ಭಾರತದಲ್ಲಿ ಗೂಗಲ್‌ನಿಂದ ಹೊಸ ಯುಗ ಆರಂಭ: ಕಡಲತೀರ ನಗರದಲ್ಲಿ 88,730 ಕೋಟಿ ಹೂಡಿಕೆ
Google Investment India: ಗೂಗಲ್ ಭಾರತದಲ್ಲಿ ತನ್ನ ಅತಿದೊಡ್ಡ ಹೂಡಿಕೆಗೆ ಮುಂದಾಗಿದೆ. ಸುಮಾರು 88,730 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಡೇಟಾ ಸೆಂಟರ್ ಸ್ಥಾಪಿಸಲಿದ್ದು, ಇದು ರಾಜ್ಯದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ತಂತ್ರಜ್ಞಾನದಲ್ಲಿ ಭಾರತ ಅತಿದೊಡ್ಡ ಹೆಜ್ಜೆ
ತಂತ್ರಜ್ಞಾನದಲ್ಲಿ ಭಾರತ ಅತಿದೊಡ್ಡ ಹೆಜ್ಜೆಯನ್ನು ಇರಿಸುತ್ತಿದೆ. ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಕ್ಷಿಪ್ರವಾಗಿ ಬೆಳವಣಿಗೆಯಾಗುತ್ತಿದೆ. ಈಗ ಗೂಗಲ್ ಭಾರತದಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಮುಂದಾಗಿದೆ. ಅಮೆರಿಕದ ಬಳಿಕ ಆಂಧ್ರ ಪ್ರದೇಶದ ವಿಶಾಖಪಟ್ಟದಲ್ಲಿ ಅತಿದೊಡ್ಡ ಡೇಟಾ ಸೆಂಟರ್ ಆರಂಭಿಸೋದಾಗಿ ಘೋಷಿಸಿದೆ. ಗೂಗಲ್ ತೆಗೆದುಕೊಂಡಿರುವ ನಿರ್ಧಾರ ಹೊಸ ಉದ್ಯೋಗಳ ಸೃಷ್ಟಿಗೆ ಕಾರಣವಾಗಿದೆ.
ಗೂಗಲ್
ಆಂಧ್ರಪ್ರದೇಶ ಸರ್ಕಾರದ ಅಧಿಕೃತ ಹೇಳಿಕೆ ಪ್ರಕಾರ, ಗೂಗಲ್ 1 ಗಿಗಾವ್ಯಾಟ್ ಡೇಟಾ ಸೆಂಟರ್ ನಿರ್ಮಾಣಕ್ಕಾಗಿ 10 ಬಿಲಿಯನ್ ಯುಎಸ್ ಡಾಲರ್ (ಸುಮಾರು 88,730 ಕೋಟಿ ರೂ) ಹೂಡಿಕೆ ಮಾಡಲಿದೆ. ಗೂಗಲ್‌ನ ಈ ಹೂಡಿಕೆ ಡೇಟಾ ಸೇಫ್ಟಿ, ಕ್ಲೌಡ್ ಸರ್ವಿಸ್ ಮತ್ತು ಎಐ ಸೌಲಭ್ಯ ಬಳಕೆ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ರಾಜ್ಯ ಹೂಡಿಕೆ ಉತ್ತೇಜನ ಮಂಡಳಿಯ (SIPB) ಸಭೆ
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಹೂಡಿಕೆ ಉತ್ತೇಜನ ಮಂಡಳಿಯ (SIPB) ಸಭೆ ನಡೆದಿತ್ತು. ಈ ಸಭೆಯಲ್ಲಿ ₹1.14 ಲಕ್ಷ ಕೋಟಿ ಮೌಲ್ಯದ ಒಟ್ಟು 30 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ವಿವಿಧ ಯೋಜನೆಗಳಲ್ಲಿನ ಹೂಡಿಕೆ ಮಾಡಲಾಗುತ್ತಿದ್ದು, ರಾಜ್ಯದಲ್ಲಿ ಸುಮಾರು 67 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.
