ಕರ್ನಾಟಕ ರಾಜ್ಯ ಸಚಿವ ಸಂಪುಟದ ಕುರಿತಾಗಿ ಆಕ್ರೋಶ ಭುಗಿಲೆದ್ದ ಬೆನ್ನಲ್ಲಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಕೆಲವೊಂದು ಬದಲಾವಣೆಗೆ ಕೇಂದ್ರ, ರಾಜ್ಯ ನಾಯಕರ ಒಲವು ತೋರಿಸಲಾಗಿದೆ. ಎಐಸಿಸಿ ಅಧ್ಯಕ್ಷ ಖರ್ಗೆ, ವೇಣುಗೋಪಾಲ್, ರಾಜ್ಯ ಉಸ್ತುವಾರಿ ಸುರ್ಜೇವಾಲ ಜೊತೆ ಸಿಎಂ ಚರ್ಚೆ ಮಾಡಿದ್ದು, ಬಂಡಾಯ, ಬದಲಾವಣೆ, ಖಾತೆ ಹಂಚಿಕೆ, ಬಾಕಿ ಸ್ಥಾನ ತುಂಬುವ ಬಗ್ಗೆ ಮಾಹಿತಿ ಪಡೆದು ಅಂತಿಮ ನಿರ್ಧಾರವನ್ನು ದಿಲ್ಲಿ ನಾಯಕರು ಬಾಕಿ ಉಳಿಸಿಕೊಂಡಿದ್ದಾರೆ.
ಬಿಡದಿ ಟೌನ್ ಶಿಪ್ ವಿರೋಧಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ರಾಜ್ಯ ಸರ್ಕಾರ ಬೆಂಗಳೂರು ಪ್ರವೇಶ ಮಾಡದಂತೆ ತಡೆದಿದೆ. ಈಹಿನ್ನೆಲೆಯಲ್ಲಿ 2ನೇ ದಿನಕ್ಕೆ ಪಾದಯಾತ್ರೆ ಮೊಟಕುಗೊಳಿಸಿ ಆ.18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
11:23 PM (IST) Aug 11
ತೆಲಂಗಾಣದ ಸಂಗಾರೆಡ್ಡಿಯಲ್ಲಿ ಟ್ಯಾಂಕರ್ ಡಿಕ್ಕಿಯಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬೀದರ್‌ನ 6 ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಒಂದೇ ಆಟೋದಲ್ಲಿ 14 ಜನ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಈ ದುರಂತಕ್ಕೆ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.
11:04 PM (IST) Aug 11
ಅಂಚೆ ಕಚೇರಿಯ ಮರುಕಳಿಸುವ ಠೇವಣಿ (RD) ಯೋಜನೆಯು ಸಣ್ಣ ಮಾಸಿಕ ಹೂಡಿಕೆಯ ಮೂಲಕ ದೊಡ್ಡ ಮೊತ್ತವನ್ನು ಗಳಿಸಲು ಉತ್ತಮ ಅವಕಾಶ ನೀಡುತ್ತದೆ. ದಿನಕ್ಕೆ ₹100 ಉಳಿಸುವ ಮೂಲಕ 5 ವರ್ಷಗಳಲ್ಲಿ ₹2 ಲಕ್ಷಕ್ಕೂ ಹೆಚ್ಚು ಗಳಿಸಬಹುದು, ಮತ್ತು ದಿನಕ್ಕೆ ₹500 ಉಳಿಸಿದರೆ ₹10 ಲಕ್ಷಕ್ಕೂ ಅಧಿಕ ನಿಧಿ ಸಂಗ್ರಹಿಸಬಹುದು.
10:58 PM (IST) Aug 11
ಬಾಗಲಕೋಟೆಯ ಗಲಗಲಿ-ರಬಕವಿ ರಸ್ತೆಯಲ್ಲಿ ನಿರ್ಲಕ್ಷ್ಯದ ಕಾಮಗಾರಿಯಿಂದಾಗಿ ಒಂದೇ ವಾರದಲ್ಲಿ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿವೆ. ಅಧಿಕಾರಿಗಳ ವಿರುದ್ಧ ದೂರು ನೀಡಲು ಹೋದರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ
10:37 PM (IST) Aug 11
ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾವನ್ನು ಮೊದಲು ಕಾಲಿವುಡ್ ನಟ ಸೂರ್ಯ ಅವರು ರಿಜೆಕ್ಟ್ ಮಾಡಿದ್ದರು ಎಂಬ ಸುದ್ದಿ ವೈರಲ್ ಆಗಿದೆ. ಸೂರ್ಯ ಅವರು ಚಿತ್ರವನ್ನು ನಿರಾಕರಿಸಲು ಬಲವಾದ ಕಾರಣ ಕೂಡ ಇದೆ.
