- Home
- Entertainment
- TV Talk
- ಸಂಜೆ 7ರೊಳಗೆ ಈಗಲ್ ಟನ್ ರೆಸಾರ್ಟ್ ಖಾಲಿ ಮಾಡಿ: ಬಿಗ್‌ಬಾಸ್ ಸ್ಪರ್ಧಿಗಳಿಗೆ ಮತ್ತೊಂದು ಶಾಕ್
ಸಂಜೆ 7ರೊಳಗೆ ಈಗಲ್ ಟನ್ ರೆಸಾರ್ಟ್ ಖಾಲಿ ಮಾಡಿ: ಬಿಗ್‌ಬಾಸ್ ಸ್ಪರ್ಧಿಗಳಿಗೆ ಮತ್ತೊಂದು ಶಾಕ್
Bigg Boss contestants shifted: ಜಲಮಾಲಿನ್ಯ ಆರೋಪದ ಮೇಲೆ ಬಿಗ್‌ಬಾಸ್ ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಿಗಳನ್ನು ಮೊದಲು ಈಗಲ್ ಟನ್ ರೆಸಾರ್ಟ್‌ಗೆ, ನಂತರ ಅಲ್ಲಿಂದಲೂ ಬೇರೊಂದು ಕಡೆಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ.

ಜಾಲಿವುಡ್ ಸ್ಟುಡಿಯೋಗೆ ಬೀಗ
ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಸೀಸನ್ 12ರ ಬಿಗ್‌ಬಾಸ್ ಸ್ಪರ್ಧಿಗಳನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಿಡದಿಯ ಈಗಲ್ ಟನ್ ಗಾಲ್ಪ್ ರೆಸಾರ್ಟಿಗೆ ಶಿಫ್ಟ್ ಮಾಡಲಾಗಿತ್ತು. ನಿನ್ನೆಯಿಂದ ಸ್ಪರ್ಧಿಗಳು ರೆಸಾರ್ಟ್‌ನಲ್ಲಿಯೇ ಉಳಿದುಕೊಂಡಿದ್ದಾರೆ.
ರೆಸಾರ್ಟ್ ಖಾಲಿ ಮಾಡುವಂತೆ ಸೂಚನೆ
ಸ್ಟುಡಿಯೋ ಸೀಜ್ ಹಿನ್ನೆಲೆ ಬಿಗ್‌ಬಾಸ್ ಆಡಳಿತ ಮಂಡಳಿ ದಿಢೀರ್ ಅಂತ ಸಮೀಪದ ಈಗಲ್ ಟನ್ ರೆಸಾರ್ಟ್‌ನಲ್ಲಿ 9 ರೂಮ್‌ಗಳನ್ನು ಕಾಯ್ದಿರಿಸಿತ್ತು. ಈಗಾಗಲೇ ಮುಂಗಡವಾಗಿ ಬೇರೆ ಇವೆಂಟ್‌ಗಾಗಿ ಈಗಲ್ ಟನ್ ರೆಸಾರ್ಟ್ ಬುಕ್ ಮಾಡಲಾಗಿತ್ತು. ಒಂದು ದಿನಕ್ಕೆ ಮಾತ್ರ ಈ ಬುಕ್ಕಿಂಗ್ ಆಗಿತ್ತು. ಹೀಗಾಗಿ ಸಂಜೆ 7ರೊಳಗೆ ರೆಸಾರ್ಟ್ ಖಾಲಿ ಮಾಡುವಂತೆ ಸೂಚಿಸಲಾಗಿದೆ.
ಮತ್ತೊಂದು ರೆಸಾರ್ಟ್‌ಗೆ ಶಿಫ್ಟ್
ಈ ಹಿನ್ನೆಲೆ ಬಿಗ್‌ಬಾಸ್ ಆಡಳಿತ ಮಂಡಳಿ ಎಲ್ಲಾ 17 ಸ್ಪರ್ಧಿಗಳನ್ನು ಬೇರೆ ಕಡೆ ಶಿಫ್ಟ್ ಮಾಡಲು ಚಿಂತನೆ ನಡೆಸಿದೆ. ಆದ್ರೆ ಎಲ್ಲಿಗೆ ಸ್ಪರ್ಧಿಗಳನ್ನು ಶಿಫ್ಟ್ ಮಾಡಲಾಗುತ್ತೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಸದ್ಯ ರೆಸಾರ್ಟ್‌ನಲ್ಲಿದ್ದರೂ ಸ್ಪರ್ಧಿಗಳಿಗೆ ಹೊರಗಡೆ ಏನಾಗ್ತಿದೆ ಎಂಬುದರ ಮಾಹಿತಿಯನ್ನು ನೀಡಿಲ್ಲ. ರೂಮ್‌ನಲ್ಲಿರುವ ಟಿವಿ, ಫೋನ್‌ಗಳ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ಡಿಕೆ ಶಿವಕುಮಾರ್ ಸ್ಪಷ್ಟನೆ
ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಗೆ ಅವಕಾಶ ನೀಡಲು ಸೂಚನೆ ನೀಡಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಗ್‌ಬಾಸ್ ನಡೆಯುವ ಜಾಲಿವುಡ್ ಸ್ಟುಡಿಯೋ ಬಂದ್ ಮಾಡಲಾಗಿದೆ. ಆದರೆ ಇಲ್ಲಿ ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ, ಉದ್ಯೋಗ ನಡೆಯುವುದು ಮುಖ್ಯ. ಹೀಗಾಗಿ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್
ಜಲಮಾಲಿನ್ಯ ಮತ್ತು ಅನಧಿಕೃತವಾಗಿ ಕಾರ್ಯನಿರ್ವಹಣೆ ಆರೋಪದ ಮೇಲೆ, ಜನಪ್ರಿಯ ಬಿಗ್‌ಬಾಸ್ ರಿಯಾಲಿಟಿ ಶೋ ನಡೆಯುತ್ತಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಮಂಗಳವಾರ ಸಂಜೆ ಬೀಗ ಹಾಕಲಾಗಿದೆ.
ಇದನ್ನೂ ಓದಿ: ಅತಿದೊಡ್ಡ ರಿಯಾಲಿಟಿ ಶೋಗೆ ಬೀಗ: ಬಿಗ್‌ಬಾಸ್ ಕಣ್ಣಿಗೆ ಮಣ್ಣೆರಚಿತಾ ಜಾಲಿವುಡ್ ಸ್ಟುಡಿಯೋ?
ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು
ಜಾಲಿವುಡ್ ಸ್ಟುಡಿಯೋಸ್ ನ್ನು ಬಂದ್ ಮಾಡುವಂತೆ ಆಗ್ರಹಿಸಿ ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರು ಸ್ಟುಡಿಯೋಸ್ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ್ದರು. ಬಳಿಕ, ಸ್ಟುಡಿಯೋಸ್ ಗೆ ಬೀಗ ಜಡಿಯುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದರು.
ಇದನ್ನೂ ಓದಿ: ಉರಿಯೋ ಬೆಂಕಿಗೆ ತುಪ್ಪ ಸುರಿದು ಚೆನ್ನಾಗಿದೆ ಚೆನ್ನಾಗಿದೆ ಎಂದ ಜಾನ್ವಿ & ಅಶ್ವಿನಿ ಗೌಡ