MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಭಾರತದ ಯಾವ ರಾಜ್ಯ ಅತಿ ಹೆಚ್ಚು ರೈಲು ನಿಲ್ದಾಣಗಳನ್ನು ಹೊಂದಿದೆ?

ಭಾರತದ ಯಾವ ರಾಜ್ಯ ಅತಿ ಹೆಚ್ಚು ರೈಲು ನಿಲ್ದಾಣಗಳನ್ನು ಹೊಂದಿದೆ?

ಭಾರತೀಯ ರೈಲ್ವೆಯು ದೇಶದ ಜೀವನಾಡಿಯಾಗಿದ್ದು, ಕೋಟ್ಯಂತರ ಜನರಿಗೆ ಸೇವೆ ಸಲ್ಲಿಸುತ್ತದೆ. ಭೌಗೋಳಿಕ ವಿಸ್ತಾರ, ಜನಸಂಖ್ಯೆ ಮತ್ತು ಪ್ರಮುಖ ಸಾರಿಗೆ ಕಾರಿಡಾರ್ ಆಗಿರುವ ಕಾರಣದಿಂದಾಗಿ 1200ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ.

2 Min read
Author : Mahmad Rafik
Published : Oct 08 2025, 04:07 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತೀಯ ರೈಲ್ವೆ
Image Credit : Social Media

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ ಭಾರತೀಯರ ಜೀವನಾಡಿಯಾಗಿದೆ. ಎಲ್ಲಾ ವರ್ಗದವರ ನೆಚ್ಚಿನ ಸಾರಿಗೆಯಾಗಿರುವ ಭಾರತೀಯ ರೈಲ್ವೆ, ದೇಶದ ಬಹುತೇಕ ಎಲ್ಲಾ ಪ್ರಮುಖ ನಗರಗಳನ್ನು ಸಂಪರ್ಕಿಸಿದ ಕೀರ್ತಿಯನ್ನು ಹೊಂದಿದೆ. ದೂರದ ಪ್ರಯಾಣಕ್ಕೆ ಹೆಚ್ಚಿನ ಜನರು ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲಾ ರಾಜ್ಯಗಳು ರೈಲು ಮಾರ್ಗ ವಿಸ್ತರಣೆಗೆ ಆದ್ಯತೆ ನೀಡುತ್ತವೆ. ಇದಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ ಅನುದಾನದ ಬಿಡುಗಡೆಯಾಗುತ್ತದೆ.

26
ಆ ಪ್ರಶ್ನೆಗೆ ಉತ್ತರ
Image Credit : Social Media

ಆ ಪ್ರಶ್ನೆಗೆ ಉತ್ತರ

ಪ್ರತಿದಿನ ಕೋಟಿಗೂ ಅಧಿಕ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಎಲ್ಲಾ ರಾಜ್ಯಗಳು ಐಷಾರಾಮಿ ರೈಲು ನಿಲ್ದಾಣಗಳನ್ನು ಹೊಂದಿದೆ. ಜಂಕ್ಷನ್, ಸೆಂಟ್ರಲ್ ನಿಲ್ದಾಣಗಳಿಂದ ಅತಿಹೆಚ್ಚು ರೈಲುಗಳು ಪ್ರಯಾಣಿಸುತ್ತವೆ. ಹಾಗಾದ್ರೆ ಭಾರತದ ಯಾವ ರಾಜ್ಯ ಅತ್ಯಧಿಕ ರೈಲು ನಿಲ್ದಾಣಗಳನ್ನು ಹೊಂದಿದೆ ಎಂಬ ವಿಷಯ ನಿಮಗೆ ತಿಳಿದಿದೆಯಾ? ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

Related Articles

Related image1
ಇಲ್ಲಿ ಏಕಕಾಲದಲ್ಲಿ 2 ಜಿಲ್ಲೆಗಳಲ್ಲಿ ನಿಲುಗಡೆಯಾಗುತ್ತೆ ರೈಲು: ಭಾರತೀಯ ರೈಲ್ವೆಯ ವಿಶೇಷ ನಿಲ್ದಾಣ
Related image2
ಎಡವಟ್ಟಿನಿಂದ 1 ಕೋಟಿ ಕಳೆದುಕೊಂಡ ಭಾರತೀಯ ರೈಲ್ವೆ; ಟೋಪಿ ಬಿದ್ದಿದ್ದೇಗೆ?
36
ಉತ್ತರ ಪ್ರದೇಶ
Image Credit : Social Media

