3 ಕೋಟಿ ರೂ ರೇಂಜ್ ರೋವರ್ ಖರೀದಿಸಿದ ಬೆಂಗಳೂರಿನ ಶ್ರೀಮಂತ ಬಾರ್ಬರ್ ರಮೇಶ್ ಬಾಬು
3 ಕೋಟಿ ರೂ ರೇಂಜ್ ರೋವರ್ ಖರೀದಿಸಿದ ಬೆಂಗಳೂರಿನ ಶ್ರೀಮಂತ ಬಾರ್ಬರ್ ರಮೇಶ್ ಬಾಬು, ಬಾರ್ಬರ್ ವೃತ್ತಿ ಜೊತೆಗೆ ಲಕ್ಷುರಿ ಟ್ಯಾಕ್ಸಿ ಉದ್ಯಮ ನಡೆಸುತ್ತಿರುವ ರಮೇಶ್ ಬಾಬು ಬಳಿ ರೋಲ್ಸ್ ರಾಯ್ಸ್, ಮರ್ಸಿಡೀಸ್ ಸೇರಿದಂತೆ ಹಲವು ಹೆಚ್ಚು ಐಷಾರಾಮಿ ಕಾರುಗಳಿವೆ.
- FB
- TW
- Linkdin

ರಮೇಶ್ ಬಾಬು ಮನೆಗೆ ಹೊಸ ಅತಿಥಿ
ರಮೇಶ್ ಬಾಬು ಮನೆಗೆ ಹೊಸ ಅತಿಥಿ
ಬೆಂಗಳೂರಿನ ಬಾರ್ಬರ್ ರಮೇಶ್ ಬಾಬು ದೇಶದಲ್ಲೇ ಅತೀ ಜನಪ್ರಿಯ ಸೆಲೆಬ್ರೆಟಿ. ವೃತ್ತಿಯಲ್ಲಿ ಬಾರ್ಬರ್, ಆದರೆ ಬೆಂಗಳೂರಿನ ಶ್ರೀಮಂತರ ಪಟ್ಟಿಯಲ್ಲಿ ರಮೇಶ್ ಬಾಬು ಸ್ಥಾನ ಪಡೆದಿದ್ದಾರೆ. ರಮೇಶ್ ಬಾಬು ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪೈಕಿ ಲಕ್ಷುರಿ ಟೂರ್ಸ್ ಆ್ಯಂಡ್ ಟ್ರಾವಲ್ಸ್ ಕೂಡ ಒಂದು.ಇದೀಗ ತಮ್ಮ ಲಕ್ಷುರಿ ಕಾರು ಕಲೆಕ್ಷನ್‌ಗೆ ಮತ್ತೊಂದು ಕಾರು ಸೇರ್ಪಡೆಗೊಂಡಿದೆ. ಈ ಬಾರಿ ಬರೋಬ್ಬರಿ 3 ಕೋಟಿ ರೂಪಾಯಿ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ.
3.2 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ LWB
3.2 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ LWB
ರಮೇಶ್ ಬಾಬು ಈ ಬಾರಿ ರೇಂಜ್ ರೋವರ್ LWB ಕಾರು ವೇರಿಯೆಂಟ್ ಖರೀದಿಸಿದ್ದಾರೆ. ಇದರ ಬೆಲೆ 3.2 ಕೋಟಿ ರೂಪಾಯಿ. ಇದು 3.0 ಲೀಟರ್ D350 ಡೀಸೆಲ್ ಎಂಜಿನ್ ಕಾರು ಇದಾಗಿದೆ. 346 bhp ಪವರ್ ಹಾಗೂ 700 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.0-100 ಕಿ.ಮೀ ವೇಗವನ್ನು ಕೇವಲ 6.4 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. ಈ ಐಷಾರಾಮಿ ಕಾರನ್ನು ರಮೇಶ್ ಬಾಬು ಖರೀದಿಸಿದ್ದಾರೆ.
ರಮೇಶ್ ಬಾಬು ಟೂರ್ಸ್ ಆ್ಯಂಡ್ ಟ್ರಾವೆಲ್ಸ್
ರಮೇಶ್ ಬಾಬು ಟೂರ್ಸ್ ಆ್ಯಂಡ್ ಟ್ರಾವೆಲ್ಸ್
ರಮೇಶ್ ಬಾಬು ಟೂರ್ಸ್ ಆ್ಯಂಡ್ ಟ್ರಾವಲ್ಸ್ ಅಡಿಯಲ್ಲಿ ಎಲ್ಲಾ ಐಷಾರಾಮಿ ಕಾರುಗಳು ಬಾಡಿಗೆಗೆ ಲಭ್ಯವಿದೆ. ರೋಲ್ಸ್ ರಾಯ್ಸ್ ಘೋಸ್ಟ್, ಮರ್ಸಿಡೀಸ್ ಮೇಬ್ಯಾಕ್, ಮರ್ಸಿಡೀಸ್ ಬೆಂಜ್ ಜಿವ್ಯಾಗನ್, ರೇಂಜ್ ರೋವರ್, BMW ಸೇರಿದಂತೆ ಲಕ್ಷುರಿ ಕಾರುಗಳು ಲಭ್ಯವಿದೆ. ಇಷ್ಟೇ ಅಲ್ಲ ಬಸ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಲಭ್ಯವಿದೆ.
