ಬೆಂಗಳೂರು (ಅ.8): ಕುರುಬರನ್ನು ಎಸ್‌ಟಿಗೆ ಸೇರಿಸಲು ವಾಲ್ಮೀಕಿ ಜಯಂತಿಯಲ್ಲಿ ಭಾರೀ ವಿರೋಧ ವ್ಯಕ್ತಪಡಿಸಲಾಗಿದೆ. ಎಸ್‌ಟಿ ತಟ್ಟೆಗೆ ಕುರುಬರು ಕೈ ಇಡುತ್ತಿರುವುದಕ್ಕೆ ಮಾಜಿ ಸಂಸದ ವಿಎಸ್ ಉಗ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ತಟ್ಟೆಯ ಅನ್ನ ಕಿತ್ತುಕೊಳ್ಳಬೇಡಿ. ನಿಮ್ಮ ತಟ್ಟೆ, ಅನ್ನ ತಂದು ಊಟ ಮಾಡಿ. ಮೀಸಲು ಏರಿಸದೆ ಕುರುಬರನ್ನು ಸೇರಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಯಾರ ತಟ್ಟೆಗೂ ಕುರುಬ ಜನರು ಹೈ ಹಾಕಲ್ಲ. ಎಸ್‌ಟಿಗೆ ಸೇರಿಸಲು ಯತ್ನಿಸಿದ್ದು ಬಿಜೆಪಿ, ಮೀಸಲು ಹೆಚ್ಚಳಕ್ಕೆ ಶಿಫಾರಸು ಮಾಡುವೆ ಎಂದು ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
11:53 PM (IST) Oct 08
ಕೆಲವೊಮ್ಮೆ ಧಾರಾವಾಹಿಯನ್ನು, ಅಲ್ಲಿನ ಪಾತ್ರವನ್ನು ವೈಯಕ್ತಿಕವಾಗಿ ತಗೊಂಡ ಕೆಲವರು ಅಸಭ್ಯ ಭಾಷೆಗಳಲ್ಲಿ ಮಾತನಾಡುತ್ತಾರೆ. ಈಗ ಕರ್ಣ ಧಾರಾವಾಹಿ ನಟಿ ನಮ್ರತಾ ಗೌಡ ವಿರುದ್ಧ ಅನೇಕರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದು, ನಟಿ ಈಗ ಎಚ್ಚರಿಕೆ ಕೊಟ್ಟಿದ್ದಾರೆ.
11:30 PM (IST) Oct 08
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿರುವ ಅನೇಕ ಕಲಾವಿದರು, ಸೀರಿಯಲ್‌ಗಳಲ್ಲಿ ಅಥವಾ ರಿಯಾಲಿಟಿ ಶೋನಲ್ಲಿ ಭಾಗಿಯಾದವರೇ..ಇವರಲ್ಲಿ ಕೆಲವರಿಗೆ ಕೆಲವರ ಪರಿಚಯ ಇದೆ. ಆದರೆ ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ ಮಾತ್ರ ಏನೂ ಗೊತ್ತಿಲ್ಲದಂತೆ ಇದ್ದಾರೆ.
10:50 PM (IST) Oct 08
ಕರ್ಣ ಸೀರಿಯಲ್ ರೋಚಕ ಹಂತ ತಲುಪಿದ್ದು, ನಿಧಿಯನ್ನು ಪ್ರೀತಿಸುವ ಕರ್ಣ ಅನಿರೀಕ್ಷಿತವಾಗಿ ನಿತ್ಯಾಳಿಗೆ ತಾಳಿ ಕಟ್ಟಿದ್ದಾನೆ. ಇದೀಗ ನಿಧಿಯ ಸತ್ಯ ನಿತ್ಯಾಳಿಗೆ ಗೊತ್ತಾಗುವ ಟೈಮ್ ಬಂದಿದೆ. ಇನ್ನೊಂದೆಡೆ, ಜೋಗತಿಯು ನಿಧಿ ಮತ್ತು ಕರ್ಣ ಒಂದಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾಳೆ. ಮುಂದೇನು?
