ಬೆಂಗಳೂರು (ಜು.13): ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿಡಬ್ಲ್ಯುಸಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಂಗಳವಾರ ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ವಿದೇಶ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭಾನುವಾರ ತಡ ರಾತ್ರಿ ದೆಹಲಿಗೆ ಮರಳಲಿದ್ದಾರೆ. ಸಹಜವಾಗಿ ಸೋಮವಾರ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಹೈಕಮಾಂಡ್ ಒಪ್ಪಿದರೆ ಜುಲೈ 15ರ ಮೊದಲೇ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.
10:42 PM (IST) Jul 13
Sainik School Karnataka: ಕೂಡಿಗೆಯಲ್ಲಿ ಇರುವ ಸೈನಿಕ ಶಾಲೆ ಕೊಡಗು ತನ್ನ 7ನೇ ಹಳೆ ವಿದ್ಯಾರ್ಥಿಗಳ ಸಮಾವೇಶವಾದ 'ಕೋಡಾಕ್' (KODAAC) ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರೆವೇರಿತು.
09:46 PM (IST) Jul 13
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ತಮ್ಮ ಬಹುಕಾಲದ ಗೆಳೆಯ, ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
08:25 PM (IST) Jul 13
ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಬಂಡವಾಳ ಸೆಳೆಯುವ ತಮ್ಮ ಉಪಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮುಂದುವರಿಸಿದ್ದಾರೆ. ಇದರ ಭಾಗವಾಗಿ ಅವರು ಪೂರ್ವ ಭಾರತದತ್ತ..
08:14 PM (IST) Jul 13
16 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ಶ್ರೀಲೀಲಾ, ಇನ್‌ಸ್ಟಾಗ್ರಾಂನಿಂದ ತಿಂಗಳಿಗೆ ಕೋಟಿಗಟ್ಟಲೆ ಸಂಪಾದಿಸುವ ಸ್ಟಾರ್‌ಗಳ ಲಿಸ್ಟ್‌ಗೆ ಸೇರಿದ್ದಾರೆ. ಅವರ ತಿಂಗಳ ಮತ್ತು ವಾರ್ಷಿಕ ಆದಾಯದ ಬಗ್ಗೆ ಇಲ್ಲಿದೆ ಮಾಹಿತಿ.
07:06 PM (IST) Jul 13
Bhavana Menon: 'ಜಾಕಿ' ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದ ನಟಿ ಭಾವನಾ ಮೆನನ್ ಅವರ ಪ್ರೇಮಕಥೆ ಸಿನಿಮಾವೊಂದರ ಕಥೆಯನ್ನೇ ನೆನಪಿಸುವಂತಿದೆ. ಪ್ರೀತಿಯಲ್ಲಿ ಸೋತಿದ್ದ ಇಬ್ಬರು ವ್ಯಕ್ತಿಗಳು ಸ್ನೇಹದ ಮೂಲಕ ಒಂದಾದರು.
06:34 PM (IST) Jul 13
Gangavathi: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ..
06:16 PM (IST) Jul 13
'ಒಂದು ಸಿನೆಮ ಚಿತ್ರಮಂದಿರದಲ್ಲಿ ನೋಡುವ ಅನುಭವವನ್ನೇ ಅತ್ಯಂತ ದುಬಾರಿ ಮಾಡಿರುವ ಮಲ್ಟಿಫ್ಲೆಕ್ಸ್ ( Multiplex) ಗಳು ಒಂದು ಕಡೆ. ಸುಲಭವಾಗಿ ಮನೆಯಲ್ಲೇ ನೋಡಲು ಸಾಧ್ಯ ಮಾಡಿಕೊಟ್ಟ OTT ಗಳು ಮತ್ತೊಂದು ಕಡೆ. ಈ ಎರಡರ ಒತ್ತಡ ಅರಿಯದೇ ಹಿಂದಿನಂತೆ ಬಹಳ ಜಾಸ್ತಿ ಸಂಭಾವನೆ ಬಯಸುವ ನಟರು-ತಂತ್ರಜ್ಞರು ಇನ್ನೊಂದು ಕಡೆ.
05:54 PM (IST) Jul 13
ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಚಿತ್ರತಂಡ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದೆ. ಶಿವಣ್ಣ ಅಭಿನಯದ ಹೊಸ ಸಿನಿಮಾ ‘A For ಆನಂದ್’ ಚಿತ್ರದ ಪ್ರೋಮೋ ಬಿಡುಗಡೆಯಾಗಿದೆ.
05:28 PM (IST) Jul 13
Shivarajkumar: "ಬದಲಾವಣೆ ಎಂಬುದು ಜೀವನದ ಸಹಜ ನಿಯಮ. ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಅದನ್ನು ಒಪ್ಪಿಕೊಳ್ಳುವುದೇ ನಿಜವಾದ ಬೆಳವಣಿಗೆ" ಎಂದು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೇಳಿದ್ದಾರೆ.
05:24 PM (IST) Jul 13
05:24 PM (IST) Jul 13
04:50 PM (IST) Jul 13
ದೇಶದ ಲಕ್ಷಾಂತರ ಪ್ರತಿಭೆಗಳಿಗೆ ಉತ್ತಮ ತರಬೇತಿ ಮತ್ತು ವೇದಿಕೆ ಕಲ್ಪಿಸಲು ಬೃಹತ್ ಸ್ಟುಡಿಯೋ ಕಟ್ಟುವ ಆಸೆ ಇದೆ. ಅದರ ಆರಂಭದ ಬಿಂದುವಾಗಿ ವಿಪಿ ಕಲ್ಚರಲ್ ಕ್ಲಬ್ ಹಾಗೂ ದ್ವಾರ ಸ್ಟುಡಿಯೋ ಅಸ್ತಿತ್ವಕ್ಕೆ ಬಂದಿದೆ ಇದು ಗಾಯಕ ವಿಜಯ್ ಪ್ರಕಾಶ್ ಮಾತು.
04:33 PM (IST) Jul 13
‘ಓ ಮೈ ಗಾಡ್ ವಾಟ್ ಎ ಪರ್ಫಾರ್ಮರ್, ವಾಟ್ ಎ ಪರ್ಫಾರ್ಮರ್. ನಂಬಕ್ಕೆ ಆಗ್ತಿಲ್ಲ. ಅದ್ಭುತ ಕಲಾವಿದ ನೀವು...’- ಹೀಗೆ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಅವರನ್ನು ಮೆಚ್ಚಿಕೊಂಡಿದ್ದು ಅಕ್ಕಿನೇನಿ ನಾಗಾರ್ಜುನ.
04:14 PM (IST) Jul 13
‘ಮದರ್ ಪ್ರಾಮಿಸ್’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆದರೆ, ಇದರ ನಡುವೆ ಕೆಲವರು ಉದ್ದೇಶಪೂರ್ವಕವಾಗಿ ಚಿತ್ರದ ವಿರುದ್ಧ ನೆಗೆಟಿವ್ ಪ್ರಚಾರ ನಡೆಸುತ್ತಿರುವ ಬಗ್ಗೆ ನಟ ಡಾಲಿ ಧನಂಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
04:11 PM (IST) Jul 13
'ಕೆವಿನ್ ಸ್ಪೇಸಿ ಅದ್ಭುತ ನಿರ್ದೇಶಕ. ಅವರು ನಟರಿಗೆ ಬಹಳಷ್ಟು ಸ್ವಾತಂತ್ರ್ಯ ಕೊಡುತ್ತಾರೆ. ಪ್ರತಿಯೊಂದು ಸೀನ್‌ಗೂ ನಮ್ಮ ಭಾವನೆಗಳನ್ನು ಹೇಗೆ ತೋರಿಸಬೇಕು ಎಂದು ಚರ್ಚೆ ಮಾಡುತ್ತಿದ್ದರು, ರಿಹರ್ಸಲ್ ಹಾಗೂ ಡಿಬೇಟ್ ಮಾಡಿಸುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ್ದು ನನಗೆ ಹೊಸ ಅನುಭವ ನೀಡಿದೆ'
04:00 PM (IST) Jul 13
ಪುರಾತತ್ವ ಶಾಸ್ತ್ರಜ್ಞರು ಚೀನಾದ ಶಂಜಿಯಾಬೋ (Shanjiaobo) ಶ್ಮಶಾನದಲ್ಲಿ ನಡೆಸಿದ ಉತ್ಖನನದಲ್ಲಿ ಬರೋಬ್ಬರಿ 2,300 ವರ್ಷಗಳ ಹಿಂದಿನ ಅಚ್ಚರಿಯ ರಹಸ್ಯ ಬಯಲಾಗಿದೆ. ಒಬ್ಬ ಸಾಧಾರಣ ಸೈನಿಕನ ಸಮಾಧಿಯಲ್ಲಿ ಪುರಾತನ ಕಾಲದ ಮದ್ಯ ಪತ್ತೆಯಾಗಿದ್ದು, ಅದು ಇಂದಿಗೂ ದ್ರವ ರೂಪದಲ್ಲಿಯೇ ಇರುವುದು ವಿಜ್ಞಾನಿಗಳನ್ನು ದಂಗಾಗಿಸಿದೆ.
