ರಾಜ್ಯದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ರಾಜಕೀಯ ಪಕ್ಷಗಳ ಹೋರಾಟಕ್ಕೆ ದಾಳವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆ ಅಭಿವೃದ್ಧಿಗೆ ಬಿಡದಿ ಟೌನ್ ಶಿಪ್ ಯೋಜನೆ ಮಾಡುವುದಾಗಿ ಟೊಂಕಕಟ್ಟಿ ನಿಂತಿದ್ದಾರೆ. ಆದರೆ, ಕೃಷಿ ಭೂಮಿಯನ್ನು ನಾಶ ಮಾಡಿ ಟೌನ್‌ಶಿಪ್ ಯೋಜನೆ ಮಾಡುವುದಕ್ಕೆ ಕೆಲವು ರೈತರು ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಜೆಡಿಎಸ್ ಪಕ್ಷವೂ ಕೂಡ ರೈತರಿಗೆ ಬೆಂಬಲವನ್ನು ನೀಡಿದೆ. ಈನಿಟ್ಟಿನಲ್ಲಿ ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು 2ನೇ ದಿನದ ಪಾದಯಾತ್ರೆಗೆ ಸ್ವತಃ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರೇ ಚಾಲನೆ ನೀಡಲಿದ್ದಾರೆ. ಇದಕ್ಕೆ ಬಿಜೆಪಿ ಕೂಡ ಬೆಂಬಲ ನೀಡಿದೆ. ಇಂದು ಬಿಡದಿಯ ಬಿಜಿಎಸ್ ವೃತ್ತದಿಂದ-ಮೈಸೂರು ರಸ್ತೆಯ ನೈಸ್ ರೋಡ್ ಜಂಕ್ಷನ್‌ವರೆಗೆ 16 ಕಿ.ಮೀ ಪಾದಯಾತ್ರೆ ಸಾಗಲಿದೆ.

10:24 PM (IST) Aug 10
09:57 PM (IST) Aug 10
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಘೋರ ಕೃತ್ಯವೊಂದು ನಡೆದಿದೆ. ಪಾಪಿ ತಂದೆಯೊಬ್ಬ ತನ್ನಿಬ್ಬರು ಹೆಣ್ಮಕ್ಕಳನ್ನು ಬರ್ಬರವಾಗಿ ಜೀವ ತೆಗೆದಿದ್ದಾನೆ. ಆತ ಯಾಕೆ ಹಾಗೆ ಮಾಡಿದ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
09:47 PM (IST) Aug 10
ಬೆಂಗಳೂರಲ್ಲಿ ಮಳೆ ಸುರಿಯುತ್ತಿದೆಯಾ? ಈ ಚಂದದ ವಾತಾವರಣದಲ್ಲಿ ಸುಮ್ಮನೆ ಕೂರಬೇಡಿ. ಕೆಫೆಗೆ ಹೋಗುವುದರಿಂದ ಹಿಡಿದು, ಬುಕ್‌ಸ್ಟೋರ್ ಅಲೆಯುವವರೆಗೆ, ಈ ಮಳೆಗಾಲವನ್ನು ಎಂಜಾಯ್ ಮಾಡಲು ಇಲ್ಲಿದೆ ಕೆಲವು ಮಸ್ತ್ ಐಡಿಯಾಗಳು.
09:10 PM (IST) Aug 10
ಬೆಂಗಳೂರು-ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಸದ್ಯದಲ್ಲೇ ಆರಂಭವಾಗುವ ಸಾಧ್ಯತೆಯಿದೆ. ನೈಋತ್ಯ ರೈಲ್ವೆ (SWR) ಈಗಾಗಲೇ 16 ಕೋಚ್‌ಗಳ ಎರಡು ರೈಲು ಸೆಟ್‌ಗಳನ್ನು ಪಡೆದುಕೊಂಡಿದೆ.
