮಸ್ಯೆಗಳು ಮತ್ತು ಆರೋಗ್ಯಕರ ಪರ್ಯಾಯಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.

Read Full Story

09:18 PM (IST) Jul 03

ಎಲ್ ನಿನೊ ಎಚ್ಚರಿಕೆ ಬಳಿಕ ಸರ್ಕಾರದ ತುರ್ತು ಸಭೆ - ಸಿಎಂ ಡಿಕೆಶಿ ಕೊಟ್ಟ ಮಹತ್ವದ ಸೂಚನೆ ಏನು?

DK Shivakumar: ಹಿಂದಿನ ವರ್ಷಕ್ಕೆ ಹೋಲಿಸಿದರೆ ಸದ್ಯ ನಮ್ಮಲ್ಲಿ ವಿದ್ಯುತ್‌ ಸಂಗ್ರಹಣಾ ಸ್ಥಿತಿ ಸುಸ್ಥಿತಿಯಲ್ಲಿದೆ. ಹಿಂದಿನ ಮೂರು ವರ್ಷ ವಿದ್ಯುತ್‌ ಕಡಿತ ಇಲ್ಲದೆ ನಿರ್ವಹಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Read Full Story

08:54 PM (IST) Jul 03

Why Ships Float - ಲಕ್ಷಾಂತರ ಟನ್ ತೂಕದ ಹಡಗುಗಳು ಸಮುದ್ರದಲ್ಲಿ ಹೇಗೆ ತೇಲುತ್ತವೆ? ಇಲ್ಲಿದೆ ಅಚ್ಚರಿಯ ರಹಸ್ಯ!

ಸಣ್ಣದೊಂದು ಕಬ್ಬಿಣದ ಮೊಳೆ ನೀರಿನಲ್ಲಿ ಮುಳುಗುತ್ತದೆ, ಆದರೆ ಲಕ್ಷಾಂತರ ಟನ್ ತೂಕದ ಹಡಗು ಹೇಗೆ ತೇಲುತ್ತದೆ? ನೀವು ಎಂದಾದರೂ ಯೋಚಿಸಿದ್ದೀರಾ? ಹಡಗುಗಳು ಸಮುದ್ರದಲ್ಲಿ ತೇಲುವುದರ ಹಿಂದಿನ 'ರಹಸ್ಯ' ಏನು ಎಂದು ಇಲ್ಲಿ ನೋಡೋಣ.

Read Full Story

08:18 PM (IST) Jul 03

ಕಂಪನಿ ಸಿಇಒ ನೀಡಿದ ಉದ್ಯೋಗ ಆಫರ್ ತಿರಸ್ಕರಿಸಿದ ಬೆಂಗಳೂರಿಗ, ರಿಜೆಕ್ಟ್ ಹಿಂದಿನ SORRY ಘಟನೆ

ಸಂದರ್ಶನ ಬಳಿಕ ಕೈತುಂಬ ಸ್ಯಾಲರಿ ಉದ್ಯೋಗ ಆಫರ್ ಮಾಡಿದ್ದರೆ. ಆದರೆ ಬೆಂಗಳೂರಿಗ ಈ ಆಫರ್ ಅಲ್ಲೆ ತಿರಸ್ಕರಿಸಿ ಹೊರನಡೆದಿದ್ದಾರೆ. ಇದೀಗ ಉದ್ಯಮಿಯಾಗಿ ಬೆಳೆದಿರುವ ಈ ಅಭ್ಯರ್ಥಿ ಉದ್ಯೋಗ ತಿರಸ್ಕರಿಸಿದ ಹಿಂದಿನ ಕ್ಷಮೆ ಘಟನೆ ವಿವರಿಸಿದ್ದಾರೆ.

Read Full Story

07:54 PM (IST) Jul 03

Toxic - ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!

ಸೌತ್ ಸೂಪರ್‌ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'Toxic' ರಿಲೀಸ್‌ಗೂ ಮೊದಲೇ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಕಥೆಯ ಜೊತೆಗೆ, ಇದರಲ್ಲಿರುವ ದೊಡ್ಡ ತಾರಾಬಳಗ ಕೂಡ ಜನರ ಗಮನ ಸೆಳೆಯುತ್ತಿದೆ.

Read Full Story

07:36 PM (IST) Jul 03

Hrithik Roshan Sussanne Khan Divirce Secret - ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?

