ಯೋಗ ವಿದ್ಯಾರ್ಥಿನಿ ಮೇಲೆ ಅತ್ಯಾ೧ಚಾರ ಎಸಗಿದ ಆರೋಪದ ಮೇಲೆ ಯೋಗಗುರು ನಿರಂಜನ್ ಮೂರ್ತಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ತನಿಖೆಯ ವೇಳೆ, ಇತರೆ ಹಲವು ಮಹಿಳೆಯರ ಮೇಲೂ ಬಲತ್ಕಾರ. ಆದರೆ ದೂರು ನೀಡಲು ಮುಂದೆ ಬಾರದ ಕಾರಣ, ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ತನಿಖೆ ಪೂರ್ಣ
ಬೆಂಗಳೂರು (ನ.9): ಯೋಗ ಕಲಿಯಲು ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾ೧ಚಾರ ಮಾಡಿದ್ದ ಪ್ರಕರಣ ಸಂಬಂಧ ಯೋಗಗುರು ನಿರಂಜನ್ ಮೂರ್ತಿ ವಿರುದ್ಧ ಅತ್ಯಾ೧ಚಾರ ಮತ್ತು POCSO ಕಾಯ್ದೆಯಡಿ ದಾಖಲಾಗಿದ್ದ ಕೇಸ್ ತನಿಖೆ ನಡೆಸಿ ಇದೀಗ POCSO ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.
ವಿದ್ಯಾರ್ಥಿನಿ ಅಷ್ಟೇ ಅಲ್ಲ, ಹಲವು ಮಹಿಳೆಯರ ಮೇಲೂ..!
ವಿದ್ಯಾರ್ಥಿನಿ ಮೇಲೆಅತ್ಯಾ೧ಚಾರ ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣದ ಕುರಿತು ತನಿಖೆಯ ವೇಳೆ ವಿದ್ಯಾರ್ಥಿನಿಯ ಮೇಲೆ ಅತ್ಯಾ೧ಚಾರ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಗಳು ಲಭ್ಯವಾಗಿವೆ. ಇದರ ಜೊತೆಗೆ ಇನ್ನಷ್ಟು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯಲ್ಲದೇ ಹಲವು ಮಹಿಳೆಯ ಮೇಲೆಯೂ ಬಲತ್ಕಾರ ನಡೆಸಿರುವ ಕೆಲವು ವೀಡಿಯೋಗಳು ಮತ್ತು ಫೋಟೋಗಳು ಸಹ ಪತ್ತೆಯಾಗಿವೆ.
ದೂರು ನೀಡಲು ಸಂತ್ರಸ್ತ ಮಹಿಳೆಯರು ಹಿಂದೇಟು:
ಸದ್ಯ FSLನಿಂದ ಬರುವ DNA ವರದಿ ಮಾತ್ರ ಬಾಕಿಯಿದ್ದು, ಇದು ತನಿಖೆಯ ಅಂತಿಮ ಹಂತವಾಗಿದೆ.ಹಲವಾರು ಮಹಿಳೆಯರಿಗೆ ಅತ್ಯಾ೧ಚಾರ ಮಾಡಿರುವ ಬಗ್ಗೆ ಆರೋಪವೂ ಇತ್ತು. ಹೀಗಾಗಿ ವಿದ್ಯಾರ್ಥಿನಿಯಲ್ಲದೇ ಹಲವು ಇತರೆ ಮಹಿಳೆಯರ ಪ್ರಕರಣದ ವಿಚಾರವಾಗಿಯೂ ತನಿಖೆ ನಡೆಸಿದ್ದ ಪೊಲೀಸರು,
ತನಿಖೆ ವೇಳೆ ಹಲವು ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವುದು ಸಹ ಬೆಳಕಿಗೆ ಬಂದಿತ್ತು. ಸಂತ್ರಸ್ತ ಮಹಿಳೆಯರನ್ನ ಸಂಪರ್ಕಿಸಿ ಪೊಲೀಸರು ಮಾಹಿತಿ ಕೇಳಿದ್ದರು. ಆದರೆ ಓರ್ವ ವಿದ್ಯಾರ್ಥಿನಿ ಹೊರತುಪಡಿಸಿ ಬೇರೆ ಯಾರೂ ದೂರು ನೀಡಿಲ್ಲ. ಠಾಣೆಗೆ ಬಂದು ದೂರು ನೀಡಿಲ್ಲ. ತನಿಖಾ ತಂಡವೇ ಸಂತ್ರಸ್ತ ಮಹಿಳೆಯರು ಇದ್ದಲ್ಲಿಗೇ ಹೋಗಿ ಹೇಳಿಕೆ ಪಡೆಯಲು ಯತ್ನಿಸಿದರೂ. ಈ ಬಗ್ಗೆ ಮಾತಾಡಲು ಹಲವು ಮಹಿಳೆಯರು ನಿರಾಕರಿಸಿದ್ದಾರೆ ಅಲ್ಲದೇ ತನಿಖಾಧಿಕಾರಿಗಳಿಗೆ ಸಹಕರಿಸಿಲ್ಲ. ಈ ಹಿನ್ನೆಲೆ ಓರ್ವ ದೂರುದಾರೆ ನೀಡಿದ ಹೇಳಿಕೆ ಸಾಕ್ಷಿ ಆಧಾರದಲ್ಲಿ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟಾರೆ ಈ ಪ್ರಕರಣ ಮಹಿಳಾ ಸುರಕ್ಷತೆಯ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