03:49 PM (IST) Jul 13
ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ತಾರಾ ಶೂಟರ್ ಮನು ಭಾಕರ್ ನಮ್ಮ ಬೆಂಗಳೂರಿನ ವಾತಾವರಣ, ಆತಿಥ್ಯ ಹಾಗೂ ಆಹಾರಕ್ಕೆ ಮನಸೋತಿದ್ದಾರೆ. ಈ ಕುರಿತಂತೆ ಸ್ವತಃ ಮನು ಭಾಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
03:34 PM (IST) Jul 13
ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೀ ಗಾರ್ಡ್ನರ್, ತಮ್ಮದೇ ತಂಡದ ಸಹ ಆಟಗಾರ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಅವರ ಪತ್ನಿ ಮೋನಿಕಾ ರೈಟ್ ಗಂಭೀರ ಆರೋಪ ಮಾಡಿದ್ದಾರೆ.
03:28 PM (IST) Jul 13
ಸೌಜನ್ಯ ಪ್ರಕರಣ ಬಳಸಿ ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನ ನಡೆಸಿದ ಮಹೇಶೆ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ತಮ್ಮ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.
02:22 PM (IST) Jul 13
ಕೇಂದ್ರ ಸರ್ಕಾರವು ಜನರ ಆರ್ಥಿಕ ಸದೃಢತೆಗಾಗಿ ಮತ್ತು ಖರ್ಚು ಕಡಿಮೆ ಮಾಡಲು ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಲೇಖನದಲ್ಲಿ ಪಿಎಂ ಸೂರ್ಯ ಘರ್, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಅಟಲ್ ಪೆನ್ಷನ್ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳನ್ನು ವಿವರಿಸಲಾಗಿದೆ.
02:14 PM (IST) Jul 13
ಪಾರ್ಟಿ ಹಾಗೂ ಸ್ಪಾಗಳಿಗಾಗಿ ಅಜಾಗರೂಕತೆಯಿಂದ ಖರ್ಚು ಮಾಡಿದ 27ರ ಯುವಕನೊಬ್ಬ 3 ಲಕ್ಷ ರೂ. ಸಾಲದ ಸುಳಿಗೆ ಸಿಲುಕಿ ರೆಡ್ಡಿಟ್‌ನಲ್ಲಿ ನೆರವು ಕೋರಿದ್ದಾನೆ. 23,000 ರೂ. ಸಂಬಳವಿರುವ ಆತನಿಗೆ ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೊಸ ಸಾಲದ ಅರ್ಜಿಗಳೂ ತಿರಸ್ಕೃತಗೊಂಡಿವೆ. ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು, ಸಾಲ ಇತ್ಯರ್ಥದ ಶಾರ್ಟ್‌ಕಟ್ ಬಿಟ್ಟು, ಆರ್ಥಿಕ ಶಿಸ್ತಿನಿಂದ ಸಾಲ ತೀರಿಸುವಂತೆ ಬುದ್ಧಿವಾದ ಹೇಳಿದ್ದಾರೆ.