ವಿಚ್ಛೇದನದ ಬಳಿಕವೂ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ತಮ್ಮ ಇಬ್ಬರು ಮಕ್ಕಳಿಗಾಗಿ ಸ್ನೇಹಪೂರ್ವಕ ಸಂಬಂಧ ಮುಂದುವರಿಸುತ್ತಿದ್ದಾರೆ. ಕುಟುಂಬದ ಕಾರ್ಯಕ್ರಮಗಳಲ್ಲಿ, ಮಕ್ಕಳ ಜೊತೆಗಿನ ಪ್ರವಾಸಗಳಲ್ಲಿ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಇಬ್ಬರೂ ಕೂಡ, ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

Read Full Story

07:27 PM (IST) Jul 03

ತನ್ನ ಲ್ಯಾಂಬೋರ್ಗಿನಿ ಕಾರನ್ನು ಆಟೋ ಚಾಲಕನಿಗೆ ನೀಡಿ ಆಟೋದಲ್ಲಿ ತೆರಳಿದ ಬೆಂಗಳೂರು ಉದ್ಯಮಿ

ಆಟೋ ಚಾಲಕನ ಅತೀ ದೊಡ್ಡ ಕನಸನ್ನು ಬೆಂಗಳೂರು ಉದ್ಯಮಿ ಪೂರೈಸಿದ್ದಾರೆ. ತನ್ನ ಲ್ಯಾಂಬೋರ್ಗಿನಿ ಕಾರನ್ನು ಆಠಾ ಚಾಲಕನಿಗೆ ಡ್ರೈವ್ ಮಾಡಲು ನೀಡಿ, ಆಟೋ ರಿಕ್ಷಾವನ್ನು ತಾನು ಚಲಾಯಿಸಿದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

Read Full Story

07:12 PM (IST) Jul 03

666 operation Dream Theatre Teaser - ಶಿವರಾಜ್‌ಕುಮಾರ್-ಧನಂಜಯ್ ನಟನೆಯ '666 ಆಪರೇಶನ್ ಡ್ರೀಮ್ ಥಿಯೇಟರ್ ಟೀಸರ್' ಬಿಡುಗಡೆ; ಭಾರೀ ಹೈಪ್ ಸೃಷ್ಟಿ!

ಇಂದು ನಡೆದ (03 July 2026) ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ವೈಶಾಖ್ ಜೆ ಗೌಡ, ನಟರಾದ ಶಿವರಾಜ್‌ಕುಮಾರ್, ಡಾಲಿ ಧನಂಜಯ್, ಪ್ರಿಯಾಂಕಾ ಮೋಹನ್ ಹಾಗೂ ಅದಿತಿ ಬಾಲನ್ ಸೇರಿದಂತೆ, ಇಡೀ ಚಿತ್ರತಂಡ ಭಾಗಿಯಾಗಿ ಹಲವು ಸಂಗತಿಗಳನ್ನು ಹಂಚಿಕೊಂಡಿದೆ.

Read Full Story

07:05 PM (IST) Jul 03

ಕೊಡಗಿನಲ್ಲಿ ಅವ್ಯವಸ್ಥೆ ಕಂಡು ಗರಂ ಆದ ಉಪ ಲೋಕಾಯುಕ್ತ - ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ

ನಿಮಗೆ ಶಿಕ್ಷೆ ಕೊಡುವಂತೆ ಸರ್ಕಾರಕ್ಕೆ ಬರೆಯುತ್ತೇನೆಂದು ಗರಂ ಆದರು. ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕೆ ಎನ್ ಫಣೀಂದ್ರ ತರಾಟೆಗೆ ತೆಗೆದುಕೊಂಡರು. 

Read Full Story

06:12 PM (IST) Jul 03

BBK13 - 'ಪ್ರತಿ ವರ್ಷವೂ ನನ್ನ ಹೆಸರು ಕೇಳಿಬರುತ್ತೆ'... ಈ ಬಾರಿ ಬಿಗ್ ಬಾಸ್‌ಗೆ ಹೋಗ್ತಾರಾ ಮೇಘಾ ಶೆಟ್ಟಿ?

ಪ್ರತಿ ವರ್ಷ 'ಬಿಗ್ ಬಾಸ್ ಕನ್ನಡ' ಹೊಸ ಸೀಸನ್ ಘೋಷಣೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮೇಘಾ ಶೆಟ್ಟಿ ಹೆಸರು ಚರ್ಚೆಗೆ ಬರುತ್ತದೆ. ಆದರೆ ಇದುವರೆಗೆ ಅವರು ಒಂದೇ ಒಂದು ಸೀಸನ್‌ನಲ್ಲೂ ಭಾಗವಹಿಸಿಲ್ಲ. 

