- Home
- Entertainment
- TV Talk
- BBK 12: ದೊಡ್ಡ ಸತ್ಯವನ್ನು ಮುಚ್ಚಿಟ್ಟು ಬಿಗ್ ಬಾಸ್ ಮನೆಯೊಳಗಿರೋ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ!
BBK 12: ದೊಡ್ಡ ಸತ್ಯವನ್ನು ಮುಚ್ಚಿಟ್ಟು ಬಿಗ್ ಬಾಸ್ ಮನೆಯೊಳಗಿರೋ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ!
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿರುವ ಅನೇಕ ಕಲಾವಿದರು, ಸೀರಿಯಲ್‌ಗಳಲ್ಲಿ ಅಥವಾ ರಿಯಾಲಿಟಿ ಶೋನಲ್ಲಿ ಭಾಗಿಯಾದವರೇ..ಇವರಲ್ಲಿ ಕೆಲವರಿಗೆ ಕೆಲವರ ಪರಿಚಯ ಇದೆ. ಆದರೆ ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ ಮಾತ್ರ ಏನೂ ಗೊತ್ತಿಲ್ಲದಂತೆ ಇದ್ದಾರೆ.

ಕಾವೇರಿ ಧಾರಾವಾಹಿ
ಉದಯ ಟಿವಿಯ ಕಾವೇರಿ ಧಾರಾವಾಹಿಯಲ್ಲಿ ನಟಿ ರಾಶಿಕಾ ಶೆಟ್ಟಿ ಅವರು ನಾಯಕಿಯಾಗಿ ಬಣ್ಣಹಚ್ಚಿದ್ದರು. 2019ರಲ್ಲಿ ಈ ಸೀರಿಯಲ್ ಪ್ರಸಾರ ಆಗಿತ್ತು. ಈ ಧಾರಾವಾಹಿಯಲ್ಲಿ ಅತ್ತೆಯಾಗಿ ಅಶ್ವಿನಿ ಗೌಡ ಅವರು ನಟಿಸಿದ್ದರು. ಸೊಸೆಯಾಗಿ ರಾಶಿಕಾ ಶೆಟ್ಟಿ ಅವರು ತೆರೆಹಂಚಿಕೊಂಡಿದ್ದರು.
ಅತ್ತೆ - ಸೊಸೆ ಜೋಡಿ
ಅಂದಿನ ಕಾವೇರಿಯ ಅತ್ತೆ - ಸೊಸೆ ಜೋಡಿ ಈಗ ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದಾರೆ. ರಾಶಿಕಾ ಶೆಟ್ಟಿ ಹಾಗೂ ಅಶ್ವಿನಿ ಗೌಡ ಮಾತ್ರ ಪರಿಚಯವೇ ಇಲ್ಲದಂತೆ ಇದ್ದಾರೆ.
ಅಶ್ವಿನಿ ಗೌಡ ಜೊತೆ ಜಗಳ
ರಾಶಿಕಾ ಶೆಟ್ಟಿ ಅವರು ಬಹುತೇಕ ಎಲ್ಲರ ಜೊತೆ ಚೆನ್ನಾಗಿದ್ದರು. ಮಂಜುಭಾಷಿಣಿ ಜೊತೆ ರಾಶಿಕಾ ಉತ್ತಮ ಸ್ನೇಹದಿಂದ ಇದ್ದರು. ಆದರೆ ಈಗ ಮಾತನಾಡೋಕೆ ಶುರು ಮಾಡಿರೋ ರಾಶಿಕಾ ಶೆಟ್ಟಿ ಅಶ್ವಿನಿ ಗೌಡ ಜೊತೆ ಜಗಳ ಆಡಿದ್ದರು.
ಸೈಲೆಂಟ್ ಆಗಿ ಅಡುಗೆ
ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಆರಂಭದಲ್ಲಿ ಸೈಲೆಂಟ್ ಆಗಿ ಅಡುಗೆ ಮನೆಯಲ್ಲಿ ಕಾಲ ಕಳೆದಿದ್ದ ರಾಶಿಕಾ ಶೆಟ್ಟಿ, ಈಗ ಮಾತನಾಡೋಕೆ ಆರಂಭಿಸಿದ್ದಾರೆ. ಇದು ಎಲ್ಲರಿಗೂ ಆಶ್ಚರ್ಯ ತಂದಿದೆ.
ವೈಲ್ಡ್ ಕಾರ್ಡ್ ಎಂಟ್ರಿ
ಅಂದಹಾಗೆ ಮುಂದಿನ ದಿನಗಳಲ್ಲಿ ಸ್ಪರ್ಧಿಳು ಯಾವ ರೀತಿ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಈ ಬಾರಿ ದೊಡ್ಟ ಮಟ್ಟದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಲಿದೆ ಎಂದು ಕೂಡ ಕಿಚ್ಚ ಸುದೀಪ್ ಸುಳಿವು ನೀಡಿದ್ದರು.