01:02 PM (IST) Jul 13
ಪ್ರೀತಿಸಿ ಧರ್ಮಸ್ಥಳದಲ್ಲಿ ಮದುವೆಯಾಗಿದ್ದ ನವಜೋಡಿಯ ಬಾಳಲ್ಲಿ ದುರಂತ ಸಂಭವಿಸಿದೆ. ಪತಿ ಈಗ ಬರಲು ಸಾಧ್ಯವಿಲ್ಲ, ಬೆಳಿಗ್ಗೆ ಬರುತ್ತೇನೆ ಎಂದಿದ್ದಕ್ಕೆ ಮನನೊಂದ ನವವಿವಾಹಿತೆ ತನುಜಾ, ನೆಲಮಂಗಲದ ಬಸವನಹಳ್ಳಿಯಲ್ಲಿ ವಿಷ ಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪೊಲೀಸರು ಪತಿಯ ವಿಚಾರಣೆ ನಡೆಸುತ್ತಿದ್ದಾರೆ.
12:38 PM (IST) Jul 13
ಉಡುಪಿಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಗಾಗಿ ಹೆಣ್ಣಾನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಮಾಡಿದೆ.
12:20 PM (IST) Jul 13
ಮಲ್ಲೇಶ್ವರಂನ ಮೈಸೂರು ಲ್ಯಾಂಪ್ಸ್ ಆವರಣದಲ್ಲಿ ಸಮಾವೇಶ ಕೇಂದ್ರ ನಿರ್ಮಿಸುವ ಸರ್ಕಾರದ ಪ್ರಸ್ತಾವನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗ್ರೀನ್‌ಪೀಸ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಶೇ. 81ರಷ್ಟು ನಿವಾಸಿಗಳು ಈ ಜಾಗವನ್ನು ಸಾರ್ವಜನಿಕ ಹಸಿರು ವಲಯವಾಗಿ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
11:32 AM (IST) Jul 13
ಯಲಹಂಕ ಮತ್ತು ಅರಸೀಕೆರೆ ನಡುವೆ ಹೊಸ ಮೇಮು (MEMU) ರೈಲು ಸೇವೆ ಜುಲೈ 14 ರಿಂದ ಆರಂಭವಾಗಲಿದೆ. ವಾರದಲ್ಲಿ ಆರು ದಿನ ಸಂಚರಿಸುವ ಈ ರೈಲು, ಯಶವಂತಪುರ, ತುಮಕೂರು, ಮತ್ತು ತಿಪಟೂರಿನಂತಹ ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸಲಿದೆ.
11:28 AM (IST) Jul 13
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಿಂದ ವಿಮಾನ ನಿಲ್ದಾಣ ತಲುಪಲು ಹಿಡಿಯುವ ಸಮಯವು, ಬೆಂಗಳೂರಿನಿಂದ ಕೋಲ್ಕತ್ತಾಗೆ ವಿಮಾನದಲ್ಲಿ ಹಾರುವ ಸಮಯಕ್ಕಿಂತ (2 ಗಂಟೆ 20 ನಿಮಿಷ) ಹೆಚ್ಚಾಗಿದೆ ಎಂದು ಪ್ರಯಾಣಿಕ ಮನೀಶ್ ಕುಮಾರ್ ಸಿಂಗ್ ಅಳಲು ತೋಡಿಕೊಂಡಿದ್ದಾರೆ. ಕಳಪೆ ನಗರ ಯೋಜನೆಯಿಂದಾಗಿ ಜನರ ಉತ್ಪಾದಕ ಸಮಯ ವ್ಯರ್ಥವಾಗುತ್ತಿರುವುದನ್ನು ಪ್ರಶ್ನಿಸಿ ಅವರು ಮಾಡಿದ ವಿಡಿಯೋ ಸದ್ಯ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
10:57 AM (IST) Jul 13
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳಾದ ಅಬ್ದುಲ್ ನಾಸೀರ್ ಮತ್ತು ನೌಶಾದ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ. ಈ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
10:29 AM (IST) Jul 13
10:20 AM (IST) Jul 13
ತಮ್ಮ ಪುತ್ರಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ, ಅಧಿಕಾರ ದುರುಪಯೋಗ, ಪಕ್ಷಪಾತ, ಅಕ್ರಮ ಎಸಗಿದ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ಕೊನೆಗೂ ಅಮಾನತು ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
09:45 AM (IST) Jul 13
ನಾಲ್ಕು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಶಿಕ್ಷಕಿಯೊಬ್ಬರು ಬೆಂಗಳೂರಿನಲ್ಲಿ ದುರಂತ ಅಂತ್ಯಕಂಡಿದ್ದಾರೆ. ಶಿಕ್ಷಕಿಯ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಆಕೆಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ.