ಉತ್ತರ ಪ್ರದೇಶ

ಉತ್ತರ ಪ್ರದೇಶ ಸುಮಾರು 1200ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಉತ್ತರ ಪ್ರದೇಶ ಅತ್ಯಧಿಕ ರೈಲ್ವೆ ಜಾಲವನ್ನು ಹೊಂದಿದೆ. ರಾಜ್ಯದ ರಾಜಧಾನಿಯಿಂದ ನೂರಾರು ಕಿಲೋ ಮೀಟರ್ ದೂರದಲ್ಲಿರುವ ಉತ್ತರ ಪ್ರದೇಶದ ಹಳ್ಳಿಯನ್ನು ಭಾರತೀಯ ರೈಲ್ವೆ ಸಂಪರ್ಕಿಸಿದೆ.

46
ಉತ್ತರ ಪ್ರದೇಶಕ್ಕೆ ಯಾಕೆ ಹೆಚ್ಚು ರೈಲು ನಿಲ್ದಾಣಗಳು?
Image Credit : Social Media

ಉತ್ತರ ಪ್ರದೇಶಕ್ಕೆ ಯಾಕೆ ಹೆಚ್ಚು ರೈಲು ನಿಲ್ದಾಣಗಳು?

ಉತ್ತರ ಪ್ರದೇಶ ಭೌಗೋಳಿಕವಾಗಿ ದೊಡ್ಡ ರಾಜ್ಯವಾಗಿದೆ. ಇಲ್ಲಿಯ ಜನಸಂಖ್ಯೆಯೂ ಅಧಿಕವಾಗಿರುವ ಕಾರಣ ಹೆಚ್ಚಿನ ರೈಲು ನಿಲ್ದಾಣಗಳು ಬೇಕಾಗುತ್ತದೆ. ಈ ರಾಜ್ಯ ರೈಲು ಮಾರ್ಗದಲ್ಲಿ ದೇಶದ ನಾಲ್ಕು ದಿಕ್ಕುಗಳಿಗೆ ಕೊಂಡಿಯಾಗಿದೆ. ವಾರಣಾಸಿ, ಆಯೋಧ್ಯೆ ಮತ್ತು ಪ್ರಯಾಗ್‌ರಾಜ್‌ನಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿದ್ದು, ಪ್ರತಿದಿನ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

56
ಉತ್ತರ ಪ್ರದೇಶ ಪ್ರಮುಖ ಕಾರಿಡಾರ್
Image Credit : Getty

ಉತ್ತರ ಪ್ರದೇಶ ಪ್ರಮುಖ ಕಾರಿಡಾರ್

ಉತ್ತರ ಪ್ರದೇಶದ ದೇಶದ ಪಮುಖ ಕಾರಿಡಾರ್ ಆಗಿದ್ದು, ಭಾರತೀಯ ಪ್ರಮುಖ ಮಾರ್ಗಗಳು ಈ ರಾಜ್ಯದ ಮೂಲಕ ಹೋಗುತ್ತವೆ. ದೆಹಲಿ–ಹೌರಾ, ದೆಹಲಿ–ಮುಂಬೈ, ಮತ್ತು ದೆಹಲಿ–ಕೋಲ್ಕತ್ತಾದಂತಹ ಮಾರ್ಗಗಳು ಈ ರಾಜ್ಯದ ಮುಖೇನ ಹೋಗಬೇಕಾಗುತ್ತದೆ. ಉತ್ತರ ಪ್ರದೇಶ ರಾಜ್ಯ ಸರುಕು ಸಾಗಣೆಗೂ ಪ್ರಸಿದ್ಧಿಯಾಗಿದೆ. ಭಾರತದ ವ್ಯಾಪಾರ ಮತ್ತು ಸಾಂಸ್ಕೃತಿಕ ಚಲಿಸುವ ರಾಯಭಾರಿಯಾಗಿ ರೈಲ್ವೆ ಕೆಲಸ ಮಾಡುತ್ತದೆ.

