- Home
- Entertainment
- TV Talk
- ನಾನ್ ಮದುವೆ ಆಗಲ್ಲ, ಏನ್ ಮಾಡ್ತೀರಾ? ; ಏಕಾಏಕಿ Bhargavi LLB Serial ಹೀರೋ ಸಿಟ್ಟಾಗಿದ್ದೇಕೆ?
ನಾನ್ ಮದುವೆ ಆಗಲ್ಲ, ಏನ್ ಮಾಡ್ತೀರಾ? ; ಏಕಾಏಕಿ Bhargavi LLB Serial ಹೀರೋ ಸಿಟ್ಟಾಗಿದ್ದೇಕೆ?
Bhargavi LLB Serial Hero- Actor Manoj Kumar: ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಅರ್ಜುನ್ ಪಾತ್ರಧಾರಿ ಮನೋಜ್ ಕುಮಾರ್ ಅವರು ಏಕಾಏಕಿ ವಿಡಿಯೋ ಮಾಡಿ, “ನಾನು ಮದುವೆ ಆಗಲ್ಲ, ಏನ್ ಮಾಡ್ತೀರಾ?” ಎಂದು ಕಿಡಿಕಾರಿದ್ದಾರೆ. ಅವರು ಈ ರೀತಿ ಮಾಡೋದಿಕ್ಕೂ ಕಾರಣ ಇದೆಯಂತೆ.

ಮದುವೆ ಯಾವಾಗ?
ಸಮಾಜದಲ್ಲಿ ಬಹುತೇಕರು ಮದುವೆ ಯಾವಾಗ? ಆಮೇಲೆ ಮಕ್ಕಳು ಯಾವಾಗ ಎಂದೆಲ್ಲ ಪ್ರಶ್ನೆ ಮಾಡುತ್ತಾರೆ. ಮದುವೆಯಾಗಿ ಒಂದು ಮಗು ಆದ್ಮೇಲೂ ಕೂಡ ಎರಡನೇ ಮಗು ಯಾವಾಗ ಎಂದು ಕೇಳೊದುಂಟು.
ಅದೇ ಪ್ರಶ್ನೆ, ಅದೇ ರಾಗ
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮನೋಜ್ ಕುಮಾರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ Question and Answer ಸೆಗ್ಮೆಂಟ್ ಮಾಡಿದ್ದರು. ಅಲ್ಲಿ ಬಹುತೇಕರು ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕಾಗಿ ಅವರು ತಮಾಷೆಯಾಗಿ ವಿಡಿಯೋ ಮಾಡಿದ್ದಾರೆ.
ಕೆರಳಿದ ಮನೋಜ್ ಕುಮಾರ್
ಯಾಕೆ, ನಿಮಗೆ ಯಾಕೆ ಹೇಳಬೇಕು? ನಾನು ಮದುವೆ ಆಗಲ್ಲ ಏನು ಮಾಡ್ತೀರಾ? ಎಂದು ಕೇಳಬೇಕು ಎನಿಸುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ 100 ಪ್ರಶ್ನೆಗಳಲ್ಲಿ ಬಹುತೇಕ ಇದೇ ಪ್ರಶ್ನೆ ಇದೆ. ಕೇಳಿದ್ದನ್ನೇ ಕೇಳಿ ಯಾಕೆ ಚಿತ್ರಹಿಂಸೆ ಕೊಡ್ತೀರಿ? ನನ್ನನ್ನು ನನ್ನ ಪಾಡಿಗೆ ಬಿಡಿ, ನಾನು ಡಿಪ್ರೆಶನ್‌ನಲ್ಲಿದ್ದೀನಿ” ಎಂದು ಉತ್ತರ ನೀಡಿದ್ದಾರೆ.
ಕನ್ನಡ, ತೆಲುಗಿನಲ್ಲಿ ನಟನೆ
ಮೂಲತಃ ಮಂಗಳೂರಿನವರಾದ ಮನೋಜ್ ಕುಮಾರ್ ಅವರು ತೆಲುಗು ಕಿರುತೆರೆಯಲ್ಲಿ ಮೊದಲು ಕಾಣಿಸಿಕೊಂಡರು. ಅಲ್ಲಿ ಅವರು ಮೂರು ಧಾರಾವಾಹಿಗಳಲ್ಲಿ ನಟಿಸಿದ್ದರು. ಇವರ ಮೊದಲ ತೆಲುಗು ಸೀರಿಯಲ್‌ನಲ್ಲಿ ಅರ್ಜುನ್ ಎಂದೇ ಪಾತ್ರದ ಹೆಸರಿತ್ತು. ಕನ್ನಡದಲ್ಲಿ ಭಾರ್ಗವಿ ಎಲ್‌ಎಲ್‌ಬಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಇಲ್ಲಿಯೂ ಪಾತ್ರದ ಹೆಸರು ಅರ್ಜುನ್ ಅಂತಲೇ ಇದೆ.
ಮಲ್ಲಮ್ಮ ಫೇಮಸ್ ಆಗಿದ್ದೇ ಇವರಿಂದ
ಈ ಹಿಂದೆ ಬ್ಯೂಟಿಕ್‌ವೊಂದರಲ್ಲಿ ಮಲ್ಲಮ್ಮ ಅವರನ್ನು ಮನೋಜ್ ಭೇಟಿ ಮಾಡಿದ್ದರು. ಇವರ ಮಾತುಗಳು ಇಷ್ಟವಾಗಿದ್ದು, ಆಗ ಮನೋಜ್ ಅವರು ಮಲ್ಲಮ್ಮರ ನಾರ್ಮಲ್ ಮಾತಿನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಅದಾದ ನಂತರದಲ್ಲಿ ಹೀಗೆ ವಿಡಿಯೋ ಅಪ್‌ಲೋಡ್ ಮಾಡುತ್ತಿದ್ದು, ಫೇಮಸ್ ಸಿಗ್ತು. ಇದರಿಂದಲೇ ಮನೋಜ್ ಅವರು ಬಿಗ್ ಬಾಸ್ ಮನೆ ಪ್ರವೇಶ ಪಡೆದರು.