10:32 PM (IST) Aug 11
10:03 PM (IST) Aug 11
ಸಿನಿಮಾ ಶೂಟಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಜೂನಿಯರ್ ಎನ್‌ಟಿಆರ್, ವೈದ್ಯರ ಸಲಹೆಯಂತೆ ಹೈದರಾಬಾದ್‌ನಲ್ಲಿ ಮೇಜರ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಟ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
09:55 PM (IST) Aug 11
09:40 PM (IST) Aug 11
08:20 PM (IST) Aug 11
07:54 PM (IST) Aug 11
ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ (BGC Hospitals) ನ ಕನ್ನಡ ಯೂಟ್ಯೂಬ್ ಚಾನೆಲ್ 1 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ತಲುಪಿದೆ. ಈ ಚಾನೆಲ್ ಹೊಟ್ಟೆ, ಯಕೃತ್ತು, ಮತ್ತು ಇತರ ಜೀರ್ಣಾಂಗ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ.
07:01 PM (IST) Aug 11
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಳಿ ಸೋದರರ ಹವಾ ಮತ್ತೊಮ್ಮೆ ಶುರುವಾಗಿದೆ. ಆಸ್ಟ್ರೇಲಿಯಾದ ಸ್ಟೀವ್ ವಾ - ಮಾರ್ಕ್ ವಾ, ನ್ಯೂಜಿಲೆಂಡ್‌ನ ಹ್ಯಾಮಿಶ್ ಮಾರ್ಷಲ್ - ಜೇಮ್ಸ್ ಮಾರ್ಷಲ್ ನಂತರ ಈಗ ದಕ್ಷಿಣ ಆಫ್ರಿಕಾದ ಜಾನ್ಸೆನ್ ಸೋದರರು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ.
06:45 PM (IST) Aug 11
ಬೆಂಗಳೂರಿನ ಐಷಾರಾಮಿ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ, ಫಂಗಸ್‌ಯುಕ್ತ ಆಹಾರ ಪತ್ತೆಯಾದ ಪ್ರಕರಣಕ್ಕೆ ನಟ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ರೋಗಗ್ರಸ್ತ ಊಟದಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳು ಬರುತ್ತವೆ ಎಂದು ಎಚ್ಚರಿಸಿದ್ದಾರೆ.
06:22 PM (IST) Aug 11
ನೀಟ್ ಪರೀಕ್ಷೆಯ ಅಕ್ರಮದಿಂದಾಗಿ ಜೂನ್‌ನಲ್ಲಿ ಸಾವು ಕಂಡ ಕೇರಳದ ಯುವತಿಯ ಅಣ್ಣ, ತಂಗಿಯ ಅಗಲಿಕೆಯ ನೋವಿನಿಂದ ಮಂಗಳೂರಿನ ಹೋಟೆಲ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. 24 ವರ್ಷದ ಅರ್ಜುನ್, ತೀವ್ರ ಖಿನ್ನತೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.
05:53 PM (IST) Aug 11
ಬೆಂಗಳೂರಿನಲ್ಲಿ ರ್ಯಾಪಿಡೋ ಬುಕ್ ಮಾಡಲು ವಿಫಲರಾದ ವ್ಯಕ್ತಿಯೊಬ್ಬರು, ಅನಿವಾರ್ಯವಾಗಿ ಬಿಎಂಟಿಸಿ ಬಸ್ ಹತ್ತುತ್ತಾರೆ. ಕೇವಲ 12 ರೂಪಾಯಿಯ ಈ ಪ್ರಯಾಣವು ಅವರನ್ನು ತಮ್ಮ ಶಾಲಾ-ಕಾಲೇಜು ದಿನಗಳ ನೆನಪಿನ ಲೋಕಕ್ಕೆ ಕರೆದೊಯ್ದ ಟ್ರಾವೆಲ್!
05:32 PM (IST) Aug 11
ಹೆಂಡತಿಯ ಶೀಲದ ಮೇಲೆ ಸದಾ ಅನುಮಾನ ಪಡುತ್ತಿದ್ದ ವ್ಯಕ್ತಿಯೊಬ್ಬ, ಜಿಲೆಟಿನ್ ಕಡ್ಡಿಗಳನ್ನು ಇಡೀ ಮೈಗೆ ಕಟ್ಟಿಕೊಂಡು ಮನೆಗೆ ನುಗ್ಗಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಈ ಭೀಕರ ದುರಂತದಲ್ಲಿ ಆತ ಹಾಗೂ ಆತನ 16 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹೆಂಡತಿ, ಮಗ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜ್ಯವೇ ಬೆಚ್ಚಿ ಬೀಳಿಸುವ ಈ ಭಯಾನಕ ಘಟನೆಯ ಕುರಿತು ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
05:14 PM (IST) Aug 11
ಬೆಂಗಳೂರಲ್ಲಿ ಒಂದು ಅಪರೂಪದ ಪ್ರಕರಣ ದಾಖಲಾಗಿದೆ. ಟ್ರಾಫಿಕ್ ಜಾಮ್ ಮಾಡಿದ ಹಸುಗಳ ಮಾಲೀಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..