10:32 PM (IST) Oct 08
Google Investment India: ಗೂಗಲ್ ಭಾರತದಲ್ಲಿ ತನ್ನ ಅತಿದೊಡ್ಡ ಹೂಡಿಕೆಗೆ ಮುಂದಾಗಿದೆ. ಸುಮಾರು 88,730 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಡೇಟಾ ಸೆಂಟರ್ ಸ್ಥಾಪಿಸಲಿದ್ದು, ಇದು ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
10:17 PM (IST) Oct 08
09:57 PM (IST) Oct 08
ಇತ್ತೀಚೆಗೆ ಕಾರ್ತಿಕ್ ಮಹೇಶ್ ಅವರ ಜನ್ಮದಿನ ಇತ್ತು. ಆಗ ನಮ್ರತಾ ಗೌಡ ಅವರು ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದರು. ಈ ಬಗ್ಗೆ ಈಗ ಚರ್ಚೆಯಾಗುತ್ತಿದ್ದು, ಕಾರ್ತಿಕ್ ಮಹೇಶ್ ಅವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.
09:44 PM (IST) Oct 08
IPS Officer Puran Kumar Singh: ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಮನೆಯಲ್ಲೇ ಸ್ವತಃ ಗುಂಡಿಕ್ಕಿಕೊಂಡು ಸಾವಿಗೆ ಶರಣಾಗಿದ್ದಾರೆ. ವೈ ಪುರಾನ್ ಕುಮಾರ್ ಸಿಂಗ್ ಸಾವಿನ ಹಾದಿ ಹಿಡಿದ ಪೊಲೀಸ್ ಅಧಿಕಾರಿ. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ,
09:32 PM (IST) Oct 08
ಅಮೃತಧಾರೆ ಧಾರಾವಾಹಿ ಈಗ ಭರ್ಜರಿ ಟ್ವಿಸ್ಟ್ ಇರುವ ಎಪಿಸೋಡ್ ಪ್ರಸಾರ ಆಗ್ತಿದೆ. ಈ ಧಾರಾವಾಹಿಯಲ್ಲಿ ಭೂಮಿಗೆ ಆತ ತಾನೇ ಹುಟ್ಟಿದ ಹೆಣ್ಣು ಮಗಳನ್ನು, ಜಯದೇವ್ ಕದ್ದು, ಕಾಡಿನಲ್ಲಿ ಬಿಸಾಕಿದ್ದನು. ಈಗ ಅವನಿಗೆ ಮಗಳು ಸಿಕ್ಕಿದ್ದಾಳೆ. ಆದರೆ ಅವಳೇ ತನ್ನ ಮಗಳು ಎನ್ನೋದು ಅವನಿಗೆ ಅರಿವಾಗಿರಲಿಲ್ಲ.
07:57 PM (IST) Oct 08
HD Devegowoda: ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನುರಿತ ವೈದ್ಯರ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಆಸ್ಪತ್ರೆ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.
07:35 PM (IST) Oct 08
ನಟ ದರ್ಶನ್ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸಿದ ಅಭಿಮಾನಿ ಸಂಘಟನೆಗಳು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಿವೆ. ಈ ಎಲ್ಲ ಬೆಳವಣಿಗೆಗಳ ಸೂತ್ರಧಾರ ಡಿಸಿಎಂ ಡಿ.ಕೆ. ಶಿವಕುಮಾರ್. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಡಿಕೆಶಿ ಸೋಲಿಸಲು ಅಭಿಮಾನಿಗಳಿಗೆ ಕರೆ ನೀಡಿವೆ.
07:10 PM (IST) Oct 08
ನಟ ದರ್ಶನ್ ಅಭಿಮಾನಿಗಳ ಪ್ರತಿಭಟನೆಯು ತಮ್ಮ ವಿರುದ್ಧದ ರಾಜಕೀಯ ಷಡ್ಯಂತ್ರ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದರ್ಶನ್ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದಿರುವ ಅವರು, ಬಿಗ್ ಬಾಸ್ ಶೋ ಸ್ಥಗಿತಗೊಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
06:23 PM (IST) Oct 08
ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಭಕ್ತರಿಗೆ ಸಾಂಪ್ರದಾಯಿಕ ಉಡುಗೆ ಕಡ್ಡಾಯವಾಗಿದ್ದು, ವಿಐಪಿ, ವಿಶೇಷ ಹಾಗೂ ಧರ್ಮದರ್ಶನಕ್ಕೆ ಪ್ರತ್ಯೇಕ ಸರತಿ ಸಾಲು ಮತ್ತು ಸಮಯ ನಿಗದಿಪಡಿಸಲಾಗಿದೆ.