Read Full Story

05:50 PM (IST) Jul 03

ಎರಡನೇ ಪಂದ್ಯದಲ್ಲಿ ಕ್ರೀಸ್‌ಗಿಳಿಯಲು ವೈಭವ್‌ಗೆ ಸಿಕ್ತಾ ಗ್ರೀನ್ ಸಿಗ್ನಲ್? ಆದರೆ ಗಂಭೀರ ಲೆಕ್ಕಾಚಾರವೇನು?

ಭಾರತದ ಇಂಗ್ಲೆಂಡ್ ಪ್ರವಾಸವು ತಂಡದ ಆಯ್ಕೆಯ ವಿವಾದದಿಂದ ಕೂಡಿದೆ. ಉತ್ತಮ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿಯನ್ನು ಮೊದಲ ಪಂದ್ಯದಲ್ಲಿ ಆಡಿಸದ ಕೋಚ್ ಗಂಭೀರ್ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದ್ದಷ್ಟೇ ಅಲ್ಲ ಆ ಕಾರಣಕ್ಕೂ ವೈಭವ್‌ಗೆ ಸಿಕ್ಕಂತಾಗಿದೆ ಗ್ರೀನ್‌ ಸಿಗ್ನಲ್. 

Read Full Story

05:46 PM (IST) Jul 03

ರೈತರಿಗೆ ಗುಡ್ ನ್ಯೂಸ್ - ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರ್ಕಾರದ ಭರವಸೆ

ನವಲಿ ಬಳಿ ಸಮತೋಲನ ಜಲಾಶಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾಗಿರುವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

Read Full Story

05:37 PM (IST) Jul 03

ಹಳೆಯ ಬ್ಯಾಂಕ್ ಖಾತೆಯಲ್ಲಿನ ಹಣ ಮರೆತಿದ್ದೀರಾ? ಅದನ್ನು ಮರಳಿ ಪಡೆಯೋದು ಹೇಗೆ?

ಅನೇಕರು ತಮ್ಮ ಹಳೆಯ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಮರೆತಿರುತ್ತಾರೆ. 10 ವರ್ಷಗಳಿಗಿಂತ ಹೆಚ್ಚು ಕಾಲ ಕ್ಲೈಮ್ ಮಾಡದ ಠೇವಣಿಗಳನ್ನು ಮರಳಿ ಪಡೆಯಲು RBI UDGAM ಪೋರ್ಟಲ್ ಮತ್ತು ಸರಳ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Read Full Story

05:19 PM (IST) Jul 03

ಮರಿ ಟೈಗರ್‌ಗೆ ಫುಲ್ ಮಾರ್ಕ್ಸ್ ಕೊಟ್ಟ ಕಿಚ್ಚ ಸುದೀಪ್ - ನಿರ್ದೇಶಕ ಕೆ.ಎಂ. ಚೈತನ್ಯ ಪೋಸ್ಟ್ ವೈರಲ್

KM Chaithanya: 'ಬಲರಾಮನ ದಿನಗಳು' ಸಿನಿಮಾ, ಕೆ.ಎಂ. ಚೈತನ್ಯ ಅವರ ಜನಪ್ರಿಯ 'ಆ ದಿನಗಳು' ಚಿತ್ರದ ಮುಂದುವರಿದ ಭಾಗವಲ್ಲ. ಆದರೆ ಅದೇ ಕಾಲಘಟ್ಟದ ಮತ್ತೊಂದು ಕಥೆಯನ್ನು ಹೇಳುವ ಪ್ರಯತ್ನವಾಗಿದೆ.

Read Full Story

04:52 PM (IST) Jul 03

ತಿಂಗಳು ಬಾಡಿಗೆಗೆ ಇಷ್ಟು ಹಣ ಹೋಯ್ತು ಅಂತ ಕೊರಗ್ತಿದ್ದೀರಾ! ಹಾಗಿದ್ರೆ ನೀವು ದೊಡ್ಡ ಮಿಸ್ಟೇಕ್‌ ಮಾಡ್ತಿದ್ದೀರಿ

Bengaluru rent: ಬೆಂಗಳೂರಿನಲ್ಲಿ ಅಥವಾ ಸಿಟಿಯಲ್ಲಿ ವಾಸ ಮಾಡುವಾಗ ಬಾಡಿಗೆ ಕೊಡಬೇಕು, ಊಟ ತಿಂಡಿಗೆ ಹಣ ಕೊಡಬೇಕು ಎಂದೆಲ್ಲ ಯೋಚನೆ ಮಾಡ್ತೀವಿ. ಆದರೆ ಇದು ಹೊರೆ ಅಲ್ಲ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಹೇಳಿದ್ದಾರೆ.

 

Read Full Story

04:51 PM (IST) Jul 03

'ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ'.. ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ವೈರಲ್; ಯಾರಿಗೆ ಈ ಸಂದೇಶ?

Vijayalakshmi Instagram Post: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟ್ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Read Full Story

04:32 PM (IST) Jul 03

ರಾಮ ಮಂದಿರ ಚಂದಾ ವಂಚನೆ ಕುರಿತು ಆರ್‌ಎಸ್‌ಎಸ್‌ ಫಸ್ಟ್‌ ರಿಯಾಕ್ಷನ್‌; ಹೇಳಿದ್ದೇನು?

ರಾಮ ಮಂದಿರ ಚಂದಾ ವಂಚನೆಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

04:29 PM (IST) Jul 03

ಭದ್ರಾ ಜಲಾಶಯದಲ್ಲಿ ನೀರಿನ ಅಭಾವ - ರೈತರಿಗೆ ಸರ್ಕಾರದ ಮಹತ್ವದ ಸೂಚನೆ

Bhadra Dam: ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ಸರ್ಕಾರದ ಆದೇಶವಾಗಿರುವ ಹಿನ್ನಲೆಯಲ್ಲಿ ಅಚ್ಚುಕಟ್ಟು ಭಾಗದ ಎಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು.

Read Full Story

04:20 PM (IST) Jul 03

2 ಫ್ಲಾಟ್ ಮಾರಿದ ಅಕ್ಷಯ್ ಕುಮಾರ್ - ಜಸ್ಟ್ 9 ವರ್ಷದಲ್ಲಿ ಕೋಟಿ ಕೋಟಿ ಗಳಿಸಿದ ಸ್ಟಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂಬೈನಲ್ಲಿರುವ ತಮ್ಮ ಎರಡು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು 12.38 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸುಮಾರು 9 ವರ್ಷಗಳ ಹಿಂದೆ ಖರೀದಿಸಿದ್ದ ಈ ಆಸ್ತಿಯಿಂದ ಅವರಿಗೆ ಶೇ. 38 ರಷ್ಟು ಲಾಭ ಬಂದಿದೆ.

Read Full Story

04:17 PM (IST) Jul 03

ಭಾರತಕ್ಕೆ ಒಂದು ವರ್ಶನ್, ವಿದೇಶಕ್ಕೆ ಇನ್ನೊಂದು? ಯಶ್ 'ಟಾಕ್ಸಿಕ್' ಬಗ್ಗೆ ಹೊರಬಿತ್ತು ಸ್ಫೋಟಕ ಮಾಹಿತಿ

ಟಾಕ್ಸಿಕ್‌’ ಹಾಲಿವುಡ್‌ ಪ್ರೇಕ್ಷಕರನ್ನು ಮನಸ್ಸಲ್ಲಿಟ್ಟುಕೊಂಡು ನಿರ್ಮಾಣವಾದ ಯಶ್‌ ನಟನೆಯ ಬಹುನಿರೀಕ್ಷಿತ ಚಿತ್ರ. ಟ್ಯಾಗ್‌ಲೈನ್‌ನಲ್ಲೇ ಇದು ವಯಸ್ಕರಿಗಾಗಿ ತಯಾರಾಗಿರುವ ಚಿತ್ರ ಎಂಬ ಸೂಚನೆ ಇದೆ.

Read Full Story

04:05 PM (IST) Jul 03

ಕೆಲವೇ ದಿನಗಳಲ್ಲಿ Actress Mokshitha Pai 'ಜಗದ್ದಾತ್ರಿ' ಧಾರಾವಾಹಿ ಆರಂಭ; ಯಾವ ಸೀರಿಯಲ್‌ ಅಂತ್ಯ ಆಗಲಿದೆ?

Mokshitha Pai Jagaddhatri Kannada Serial: ಖಾಸಗಿ ವಾಹಿನಿಯಲ್ಲಿ ‘ಜಗದ್ದಾತ್ರಿ’ ಧಾರಾವಾಹಿ ಪ್ರಸಾರ ಆಗಲಿದೆ. ಮೋಕ್ಷಿತಾ ಪೈ, ವಿಜಯ್‌ ಸೂರ್ಯ ನಟನೆಯ ಈ ಸೀರಿಯಲ್‌ಗೋಸ್ಕರ ಇನ್ನೊಂದು ಧಾರಾವಾಹಿ ಅಂತ್ಯ ಆಗಲಿದೆ. ಹಾಗಾದರೆ ಯಾವ ಧಾರಾವಾಹಿ ಮುಗಿಯಲಿದೆ?

 

Read Full Story

03:31 PM (IST) Jul 03

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪಗೆ ಬಿಡದ ಕಾನೂನು ಸಂಕಷ್ಟ; ಆಗಿದ್ದೇನು ಗೊತ್ತಾ?

ಬಿಜೆಪಿ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಅವರು ಎದುರಿಸುತ್ತಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 2012ರಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ಅನ್ವಯ, ಈಶ್ವರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. 

Read Full Story

03:29 PM (IST) Jul 03

ನಟ ದರ್ಶನ್‌ಗೆ ಮತ್ತೊಂದು ಭಾರಿ ಹಿನ್ನಡೆ! ಅರ್ಜಿ ವಿಚಾರಣೆಗೆ ಯೋಗ್ಯವಲ್ಲವೆಂದು ಪ್ರಕಟಿಸಿದ ಸುಪ್ರೀಂ ಕೋರ್ಟ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸಲ್ಲಿಸಿದ್ದ ಆದೇಶ ಮಾರ್ಪಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಇದು ದರ್ಶನ್‌ಗೆ ಕಾನೂನು ಹೋರಾಟದಲ್ಲಿ ದೊಡ್ಡ ಹಿನ್ನಡೆಯಾಗಿದೆ.
Read Full Story

03:10 PM (IST) Jul 03

Darshan Thoogudeepa Fans - ಜೈಕಾರ ಹಾಕಿದವರಿಂದಲೇ ಜೈಲು ಸೇರಿದ್ದ ನಟ ದರ್ಶನ್; ಈಗ ಏನಾಯ್ತು?

ಯಾವುದೇ ಒಬ್ಬ ನಟನಿಗೆ ಅಭಿಮಾನಿಗಳು ಆಸ್ತಿ. ಆದರೆ ಆ ಆಸ್ತಿಯೇ ಅತಿರೇಕಕ್ಕೆ ಹೋದಾಗ ಅದು ಆ ನಟನ ಜೀವನವನ್ನೇ ಭಸ್ಮ ಮಾಡುವ ಜ್ವಾಲೆಯಾಗುತ್ತೆ ಅನ್ನೋದಕ್ಕೆ ಈ ಇಡೀ ಪ್ರಕರಣವೇ ಒಂದು ಸಾಕ್ಷಿ. ಸದ್ಯ ಈ ಅಭಿಮಾನಿಗಳ ಅವಾಂತರವೇ ಎಲ್ಲಿ ಮುಳುವಾಗುತ್ತೋ ಅಂತ ಸ್ವತಃ ದರ್ಶನ್‌ಗೇ ಟೆನ್ಷನ್ ಶುರುವಾಗಿದೆ ಎನ್ನಲಾಗ್ತಿದೆ.

Read Full Story

02:30 PM (IST) Jul 03

ಬೆಳಗಾವಿ - ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ, ಶಿವಲಿಂಗದಂತೆ ಕಾಣುವ 300 ವರ್ಷ ಹಿಂದಿನ ಮೆಟ್ಟಿಲುಬಾವಿಗೆ ಮರುಜೀವ!

ಬೆಳಗಾವಿಯಲ್ಲಿ ಕಸ, ಮಣ್ಣಿನಿಂದ ಮುಚ್ಚಿಹೋಗಿದ್ದ 300 ವರ್ಷಗಳಷ್ಟು ಹಳೆಯ, ಆದಿಲ್‌ ಶಾಹಿ ಕಾಲದ ಮೆಟ್ಟಿಲುಬಾವಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಶಿವಲಿಂಗದ ಆಕಾರದಲ್ಲಿರುವ ಈ ಐತಿಹಾಸಿಕ ಬಾವಿಯು 80 ಅಡಿ ಆಳವಿದ್ದು, ಪ್ಯಾಸ್‌ ಫೌಂಡೇಷನ್‌ ಮತ್ತು ಸ್ವಯಂಸೇವಕರ ಶ್ರಮದಿಂದ ಮತ್ತೆ ಬೆಳಕಿಗೆ ಬಂದಿದೆ.
Read Full Story

02:28 PM (IST) Jul 03

ಕಾನ್‌ಸ್ಟೇಬಲ್ ಪಿಸಿಕಲ್‌ ಟೆಸ್ಟ್‌ನಲ್ಲಿ ಮೃತರಾದರೆ, ಪರಿಹಾರ ಹೇಗೆ ಪಡೆಯುವುದು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ ಅಭ್ಯರ್ಥಿ ಮೃತಪಟ್ಟರೆ, ಸಂತ್ರಸ್ತರ ಕುಟುಂಬಕ್ಕೆ ಪರಿಹಾರವನ್ನು ಹೇಗೆ ಪಡೆಯಬಹುದು? ಮಿತಿಗಳೇನಿವೆ? ಹಾಗೂ ಅದನ್ನು ಪಡೆಯಲು ಇರುವ ಮಾರ್ಗಗಳ ಕುರಿತಾಗಿ ಸಂಪೂರ್ಣ ವಿವರ ಇಲ್ಲಿದೆ. 

Read Full Story

02:13 PM (IST) Jul 03

ನೈಋತ್ಯ ರೈಲ್ವೆ ಜೂನ್‌ ಒಂದೇ ತಿಂಗಳಲ್ಲಿ ದಾಖಲೆಯ ₹733 ಕೋಟಿ ಆದಾಯ! ವಿಶೇಷ ರೈಲುಗಳ ಸೇವೆ ಆ.31 ರವರೆಗೆ ವಿಸ್ತರಣೆ

ನೈಋತ್ಯ ರೈಲ್ವೆ ವಲಯವು ಜೂನ್ ತಿಂಗಳಲ್ಲಿ ₹733.23 ಕೋಟಿ ಆದಾಯ ಗಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಈ ದಾಖಲೆಯ ಆದಾಯಕ್ಕೆ 4.18 ಮಿಲಿಯನ್ ಟನ್ ಸರಕು ಸಾಗಣೆ ಮತ್ತು 1.48 ಕೋಟಿ ಪ್ರಯಾಣಿಕರ ಸಂಚಾರ ಪ್ರಮುಖ ಕಾರಣವಾಗಿದೆ. ಇದೇ ವೇಳೆ, ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ವಿಶೇಷ ರೈಲುಗಳ ಸೇವೆಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.
Read Full Story

01:55 PM (IST) Jul 03

ಪೊಲೀಸರಿಂದ ಲಂಚಕ್ಕೆ ಬೇಡಿಕೆ, ಯಾವುದೇ ನೋಟಿಸ್ ಕೊಡದೇ ನಂದಿನಿ ಶಾಪ್ ತೆರವು, ಮಾಲಕಿ ಸುಮಿತ್ರ ಕುಸಿದುಬಿದ್ದು ಕಣ್ಣೀರು!

GBA clears footpath encroachments: ಸುಪ್ರೀಂ ಕೋರ್ಟ್‌ ಆದೇಶದಂತೆ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಮುಂದಾಗಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಇಂದು ಬನಶಂಕರಿ ದೇವಸ್ಥಾನದ ಮುಂಭಾಗದದಲ್ಲಿದ್ದ ನಂದಿನಿ ಪಾರ್ಲರ್ ತೆರವುಗೊಳಿಸುವ ವೇಳೆ ಹೈಡ್ರಾಮಾ ನಡೆದಿದೆ.

 

Read Full Story

12:53 PM (IST) Jul 03

ಬಿಜೆಪಿಯವರು ಹಿಂದುತ್ವದ ಮುಖವಾಡ ಹಾಕಿಕೊಂಡ ಖದೀಮರು; ಘಜ್ನಿ, ಘೋರಿಗೆ ಹೋಲಿಸಿದ ಸಚಿವ ಶರಣಪ್ರಕಾಶ್ ಪಾಟೀಲ್!