05:03 PM (IST) Aug 11
ಡಿಎಂಕೆ ಮತ್ತು ಬಿಜೆಪಿ ಮೈತ್ರಿ ಕುರಿತಾದ ಚರ್ಚೆ ತೀವ್ರಗೊಂಡಿವೆ. ರಾಜಕೀಯದಲ್ಲಿ ಶಾಶ್ವತ ಶತ್ರು-ಮಿತ್ರರಿಲ್ಲ ಎಂಬ ಡಿಎಂಕೆ ನಾಯಕಿ ಕನಿಮೊಳಿ ಸೋಮು ಮತ್ತು ಬಿಜೆಪಿ ನಾಯಕಿ ವನತಿ ಶ್ರೀನಿವಾಸನ್ ಅವರ ಒಂದೇ ರೀತಿಯ ಹೇಳಿಕೆಗಳು ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
04:09 PM (IST) Aug 11
40ನೇ ವಯಸ್ಸಿನಲ್ಲಿ 18 ವರ್ಷಗಳ ಕಾರ್ಪೊರೇಟ್ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬರು, ಇದನ್ನು ಜೀವನದ 'ರೀಸೆಟ್ ಬಟನ್' ಎಂದು ಪರಿಗಣಿಸಿದ್ದಾರೆ. ಈ ಅನಿರೀಕ್ಷಿತ ಲೇಆಫ್ ಅವರಿಗೆ ನಿಜವಾದ ಸ್ನೇಹ, ಹಣದ ಮೌಲ್ಯ ಮತ್ತು ಕಾರ್ಪೊರೇಟ್ ಭ್ರಮೆಯ ಬಗ್ಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದೆ ಎಂದಿದ್ದಾರೆ. ಅಲ್ಲದೇ ಅವರ ಅನುಭವದ ಮಾತಿನ ವಿಡಿಯೋ ಈಗ ವೈರಲ್ ಆಗುತ್ತಿದೆ.
03:13 PM (IST) Aug 11
03:03 PM (IST) Aug 11
ನನಗೆ ದೊಡ್ಡ ಸಂಬಳ ಸಿಕ್ಕಿಲ್ಲ, ಆದರೆ ಇಷ್ಟು ತಿಂಗಳುಗಳ ನಂತರ ನನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಸಿಲು ಇದರಿಂದ ನನಗೆ ಸಾಧ್ಯವಾಗಿದೆ ಎಂದು ಯುವಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.
02:56 PM (IST) Aug 11
02:39 PM (IST) Aug 11
02:28 PM (IST) Aug 11
'ಬಿಗ್ ಬಾಸ್' ಮನೆಯಲ್ಲಿ ತನ್ನ ಚಾರ್ಮ್ ಮೂಲಕ ಗಮನ ಸೆಳೆದಿದ್ದ ಮತ್ತು 'ಕರ್ಣ' ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಮ್ರತಾ ಗೌಡ, ಈಗ ಹೊಸ ಅಚ್ಚರಿಯ ಸುದ್ದಿ ನೀಡಿದ್ದಾರೆ. ಏನಿದು ಅಮೃತಾ ಗೌಡ ಸುದ್ದಿ? ಯಾರದು ಕಿರಣ್ ..?
02:27 PM (IST) Aug 11
02:10 PM (IST) Aug 11
ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗುವ ಭೀತಿಯಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಆದೇಶಿಸಿದೆ. ತಮಿಳುನಾಡಿಗೆ ಮುಂದಿನ 15 ದಿನ ದಿನಕ್ಕೆ 12,000 ಕ್ಯೂಸೆಕ್‌ನಂತೆ ಭರ್ಜರಿ 16 ಟಿಎಂಸಿ ನೀರು ಬಿಡುವಂತೆ CWRC ಶಿಫಾರಸು ಮಾಡಿದೆ. ಇದನ್ನು ವಿರೋಧಿಸಲು ಕರ್ನಾಟಕ ಸಜ್ಜಾಗಿದೆ.