08:40 PM (IST) Aug 10
ತೆಲಂಗಾಣದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ನಾಂಪಳ್ಳಿಯಲ್ಲಿ ಪುರಾತನ ಇತಿಹಾಸ ಹಾಗೂ ಧಾರ್ಮಿಕ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಬೃಹತ್ ಸುರಂಗವೊಂದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
08:10 PM (IST) Aug 10
ಶಾಲೆಯಲ್ಲಿ ಸಹಪಾಠಿಗಳು ಚೆಸ್ ಆಡುತ್ತಿದ್ದುದನ್ನು ನೋಡುತ್ತಾ ಕುಳಿತಿದ್ದ 15 ವರ್ಷದ ಬಾಲಕನೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
08:03 PM (IST) Aug 10
ಕಝಕಿಸ್ತಾನ್‌ನಲ್ಲಿ, ಮಹಿಳಾ ನೈರ್ಮಲ್ಯ ಕಾರ್ಯಕರ್ತೆಯೊಬ್ಬರಿಗೆ ಅವರ ಸಹೋದ್ಯೋಗಿಗಳು ಸಿಹಿ ಅಚ್ಚರಿ ನೀಡಿದ್ದಾರೆ. ಕೋಣೆಯನ್ನು ಸ್ವಚ್ಛಗೊಳಿಸಲು ಕರೆದಿದ್ದಾರೆಂದು ಭಾವಿಸಿ ಬಂದ ಆಕೆಗೆ, ಕೃತಜ್ಞತೆಯ ಸಂಕೇತವಾಗಿ ಚಾಕೊಲೇಟ್ ಮತ್ತು ಸಿಹಿತಿಂಡಿಗಳ ದೊಡ್ಡ ಉಡುಗೊರೆಯನ್ನು ನೀಡಿ ಗೌರವಿಸಲಾಗಿದೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
07:41 PM (IST) Aug 10
Brahmagantu Serial: ದೀಪಾ ಹಾಗೂ ದಿಶಾ ಎಂಬ ಎರಡು ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದ ದಿಯಾ, ಇದೀಗ ತಮ್ಮ ಪಾತ್ರಗಳಿಗೆ ಭಾವುಕವಾಗಿ ಗುಡ್‌ಬೈ ಹೇಳಿದ್ದಾರೆ.
07:16 PM (IST) Aug 10
ಪಂದ್ಯದಲ್ಲಿ ಗೆಲ್ಲುವ ಉತ್ಸಾಹ, ಒತ್ತಡ ಮತ್ತು ಪೈಪೋಟಿ ನಡುವೆ ಕೆಲವೊಮ್ಮೆ ಆಟಗಾರರು ಪರಸ್ಪರ ಮಾತಿನ ಚಕಮಕಿ ನಡೆಸುತ್ತಾರೆ. ಕೆಲವು ಘಟನೆಗಳು ನೇರ ಪ್ರಸಾರದ ಕ್ಯಾಮೆರಾಗಳಲ್ಲಿ ಸೆರೆಯಾದರೆ, ಇನ್ನೂ ಕೆಲವು ಘಟನೆಗಳು ಆಟಗಾರರ ನೆನಪುಗಳಲ್ಲೇ ಉಳಿಯುತ್ತವೆ. ಅಂತಹ ಒಂದು ಹಳೆಯ ಘಟನೆಯನ್ನು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
06:47 PM (IST) Aug 10
ನಟಿ ಟಬು ಎಂದಾಕ್ಷಣ ವಿಭಿನ್ನ ಪಾತ್ರಗಳು, ಗಂಭೀರ ಅಭಿನಯ ಮತ್ತು ಪರದೆಯ ಮೇಲಿನ ಅವರ ವಿಶಿಷ್ಟ ಛಾಪು ನೆನಪಾಗುತ್ತದೆ. ಇದೀಗ ಮತ್ತೊಮ್ಮೆ ಅಂಥದ್ದೇ ಒಂದು ಪವರ್‌ಫುಲ್ ಪಾತ್ರದ ಮೂಲಕ ಬರಲು ಸಜ್ಜಾಗಿದ್ದಾರೆ.
06:34 PM (IST) Aug 10
ಕರ್ನಾಟಕ ಡಿಜಿಟಲ್ ಹೆರಿಟೇಜ್ ಯೋಜನೆಯಡಿ ನಡೆಸಿದ 3D ಲೇಸರ್ ಸ್ಕ್ಯಾನಿಂಗ್ ಸರ್ವೇಯಲ್ಲಿ, ರಾಜ್ಯದ 848 ಸಂರಕ್ಷಿತ ಸ್ಮಾರಕಗಳ ಪೈಕಿ 314 ಕಣ್ಮರೆಯಾಗಿರುವುದು ಬಹಿರಂಗವಾಗಿದೆ.