ಇದನ್ನೂ ಓದಿ: ರೂಮ್‌ ಸಿಗದಿದ್ದಕ್ಕೆ ರೈಲನ್ನೇ Oyo ಮಾಡ್ಕೊಂಡ್ರು; ಎಲ್ಲರ ಮುಂದೆಯೇ ಜೋಡಿಯ ಅಸಹ್ಯ ಕೆಲಸ

66
ಉತ್ತರ ಪ್ರದೇಶದ ರೈಲ್ವೆ ಜಾಲದ ಕುರಿತು ಇನ್ನಷ್ಟು ಮಾಹಿತಿ
Image Credit : Indian Railways

ಉತ್ತರ ಪ್ರದೇಶದ ರೈಲ್ವೆ ಜಾಲದ ಕುರಿತು ಇನ್ನಷ್ಟು ಮಾಹಿತಿ

  • 1200ಕ್ಕೂ ಅಧಿಕ ರೈಲು ನಿಲ್ದಾಣಗಳು
  • ಉತ್ತರ ರೈಲ್ವೆ, ಈಶಾನ್ಯ ರೈಲ್ವೆ ಮತ್ತು ಉತ್ತರ ಮಧ್ಯ ರೈಲ್ವೆ (Northern Railway, North Eastern Railway, and North Central Railway) ಮೂರು ವಲಯಗಳನ್ನು ಹೊಂದಿದೆ.
  • ಗೊರಖ್‌ಪುರ ನಿಲ್ದಾಣ 1366 ಮೀಟರ್ ಉದ್ದದ ಪ್ಲಾಟ್‌ಫಾರಂ ಹೊಂದಿದೆ.
  • ಪ್ರತಿ ತಿಂಗಳು 2.5 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ.
  • ಕೃಷಿ ಉತ್ಪನ್ನ ಮತ್ತ ಕೈಗಾರಿಕಾ ಸರಕುಗಳನ್ನು ಸಾಗಣೆಯಲ್ಲಿ ಪ್ರಮುಖ ಪಾತ್ರ ಹೊಂದಿದೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲು: 30 ವರ್ಷಗಳ ಕಾಯುವಿಕೆಗೆ ತೆರೆ ಎಂದ ಸಂಸದ ತೇಜಸ್ವಿ ಸೂರ್ಯ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಉತ್ತರ ಪ್ರದೇಶ
ಭಾರತ ಸುದ್ದಿ
ಭಾರತೀಯ ರೈಲ್ವೆ

Latest Videos
Recommended Stories
Recommended image1
Masan Holi: ಕಾಶಿಯಲ್ಲಿ ನಡೆಯುತ್ತೆ ಚಿತಾ ಭಸ್ಮದ ಹೋಳಿ… ಈ ಸ್ಮಶಾನ ಹೋಳಿಯ ರಹಸ್ಯ ಏನು?
Recommended image2
ಇದು 'ಭಾರತದ ಪುಟ್ಟ ಇಂಗ್ಲೆಂಡ್', ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದೆ
Recommended image3
ಅಯ್ಯಯ್ಯೋ! ಬೆಂಗಳೂರು ಹೋಟೆಲ್‌ನಲ್ಲಿ ನನ್ ಚಿನ್ನದ ಸರ ಕದ್ದವ್ರೇ ಎಂದ ಯುವತಿ; ಅಸಲಿ ಸತ್ಯ ಬಿಚ್ಚಿಟ್ಟ ಸಿಬ್ಬಂದಿ!
Related Stories
Recommended image1
ಇಲ್ಲಿ ಏಕಕಾಲದಲ್ಲಿ 2 ಜಿಲ್ಲೆಗಳಲ್ಲಿ ನಿಲುಗಡೆಯಾಗುತ್ತೆ ರೈಲು: ಭಾರತೀಯ ರೈಲ್ವೆಯ ವಿಶೇಷ ನಿಲ್ದಾಣ
Recommended image2
ಎಡವಟ್ಟಿನಿಂದ 1 ಕೋಟಿ ಕಳೆದುಕೊಂಡ ಭಾರತೀಯ ರೈಲ್ವೆ; ಟೋಪಿ ಬಿದ್ದಿದ್ದೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved