ಆಟೋ ಚಾಲಕನ ಅತೀ ದೊಡ್ಡ ಕನಸನ್ನು ಬೆಂಗಳೂರು ಉದ್ಯಮಿ ಪೂರೈಸಿದ್ದಾರೆ. ತನ್ನ ಲ್ಯಾಂಬೋರ್ಗಿನಿ ಕಾರನ್ನು ಆಠಾ ಚಾಲಕನಿಗೆ ಡ್ರೈವ್ ಮಾಡಲು ನೀಡಿ, ಆಟೋ ರಿಕ್ಷಾವನ್ನು ತಾನು ಚಲಾಯಿಸಿದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಬೆಂಗಳೂರು (ಜು.03) ಸೂಪರ್ ಕಾರು ಲ್ಯಾಂಬೋರ್ಗಿನಿ ಕಾರು ಖರೀದಿ ಎಲ್ಲರಿಗೂ ಸಾಧ್ಯವಾಗುವುದಿಲ್ಲ.ಆದರೆ ಕೋಟಿ ಕೋಟಿ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಒಮ್ಮೆಯಾದರೂ ಡ್ರೈವ್ ಮಾಡಬೇಕು ಅನ್ನೋ ಆಸೆ ಬಹುತೇಕರಿಗೆ ಇದೆ. ಹೀಗೆ ಆಟೋ ಚಾಲಕನ ಲ್ಯಾಂಬೋರ್ಗಿನಿ ಚಲಾಯಿಸು ಕನಸನ್ನು ಬೆಂಗಳೂರಿನ ಉದ್ಯಮಿ ಪೂರೈಸಿದ್ದಾರೆ. ವಿಶೇಷ ಅಂದರೆ ಆಟೋ ಚಾಲಕನಿಗೆ ತನ್ನ ಲ್ಯಾಂಬೋರ್ಗಿನಿ ಕಾರು ಡ್ರೈವ್ ಮಾಡಲು ನೀಡಿದರೆ, ಆತನ ಆಟೋ ಹತ್ತಿ ಉದ್ಯಮಿ ತೆರೆಳಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಉದ್ಯಮಿ ಹಾಗೂ ಸೋಶಿಯಲ್ ಮೀಡಿಯಾ ಪರ್ಸಾನಲಿಟಿ ರಾಕೇಶ್ ಕೆವಿಎನ್ ವಿಡಿಯೋ ಒಂದು ಇದೀಗ ಭಾರಿ ವೈರಲ್ ಆಗಿದೆ. ರಾಕೇಶ್ ತಮ್ಮ ಲ್ಯಾಂಬೋರ್ಗಿನಿ ಸೂಪರ್ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಆಟೋ ಚಾಲಕನೊಬ್ಬ ಕೈಬೀಸಿ ವಿಶ್ ಮಾಡಿದ್ದಾನೆ. ಇತ್ತ ರಾಕೇಶ್ ಕೂಡ ವಿಶ್ ಮಾಡಿದ್ದಾರೆ. ಆದರೆ ಆಟೋ ಚಾಲಕನ ಡ್ರೈವ್ ನಡುವೆ ತನ್ನ ಬಹುದೊಡ್ಡ ಕನಸು ಎಂದಿದ್ದಾನೆ. ಚಾಲನೆ ನಡುವೆ ಮಾತುಕತೆ ಕಂಡು ಉದ್ಯಮಿ ರಾಕೇಶ್ ಅಚ್ಚರಿಗೊಂಡಿದ್ದಾನೆ. ಇಷ್ಟೇ ಅಲ್ಲ ಆಟೋವನ್ನು ರಸ್ತೆ ಬದಿಗೆ ಸರಿಸುವಂತೆ ಸೂಚಿಸಿದ್ದಾನೆ.

ಆಟೋ -ಲ್ಯಾಂಬೋರ್ಗಿನಿ ಸ್ವಾಪ್

ಆಟೋವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಆಟೋ ಚಾಲಕ ಇಳಿದು ಬಂದಿದ್ದಾನೆ. ಇತ್ತ ಲ್ಯಾಂಬೋರ್ಗಿನಿ ಕಾರಿನಿಂದ ಇಳಿದ ಉದ್ಯಮಿ ರಾಕೇಶ್, ಆಟೋ ಚಾಲಕನ ಮಾತನಾಡಿಸಿದ್ದಾರೆ. ಈ ವೇಳೆ ತನ್ನ ಅತೀ ದೊಡ್ಡ ಆಸೆ ಲ್ಯಾಂಬೋರ್ಗಿನಿ ಕಾರು ಡ್ರೈವ್ ಮಾಡಬೇಕು ಎಂದಿದ್ದಾನೆ. ರಾಕೇಶ್ ವಿಡಿಯೋಗಳನ್ನು ತಾನು ಫಾಲೋ ಮಾಡುತ್ತಿರುವುದಾಗಿ ಹೇಳಿದ್ದಾನೆ. ಕಾರುಗಳ ಪ್ರಪಂಚದಲ್ಲಿ ನಾನು ವಿಹರಿಸುತ್ತಿದ್ದೇನೆ. ಕಾರುಗಳೆಂದರೆ ನನಗೆ ಇಷ್ಟ. ಆದರೆ ಸದ್ಯ ಆಟೋದಲ್ಲಿ ಜೀವನ ಸಾಗಿಸುತ್ತಿದ್ದೇನೆ ಎಂದಿದ್ದಾನೆ. ಆಟೋ ಚಾಲಕನ ಆಸೆ ಪೂರೈಸಲು ಸರಿ ಎಂದ ಉದ್ಯಮಿ ರಾಕೇಶ್, ತನ್ನ ಲ್ಯಾಂಬೋರ್ಗಿನಿ ಕಾರನ್ನು ಆಟೋ ಚಾಲಕನಿಗೆ ಡ್ರೈವ್ ಮಾಡಲು ನೀಡಿದ್ದಾನೆ. ಆತನಿಂದ ಆಟೋ ಕೀ ಪಡೆದ ಉದ್ಯಮಿ ರಾಕೇಶ್ ಆಟೋ ಹತ್ತಿದ್ದಾನೆ.

ಲ್ಯಾಂಬೋರ್ಗಿನಿ ಕಾರು ಚಲಾಯಿಸಿದ ಆಟೋ ಚಾಲಕ

ಆಟೋ ಚಾಲಕನ ಖುಷಿಗೆ ಪಾರವೇ ಇರಲಿಲ್ಲ. ಲ್ಯಾಂಬೋರ್ಗಿನಿ ಹತ್ತಿ ಕಾರು ಡ್ರೈವ್ ಮಾಡಿದ್ದಾನೆ. ಕೆಲ ದೂರದವರೆಗೆ ಆಟೋ ಚಾಲಕ ಲ್ಯಾಂಬೋರ್ಗಿನಿ ಕಾರು ಡ್ರೈವಿಂಗ್ ಮಾಡಿದ್ದಾನೆ. ಇತ್ತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಉದ್ಯಮಿ ರಾಕೇಶ್, ಚಾಲಕನ ಆಟೋ ಚಾಲನೆ ಮಾಡಿದ್ದಾರೆ. ಲ್ಯಾಂಬೋರ್ಗಿನಿ ಹಿಂಬಾಲಿಸುತ್ತಾ ತೆರಳಿದ್ದಾರೆ. ಕೆಲ ದೂರ ಡ್ರೈವಿಂಗ್ ಮಾಡಿ ಖುಷಿ ಪಟ್ಟ ಆಟೋ ಚಾಲಕ ಮತ್ತೆ ಕಾರು ನಿಲ್ಲಿಸಿ ತನ್ನ ಆಟೋ ಹತ್ತಿದ್ದಾನೆ.

ರಾಕೇಶ್ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೋಟಿ ಕೋಟಿ ರೂಪಾಯಿ ಲ್ಯಾಂಬೋರ್ಗಿನಿ ಕಾರನ್ನು ತನ್ನ ರಿಸ್ಕ್ ಮೇಲೆ ಆಟೋ ಚಾಲಕನಿಗೆ ನೀಡಿದ ಉದ್ಯಮಿಗೆ ಸಲಾಂ ಎಂದು ಹಲವರು ಅಭಿಪ್ರಾಯಗಳು ವ್ಯಕ್ತವಾಗಿದೆ. ಇದೇ ವೇಳೆ ಇದು ರೀಲ್ಸ್‌ಗಾಗಿ ಮಾಡಿದ ಸ್ಟಂಟ್ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

View post on Instagram