Apoorva K Bhat Death: ಅಶೀಶ್‌ ಸರಡ್ಕ ಅವರ ಪತ್ನಿ ಅಪೂರ್ವ ಕೆ ಭಟ್‌ ಅವರು 32 ನೇ ವಯಸ್ಸಿಗೆ ನಿಧನರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ಅವರ ತಲೆಗೆ ಪೆಟ್ಟು ಬಿದ್ದಿತ್ತು. ಈಗ ಮೂರು ವರ್ಷದ ಮಗಳಿಗೆ ಏನು ಹೇಳೋದು ಎಂದು ಅವರು ಯೋಚನೆ ಮಾಡುತ್ತಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ಅಪೂರ್ವ ಕೆ ಭಟ್‌ ಎನ್ನುವ 32 ವರ್ಷದ ಯುವತಿ ಹೋಗುತ್ತಿದ್ದ ಕಾರ್‌ಗೆ ಬಸ್‌ ಬಂದು ಗುದ್ದಿತ್ತು. ಇದರ ಪರಿಣಾಮ ಅಪೂರ್ವ ಅವರು ಕಳೆದ ನಾಲ್ಕು ತಿಂಗಳಿನಿಂದ ಆಸ್ಪತ್ರೆಯ ಬೆಡ್‌ ಮೇಲಿದ್ದರು. ಅಪೂರ್ವ ನಿನ್ನೆ ಅಕ್ಟೋಬರ್‌ 7ರಂದು ಸಂಜೆ ಆರು ಗಂಟೆಗೆ ನಿಧನರಾಗಿದ್ದಾರೆ. ಅಪೂರ್ವ ಅವರಿಗೆ ಮೂರು ವರ್ಷದ ಮಗಳಿದ್ದಾಳೆ.

ಆಶೀಶ್‌ ಸರಡ್ಕ ಅವರು ಪತ್ನಿ ಬದುಕಲಿ ಎಂದು ಕಳೆದ ನಾಲ್ಕು ತಿಂಗಳಿನಿಂದ ಮಾಡದೇ ಇರೋ ಪೂಜೆ ಪುನಸ್ಕಾರಗಳಿಲ್ಲ, ನೀಡದಿರೋ ಚಿಕಿತ್ಸೆಗಳಿಲ್ಲ. ಹೀಗಿದ್ದರೂ ಅಪೂರ್ವ ಬದುಕಿನ ಜರ್ನಿ ಮುಗಿಸಿದರು. ಈಗ ಅಪೂರ್ವ ಇಲ್ಲ ಎಂದು ಮಗಳಿಗೆ ಹೇಗೆ ಹೇಳೋದು ಎನ್ನುವ ಚಿಂತೆಯಲ್ಲಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಆಶೀಶ್‌ ಸರಡ್ಕ ಹೇಳಿದ್ದೇನು?

ನಾನಿನ್ನೂ ಇಲ್ಲಿಯವರೆಗೆ ಮಗಳನ್ನು ನೋಡಿಲ್ಲ... ಅಮ್ಮಾ ಎಲ್ಲಿ ಅಂತ ಅವಳು ಕೇಳಿದ್ರೆ ಏನು ಹೇಳೋದು ಅಂತಾ ನಿನ್ನೆಯಿಂದ ಯೋಚನೆ ಮಾಡ್ತಾ ಇದ್ದೇನೆ.. ಅವಳ ಬಾಲ್ಯವನ್ನು ಸುಂದರವಾಗಿಸಿದ ಅಮ್ಮಾ ಇನ್ನಿಲ್ಲ ಅನ್ನುವುದು ಹೇಗೆ.. ಏನೂ ಆಗಿಲ್ಲ ಅಂತಾ ಹೇಳಿ ಮನೆಗೆ ಹೋದರೆ ಖಂಡಿತಾ ಸಾವಿರ ಪ್ರಶ್ನೆ ಮಾಡ್ತಾಳೆ..