ರಮೇಶ್ ಬಾಬು ಸ್ಪೂರ್ತಿಯ ಕತೆ
ರಮೇಶ್ ಬಾಬು ಸ್ಪೂರ್ತಿಯ ಕತೆ
ರಮೇಶ್ ಬಾಬು ತಂದೆ ಬಾರ್ಬರ್ ಆಗಿ ವೃತ್ತಿ ಮಾಡುತ್ತಿದ್ದರು. ಆದರೆ ರಮೇಶ್ ಬಾಬು 7 ವರ್ಷವಿದ್ದಾರೆ ತಂದೆ ಮೃತಪಟ್ಟಿದ್ದರು. ಇತ್ತ ರಮೇಶ್ ಬಾಬು ತಾಯಿ ಹಲವು ಮನೆಯಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು. ಇತ್ತ ರಮೇಶ್ ಬಾಬು ಕೂಡ ಕೆಲಸ ಮಾಡಿಕೊಂಡು ಶಾಲೆ ಪೂರೈಸಿದ್ದರು. ಕಾಲೇಜು, ಉನ್ನತ ಶಿಕ್ಷಣ ಪಡೆಯಲು ರಮೇಶ್ ಬಾಬುಗೆ ಸಾಧ್ಯವಾಗಲಿಲ್ಲ.
ತಂದೆಯ ಬಾರ್ಬರ್ ವೃತ್ತಿ ಆಯ್ಕೆ ಮಾಡಿಕೊಂಡ ರಮೇಶ್ ಬಾಬು
ತಂದೆಯ ಬಾರ್ಬರ್ ವೃತ್ತಿ ಆಯ್ಕೆ ಮಾಡಿಕೊಂಡ ರಮೇಶ್ ಬಾಬು
ತಂದೆಯ ಬಾರ್ಬರ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ರಮೇಶ್ ಬಾಬು, ಕುಟುಂಬದ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡರು. ಬಾರ್ಬರ್ ವೃತ್ತಿಯಲ್ಲಿ ಉತ್ತಮ ಕೌಶಲ್ಯ ಹೊಂದಿದ್ದ ರಮೇಶ್ ಬಾಬು ಹಂತ ಹಂತವಾಗಿ ಬೆಳೆದಿದ್ದರು. ಉತ್ತಮ ಸಂಪಾದನೆ ಬರುತ್ತಿದ್ದಂತೆ ಸಾಲ ಮಾಡಿ ಮಾರುತಿ ಸುಜುಕಿ ಒಮ್ಮಿ ಕಾರು ಖರೀದಿಸಿದ್ದರು. ಬಳಿಕ ಆದಾಯ ಮೂಲಕ ವಿಸ್ತರಿಸಲು ಈ ಒಮ್ಮಿ ಕಾರನ್ನು ಬಾಡಿಗೆ ನೀಡಿದ್ದರು.
ಹಲವು ಕಾರುಗಳಿಗೆ ವಿಸ್ತರಣೆಗೊಂಡ ಟ್ರಾವೆಲ್ಸ್
ಹಲವು ಕಾರುಗಳಿಗೆ ವಿಸ್ತರಣೆಗೊಂಡ ಟ್ರಾವೆಲ್ಸ್
ರಮೇಶ್ ಬಾಬು ಒಮ್ಮಿ ಕಾರಿನಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಂತೆ ಉದ್ಯಮ ವಿಸ್ತರಿಸಲು ಮುಂದಾದರು. ಹೀಗಾಗಿ ರಮೇಶ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ದೊಡ್ಡ ಮಟ್ಟದಲ್ಲಿ ವಿಸ್ತರಣೆಗೊಂಡಿತತು. ಸಾಲ ಮಾಡಿಕೆಲ ಕಾರುಗಳನ್ನು ಖರೀದಿಸಿದರು. ಹಂತ ಹಂತವಾಗಿ ರೋಲ್ಸ್ ರಾಯ್ಸ್, ಮರ್ಸಿಡೀಸ್ ಸೇರಿದಂತೆ ದುಬಾರಿ ಕಾರುಗಳು ಸೇರಿಕೊಂಡಿತು. ರಮೇಶ್ ಬಾಬು ದೇಶಾದ್ಯಂತ ಸುದ್ದಿಯಾದರು. ಇದೀಗ ಉದ್ಯಮ ವಿಸ್ತರಣೆಯಾಗುತ್ತಲೇ ಸಾಗುತ್ತಿದೆ.