- Home
- Entertainment
- TV Talk
- Amruthadhaare Serial: ಕರ್ಮ ಅಂದ್ರೆ ಇದೇ ಇರಬೇಕು; ಈ ರೀತಿ ಮಾತ್ರ ನೋಡೋಕೆ ಆಗ್ತಿಲ್ಲ ಎಂದ ವೀಕ್ಷಕರು!
Amruthadhaare Serial: ಕರ್ಮ ಅಂದ್ರೆ ಇದೇ ಇರಬೇಕು; ಈ ರೀತಿ ಮಾತ್ರ ನೋಡೋಕೆ ಆಗ್ತಿಲ್ಲ ಎಂದ ವೀಕ್ಷಕರು!
ಅಮೃತಧಾರೆ ಧಾರಾವಾಹಿ ಈಗ ಭರ್ಜರಿ ಟ್ವಿಸ್ಟ್ ಇರುವ ಎಪಿಸೋಡ್ ಪ್ರಸಾರ ಆಗ್ತಿದೆ. ಈ ಧಾರಾವಾಹಿಯಲ್ಲಿ ಭೂಮಿಗೆ ಆತ ತಾನೇ ಹುಟ್ಟಿದ ಹೆಣ್ಣು ಮಗಳನ್ನು, ಜಯದೇವ್ ಕದ್ದು, ಕಾಡಿನಲ್ಲಿ ಬಿಸಾಕಿದ್ದನು. ಈಗ ಅವನಿಗೆ ಮಗಳು ಸಿಕ್ಕಿದ್ದಾಳೆ. ಆದರೆ ಅವಳೇ ತನ್ನ ಮಗಳು ಎನ್ನೋದು ಅವನಿಗೆ ಅರಿವಾಗಿರಲಿಲ್ಲ.

ಮಗಳು ಸಿಕ್ಕಿದಳಾ?
ಮಲತಾಯಿ ಶಕುಂತಲಾಗೆ ಗೌತಮ್ ಎಲ್ಲ ಆಸ್ತಿಯನ್ನು ಬರೆದುಕೊಟ್ಟು ಈಗ ಸಾಮಾನ್ಯ ಕ್ಯಾಬ್ ಡ್ರೈವರ್ ಆಗಿ, ಮಾರುವೇಷ ಹಾಕಿಕೊಂಡು ಕೆಲಸ ಮಾಡುತ್ತಿದ್ದಾನೆ. ಒಮ್ಮೆ ಒಂದು ದಂಪತಿಯನ್ನು ಕ್ಯಾಬ್‌ನಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ ಡ್ರಾಪ್ ಮಾಡಬೇಕಿತ್ತು. ಆಗ ಆ ಕಾರ್‌ನಲ್ಲಿ ಮಹಿಳೆ ಒಂದು ಬ್ಯಾಗ್ ಬಿಟ್ಟು ಹೋಗಿದ್ದಳು. ಆ ಬ್ಯಾಗ್‌ನ್ನು ಕೊಡಬೇಕು ಅಂತ ಅವನು ಆ ಮನೆಗೆ ಹೋದ. ಅಲ್ಲಿಗೆ ಅವನಿಗೆ ಪುಟ್ಟ ಬಾಲಕಿ ಇರೋದು ಗೊತ್ತಾಗಿತ್ತು.
ಅನಾಥಾಶ್ರಮದಲ್ಲಿ ಇರಲು ಒಪ್ಪದ ಮಗು
ಪಾಲಕರು ಆ ಮಗುವನ್ನು ಬಿಟ್ಟು ಹೋದರು ಅಂತ ಪೊಲೀಸ್ ಠಾಣೆಗೆ ಬಂದು ಮಗುವನ್ನು ಒಪ್ಪಿಸಲು ನೋಡಿದ್ದಾನೆ. ಅಲ್ಲಿನ ಎಲ್ಲ ಕಾನೂನು ಪ್ರಕ್ರಿಯೆ ಮುಗಿಸಿ ಅನಾಥಾಶ್ರಮಕ್ಕೆ ಹೋಗಿದ್ದಾನೆ. ಅಲ್ಲಿ ಆ ಮಗುವನ್ನು ಬಿಡೋದು ಅವನ ಪ್ಲ್ಯಾನ್ ಆಗಿತ್ತು. ಆದರೆ ಆ ಮಗು ಮಾತ್ರ ಅಲ್ಲಿ ಇರೋಕೆ ರೆಡಿ ಆಗಲಿಲ್ಲ.
ಇದಪ್ಪಾ ದುರಂತ ಅಂದರೆ...
ಆ ಮಗು ಗೌತಮ್ ಜೊತೆಯೇ ಉಳಿದುಕೊಳ್ತೀನಿ ಎಂದು ಸಂಜ್ಞೆಯಲ್ಲಿ ಹೇಳಿದೆ. ಆ ಮಗುವೇ ಗೌತಮ್ ಮಗಳು ಎನ್ನೋ ಥರ ಧಾರಾವಾಹಿ ಪ್ರೋಮೋದಲ್ಲಿ ತೋರಿಸಲಾಗಿದೆ. ದುರಂತ ಎಂದರೆ ಈ ವಿಷಯ ಗೌತಮ್‌ಗಾಗಲೀ, ಆ ಮಗುವಿಗಾಗಲೇ ಗೊತ್ತೇ ಇಲ್ಲ.
ಈ ರೀತಿ ನೋಡೋಕೆ ಆಗ್ತಿಲ್ಲ
ಬೇರೆ ವಿಧಿ ಇಲ್ಲದೆ ಗೌತಮ್ ಆ ಹೆಣ್ಣು ಮಗುವನ್ನು ತನ್ನ ಜೊತೆ ಇಟ್ಟುಕೊಂಡು ಸಾಕಬಹುದು. ನಾಳೆ ಅವಳ ಪಾಲಕರು ಬಂದರೆ ಆ ಮಗುವನ್ನು ಕಳಿಸಿಕೊಡೋಣ ಎಂದುಕೊಂಡಿರಬಹುದು. ಇನ್ನೊಂದು ಕಡೆ ತನ್ನ ಮಗಳು ಎಲ್ಲಿ ಅಂತ ಗೌತಮ್ ಹುಡುಕಾಟ ಮಾಡುತ್ತಿದ್ದಾನೆ. ಆಮೇಲೆ ನನ್ನ ಮಗಳು, ಈಗ ನನ್ನ ಜೊತೆಗೆ ಇರುವ ಈ ಮಗಳು ಇಬ್ಬರೂ ಒಂದೇ ಎಂದು ಗೊತ್ತಾಗಬಹುದು. ಆ ಮಗುವಿಗೆ ತಂದೆ-ತಾಯಿ ಇವರೇ ಎನ್ನೋದು ಗೊತ್ತಿಲ್ಲ, ಗೌತಮ್‌ಗೂ ಕೂಡ ಆ ಮಗು ನನ್ನ ಮಗು ಎನ್ನೋದು ಗೊತ್ತಿಲ್ಲ. ಇದು ದುರಂತವೇ ಸರಿ.
ಪಾತ್ರಧಾರಿಗಳು
ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಸದಾಶಿವ ಪಾತ್ರದಲ್ಲಿ ಛಾಯಾ ಸಿಂಗ್ ನಟಿಸುತ್ತಿದ್ದಾರೆ.