06:12 PM (IST) Oct 08
Single Boy: ಮದುವೆ ಆಗೋಕೆ ಹುಡುಗಿ ಸಿಗ್ತಿಲ್ಲ ಎಂದು ಕೆಲ ಹುಡುಗರು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಓರ್ವ ಸಿಂಗಲ್‌ಗೆ ಮದುವೆ ಆಗಿದ್ಯಾ? ಎಂಗೇಜ್‌ಮೆಂಟ್ ಆಗಿದ್ಯಾ ಎಂದು ಪ್ರಶ್ನೆ ಕೇಳಿ ಬೇಸರ ಆಗುವಂತೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
06:09 PM (IST) Oct 08
Bigg Boss contestants shifted: ಜಲಮಾಲಿನ್ಯ ಆರೋಪದ ಮೇಲೆ ಬಿಗ್‌ಬಾಸ್ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳನ್ನು ಮೊದಲು ಈಗಲ್ ಟನ್ ರೆಸಾರ್ಟ್‌ಗೆ, ನಂತರ ಅಲ್ಲಿಂದಲೂ ಬೇರೊಂದು ಕಡೆಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ.
05:33 PM (IST) Oct 08
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಹಿತಾ ಪಾತ್ರ ಮಾಡುತ್ತಿರುವ ಪುಟಾಣಿ ಈಗ ಸೀರಿಯಲ್‌ನಿಂದ ಬ್ರೇಕ್ ಪಡೆದು, ಸಿಂಗಾಪುರಕ್ಕೆ ಹೋಗಿದ್ದಾರೆ. ಅಲ್ಲಿ madame tussaudsಗೆ ಭೇಟಿ ನೀಡಿದ್ದು, ಭಾರತೀಯ ಚಿತ್ರರಂಗ, ಕ್ರೀಡಾ ರಂಗದ ದಿಗ್ಗಜರ ಮೇಣದ ಪ್ರತಿಮೆಗಳ ಜೊತೆ ಸೆಲ್ಫಿ ತಗೊಂಡಿದ್ದಾರೆ. ಈ ಸುಂದರ ಫೋಟೋಗಳಿವು
05:04 PM (IST) Oct 08
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಸರ್ಕಾರ ಬೀಗ ಹಾಕುವ ಮುನ್ನ, ಸ್ಪರ್ಧಿಗಳಾದ ಚಂದ್ರಪ್ರಭ ಮತ್ತು ಡಾಗ್ ಸತೀಶ್ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ಗಮನ ಸೆಳೆದಿದೆ. ಡಾಗ್ ಸತೀಶ್ ತಮ್ಮನ್ನು 'ಬೆಂಗಳೂರಿನ ಸಂತೂರ್ ಡ್ಯಾಡಿ' ಎಂದು ಕರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಶೋ ಸ್ಥಗಿತಗೊಂಡಿದೆ.
04:25 PM (IST) Oct 08
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳು ತೀವ್ರ ಅನಾರೋಗ್ಯದಿಂದ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಕ್ಕರೆ ಪ್ರಮಾಣದಲ್ಲಿನ ಏರುಪೇರು ಅವರ ಅಸ್ವಸ್ಥತೆಗೆ ಕಾರಣವಾಗಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರಲ್ಲಿ ಆತಂಕ ಮನೆಮಾಡಿದೆ.
04:09 PM (IST) Oct 08
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಮಾಜಿ ಸಂಸದ ರಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿಯ 'ಅಶ್ವಮೇಧ ಯಾಗದ ಕುದುರೆ'ಯನ್ನು ಕಟ್ಟಿಹಾಕುವುದಾಗಿ ಸವಾಲು ಹಾಕಿದ್ದಾರೆ. 40 ವರ್ಷಗಳಿಂದ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ಬಾರಿಯೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
04:07 PM (IST) Oct 08
ಭಾರತೀಯ ರೈಲ್ವೆಯು ದೇಶದ ಜೀವನಾಡಿಯಾಗಿದ್ದು, ಕೋಟ್ಯಂತರ ಜನರಿಗೆ ಸೇವೆ ಸಲ್ಲಿಸುತ್ತದೆ. ಭೌಗೋಳಿಕ ವಿಸ್ತಾರ, ಜನಸಂಖ್ಯೆ ಮತ್ತು ಪ್ರಮುಖ ಸಾರಿಗೆ ಕಾರಿಡಾರ್ ಆಗಿರುವ ಕಾರಣದಿಂದಾಗಿ 1200ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ.
