ಬೆಂಗಳೂರು (ನ.9): ರಾಜ್ಯದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿರುವ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಅಧಿಕಾರಿಗಳ ದುರಾಸೆ ಮತ್ತೆ ಜನರ ಎದುರಿಗೆ ಬೆತ್ತಲಾಗಿದೆ.ಹಣಕ್ಕಾಗಿ ಐಸಿಸ್ ಉಗ್ರ, ವಿಕೃತ ಕಾಮಿಗೆ ಜೈಲಲ್ಲೇ ಮೊಬೈಲ್, ಟಿವಿ ಭಾಗ್ಯ ನೀಡಿದ್ದಾರೆ. ರಾಜಾತಿಥ್ಯದ ವಿಡಿಯೋ ಬಿಡುಗಡೆಯಾಗಿದ್ದು ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಇದು ಜೈಲಾ, ಹಾಸ್ಟೆಲ್ಲಾ ಎಂದು ಜನರು ಟೀಕೆ ಮಾಡಿದ್ದಾರೆ. ಇದೇ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಜೈಲಿನ ಅಧಿಕಾರಿಗಳಿಗೆ ತಪರಾಕಿ ಹಾಕಿದ್ದರೂ ಕಾರಾಗೃಹದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿವೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
09:40 PM (IST) Nov 09
ರಾಜ್ಯದಲ್ಲಿ ತೀವ್ರಗೊಂಡ ರೈತ ಹೋರಾಟ, ನಾಳೆ ಅಫಜಲಪುರ ಬಂದ್‌ಗೆ ಕರೆ ನೀಡಲಾಗಿದೆ. ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದ ಭಾಗವಾಗಿ ಬಂದ್‌ಕೆ ಕರೆ ನೀಡಲಾಗಿದೆ.
09:40 PM (IST) Nov 09
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ತಲೈವರ್ 173 ಚಿತ್ರಕ್ಕೆ ಕಮಲ್ ಹಾಸನ್ ಭರ್ಜರಿ ಬಜೆಟ್ ನೀಡಿದ್ದಾರಂತೆ. ಅಷ್ಟೇ ಅಲ್ಲ, ನಿರ್ದೇಶಕ ಸುಂದರ್ ಸಿ ಅವರ ಸಂಭಾವನೆ ವಿವರ ಕೂಡ ಹೊರಬಿದ್ದಿದೆ.
09:14 PM (IST) Nov 09
ಆಸ್ತಿ ಹಂಚಿಕೆಗೆ ಒಪ್ಪದ ತಂದೆಯನ್ನ ,ಮಗನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ನಡೆದಿದೆ. ನಾರಾಯಣ ಪರಶು ಮರಾಠಿ ಕೊಲೆಯಾದ ವ್ಯಕ್ತಿ.
08:39 PM (IST) Nov 09
ರಣಬೀರ್ ಕಪೂರ್-ಆಲಿಯಾ ಭಟ್ ಅಭಿನಯದ 'ಲವ್ ಅಂಡ್ ವಾರ್' ಸಿನಿಮಾ ಬಹಳ ದಿನಗಳಿಂದ ಚರ್ಚೆಯಲ್ಲಿದೆ. ಚಿತ್ರದ ಶೂಟಿಂಗ್ ಇನ್ನೂ ನಡೆಯುತ್ತಿದೆ. ಇತ್ತೀಚೆಗೆ, ಚಿತ್ರದ ಸೆಟ್‌ನಿಂದ ಆಲಿಯಾ ಅವರ ಲುಕ್ ಕೂಡ ರಿವೀಲ್ ಆಗಿತ್ತು.
08:17 PM (IST) Nov 09
ರೈತರನ್ನು ನಂಬಿಸಿ ಸರ್ಕಾರ ಮೋಸ ಮಾಡಿದೆ. ಕಬ್ಬು ಬೆಳೆಗಾರರಿಗೆ ಕಿವಿಯಲ್ಲಿ ಹೂವು ಇಟ್ಟು ರಾಜ್ಯ ಸರ್ಕಾರ ದೊಡ್ಡ ದೋಖಾ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.
08:01 PM (IST) Nov 09
ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವರಲ್ಲಿ ಆಲ್ಕೋಹಾಲ್ ತೀವ್ರ ಪರಿಣಾಮ ಬೀರುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಬಿಯರ್‌ನಿಂದ ದೂರವಿರಬೇಕು ಎಂದು ತಜ್ಞರು ಹೇಳುತ್ತಾರೆ.
07:45 PM (IST) Nov 09
ಮುಧೋಳ ರೈತರ ಜೊತೆಗಿನ ಸಚಿವರ ಸಂಧಾನ ಸಭೆ ವಿಫಲ, ಆಕ್ರೋಶಕ್ಕೆ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ. ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆಗೆ ಸಚಿವ ತಿಮ್ಮಾಪುರ ನಡೆಸಿದ ಸಭೆ ವಿಫಲಗೊಂಡಿದೆ.
07:07 PM (IST) Nov 09
07:01 PM (IST) Nov 09
ಆ ಭಾಷೆಯಲ್ಲಿ ರಾಜಮೌಳಿ ಸಿನಿಮಾಗಳೆಲ್ಲಾ ಫ್ಲಾಪ್ ಆಗ್ತಿದ್ದವು. ಇದರಿಂದ ಜಕ್ಕಣ್ಣನಿಗೆ ಒಬ್ಬ ಸ್ಟಾರ್ ಹೀರೋ ಧೈರ್ಯ ತುಂಬಿದ್ರು. ಆ ಭಾಷೆಯಲ್ಲಿ ರಾಜಮೌಳಿಗೆ ಸಿಕ್ಕ ಮೊದಲ ಗೆಲುವು ಯಾವುದು ಅನ್ನೋದನ್ನ ಈ ಲೇಖನದಲ್ಲಿ ತಿಳಿಯಿರಿ.
06:49 PM (IST) Nov 09
ಹಿಂದೂ ಎಂದು ಕರೆಯಲು ಇಷ್ಟವಿಲ್ಲದಿದ್ದರೆ ಭಾರತ, ಇಂಡಿಯಾ ಎಂದು ಯಾವ ಹೆಸರಿನಿಂದಾದರೂ ಕರೆಯಿರಿ. ಆದರೆ, ಆಲೋಚನೆ ಮಾತ್ರ ಒಂದು ರಾಷ್ಟವಾಗಿರಲಿ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಹೇಳಿದರು.
06:47 PM (IST) Nov 09
ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಮಗು? ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ ಪೋಷಕರು, ತಕ್ಷಣದ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುಳಿಯುತ್ತಿತ್ತು. ಆದರೆ ನಡೆದಿದ್ದೇ ಬೇರೆ. ಪೋಷಕರು ಅಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಮಗು ಬದುಕುಳಿಯಲಿಲ್ಲ.
06:41 PM (IST) Nov 09
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ), ಹೊಸ ಚೈತನ್ಯ ನೀಡುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಹೊಸ ಹುದ್ದೆದಾರರ ಪದಗ್ರಹಣ ಮತ್ತು ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವು ಇಂದು ಭವ್ಯವಾಗಿ ನೆರವೇರಿತು.
06:27 PM (IST) Nov 09
ಸುಮಾ ಕನಕಾಲ ಇತ್ತೀಚೆಗೆ ತಮ್ಮ ವೃತ್ತಿಜೀವನದ ಮೊದಲ ಬ್ರೇಕ್ ಬಗ್ಗೆ ಮಾತನಾಡಿದ್ದಾರೆ. ಪ್ರೀ-ರಿಲೀಸ್ ಈವೆಂಟ್‌ಗಳಲ್ಲಿ ಎದುರಾದ ಕಹಿ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಕೆಲವು ಬಾರಿ ಪ್ರೀ-ರಿಲೀಸ್ ಈವೆಂಟ್‌ಗಳಲ್ಲಿ ಕಿಟಕಿಯಿಂದ ಜಿಗಿದು ಓಡಿಹೋಗಬೇಕಾಯಿತು ಎಂದು ಹೇಳಿದ್ದಾರೆ.
05:46 PM (IST) Nov 09
ಭಾರೀ ನಿರೀಕ್ಷೆಯೊಂದಿಗೆ ವಿಶ್ವಾದ್ಯಂತ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿದ್ದ ಕಾಂತಾರ ಚಾಪ್ಟರ್ 1 ಸಿನಿಮಾ. 1000 ಕೋಟಿ ಕಲೆಕ್ಷನ್ ಮಾಡಲು ವಿಫಲವಾದ ರಿಷಬ್ ಶೆಟ್ಟಿ ಸಿನಿಮಾ ಒಟ್ಟಾರೆಯಾಗಿ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ?
05:32 PM (IST) Nov 09
ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಕಾಳಜಿಯಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಕಬ್ಬು ಬೆಳೆಗಾರರು ಹೋರಾಟದ ಹಾದಿ ತುಳಿಯುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಸರ್ಕಾರದ ವಿರುದ್ಧ ಹರಿಹಾಯ್ದರು.
05:27 PM (IST) Nov 09
ಆರ್‌ಎಸ್‌ಎಸ್ ನಿಷೇಧ ಮಾಡುವುದು ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆಯವರಿಂದ ಸಾಧ್ಯವಿಲ್ಲ. ಇದನ್ನು ನಿಷೇಧ ಮಾಡುವ ಹೇಳಿಕೆ ನೀಡುವುದು ಮೂರ್ಖತನ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
05:00 PM (IST) Nov 09
ಹೆರಿಗೆಯ ನಂತರ ದೈಹಿಕ ಸಂಪರ್ಕ ಮತ್ತು ಮುಟ್ಟಿನ ಬಗ್ಗೆ ಮಹಿಳೆಯರಿಗಿರುವ ಗೊಂದಲಗಳಿಗೆ ಸ್ತ್ರೀರೋಗ ತಜ್ಞರು ಉತ್ತರಿಸಿದ್ದಾರೆ. ಎದೆಹಾಲುಣಿಸುವಾಗ ಮುಟ್ಟು ವಿಳಂಬವಾದರೂ, ಅಂಡೋತ್ಪತ್ತಿ ಸಂಭವಿಸಿ ಗರ್ಭಧರಿಸುವ ಸಾಧ್ಯತೆ ಇರುವುದರಿಂದ, ಸುರಕ್ಷತಾ ವಿಧಾನಗಳನ್ನು ಬಳಸುವುದು ಅತ್ಯಗತ್ಯ ಎಂದು ಎಚ್ಚರಿಸಿದ್ದಾರೆ.
04:54 PM (IST) Nov 09
ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಮೋದಿ. ಕೇವಲ ಒಂದು ದಿನ ಮಲಗಿದರೆ ರೈತರ ಮಕ್ಕಳಾಗಲು ಸಾಧ್ಯವೇ? ರೈತರ ಮಕ್ಕಳಾಗಿದ್ದರೆ ದುಬೈನಲ್ಲಿ ಯಾಕೆ ಆಸ್ತಿ ಮಾಡಿದ್ದಾರೆ ಎಂದು ಶಾಸಕ ವಿಜಯಪುರ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
04:54 PM (IST) Nov 09
ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ಕುರಿತು ಕೇರಳ ಸರ್ಕಾರ ತನಿಖೆಗೆ ಆದೇಶಿಸಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
04:46 PM (IST) Nov 09
ಏಯ್ ಕೂಡ್ರಿ, ಭಾಷಣದ ವೇಳೆ ಹೊರಟ ಜನರನ್ನು ಗದರಿಸಿ ಕೂರಿಸಿದ ಸಿಎಂ ಸಿದ್ದರಾಮಯ್ಯ, ಕೂಡ್ಲಿಗೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಭಾಷಣದ ನಡುವೇ ಹೌದೋ, ಅಲ್ವೋ ಎಂಬ ಪ್ರಶ್ನೆಗೆ ಎಲ್ಲರೂ ಮೌನವಾಗಿ ಕುಳಿತಿದ್ದು ಸಿದ್ದರಾಮಯ್ಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.
04:12 PM (IST) Nov 09
ಕೃಷಿಕ ಸಮಾಜವು ರಾಷ್ಟ್ರ ಮಟ್ಟದಲ್ಲಿ ಎಲ್ಲ ರಾಜ್ಯದಲ್ಲಿಯೂ ಒಳಗೊಂಡಿದೆ. ರಾಜ್ಯದಲ್ಲಿ ಸರ್ಕಾರದೊಂದಿಗೆ ಸದಾ ಸಂಪರ್ಕದಲ್ಲಿದ್ದುಕೊಂಡು ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
04:09 PM (IST) Nov 09
ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆ ಹಿಂದು ರಾಷ್ಟ್ರ ಆಗಲಿದೆ, ಮೋಹನ್ ಭಾಗವತ್, ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್ ಹಿಂದೂ ರಾಷ್ಟ್ರ ಪರಿಕಲ್ಪನೆ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
03:52 PM (IST) Nov 09
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಭಯಾನಕ ಘಟನೆ ನಡೆದಿದೆ. ಅಜ್ಜಿಯ ಪಕ್ಕ ಮಲಗಿದ್ದ 4 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾ*ಚಾರವೆಸಗಲಾಗಿದೆ. ಸೊಳ್ಳೆ ಪರದೆ ಕತ್ತರಿಸಿ ಕೃತ್ಯ ಎಸಗಿದ್ದು, ಮಗು ಚರಂಡಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.
03:51 PM (IST) Nov 09
20 ವಾರಗಳ ನಂತರ 'ಮಹಾನಟಿ ಸೀಸನ್-2' ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದು, ಐವರು ಫೈನಲಿಸ್ಟ್‌ಗಳಾದ ಮಾನ್ಯ, ವರ್ಷಾ, ವಂಶಿ, ಶ್ರೀಯ, ಮತ್ತು ಭೂಮಿಕಾ ನಡುವೆ ತೀವ್ರ ಪೈಪೋಟಿ ಇದೆ. 15 ಲಕ್ಷ ಮೌಲ್ಯದ ಕಿರೀಟವನ್ನು ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ.
03:46 PM (IST) Nov 09
ಕೂಡ್ಲಿಗೆ ಕಾರ್ಯಕ್ರಮದಲ್ಲಿ ಅಕ್ಕ ಪಕ್ಕ ಕುಳಿತರೂ ಮಾತಿಲ್ಲ, ಮುನಿಸಿಕೊಂಡ್ರಾ ಸಿಎಂ-ಡಿಸಿಎಂ? ಡಿಕೆ ಶಿವಕುಮಾರ್ ತಡವಾಗಿ ವೇದಿಕೆಗೆ ಆಗಮಿಸಿ ಅಕ್ಕ ಪಕ್ಕದಲ್ಲಿ ಕುಳಿತರೂ ಮಾತಿಲ್ಲ ಕತೆಯಿಲ್ಲ. ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದಲ್ಲಿ ಮುನಿಸಿಕೊಂಡ್ರಾ?
03:40 PM (IST) Nov 09
Bhargavi LLB Serial Hero- Actor Manoj Kumar: ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಅರ್ಜುನ್ ಪಾತ್ರಧಾರಿ ಮನೋಜ್ ಕುಮಾರ್ ಅವರು ಏಕಾಏಕಿ ವಿಡಿಯೋ ಮಾಡಿ, “ನಾನು ಮದುವೆ ಆಗಲ್ಲ, ಏನ್ ಮಾಡ್ತೀರಾ?” ಎಂದು ಕಿಡಿಕಾರಿದ್ದಾರೆ. ಅವರು ಈ ರೀತಿ ಮಾಡೋದಿಕ್ಕೂ ಕಾರಣ ಇದೆಯಂತೆ.