06:23 PM (IST) Aug 10
Kitchen Tips: ಹೊಸದಾಗಿ ಬಿದ್ದ ಎಣ್ಣೆ ಕಲೆಗಳಿಗೆ ದುಬಾರಿ ಕ್ಲೀನಿಂಗ್ ಉತ್ಪನ್ನಗಳ ಅಗತ್ಯವಿಲ್ಲ. ಬೆಚ್ಚಗಿನ ನೀರಿಗೆ ಕೆಲವು ಹನಿ ಡಿಶ್‌ವಾಶ್ ಲಿಕ್ವಿಡ್ ಹಾಕಿ ಮೈಕ್ರೋಫೈಬರ್ ಬಟ್ಟೆಯಿಂದ ಟೈಲ್ಸ್ ಒರೆಸಿ.
04:58 PM (IST) Aug 10
ತಮ್ಮ ಹಳೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ಜೊತೆಗಿನ ಅಪರೂಪದ ಫೋಟೋವನ್ನು ಹಂಚಿಕೊಂಡಿರುವ ಜಗ್ಗೇಶ್, ಆ ಬೈಕ್‌ನೊಂದಿಗೆ ಬೆಸೆದುಕೊಂಡಿರುವ ತಮ್ಮ ಬದುಕಿನ ನೆನಪುಗಳನ್ನು ಭಾವನಾತ್ಮಕವಾಗಿ ಬಿಚ್ಚಿಟ್ಟಿದ್ದಾರೆ.
04:51 PM (IST) Aug 10
04:47 PM (IST) Aug 10
ನಗರದ ಕೈಗಾರಿಕಾ ಪ್ರದೇಶದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಅಣ್ಣನನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಮನೆಯಿಂದ ಹೊರಬಂದ 3 ವರ್ಷದ ಪುಟಾಣಿ ಬಾಲಕಿಯೊಬ್ಬಳು ಶಾಲಾ ಬಸ್‌ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
04:45 PM (IST) Aug 10
ಪ್ರಧಾನಿ ಮೋದಿಯವರಿಂದ ಶಂಕುಸ್ಥಾಪನೆಗೊಂಡು ವರ್ಷವಾದರೂ, ಬೆಂಗಳೂರು ಮೆಟ್ರೋ 3ನೇ ಹಂತದ ‘ಆರೆಂಜ್ ಲೈನ್’ ಯೋಜನೆ ಕಾಮಗಾರಿ ಆರಂಭವಾಗಿಲ್ಲ. ಪೂರ್ಣ ಪ್ರಮಾಣದ ‘ಡಬಲ್-ಡೆಕ್ಕರ್’ ನಿರ್ಮಾಣದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
04:39 PM (IST) Aug 10
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇನ್ನೂ ತೆರೆಕಾಣಬೇಕಿದೆ. ಆದರೆ, ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ರುಕ್ಮಿಣಿ ವಸಂತ್ ಮಾತ್ರ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
04:24 PM (IST) Aug 10
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ 10 ಸಾಲುಗಳ, ಚಿಕ್ಕ ಹಾಗೂ ದೀರ್ಘ ಪ್ರಬಂಧಗಳನ್ನು ಇಲ್ಲಿ ನೀಡಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರ ತ್ಯಾಗ, ಸ್ವಾತಂತ್ರ್ಯದ ಮಹತ್ವ ಮತ್ತು ದೇಶದ ಬಗ್ಗೆ ನಮ್ಮ ಜವಾಬ್ದಾರಿಯನ್ನು ಸರಳ ಕನ್ನಡದಲ್ಲಿ ವಿವರಿಸಲಾಗಿದೆ.
04:17 PM (IST) Aug 10
ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಗುರುತಿಸಲಾದ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ದೇಶಾದ್ಯಂತ ಕೇವಲ ಶೇ. 19ರಷ್ಟು ಮಾತ್ರ ಪೂರ್ಣಗೊಂಡಿದೆ. ಕರ್ನಾಟಕದಲ್ಲಿ 61 ನಿಲ್ದಾಣಗಳ ಪೈಕಿ 12 ಪೂರ್ಣಗೊಂಡಿದ್ದು, ಬೆಂಗಳೂರಿನ ಪ್ರಮುಖ ನಿಲ್ದಾಣಗಳಲ್ಲಿ ಕಾಮಗಾರಿ ಬಾಕಿ ಇದೆ.
04:15 PM (IST) Aug 10
ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರೈತರು ಮತ್ತು ಕಾರ್ಮಿಕರಲ್ಲಿ 'ಅಜ್ಞಾತ ಮೂಲದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ' (CKDu) ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ.