03:59 PM (IST) Oct 08
ಸೆಹ್ವಾಗ್ ಪತ್ನಿ ಜೊತೆ ಡೇಟಿಂಗ್ ರೂಮರ್, ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸೆಹ್ವಾಗ್ ಹಾಗೂ ಆರತಿ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಇದಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್ ಕಾರಣ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
03:48 PM (IST) Oct 08
Ravianna Reveals His Favorite Raj B Shetty Scene 'ಸು ಫ್ರಮ್ ಸೋ' ಕಿರುತೆರೆಯಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ, ಚಿತ್ರದ ಪ್ರಮುಖ ಪಾತ್ರಧಾರಿ 'ರವಿಯಣ್ಣ' ಖ್ಯಾತಿಯ ಶಾನಿಲ್ ಗೌತಮ್ ಅವರು ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅಭಿನಯದ ಬಗ್ಗೆ ಮಾತನಾಡಿದ್ದಾರೆ.
03:43 PM (IST) Oct 08
Abu Dhabi Tourism Ad:ತಮ್ಮ ಪತಿ ರಣ್ವೀರ್ ಸಿಂಗ್ ಜೊತೆ ಅಬುಧಾಬಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಭಾಗಿಯಾಗಿರುವ ದೀಪಿಕಾ ಪಡುಕೋಣೆ ಅಲ್ಲಿನ ಸಂಸ್ಖೃತಿಯಂತೆ ಹಿಜಾಬ್ ಧರಿಸಿದ್ದು, ಇದು ಅನೇಕರನ್ನು ಕೆರಳಿಸಿದೆ. ಆದರೆ ದೀಪಿಕಾ ಅಭಿಮಾನಿಗಳು ಅವರನ್ನು ಸಮರ್ಥಿಸಿಕೊಂಡಿದ್ದಾರೆ.
03:25 PM (IST) Oct 08
ಯಲ್ಲಾಪುರ ತಾಲೂಕಿನ ಕೆಳಾಸೆ ಬಳಿಯ ಬೇಡ್ತಿ ಹಳ್ಳದಲ್ಲಿ ಗೆಳೆಯನ ಹುಟ್ಟುಹಬ್ಬ ಆಚರಿಸಲು ಹೋಗಿದ್ದ ಸಾಗರ್ ದೇವಾಡಿಗ ಎಂಬ 23 ವರ್ಷದ ಯುವಕ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನೀರಿನ ರಭಸಕ್ಕೆ ಕೊಚ್ಚಿಹೋದ ಯುವಕನ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
03:11 PM (IST) Oct 08
Manju Bhashini vs Rashika argument: ಬಿಗ್‌ಬಾಸ್ ಮನೆಯಲ್ಲಿ ಕುಚುಕು ಗೆಳತಿಯರಾಗಿದ್ದ ಮಂಜು ಭಾಷಿಣಿ ಮತ್ತು ರಾಶಿಕಾ ನಡುವೆ ಜಗಳ ಶುರುವಾಗಿದೆ. 'ಕ್ರೂರಿ ಅಸುರ' ಟಾಸ್ಕ್ ವೇಳೆ ಮಂಜು ಆಡಿದ ವೈಯಕ್ತಿಕ ಮಾತಿನಿಂದ ರಾಶಿಕಾ ತೀವ್ರ ಅಸಮಾಧಾನಗೊಂಡಿದ್ದಾರೆ.
02:47 PM (IST) Oct 08
Rabies death: ಬೀದಿ ನಾಯಿ ಕಡಿತಕ್ಕೊಳಗಾದ ಬಾಲಕ ರೇಬೀಸ್‌ನಿಂದ ಸಾವನ್ನಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ವರದಿಯಾಗಿದೆ. ಮೂರು ವರ್ಷದ ಬಾಲಕ ಅರ್ಮಾನ್ ಆಟವಾಡುತ್ತಿದ್ದಾಗ ಬೀದಿ ನಾಯಿ ಆತನ ಮೇಲೆ ದಾಳಿ ಮಾಡಿತ್ತು. ಆದರೆ ಕುಟುಂಬದವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ.