01:55 PM (IST) Aug 11
ಭಾರತದಾದ್ಯಂತ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸರ್ವರ್ ಸಮಸ್ಯೆಯಿಂದಾಗಿ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸಲು ಅಥವಾ ಮರುಹೊಂದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮಂಗಳೂರು ಸೇರಿದಂತೆ ಹಲವು ಕೇಂದ್ರಗಳಲ್ಲಿ ದೂರದೂರುಗಳಿಂದ ಬಂದಿದ್ದ ಸಾವಿರಾರು ಅರ್ಜಿದಾರರು ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.
01:12 PM (IST) Aug 11
ಹೈದರಾಬಾದ್‌ನ ಚಾರ್ಮಿನಾರ್ ಬಳಿ ರಾತ್ರಿ ವೇಳೆ ಆಟೋಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರನ್ನು ರ‍್ಯಾಪಿಡೋ ಚಾಲಕನೆಂದು ನಂಬಿಸಲು ಯತ್ನಿಸಿದ ವ್ಯಕ್ತಿಯನ್ನು ಆಕೆ ಜಾಗರೂಕತೆಯಿಂದ ಪ್ರಶ್ನಿಸಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ವಾಹನ ಮತ್ತು ಐಡಿ ಇಲ್ಲದ ಆತನನ್ನು ತರಾಟೆಗೆ ತೆಗೆದುಕೊಂಡ ಈ ಘಟನೆ ಮಹಿಳೆಯರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದೆ.
01:01 PM (IST) Aug 11
ಸ್ನೇಹ, ಫ್ಯಾಮಿಲಿ ಎಮೋಷನ್ಸ್ ಮತ್ತು ರಕ್ತಸಿಕ್ತ ಆಕ್ಷನ್‌ನ ಸಂಗಮವಾಗಿರುವ ಈ 'ದೊಡ್ಡವರಿಗಾಗಿರುವ ಕಾಲ್ಪನಿಕ ಕಥೆ'ಯನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ತುದಿಗಾಲಿನಲ್ಲಿ ನಿಂತಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಯಶ್ ಈಗ ಹಳೆಯ ದಾಖಲೆಗಳನ್ನು ಬದಿಗಿಟ್ಟು ಹೊಸ ಇತಿಹಾಸ ಬರೆಯತೊಡಗಿದ್ದಾರೆ. ಏನಿದು ಅಮೆರಿಕಾ ಸುದ್ದಿ?
01:00 PM (IST) Aug 11
ಬೆಂಗಳೂರಿನ 'ನಮ್ಮ ಮೆಟ್ರೋ' ಆಗಸ್ಟ್ 10 ರಂದು ಸಾರ್ವಕಾಲಿಕ ದಾಖಲೆ ಬರೆದಿದೆ. ಅಂದು ಒಂದೇ ದಿನದಲ್ಲಿ 11.19 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಇದು ಈ ತಿಂಗಳ ಅತ್ಯಧಿಕ ದೈನಂದಿನ ಬೋರ್ಡಿಂಗ್ ಸಂಖ್ಯೆಯಾಗಿದೆ. ನಗರದ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರ್ಯಾಯವಾಗಿ ಮೆಟ್ರೋ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಬೆಂಬಲಕ್ಕೆ ಬಿಎಂಆರ್‌ಸಿಎಲ್ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದೆ.
12:40 PM (IST) Aug 11
ಹಗಲು ವೇಷ ಧರಿಸಿಯೇ ಜೀವನ ನಡೆಸುವ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಿಂದ ಆಗಮಿಸಿದ ವ್ಯಕ್ತಿಯೊಬ್ಬ, ತಮ್ಮ ನಿತ್ಯ ಕಾಯಕದ ಶ್ರೀರಾಮನ ಹಗಲು ವೇಷದಲ್ಲಿಯೇ ಸಚಿವರ ಸಭೆಗೆ ಬಂದು ಗಮನ ಸೆಳೆದರು.