03:08 PM (IST) Nov 09
Ugramm Manju And Sandhya Engagement Photos: ವಯಸ್ಸಾಗ್ತಿದೆ, ಮಗನ ಹವ್ಯಾಸ ಬದಲಾಗಬೇಕು, ಮದುವೆ ಆಗಬೇಕು ಎಂದು ಉಗ್ರಂ ಮಂಜು ಅವರ ತಂದೆ-ತಾಯಿ ಬಿಗ್ ಬಾಸ್ ವೇದಿಕೆಯಲ್ಲಿ ಕಣ್ಣೀರು ಹಾಕಿ ಹೇಳಿದ್ದರು. ಬಿಗ್ ಬಾಸ್ ಶೋ ಮುಗಿದು ವರ್ಷವಾಯ್ತು, ಈಗ ಉಗ್ರಂ ಮಂಜು ಬದುಕಿಗೆ ಸಂಗಾತಿಯ ಆಗಮನವಾಗಿದೆ.
02:50 PM (IST) Nov 09
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚ್ಚ ಸುದೀಪ್ ಅವರ ಪಂಚಾಯಿತಿ ನಡೆಯುತ್ತಿತ್ತು. ಚಂದ್ರಪ್ರಭ ಅವರಿಗೆ ಬೇಸರವಾಗಿ ಯಾರಿಗೂ ಹೇಳದೆ, ಏಕಾಏಕಿ ಮನೆಯಿಂದ ಹೊರಬಂದಿದ್ದಾರೆ. ಸದ್ಯ ವಾಹಿನಿಯು ಪ್ರೋಮೋ ರಿಲೀಸ್ ಆಗಿದೆ. ಹಾಗಾದರೆ ಏನಾಯ್ತು?
02:10 PM (IST) Nov 09
boys drown in bangalore lake: ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳಾದ ಅನಿಕೇತ್ ಕುಮಾರ್ (12) ಮತ್ತು ರೆಹಮಾತ್ ಬಾಬಾ (11) ಮೃತ ಮಕ್ಕಳು.
01:40 PM (IST) Nov 09
ಕಬ್ಬಿನ ದರ ನಿಗದಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರವೇ ಮೂಲ ಸಮಸ್ಯೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ರಾಜ್ಯ ಸರ್ಕಾರವು ಎಫ್‌ಆರ್‌ಪಿಗಿಂತ 700 ರೂ. ಹೆಚ್ಚು ನೀಡುತ್ತಿದ್ದು, ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ರೈತರನ್ನು ಎತ್ತಿಕಟ್ಟುತ್ತಿದೆ ಎಂದು ಆರೋಪಿಸಿದ್ದಾರೆ.
01:38 PM (IST) Nov 09
ಬಂಗಾರದ ದರ ಹೆಚ್ಚಾಗುತ್ತಲೇ ಇದೆ. ಆಗೊಮ್ಮೆ ಈಗೊಮ್ಮೆ ಬಂಗಾರದ ದರ ಸ್ವಲ್ಪ ಕಡಿಮೆಯಾದರೂ ಕೂಡ, ಸಾಮಾನ್ಯ ಜನರಿಗೆ ಬಂಗಾರ ಖರೀದಿಸೋದು ಸುಲಭವಿಲ್ಲ. ಈಗ ಬಂಗಾರವನ್ನು ಖರೀದಿ ಮಾಡುವಾಗ ಒಂದಿಷ್ಟು ವಿಷಯದಲ್ಲಿ ಹುಷಾರು ಆಗಿರಬೇಕು.