02:40 PM (IST) Oct 08
ಮೈಸೂರಿನಲ್ಲಿ 'ಡಾನ್ ಪಟ್ಟ'ಕ್ಕಾಗಿ ನಡೆದ ಆಂತರಿಕ ಜಗಳದಲ್ಲಿ ರೌಡಿಶೀಟರ್ ಗಿಲಿಗಿಲಿ ವೆಂಕಟೇಶ್‌ನನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಖ್ಯಾತ ರೌಡಿ ಕಾರ್ತಿಕ್ ಹತ್ಯೆಯ ನಂತರ, ಗ್ಯಾಂಗ್‌ನ ನಾಯಕತ್ವಕ್ಕಾಗಿ ವೆಂಕಟೇಶ್ ಮತ್ತು ಹಾಲಪ್ಪ ನಡುವೆ ಶುರುವಾದ ವೈಷಮ್ಯ ಕೊಲೆಯಲ್ಲಿ ಅಂತ್ಯವಾಗಿದೆ
02:18 PM (IST) Oct 08
ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ಬೆಟ್ಟದಲ್ಲಿ ಕೋತಿಯೊಂದು ಮಹಿಳೆಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಪ್ರತಿಭಟನೆಯ ಎಚ್ಚರಿಕೆ.. ಮತ್ತೊಂದು ಘಟನೆಯಲ್ಲಿ, ಮಳವಳ್ಳಿಯಲ್ಲಿ ಶಾಸ್ತ್ರ ಹೇಳುವ ನೆಪದಲ್ಲಿ ವೇಷಧಾರಿಯೊಬ್ಬ ವೃದ್ಧೆಯ ಚಿನ್ನಾಭರಣ ದೋಚಿ ಪರಾರಿ
02:01 PM (IST) Oct 08
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಪರವಾಗಿ ಕೆಲಸ ಮಾಡುವವರನ್ನು ಬೆಂಬಲಿಸುವಂತೆ ವಾಲ್ಮೀಕಿ ಸಮುದಾಯಕ್ಕೆ ಕರೆ ನೀಡಿದರು. ಇದೇ ವೇಳೆ, ಮಹರ್ಷಿ ವಾಲ್ಮೀಕಿ ಅವರ ಕುರಿತ ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸುವುದಾಗಿ ಅವರು ಮಹತ್ವದ ಘೋಷಣೆ ಮಾಡಿದರು.
01:44 PM (IST) Oct 08
ವಿಚ್ಛೇದಿತ ಪತ್ನಿ ಉದ್ಯೋಗದಲ್ಲಿದ್ದಾರೆ ಎಂಬ ಕಾರಣ ನೀಡಿ ಅಪ್ರಾಪ್ತ ಮಗಳಿಗೆ ಜೀವನಾಂಶ ನೀಡಲು ನಿರಾಕರಿಸಿದ ತಂದೆಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ತಾಯಿಗೆ ಆದಾಯವಿದ್ದರೂ, ಮಗುವನ್ನು ಪೋಷಿಸುವ ಶಾಸನಬದ್ಧ ಕರ್ತವ್ಯದಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
01:41 PM (IST) Oct 08
ನಟ ಕಿಚ್ಚ ಸುದೀಪ್ ಅವರನ್ನು ಗುರಿಯಾಗಿಸಿ ರಾಜ್ಯ ಸರ್ಕಾರವು ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದು 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ. ಜನಾಂಗೀಯ ಮತ್ತು ರಾಜಕೀಯ ಪ್ರೇರಿತ ಟಾರ್ಗೆಟ್ ಎಂದಿದ್ದಾರೆ.
01:31 PM (IST) Oct 08
Vijayanagara school theft news: ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳ್ಳತನ ನಡೆದಿದೆ. ಖದೀಮರು ಕಂಪ್ಯೂಟರ್ ಕೊಠಡಿಯಲ್ಲಿದ್ದ 16 ಬ್ಯಾಟರಿ ಕದ್ದೊಯ್ದಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.
01:10 PM (IST) Oct 08
ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಥಗಿತಗೊಂಡಿರುವ ಕುರಿತು ಸೀಸನ್ 6ರ ವಿಜೇತ ಶಶಿಕುಮಾರ್ ಪ್ರತಿಕ್ರಿಯಿಸಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸದ ನಿರ್ಮಾಣ ಸಂಸ್ಥೆ ಜಾಲಿವುಡ್ ಸ್ಟುಡಿಯೋಸ್‌ನ ಸಂಪೂರ್ಣ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.
01:09 PM (IST) Oct 08
ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಶೇ. 83.22ರಷ್ಟು ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಡುವನ್ನು ಅ.18ರವರೆಗೆ ವಿಸ್ತರಿಸಿದ್ದಾರೆ. ಈ ಗಣತಿ ಕಾರ್ಯದ ವೇಳೆ ಶಿಕ್ಷಕರು ಹೃದಯಾಘಾತ, ಅಸ್ವಸ್ಥಗೊಂಡ ಘಟನೆಗಳು ನಡೆದಿವೆ.