04:13 PM (IST) Aug 10
City Lights Kannada Movie: ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಅವರಿಗೆ ಜಾನಪ ಹಾಡು, ಕತೆಗಳೆಂದರೆ ಬಲು ಪ್ರೀತಿ. ಇದಕ್ಕೆ ‘ಭೀಮ’, ‘ಸಲಗ’, ‘ಲ್ಯಾಂಡ್ ಲಾರ್ಡ್’ ಚಿತ್ರಗಳಲ್ಲಿ ಬಂದ ಹಾಡುಗಳೇ ಸಾಕ್ಷಿ.
03:43 PM (IST) Aug 10
02:34 PM (IST) Aug 10
02:15 PM (IST) Aug 10
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸರಳ ಹಾಗೂ ಅರ್ಥಪೂರ್ಣ ಕನ್ನಡ ಭಾಷಣ ಇಲ್ಲಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರ ತ್ಯಾಗ, ಸ್ವಾತಂತ್ರ್ಯದ ಮಹತ್ವ ಮತ್ತು ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಒಳಗೊಂಡಿರುವ ಈ ಭಾಷಣವನ್ನು ಶಾಲಾ ಕಾರ್ಯಕ್ರಮಗಳಲ್ಲಿ ಬಳಸಬಹುದು.
01:58 PM (IST) Aug 10
01:33 PM (IST) Aug 10
ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್ ಈಗ ಪರಭಾಷೆಗಳಲ್ಲೂ ತನ್ನ ಬಾವುಟ ಹಾರಿಸುತ್ತಿದ್ದಾರೆ. ಕೇರಳದ ಮಣ್ಣಿನಲ್ಲಿ ಈ ಕನ್ನಡದ ಕೋಗಿಲೆ ಯಾವ ರೀತಿ ಮೋಡಿ ಮಾಡಲಿದೆ ಎಂದು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
01:18 PM (IST) Aug 10
ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದಜ್ಜಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಅವರ ಪತಿ ಮಲ್ಲಜ್ಜ ಕೂಡ ಪತ್ನಿಯ ಅಗಲಿಕೆಯ ದುಃಖದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾವಿನಲ್ಲೂ ಒಂದಾದ ಈ ವೃದ್ಧ ದಂಪತಿಯ ಹೃದಯವಿದ್ರಾವಕ ಘಟನೆ ಇಡೀ ಗ್ರಾಮದಲ್ಲಿ ಶೋಕವನ್ನುಂಟುಮಾಡಿದೆ.
01:09 PM (IST) Aug 10
ಟಾಕ್ಸಿಕ್ ಹಾಗೂ ರಾಮಾಯಣದಂತಹ ಬೃಹತ್ ಸಿನಿಮಾಗಳ ಮೂಲಕ ವಿಶ್ವವೇ ಕರ್ನಾಟಕದ ಕಡೆಗೆ ತಿರುಗಿ ನೋಡುವಂತೆ ಮಾಡುತ್ತಿರುವ ಯಶ್, ನಟ ಶಿವಣ್ಣರ ಜೊತೆ ನಡೆದುಕೊಂಡ ರೀತಿ ಈಗ ಚರ್ಚೆ ಅಗುತ್ತಿದೆ. ಏನದು? ಈ ಸ್ಟೋರಿ ನೋಡಿ..
12:36 PM (IST) Aug 10
ಹಾಸನ ಜಿಲ್ಲೆ ಸಕಲೇಶಪುರದ ರೈತರೊಬ್ಬರು ತಾವು ಪಡೆದಿದ್ದ ಸಾಲ ಮರುಪಾವತಿಸಿದರೂ, ಬಾಕಿ ಉಳಿದಿದ್ದ 9.34 ರೂ. ಪಾವತಿಸುವಂತೆ ಬ್ಯಾಂಕ್ ಸಿಬ್ಬಂದಿ ಪೀಡಿಸಿದರು. ಇದಕ್ಕೆ ಪ್ರತಿಯಾಗಿ, ರೈತ 10 ರೂ. ನೀಡಿ 66 ಪೈಸೆ ಚಿಲ್ಲರೆ ಕೇಳುವ ಮೂಲಕ ಬ್ಯಾಂಕ್ ಸಿಬ್ಬಂದಿಗೆ ತಕ್ಕ ಪಾಠ ಕಲಿಸಿದ್ದು, ಈ ಘಟನೆ ವೈರಲ್ ಆಗಿದೆ.