09:10 AM (IST) Jul 13
ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ರೀತಿಸಿ ಮದುವೆ ಆಗಿದ್ದ ನವವಿವಾಹಿತ ಶಿಕ್ಷಕಿಯೊಬ್ಬರು ಹಠಾತ್ ನಿಧನರಾಗಿದ್ದಾರೆ. ಸಾವಿಗೂ ಮುನ್ನ ಬರೆದಿರುವ ನೋಟ್ ಇದೀಗ ಸಂಚಲನ ಮೂಡಿಸಿದೆ.
08:57 AM (IST) Jul 13
08:30 AM (IST) Jul 13
07:57 AM (IST) Jul 13
ವಿದೇಶ ಪ್ರವಾಸದಿಂದ ರಾಹುಲ್ ಗಾಂಧಿ ಹಿಂತಿರುಗಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಚಟುವಟಿಕೆಗಳು ಗರಿಗೆದರಿವೆ. ಸಿಎಂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವು ನಾಯಕರು ಹೈಕಮಾಂಡ್ ಅನುಮೋದನೆಗೆ ದೆಹಲಿಗೆ ತೆರಳಲು ಸಜ್ಜು, ಜುಲೈ 15ರೊಳಗೆ ವಿಸ್ತರಣೆ ನಡೆಯುವ ಸಾಧ್ಯತೆ
07:26 AM (IST) Jul 13
ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ಮೈಸೂರಿನ ಕನ್ನಡಿ ತಂತ್ರದಂತೆ, ಅಸ್ಸಾಂನ ಟಿನ್ಸುಕಿಯಾ ಪುರಸಭೆಯು 'ಹಾಲ್ ಆಫ್ ಶೇಮ್' ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿ, ನಿಯಮ ಉಲ್ಲಂಘಿಸುವವರ ದೃಶ್ಯವನ್ನು ಸಿಸಿಟಿವಿಯಲ್ಲಿ ಸೆರೆಹಿಡಿದು, ಬೃಹತ್ ಎಲ್‌ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
07:26 AM (IST) Jul 13
ಗದಗದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುರಾತನ ಸರಸ್ವತಿ ದೇವಿಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. 8ನೇ ಶತಮಾನಕ್ಕೆ ಸೇರಿದ ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದ್ದು, ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
07:25 AM (IST) Jul 13
ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆ ತಪ್ಪು ಮಾಡಿದ ದೊಡ್ಡ ಮೀನುಗಳನ್ನು ಬಿಟ್ಟು, ಸಣ್ಣ ಮೀನುಗಳನ್ನು ಹಿಡಿದರೆ ಪ್ರಯೋಜನವಿಲ್ಲ ಎಂದಿರುವ ಹೈಕೋರ್ಟ್ ದೊಡ್ಡ ಮೀನುಗಳನ್ನು ಕೈಬಿಟ್ಟರೆ, ಸಣ್ಣ ಮೀನುಗಳು ನರಳುವುದಕ್ಕೆ ಹೈಕೋರ್ಟ್ ಅನುಮತಿಸುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದೆ.
07:25 AM (IST) Jul 13
ಯಾದಗಿರಿ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ನೋಂದಣಿಯಾದ 53,595 ಗರ್ಭಗಳಲ್ಲಿ 16,116 ಗರ್ಭಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಈ ನಾಪತ್ತೆಯಾದ ಗರ್ಭಗಳಲ್ಲಿ ಬಹುತೇಕವು ಅಕ್ರಮ ಲಿಂಗ ಪತ್ತೆ ನಂತರ ನಡೆದ ಹೆಣ್ಣು ಭ್ರೂಣ ಹತ್ಯೆಗೆ ಬಲಿಯಾಗಿವೆ ಎಂದು ಸರ್ಕಾರದ ತನಿಖಾ ವರದಿಯು ಬಹಿರಂಗಪಡಿಸಿದೆ.