12:39 PM (IST) Oct 08
3 ಕೋಟಿ ರೂ ರೇಂಜ್ ರೋವರ್ ಖರೀದಿಸಿದ ಬೆಂಗಳೂರಿನ ಶ್ರೀಮಂತ ಬಾರ್ಬರ್ ರಮೇಶ್ ಬಾಬು, ಬಾರ್ಬರ್ ವೃತ್ತಿ ಜೊತೆಗೆ ಲಕ್ಷುರಿ ಟ್ಯಾಕ್ಸಿ ಉದ್ಯಮ ನಡೆಸುತ್ತಿರುವ ರಮೇಶ್ ಬಾಬು ಬಳಿ ರೋಲ್ಸ್ ರಾಯ್ಸ್, ಮರ್ಸಿಡೀಸ್ ಸೇರಿದಂತೆ ಹಲವು ಹೆಚ್ಚು ಐಷಾರಾಮಿ ಕಾರುಗಳಿವೆ.
12:37 PM (IST) Oct 08
Apoorva K Bhat Death: ಅಶೀಶ್ ಸರಡ್ಕ ಅವರ ಪತ್ನಿ ಅಪೂರ್ವ ಕೆ ಭಟ್ ಅವರು 32 ನೇ ವಯಸ್ಸಿಗೆ ನಿಧನರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ಅವರ ತಲೆಗೆ ಪೆಟ್ಟು ಬಿದ್ದಿತ್ತು. ಈಗ ಮೂರು ವರ್ಷದ ಮಗಳಿಗೆ ಏನು ಹೇಳೋದು ಎಂದು ಅವರು ಯೋಚನೆ ಮಾಡುತ್ತಿದ್ದಾರೆ.
12:29 PM (IST) Oct 08
Shoe thrown at CJI Gavai: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲನೋರ್ವ ಶೂ ಎಸೆದ ಘಟನೆಯನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ತೀವ್ರವಾಗಿ ಖಂಡಿಸಿದ್ದಾರೆ. ಇದು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿಯನ್ನು ಗುರಿಯಾಗಿಸಿಕೊಂಡು ಸನಾತನವಾದಿಗಳು ನಡೆಸಿದ ಕೃತ್ಯ ಎಂದರು.
12:15 PM (IST) Oct 08
Apoorva K Bhat Death: ಮೇ ತಿಂಗಳಲ್ಲಿ ನಡೆದ ಅಪಘಾತದಲ್ಲಿ ಅಪೂರ್ವ ಕೆ ಭಟ್ ಅವರಿಗೆ ಗಾಯವಾಗಿತ್ತು. ಅಂದಿನಿಂದ ನಿನ್ನೆಯವರೆಗೆ ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ಮಾಡಿದ್ದರು. ಈಗ ಅವರ ಪತಿ ಆಸ್ಪತ್ರೆಯ ಹೋರಾಟದ ಬಗ್ಗೆ ಮಾತನಾಡಿದ್ದಾರೆ.
11:53 AM (IST) Oct 08
ಸರ್ಕಾರದ ನಿಯಮ ಉಲ್ಲಂಘನೆ ಆರೋಪದ ಮೇಲೆ ಸ್ಥಗಿತಗೊಂಡಿದ್ದ 'ಬಿಗ್ ಬಾಸ್ ಕನ್ನಡ ಸೀಸನ್ 12' ಶೋಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದಾರೆ. ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
11:42 AM (IST) Oct 08
Gangavati BJP leader murder case four: ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರರನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಕೊಲೆಯ ಹಿಂದೆ ಇಸ್ಪೀಟ್ ದಂಧೆಗೆ ಸಂಬಂಧಿಸಿದ ವೈಷಮ್ಯವಿರಬಹುದೆಂದು ಶಂಕಿಸಲಾಗಿದ್ದು, ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
11:19 AM (IST) Oct 08
Assam workers in Bhagamandala: ಕೊಡಗಿನ ಭಾಗಮಂಡಲ ತ್ರಿವೇಣಿ ಸಂಗಮದ ಬಳಿ ತಲಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಆಚರಿಸುವ ಹಬ್ಬದ ಕಟ್ಟುಪಾಡಿಗೆ ಅಸ್ಸಾಂ ಕಾರ್ಮಿಕರು ಮೀನು ಹಿಡಿದು ಧಕ್ಕೆ.. ಈ ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು, ಕಾರ್ಮಿಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