12:16 PM (IST) Aug 10
ಯುನೆಸ್ಕೋ ವಿಶ್ವಪರಂಪರೆಯ ತಾಣವಾದ ಹಂಪಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ವಿಜಯನಗರ ಕಾಲದ ಅಪರೂಪದ ಶಿಲ್ಪಗಳು ಪತ್ತೆಯಾಗಿವೆ. ಮಾನವ ಮತ್ತು ಹಾವಿನ ಲಕ್ಷಣಗಳಿರುವ ನಾಗಿಣಿ ಶಿಲ್ಪ ಹಾಗೂ ಗರುಡ ಶಿಲ್ಪ ಇದರಲ್ಲಿ ಸೇರಿದೆ.
12:14 PM (IST) Aug 10
ಬಿಡದಿ ಟೌನ್‌ಶಿಪ್ ಯೋಜನೆಯು ದೆಹಲಿ ನಾಯಕರಿಗೆ ಮಾಸಿಕ ಹಣ ಪಾವತಿಸುವ ಡಿಕೆ ಶಿವಕುಮಾರ್ ಅವರ ಒಪ್ಪಂದದ ಭಾಗವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಯೋಜನೆಯು ಕಾಂಗ್ರೆಸ್ ಸರ್ಕಾರಕ್ಕೆ ಮರಣಶಾಸನವಾಗಲಿದೆ, ರೈತರು ಮೋಸ ಹೋಗಬಾರದು ಎಂದು ಎಚ್ಚರಿಸಿದರು.
12:08 PM (IST) Aug 10
12:02 PM (IST) Aug 10
ರಾಜಸ್ಥಾನದ ಬಲೋತ್ರಾ ಜಿಲ್ಲೆಯ ರೈತ ಮಂಗಿಲಾಲ್ ಮೇಘವಾಲ್ ಜಮೀನು ಮಾರಾಟದಿಂದ ಬಂದ ₹5 ಲಕ್ಷವನ್ನು ಮನೆಯಲ್ಲಿ ಇಡುವ ಬದಲು ಹೊಲದಲ್ಲಿ ಪಾಲಿಥಿನ್ ಚೀಲದಲ್ಲಿ ಹೂತಿಟ್ಟಿದ್ದರು. ಬಳಿಕ ಹಣ ಹೂತ ಜಾಗವನ್ನೇ ಮರೆತರು. ಸುಮಾರು ಒಂದು ವರ್ಷದ ಬಳಿಕ ಹಣ ಪತ್ತೆಯಾದಾಗ ಗೆದ್ದಲುಗಳು ನೋಟುಗಳ ಬಹುತೇಕ ಭಾಗವನ್ನು ನಾಶಪಡಿಸಿದ್ದವು.
11:51 AM (IST) Aug 10
11:34 AM (IST) Aug 10
11:10 AM (IST) Aug 10
10:01 AM (IST) Aug 10
ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಕುರಿತು ಸಂಸದ ಶಶಿ ತರೂರ್ ನೀಡಿದ ಹೇಳಿಕೆಯು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿಗೆ ಸಂತೋಷ ತರುವಂತಹ ಯಾವುದೇ ಹೇಳಿಕೆ ನೀಡಬಾರದು ಎಂದು ಪಕ್ಷದ ನಾಯಕರಿಗೆ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
09:14 AM (IST) Aug 10
ಕರ್ನಾಟಕದಲ್ಲಿ ಸರಣಿ ದರೋಡೆ ನಡೆಸುತ್ತಿದ್ದ ಕುಖ್ಯಾತ 'ಚಡ್ಡಿ ಗ್ಯಾಂಗ್' ಇದೀಗ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಪ್ರತ್ಯಕ್ಷವಾಗಿದೆ. ಲೇಔಟ್ ಒಂದರಲ್ಲಿ ದರೋಡೆಗೆ ಯತ್ನಿಸಿದಾಗ, ಮಹಿಳೆಯೊಬ್ಬರ ಜಾಗರೂಕತೆಯಿಂದ ಪ್ರಯತ್ನ ವಿಫಲವಾಗಿದೆ. ಈ ಹಿಂಸಾತ್ಮಕ ಗ್ಯಾಂಗ್‌ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿ, ಜನರಿಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ.
09:14 AM (IST) Aug 10
ಜಾರ್ಖಂಡ್‌ನ ರಾಂಚಿಯಲ್ಲಿ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹರಪನಹಳ್ಳಿಯಲ್ಲಿ ಎಐಎಸ್ಎ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಕೃತ್ಯದ ಹಿಂದೆ ಆರೆಸ್ಸೆಸ್ ಸಂಘ ಪರಿವಾರದ ಕೈವಾಡವಿದೆ. ದಾಳಿಕೋರರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.
09:11 AM (IST) Aug 10