ಅಮ್ಮಾ ಹುಷಾರಾಗಿ ಬಂದ ಮೇಲೆ ಅದು ಮಾಡುವಾ ಇದು ಮಾಡುವ ಅಂತಾ ನಾನು ಮನೆಗೆ ಹೋದಾಗಲೆಲ್ಲಾ ಏನೇನೊ ಹೇಳ್ತಾ ಇದ್ಲು.. ಅಪೂರ್ವ ಚೂರು ಸುಧಾರಿಸಿದ್ದಾಗ ಅವಳನ್ನು 2-3 ಬಾರಿ ಬಂದು ನೋಡಿದ್ದಾಳೆ ಅವಳು... ತಂದೆಯಾಗಿ ತಾಯಿಯಾಗಿ ನಿಲ್ಲೋಕೆ ನಾನು ಮಾನಸಿಕವಾಗಿ ತಯಾರಾಗುತ್ತಾ ಇದ್ದೇನೆ.. ಅಪೂರ್ವ ನನ್ನ ಕೈಯಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ ಅಂದರೆ ಆ ಮಗುವನ್ನು ನಾನು ಸರಿಯಾಗಿ ನೋಡಿಕೊಳ್ಳುವೆ ಅನ್ನುವ ನಂಬಿಕೆ ಇದ್ದ ಕಾರಣಕ್ಕೇ ಅದನ್ನು ಮಾಡಿದ್ದಾಳೆ ಅನ್ನೋದು ನನ್ನ ಭಾವನೆ.. ಅಪೂರ್ವನ ಒಂದಿಷ್ಟು principles ನನಗೆ ಗೊತ್ತಿದೆ.. ಅದನ್ನು ನಾನೂ ಅನುಸರಿಸಿ ಅವಳಿಗೊಂದು ಸುಂದರ ಬದುಕು ಕೊಡುವ ಪ್ರಯತ್ನ ಮಾಡ್ತೇನೆ..

ನಿನ್ನೆಯಿಂದ ಮತ್ತೆ ಮತ್ತೆ ಪುಣ್ಯಕೋಟಿಯ ಕಥೆ ನೆನಪಾಗ್ತಾ ಉಂಟು... ನಿಜ ಜೀವನದಲ್ಲಿ ಸಾಯೋದು ಛಂಡವ್ಯಾಘ್ರ ಅಲ್ಲಾ.. ಪುಣ್ಯಕೋಟಿಯೇ ಅನ್ನೋದು ಅರಿವಾಯ್ತು. ಇವತ್ತು ಅಪೂರ್ವಳನ್ನು ಬೀಳ್ಕೊಡುವ ದಿನ.. ಅದಕ್ಕೆ ಸರಿಯಾಗಿ ಇವತ್ತು ನನ್ನ ಮತ್ತು ಅವಳ ಎಂಗೇಜ್ಮೆಂಟ್ ಆಗಿ 6 ವರ್ಷ ... ಅವಳಿಗೆ 7 ಪ್ರೀತಿಯ ಸಂಖ್ಯೆ ಅಂತಾ ಕಾಣುತ್ತೆ.. ಹುಟ್ಟಿದ್ದು ಡಿಸೆಂಬರ್ 7 ಕ್ಕೆ .. ನಮ್ಮನ್ನು ಬಿಟ್ಟು ನಡೆದದ್ದು ಅಕ್ಟೋಬರ್ 7ಕ್ಕೆ ..

ಎಲ್ಲರೂ ನಮ್ಮನ್ನು ಒಂದು ದಿನ ಬಿಟ್ಟು ಹೋಗುವವರೇ.. ಆದರೆ ನಮ್ಮ ಪ್ರೀತಿಪಾತ್ರರು ಹಾಗೆ ಬಿಟ್ಟುಹೋದಾಗ adjust ಆಗೋಕೆ ತುಂಬಾ ಸಮಯ ಬೇಕಾಗುತ್ತೆ