12:25 PM (IST) Aug 11
12:12 PM (IST) Aug 11
ಬೆಂಗಳೂರಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರು ರದ್ದಾಗಿರುವುದಾಗಿ ನಟ ಪ್ರಕಾಶ್ ರಾಜ್ ವಿಡಿಯೋ ಮೂಲಕ ತಿಳಿಸಿದ್ದಾರೆ. ತಾವು ಸ್ಪರ್ಧಿಸಿದ್ದ ಕ್ಷೇತ್ರದಲ್ಲೇ ಮತದ ಹಕ್ಕನ್ನು ಕಳೆದುಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್‌ಐಆರ್ ನೆಪದಲ್ಲಿ ಲಕ್ಷಾಂತರ ಮತಗಳನ್ನು ಅಳಿಸಿಹಾಕಿರುವುದು ಪ್ರಜಾಪ್ರಭುತ್ವದ ಹಕ್ಕನ್ನು ಕಸಿದಂತೆ ಎಂದು ಅವರು ಚುನಾವಣಾ ಆಯೋಗದ ಕ್ರಮವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
12:00 PM (IST) Aug 11
ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ಯಲ್ಲಿ ಇದೀಗ ಸಂಭ್ರಮದ ವಾತಾವರಣ. ಕ್ಯಾನ್ಸರ್‌ನಿಂದ ಭೂಮಿಕಾ ಸಾವನ್ನಪ್ಪುತ್ತಾಳೆ ಎಂದುಕೊಂಡಿದ್ದ ವೀಕ್ಷಕರ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ.
11:54 AM (IST) Aug 11
ಸ್ನೇಹ ಅಂದ್ರೆ ಬರೀ ಹರಟೆಯಲ್ಲ, ಅದು ಎರಡು ಜೀವಗಳ ಬೆಸುಗೆ. ಬಾಲ್ಯದಲ್ಲಿ ಒಂದೇ ತಟ್ಟೆಯಲ್ಲಿ ಉಂಡು, ಜೊತೆಯಲ್ಲೇ ಆಡಿ ಬೆಳೆದ ಪಾರ್ವತಿ ಮತ್ತು ಗಾಯತ್ರಿ ವಿಧಿಯ ಆಟದಿಂದ ದೂರವಾಗುತ್ತಾರೆ. ಈಗ ಪಾರ್ವತಿಯ ಬಳಿ ಎಲ್ಲವೂ ಇದೆ—ಸಿರಿತನವಿದೆ, ಪ್ರೀತಿಯ ಪತಿ ಇದ್ದಾನೆ, ಮುದ್ದಾದ ಮಗಳಿದ್ದಾಳೆ. ಆದರೆ, ಗಾಯತ್ರಿ ಎಲ್ಲಿ..?
11:52 AM (IST) Aug 11
11:51 AM (IST) Aug 11
ಕರ್ನಾಟಕದಲ್ಲಿ ವರ್ಷಕ್ಕೆ ಎರಡು ಬಾರಿ ಭರ್ತಿಯಾಗುವ ಏಕೈಕ ಜಲಾಶಯ ಎಂಬ ಕೀರ್ತಿಯನ್ನು ಕಬಿನಿ ಜಲಾಶಯ ಪಡೆದುಕೊಂಡಿದೆ. ಈ ವರ್ಷ ತೀವ್ರ ಬರದ ನಡುವೆಯೂ ಕಬಿನಿ ಜಲಾಶಯ ಭರ್ತಿಯಾಗಿದ್ದು, ರಾಜ್ಯದ ರೈತ ಸಂಘದ ಪದಾಧಿಕಾರಿಗಳು ಬಾಗಿನ ಅರ್ಪಿಸುವ ಕಾರ್ಯವನ್ನು ಮಾಡಿದ್ದಾರೆ.
11:27 AM (IST) Aug 11
11:19 AM (IST) Aug 11
11:14 AM (IST) Aug 11
ದಶಕಗಳ ಕನಸಾದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಪರಿಷ್ಕೃತ ರೂಪದಲ್ಲಿ ಮರುಚಾಲನೆ ನೀಡಲಾಗಿದ್ದು, 163 ಕಿ.ಮೀ. ಉದ್ದದ ವಿದ್ಯುದೀಕೃತ ಜೋಡಿ ಮಾರ್ಗಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಪಶ್ಚಿಮ ಘಟ್ಟದ ಪರಿಸರ ಹಾನಿ ತಗ್ಗಿಸಲು 57 ಸುರಂಗ ಪ್ರಸ್ತಾಪಿಸಲಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಳು ಬೇಕಾಗಿವೆ.
10:48 AM (IST) Aug 11
ಕಲಬುರಗಿಯ ನಂದಿಕೂರ ಗ್ರಾಮದಲ್ಲಿ ಎಸ್ಸಿಪಿ ಘಟಕ ನಿರ್ಮಾಣಕ್ಕೆ ರೈತನ ಎರಡು ಎಕರೆ ಹನ್ನೊಂದು ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಭೂಮಿಗೆ ಪರಿಹಾರವಾಗಿ ನೀಡಬೇಕಿರುವ 8 ಕೋಟಿ ರೂಪಾಯಿ ನೀಡಲು ಅಧಿಕಾರಿಗಳು ವಿಳಂಬ ಮಾಡಿದ್ದರು.