ಸೆಹ್ವಾಗ್ ಪತ್ನಿ ಜೊತೆ ಡೇಟಿಂಗ್ ರೂಮರ್, ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸೆಹ್ವಾಗ್ ಹಾಗೂ ಆರತಿ ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಇದಕ್ಕೆ ಬಿಸಿಸಿಐ ನೂತನ ಅಧ್ಯಕ್ಷ ಮಿಥುನ್ ಮನ್ಹಾಸ್ ಕಾರಣ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.

ಮುಂಬೈ (ಅ.08) ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಾಗೂ ಪತ್ನಿ ಆರತಿ ಬೇರೆ ಬೇರೆಯಾಗಿ ಹಲವು ದಿನಗಳಾಗಿದೆ. ಎರಡು ದಶಕಗಳಿಂದ ಸಂಸಾರ ನಡೆಸಿದ್ದ ಈ ಜೋಡಿ ಇತ್ತೀಚೆಗೆ ಬೇರೆ ಬೇರೆಯಾಗಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು. ಚೆನ್ನಾಗಿದ್ದ ಈ ಜೋಡಿ ಬೇರೆಯಾಗಿದ್ದೇಕೆ ಅನ್ನೋ ಪ್ರಶ್ನೆಗೆ ಉತ್ತರವೇ ಸಿಕ್ಕಿರಲಿಲ್ಲ. ಇದೀಗ ಈ ಕುತೂಹಲಕ್ಕೆ ಉತ್ತರಗಳು ಹರಿದಾಡುತ್ತಿದೆ. ಬಿಸಿಸಿಐ ನೂತನ ಅಧ್ಯಕ್ಷರಾಗಿರುವ ಮಿಥುನ್ ಮನ್ಹಾಸ್, ರಹಸ್ಯವಾಗಿ ಸೆಹ್ವಾಗ್‌ನಿಂದ ದೂರವಾಗಿರುವ ಪತ್ನಿ ಆರತಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿಗಳು ಹರಿದಾಡುತ್ತಿದೆ.

ಮಿಥುನ್ ಮಧ್ಯಪ್ರವೇಶದಿಂದ ದೂರವಾದ ದಂಪತಿ

ಮಿಥುನ್ ಮನ್ಹಾಸ್ ಜೊತೆ ಡೇಟಿಂಗ್‌ನಲ್ಲಿ ಬಿದ್ದ ಕಾರಣ ವೀರೇಂದ್ರ ಸೆಹ್ವಾಗ್ ತಮ್ಮ ಪತ್ನಿ ಆರತಿಯಿಂದ ದೂರವಾಗಿದ್ದಾರೆ ಅನ್ನೋ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಈ ಕುರಿತು ಹಲವು ಕ್ರೀಡಾಪತ್ರಕರ್ತರು ಸೂಚ್ಯವಾಗಿ ಟ್ವೀಟ್ ಮಾಡಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮುರಳಿ ವಿಜಯ್ ಹಾಗೂ ಕಾರ್ತಿಕ್ ಘಟನೆ ನಡಿದಿದೆ. ಮಾಜಿ ಕ್ರಿಕೆಟಿಗ ಪತ್ನಿಯಿಂದ ದೂರವಾಗಿದ್ದಾರೆ ಎಂದು ಸೂಚ್ಯವಾಗಿ ಪ್ರಮುಖ ಪತ್ರಕರ್ತರು ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಸೆಹ್ವಾಗ್ ತನ್ನ ಇಬ್ಬರು ಮಕ್ಕಳು ಹಾಗೂ ತಾಯಿ ಜೊತೆ 2024ರಲ್ಲಿ ದೀಪಾವಳಿ ಆಚರಿಸಿರುವ ಫೋಟೋ ಭಾರಿ ಚರ್ಚೆಗೆ ಕಾರಣವಾಗಿತ್ತು. ಸೆಹ್ವಾಗ್ ಹಾಗೂ ಪತ್ನಿ ಜೊತೆಯಾಗಿರುವ ಫೋಟೋ 2023ರಿಂದ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಖಾತೆಗಳಲ್ಲಿ ಪೋಸ್ಟ್ ಆಗಿಲ್ಲ. ಎಪ್ರಿಲ್ 28, 2023ರಲ್ಲಿ ಸೆಹ್ವಾಗ್ ತನ್ನ ಪತ್ನಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಇವರಿಬ್ಬರು ಜೊತೆಯಾಗಿರುವ ಒಂದೇ ಒಂದು ಫೋಟೋ ಇಲ್ಲ. ಇಬ್ಬರು 2024ರಿಂದ ಬೇರೆ ಬೇರೆಯಾಗಿದ್ದಾರೆ ಅನ್ನೋ ಮಾತುಗಳು ಹಬ್ಬಿತ್ತು.