ಸಚಿವ ಶರಣಪ್ರಕಾಶ್ ಪಾಟೀಲ್ ಅವರು, ಅಯೋಧ್ಯೆ ರಾಮ ಮಂದಿರದ ಹಣವನ್ನು ಲೂಟಿ ಮಾಡುವ ಮೂಲಕ ಬಿಜೆಪಿ ಸರ್ಕಾರವು ಮೊಹಮ್ಮದ್ ಘಜ್ನಿಯಂತೆ ವರ್ತಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದಿದ್ದಾರೆ.

Read Full Story

12:52 PM (IST) Jul 03

ಎಸ್‌ಐಆರ್ ನಿಯಮ ಉಲ್ಲಂಘಿಸಿದರೆ ಕಾನೂನು ಹೋರಾಟಕ್ಕೆ ಮುಂದಾಗುತ್ತಾ ಸರ್ಕಾರ; ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟೇ!

ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಎಸ್‌ಐಆರ್‌ ಪ್ರಕ್ರಿಯೆ ಕುರಿತು ಬಿಜೆಪಿ-ಜೆಡಿಎಸ್‌ ವಿರುದ್ಧ ಕಿಡಿಕಾರಿದ್ದು, ಮತದಾನದ ಹಕ್ಕನ್ನು ಕಸಿಯಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದ್ದಾರೆ. ಆಯೋಗವು ನಿಯಮ ಉಲ್ಲಂಘಿಸಿದರೆ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. 

Read Full Story

12:46 PM (IST) Jul 03

Bengaluru-Mysuru Expressway ಗುಂಡು ಹಾರಿಸಿ ಟ್ರಕ್ ದರೋಡೆ ಯತ್ನ - ಪ್ರಭಾವಿ ಪುತ್ರ ಸೇರಿ 7 ಮಂದಿ ಬಂಧನ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಔಷಧಿ ಸಾಗಿಸುತ್ತಿದ್ದ ಟ್ರಕ್ ಅಡ್ಡಗಟ್ಟಿ, ಏರ್ ಗನ್‌ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಡ್ಯ ಪೊಲೀಸರು ಪ್ರಭಾವಿ ವ್ಯಕ್ತಿಯೊಬ್ಬರ ಪುತ್ರ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
Read Full Story

12:30 PM (IST) Jul 03

ಹೇಳೋರಿಲ್ಲ, ಕೇಳೋರಿಲ್ಲ..ರಾಮನಗರದ ಕಲ್ಯಾಣಮಂಟಪದ ಬಳಿಕ ಬೆಂಗಳೂರಿನ ಮಸೀದಿಯಲ್ಲಿ SIR

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಬಿಎಲ್‌ಓಗಳು ಮಸೀದಿಯಲ್ಲೇ ಮತಪಟ್ಟಿ ಪರಿಷ್ಕರಣೆ ನಡೆಸಿದ್ದಾರೆ. ಮನೆ ಮನೆಗೆ ತೆರಳುವ ಬದಲು ಒಂದೇ ಕಡೆ ಜನರನ್ನು ಸೇರಿಸಿ ಮಾಹಿತಿ ಸಂಗ್ರಹಿಸುತ್ತಿದ್ದ ಈ ಕ್ರಮಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Read Full Story

11:57 AM (IST) Jul 03

ಬರದ ನೆರಳಲ್ಲಿ ಭಾಗ್ಯದಂತೆ ಕಾಲಿಟ್ಟ ಕೃಷ್ಣೆ, ಒಮ್ಮೆಲೆ ಹರಿದ ಐದು ಸಾವಿರ ಕ್ಯೂಸೆಕ್‌ ನೀರು!

ತೀವ್ರ ಬಿಸಿಲಿನಿಂದ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 5,000 ಕ್ಯೂಸೇಕ್ ನೀರು ಹರಿದು ಬಂದಿದೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಕೃಷಿ ಹಾಗೂ ಕುಡಿಯುವ ನೀರಿನ ಭರವಸೆ ಮೂಡಿಸಿದೆ.

Read Full Story

11:37 AM (IST) Jul 03

ಬೆಂಗಳೂರಿನ IISc ವಿಜ್ಞಾನಿಗಳ ಕ್ರಾಂತಿಕಾರಿ ಆವಿಷ್ಕಾರ!; ಬಾಯಿ ಕ್ಯಾನ್ಸರ್ ನಿಯಂತ್ರಣಕ್ಕೆ ಅಲ್ಟ್ರಾಸೌಂಡ್ ರಾಮಬಾಣ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು ಬಾಯಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಅಲ್ಟ್ರಾಸೌಂಡ್ ತರಂಗಗಳನ್ನು ಬಳಸಿ, ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಕೇವಲ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಹೊಸ ತಂತ್ರವನ್ನು ಅವರು ಕಂಡುಹಿಡಿದಿದ್ದಾರೆ. 