01:08 PM (IST) Nov 09
12:56 PM (IST) Nov 09
ಯೋಗ ವಿದ್ಯಾರ್ಥಿನಿ ಮೇಲೆ ಅತ್ಯಾ೧ಚಾರ ಎಸಗಿದ ಆರೋಪದ ಮೇಲೆ ಯೋಗಗುರು ನಿರಂಜನ್ ಮೂರ್ತಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ತನಿಖೆಯ ವೇಳೆ, ಇತರೆ ಹಲವು ಮಹಿಳೆಯರ ಮೇಲೂ ಬಲತ್ಕಾರ. ಆದರೆ ದೂರು ನೀಡಲು ಮುಂದೆ ಬಾರದ ಕಾರಣ, ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ತನಿಖೆ ಪೂರ್ಣ
12:55 PM (IST) Nov 09
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ತಪ್ಪು ಮಾಡಿದ ಕಾಕ್ರೋಚ್ ಸುಧಿ ಅವರಿಗೆ ಕಿಚ್ಚ ಸುದೀಪ್ ಒಂದು ಅಪರೂಪದ ಶಿಕ್ಷೆ ಕೊಟ್ಟಿದ್ದಾರೆ. ಅವರ ಬಳಿಯಿರುವ ಇಮ್ಯುನಿಟಿ ಪವರ್‌ಗೆ ಈಗ ಕುತ್ತು ಬರುವ ಟೈಮ್ ಬಂದಿದೆ. ಹಾಗಾದರೆ ಮುಂದೆ ಏನಾಗುವುದು? ಏನು ಸಮಸ್ಯೆ ಆಗುತ್ತದೆ ಎಂದು ಕಾದು ನೋಡಬೇಕಿದೆ.
12:47 PM (IST) Nov 09
12:12 PM (IST) Nov 09
ಕಲರ್ಸ್ ಕನ್ನಡದ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯಲ್ಲಿ, ಲಾಯರ್ ಭಾರ್ಗವಿ ತನ್ನ ಮಾವ ಜೆಪಿ ಪಾಟೀಲ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಾಳೆ. ಸಂಧ್ಯಾ ಸಾವಿನ ರಹಸ್ಯ ಭೇದಿಸುವಾಗ ಸಿಕ್ಕ ಪ್ರಮುಖ ಸುಳಿವಿನ ಆಧಾರದ ಮೇಲೆ, ಮದುವೆ ಮನೆಗೆ ಪೊಲೀಸರೊಂದಿಗೆ ಎಂಟ್ರಿ ಕೊಟ್ಟು ಮಾವನಿಗೆ ಶಾಕ್ ನೀಡಿದ್ದಾಳೆ.
12:09 PM (IST) Nov 09
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ಕಟೀಲು ದೇವಸ್ಥಾನದ ನುಡಿಹಬ್ಬದಲ್ಲಿ ಪಾಲ್ಗೊಂಡು, ಯಕ್ಷಗಾನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ದೇವಳ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು. ಇದೇ ವೇಳೆ ಬಾಲ್ಯದಲ್ಲ ನೆನಪುಗಳನ್ನು ಹಂಚಿಕೊಂಡರು.
11:54 AM (IST) Nov 09
11:44 AM (IST) Nov 09
ಬಿಗ್ಬಾಸ್ ಮನೆಯಲ್ಲಿ ಕೆಲವೇ ದಿನಗಳಿದ್ದರೂ, ಮಲ್ಲಮ್ಮ ತಮ್ಮ ಮೌನ ಮತ್ತು ಪ್ರೀತಿಯ ವ್ಯಕ್ತಿತ್ವದಿಂದ ಅಪಾರ ಜನಪ್ರീതി ಗಳಿಸಿದರು. ಮನೆಯಿಂದ ಹೊರಬಂದಾಗ, ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಇತಿಹಾಸದಲ್ಲಿ ಮಲ್ಲಮ್ಮ ಸೃಷ್ಟಿಸಿದ ಮೂರು ವಿಶಿಷ್ಟ ದಾಖಲೆಗಳನ್ನು ಬಹಿರಂಗಪಡಿಸಿದರು.
11:38 AM (IST) Nov 09