ಬಿಸಿಸಿಐ ಅಧ್ಯಕ್ಷನಾಗುತ್ತಿದ್ದಂತೆ ಎದುರಾದ ಸಂಕಷ್ಟ

ಮಿಥುನ್ ಮನ್ಹಾಲ್ ಆಕ್ಸಿಡೆಂಟಲ್ ಬಿಸಿಸಿಐ ಅಧ್ಯಕ್ಷ ಎಂದೇ ಗುರುತಿಸಿಕೊಂಡಿದ್ದಾರೆ. ನೀತಿ, ನಿಯಮ, ಕಾನೂನು, ಕೋರ್ಟ್ ಇದರ ನಡುವೆ ಮಿಥುನ್ ಮನ್ಹಾಸ್ ದಿಡೀರ್ ಅಧ್ಯಕ್ಷನಾಗಿ ಅಧಿಕಾರವಹಿಸಕೊಂಡಿದ್ದರೆ. ಆದರೆ ಅಧ್ಯಕ್ಷನಾಗುತ್ತಿದ್ದಂತೆ ಮಿಥುನ್ ಮನ್ಹಾಸ್‌ಗೆ ಸೀಕ್ರೆಟ್ ಡೇಟಿಂಗ್ ಸಂಕಷ್ಟ ಎದುರಾಗಿದೆ. ಸೆಹ್ವಾಗ್ ಪತ್ನಿ ಜೊತೆ ಸೀಕ್ರೆಟ್ ಡೇಟಿಂಗ್ ಮಾಡಿ, ಸಂಸಾರಕ್ಕೆ ಹುಳಿ ಹಿಂಡಿದ್ದಾರೆ ಅನ್ನೋ ಗಂಬೀರ ಆರೋಪಗಳು ಮಿಥುನ್ ಮನ್ಹಾಸ್ ಮೇಲೆ ಕೇಳಿಬಂದಿದೆ.

Scroll to load tweet…

ಸೆಹ್ವಾಗ್ ಹಾಗೂ ಮಿಥುನ್ ಇಬ್ಬರೂ ದೆಹಲಿ ಮೂಲದವರು. ವಿದಾಯದ ಬಳಿಕವೂ ಮಿಥುನ್ ಮನ್ಹಾಸ್ ಹಾಗೂ ವೀರೇಂದ್ರ ಸೆಹ್ವಾಗ್ ಉತ್ತಮ ಸಂಬಂಧ ಹೊಂದಿದ್ದರು. ಸೆಹ್ವಾಗ್ ಶಾಲೆಯಲ್ಲೂ ಮಿಥುನ್ ಮನ್ಹಾಸ್ ಕೋಚ್ ಆಗಿ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಪಾಠ ಕಲಿಸುತ್ತಿದ್ದರು. ಹೀಗಾಗಿ ಸೆಹ್ವಾಗ್ ಹಾಗೂ ಮಿಥುನ್ ಸಂಬಂಧ ಉತ್ತಮವಾಗಿತ್ತು. ಶಾಲೆಯ ಆಡಳಿತ ನೋಡಿಕೊಳ್ಳುತ್ತಿದ್ದ ಸೆಹ್ವಾಗ್ ಪತ್ನಿ ಜೊತೆಗೆ ಇದೇ ವೇಳೆ ಸಂಬಂಧ ಬೆಳೆದಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಗಂಭೀರವಾಗಿ ಯಾರು ತೆಗೆದುಕೊಂಡಿರಲಿಲ್ಲ. ಇದೀಗ ಮಿಥುನ್ ಮನ್ಹಾಸ್ ಬಿಸಿಸಿಐ ಅಧ್ಯಕ್ಷನಾದ ಬಳಿಕ ಸೀಕ್ರೆಟ್ ಡೇಟಿಂಗ್ ವಿಚಾರಗಳು ಹೊರಬಂದಿದೆ.

Scroll to load tweet…