87,520 ಕೋಟಿ ರೂ.ಗಳ ಹೂಡಿಕೆ
ರೈಡೆನ್ ಇನ್ಫೋಟೆಕ್ ಡೇಟಾ ಸೆಂಟರ್‌ನ 87,520 ಕೋಟಿ ರೂ.ಗಳ ಹೂಡಿಕೆ ಪ್ರಸ್ತಾವನೆಯು ದೇಶದ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಎಂದು ಪರಿಗಣಿಸಲಾಗಿದೆ. SIPB ಯ 11 ಸಭೆಗಳಲ್ಲಿ ₹7 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ: JIO ಗ್ರಾಹಕರಿಗೆ ಭರ್ಜರಿ ಗುಡ್ನ್ಯೂಸ್: 449 ರೂ.ನಲ್ಲಿ ಮೂರು ನಂಬರ್ ಬಳಕೆಗೆ ಅವಕಾಶ! ಏನಿದು ಪ್ಲ್ಯಾನ್?
ಸಿಎಂ ಚಂದ್ರಬಾಬು ನಾಯ್ಡು
ಈ ಹೂಡಿಕೆಯ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ್ದು, ಕಳೆದ 15 ತಿಂಗಳಿನಿಂದ ಹೂಡಿಕೆದಾರರನ್ನು ಆಕರ್ಷಿಸಲು ಮಾಡಿದ ಎಲ್ಲಾ ಪ್ರಯತ್ನಗಳು ಫಲ ನೀಡುತ್ತಿವೆ. ದೊಡ್ಡ ಮೊತ್ತದ ಹೂಡಿಕೆ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ. ಇದು ರಾಜ್ಯದಲ್ಲಿನ ಆರ್ಥಿಕ ಬೆಳವಣಿಗೆಗೆ ಸಹಾಯವಾಗಲಿದೆ. ಪ್ರತಿಯೊಂದು ಯೋಜನೆಯ ಉಸ್ತುವಾರಿಗೆ ಸರ್ಕಾರದಿಂದ ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗುತ್ತಿದೆ. ಈ ವಿಶೇಷ ಅಧಿಕಾರಿಗಳು ಯೋಜನೆ ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರತನ್ ಟಾಟಾ ನಿಧನದ ಬಳಿಕ ಟಾಟಾ ಟ್ರಸ್ಟ್‌ನಲ್ಲಿ ಭಾರೀ ಬಿಕ್ಕಟ್ಟು, ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ!
ವಿಶಾಖಪಟ್ಟದಲ್ಲಿ ಗೂಗಲ್ ಡೇಟಾ ಸೆಂಟರ್
ವಿಶಾಖಪಟ್ಟದಲ್ಲಿ ಗೂಗಲ್ ಡೇಟಾ ಸೆಂಟರ್ ಆರಂಭಿಸಲು ಮುಂದಾಗಿರೋದು ರಾಜ್ಯ ಮತ್ತು ದೇಶದ ಡಿಜಿಟಲ್ ಯುಗಕ್ಕೆ ಹೊಸ ಮೈಲಿಗಲ್ಲಾಗಲಿದೆ. ವಿಶಾಖಪಟ್ಟಣಂದಲ್ಲಿ ನಿರ್ಮಾಣವಾಗುವ ಹೈಪರ್‌ಸ್ಕೇಲ್ ಡೇಟಾ ಸೆಂಟರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದೆ. ವಿಶಾಖಪಟ್ಟಣಂ ಜಾಗತೀಕ ಕೇಂದ್ರವಾಗಲಿದೆ.
ಇದನ್ನೂ ಓದಿ: ಸುಂಕ ಹೆಚ್ಚಿಸಿದ್ದ ಟ್ರಂಪ್‌ಗೆ ಆಘಾತ ಕೊಟ್ಟ ಅಮೆರಿಕದ ಕಂಪನಿ; ಇದು ಇಂಡಿಯಾಗೆ ಶುಭ ಸುದ್ದಿ!