- Home
- Entertainment
- TV Talk
- ನೋಡಯ್ಯ ಕ್ವಾಟೆ ಲಿಂಗವೇ, ಜೋಡಕ್ಕಿ ಕುಂತವೇ- ನಮ್ರತಾ ಗೌಡ ಆ ಪೋಸ್ಟ್‌ಗೆ ಕ್ಲಾರಿಟಿ ಕೊಟ್ಟ ಕಾರ್ತಿಕ್ ಮಹೇಶ್
ನೋಡಯ್ಯ ಕ್ವಾಟೆ ಲಿಂಗವೇ, ಜೋಡಕ್ಕಿ ಕುಂತವೇ- ನಮ್ರತಾ ಗೌಡ ಆ ಪೋಸ್ಟ್‌ಗೆ ಕ್ಲಾರಿಟಿ ಕೊಟ್ಟ ಕಾರ್ತಿಕ್ ಮಹೇಶ್
ಇತ್ತೀಚೆಗೆ ಕಾರ್ತಿಕ್ ಮಹೇಶ್ ಅವರ ಜನ್ಮದಿನ ಇತ್ತು. ಆಗ ನಮ್ರತಾ ಗೌಡ ಅವರು ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದರು. ಈ ಬಗ್ಗೆ ಈಗ ಚರ್ಚೆಯಾಗುತ್ತಿದ್ದು, ಕಾರ್ತಿಕ್ ಮಹೇಶ್ ಅವರು ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Bigg Boss 10 ಮುಗಿದು ಎರಡು ವರ್ಷ
ಬಿಗ್ ಬಾಸ್ ಕನ್ನಡ ಸೀಸನ್ 10 ಮುಗಿದು ಎರಡು ವರ್ಷಗಳಾಗುತ್ತ ಬಂತು. ಇಷ್ಟು ಸಮಯದಲ್ಲಿ ಸಾಕಷ್ಟು ಬಾರಿ ಇವರಿಬ್ಬರು ಭೇಟಿಯಾಗಿದ್ದಾರೆ. ನಮ್ರತಾ ಗೌಡ ಮನೆಯ ಕಾರ್ಯಕ್ರಮಗಳಿಗೆ ಕಾರ್ತಿಕ್ ಮಹೇಶ್ ಬಂದಿದ್ದು, ಇವರಿಬ್ಬರೂ ಒಟ್ಟಿಗೆ ಜಾಹೀರಾತು, ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಂಡಿದ್ದರು, ಇವೆಂಟ್‌ಗಳಲ್ಲಿ ಭಾಗಿಯಾಗಿದ್ದರು, ಇತ್ತೀಚೆಗೆ ಮೈಸೂರಿನಲ್ಲಿ ಮಾವುತರ ಮಕ್ಕಳಿಗೆ ಪುಸ್ತಕ, ಪೆನ್, ಬ್ಯಾಗ್ ನೀಡಿದ್ದರು.
ನಮ್ರತಾ ಗೌಡ ವಿಶೇಷ ಪೋಸ್ಟ್
ಒಟ್ಟಿನಲ್ಲಿ ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಈಗ ಫ್ರೆಂಡ್ಸ್. ಈ ಮಧ್ಯೆ ಕಾರ್ತಿಕ್ ಜನ್ಮದಿನಕ್ಕೆ ಈ ಎಲ್ಲ ನೆನಪುಗಳಿರುವ ಫೋಟೊ, ವಿಡಿಯೋಗಳನ್ನು ನಮ್ರತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ನೋಡಯ್ಯ ಕ್ವಾಟೆ ಲಿಂಗವೇ ಎಂಬ ಹಾಡು ಹಾಕಿದ್ದರು.
ಲವ್‌ನಲ್ಲಿದ್ದಾರಾ?
ಈ ವಿಡಿಯೋ ನೋಡಿದ ಕೆಲವರು ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಲವ್‌ನಲ್ಲಿದ್ದಾರಾ ಎಂದು ಪ್ರಶ್ನೆ ಮಾಡಿದ್ದರು. ಸಾಕಷ್ಟು ಜನರಿಗೆ ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ ಎಂಬ ಡೌಟ್ ಬಂದಿತ್ತು.
ಕಾರ್ತಿಕ್ ಮಹೇಶ್ ಸ್ಪಷ್ಟನೆ ಏನು?
ಈಗ ಕಾರ್ತಿಕ್ ಮಹೇಶ್ ಅವರಿಗೆ ಮಾಧ್ಯಮವೊಂದು ಈ ಬಗ್ಗೆ ಪ್ರಶ್ನೆ ಮಾಡಿದಾಗ, “ನಾನು, ನಮ್ರತಾ ಗೌಡ ಸ್ನೇಹಿತರು. ಸ್ನೇಹಿತರು ಎಂದಾಗ ಸಾಕಷ್ಟು ಸಮಯ ಒಟ್ಟಿಗೆ ಕಳೆಯುತ್ತೇವೆ, ಅದನ್ನು ಬಿಟ್ಟು ಬೇರೆ ಏನೂ ಇಲ್ಲ. ಆ ಸುಂದರ ನೆನಪುಗಳನ್ನು ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ ಅಷ್ಟೇ” ಎಂದು ಹೇಳಿದ್ದಾರೆ.
ಬೇರೆ ಬೇರೆ ಪ್ರಾಜೆಕ್ಟ್
ನಮ್ರತಾ ಗೌಡ ಅವರು ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ, ಕಾರ್ತಿಕ್ ಮಹೇಶ್ ಅವರು
ರಾಮರಸ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.