Read Full Story

11:28 AM (IST) Jul 03

ಮಂಡ್ಯದಲ್ಲಿ ಭಾರತದ ಮೊದಲ ಸಂವಿಧಾನ ಭವನಕ್ಕೆ ಸರ್ಕಾರ ಒಪ್ಪಿಗೆ, ಕಟ್ಟಡ ಹೇಗಿರಲಿದೆ ಗೊತ್ತಾ?

ಮಂಡ್ಯ: ಸಂವಿಧಾನದ ಹಕ್ಕು-ಬಾಧ್ಯತೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ವಕೀಲರ ಸಂಘ ವಿನೂತನ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಂವಿಧಾನ ಭವನದ ತ್ರೀ-ಡಿ ಮಾದರಿ ಇದೀಗ ಸರ್ಕಾರದಿಂದ ಅಂತಿಮಗೊಂಡಿದೆ.

 

Read Full Story

11:20 AM (IST) Jul 03

Cricket - ಸಾಮಾಜಿಕ ಜಾಲತಾಣದಲ್ಲಿ ಪರಿಚಯ, ಅಪ್ರಾಪ್ತೆಯ ಮೇಲೆ ಲೈ*ಗಿಕ ದೌರ್ಜನ್ಯ - ಕಂಬಿ ಎಣಿಸಲಿದ್ದಾನೆ ಖ್ಯಾತ ಕ್ರಿಕೆಟಿಗ!

ಸ್ಟಾರ್ ಕ್ರಿಕೆಟಿಗನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಿಂದಾಗಿ, ಅವರ ಕ್ರಿಕೆಟ್ ವೃತ್ತಿಜೀವನ ಅಂತ್ಯಗೊಂಡಿದ್ದು, ದೀರ್ಘಾವಧಿಯ ಜೈಲು ಶಿಕ್ಷೆ ಎದುರಿಸಲಿದ್ದಾರೆ ಎನ್ನಲಾಗಿದೆ.

Read Full Story

11:15 AM (IST) Jul 03

ನಂಬಿಕೆ ಹುಸಿ ಮಾಡಿರುವ ಮೂರು ರತ್ನಗಳು.. RCBಯಿಂದ ಮೂವರಿಗೆ ಗೇಟ್‌ಪಾಸ್?

ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆರ್‍‌ಸಿಬಿ ಹ್ಯಾಟ್ರಿಕ್ ಕನಸು ಕಾಣ್ತಿದೆ. ಅದಕ್ಕೆ ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ನಡೆಸ್ತಿದ್ದು, ಮುಂದೆ ಎದುರಾಗುವ ಹರಾಜಿನ ಮೇಲೆ ಕಣ್ಣಿಟ್ಟಿದೆ. ಅದರ ಮುಂದುವರಿದ ಭಾಗವಾಗಿ ಮೂವರು ಆಟಗಾರರಿಗೆ ಕೊಕ್ ನೀಡಲು ಮುಂದಾಗಿದೆ ಎನ್ನಲಾಗ್ತಿದೆ.

Read Full Story

11:00 AM (IST) Jul 03

ಡಿಸಿಎಂ ಜಿ ಪರಮೇಶ್ವರ ಫೇಕ್ ಲವ್‌ ಸ್ಟೋರಿ ಕಥೆ ಕಟ್ಟಿದ ಯೂಟ್ಯೂಬರ್ ಹೆಡೆಮುರಿ ಕಟ್ಟಿದ ಪೊಲೀಸ್

ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿರುದ್ಧ ಅವಹೇಳನಕಾರಿ ಸುಳ್ಳು ಸುದ್ದಿ ಹಬ್ಬಿಸಿದ 'ಡಿಟೆಕ್ಟಿವ್ ಲೆಜೆಂಡ್' ಯೂಟ್ಯೂಬ್ ಚಾನೆಲ್‌ನ ಬ್ರಹ್ಮಾನಂದ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಣ್ಯರ ತೇಜೋವಧೆ ಮಾಡಿದ ಆರೋಪದ ಮೇಲೆ ತುಮಕೂರು ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
Read Full Story

More Trending News