boys drown in bangalore lake: ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳಾದ ಅನಿಕೇತ್ ಕುಮಾರ್ (12) ಮತ್ತು ರೆಹಮಾತ್ ಬಾಬಾ (11) ಮೃತ ಮಕ್ಕಳು.
ಬೆಂಗಳೂರು (ನ. 9): ಆಟವಾಡುತ್ತ ಕೆರೆ ಬಳಿ ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ನಡೆದಿದೆ.
ಅನಿಕೇತ್ ಕುಮಾರ್(12), ರೆಹಮಾತ್ ಬಾಬಾ(11) ಮೃತ ಬಾಲಕರು. ಬಾಲಕ ಅನಿಕೇತ್ ಕುಮಾರ್ ಬಿಹಾರ ಮೂಲದವರು, ರೆಹಮಾತ್ ಬಾಬಾ ಆಂಧ್ರ ಮೂಲದ ಕದಿರಿ ಮೂಲದವರು ಎಂದು ಗುರುತಿಸಲಾಗಿದೆ.
ಕೂಲಿಕಾರರ ಮಕ್ಕಳು:
ಕೂಲಿ ಕೆಲಸ ಮಾಡಿಕೊಂಡಿದ್ದ ಪೋಷಕರು. ನಿನ್ನೆ ಸಂಜೆ ಮನೆಯ ಬಳಿಯೇ ಆಟವಾಡುತ್ತಿದ್ದ ಮಕ್ಕಳು. ಆಟವಾಡುತ್ತಾ ಕೆರೆಯ ಬಳಿ ಹೋಗಿದ್ದಾರೆ. ಈ ವೇಳೆ ಕೆರೆಗೆ ಇಳಿದಿರುವ ಮಕ್ಕಳ ಈಜು ಬಾರದ ಮುಳುಗಿ ಮೃತರಾಗಿದ್ದಾರೆ.
ಸಂಜೆಯಾದರೂ ಮಕ್ಕಳ ಮನೆಗೆ ವಾಪಸ್ ಆಗದ ಮಕ್ಕಳು:
ಆಟವಾಡು ಹೋಗಿದ್ದ ಮಕ್ಕಳು ನಿನ್ನೆ ಸಂಜೆಯಾದರೂ ಮನೆಗೆ ಹಿಂತಿರುಗದಿದ್ದು ಕಂಡು ಪೋಷಕರು ಆತಂಕಗೊಂಡಿದ್ದಾರೆ. ಮನೆ ಸುತ್ತಮುತ್ತ ಸೇರಿ ಗ್ರಾಮದಲ್ಲೆಲ್ಲ ಹುಡುಕಾಟ ನಡೆಸಿದ್ದಾರೆ. ಆದರೆ ಮಕ್ಕಳ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಬೆಳಗ್ಗೆ ಕೆರೆಯಲ್ಲಿ ತೇಲುತ್ತಿದ್ದ ಮಕ್ಕಳ ಮೃತದೇಹಗಳು ಕಂಡುಬಂದಿವೆ. ಮೃತದೇಹ ಕಂಡ ಗ್ರಾಮಸ್ಥರು ತಕ್ಷಣ ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಪೊಲೀಸ್ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಪೋಸ್ಟ್‌ಮಾರ್ಟಮ್ ಪರೀಕ್ಷೆಗೆ ರವಾನೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
