Published : Apr 08, 2025, 06:55 AM ISTUpdated : Apr 08, 2025, 11:27 PM IST

Karnataka News Live: ಸ್ಟಾರ್ಟ್ಅಪ್ ಬಿಸ್ನೆಸ್ ಈಗ ಕಾರುಬಾರು, ಪಿಯೂಷ್ ಗೋಯೆಲ್ ವಿವಾದಿತ ಹೇಳಿಕೆ ಬೆಂಬಲಿಸಿದ ಸುಹೇಲ್ ಸೇಠ್

ಸಾರಾಂಶ

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವು ಮಂಗಳವಾರ ಮಧ್ಯಾಹ್ನ ಪ್ರಕಟಗೊಳ್ಳಲಿದೆ.  ಸಚಿವ ಮಧು ಬಂಗಾರಪ್ಪ ಮಲ್ಲೇಶ್ವರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿ ಮಧ್ಯಾಹ್ನ 12.30ಕ್ಕೆ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ನಂತರ 1.30ರ ವೇಳೆಗೆ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ (https://karresults.nic.in) ತಮ್ಮ ಫಲಿತಾಂಶ ವೀಕ್ಷಿಸಬಹುದು. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಗುವ ನಿರೀಕ್ಷೆಯಿದ್ದು, ಇನ್ನೊಂದು ವಾರದೊಪ್ಪತ್ತಿನಲ್ಲಿ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಕ್ಕೆ ಆಗಮಿಸುವ ಬಗ್ಗೆ ಗುಸು ಗುಸು ಕೇಳಿಬರುತ್ತಿದೆ. 

Karnataka News Live: ಸ್ಟಾರ್ಟ್ಅಪ್ ಬಿಸ್ನೆಸ್ ಈಗ ಕಾರುಬಾರು, ಪಿಯೂಷ್ ಗೋಯೆಲ್ ವಿವಾದಿತ ಹೇಳಿಕೆ ಬೆಂಬಲಿಸಿದ ಸುಹೇಲ್ ಸೇಠ್

11:27 PM (IST) Apr 08

ಸ್ಟಾರ್ಟ್ಅಪ್ ಬಿಸ್ನೆಸ್ ಈಗ ಕಾರುಬಾರು, ಪಿಯೂಷ್ ಗೋಯೆಲ್ ವಿವಾದಿತ ಹೇಳಿಕೆ ಬೆಂಬಲಿಸಿದ ಸುಹೇಲ್ ಸೇಠ್

ಸ್ಟಾರ್ಟ್ಅಪ್ ಬಿಸ್ನೆಸ್ ಕುರಿತು ಪಿಯೂಷ್ ಗೋಯಲ್ ನೀಡಿದ ವಿವಾದಿತ ಹೇಳಿಕೆಯನ್ನು ಸುಹೇಲ್ ಸೇಠ್ ಸಮರ್ಥಿಸಿದ್ದಾರೆ. ಅಷ್ಟಕ್ಕೂ ಸುಹೇಲ್ ಸೇಠ್ ಈ ಹೇಳಿಕೆ ಸಮರ್ಥಿಸಿದ್ದೇಕೆ? 

ಪೂರ್ತಿ ಓದಿ

10:09 PM (IST) Apr 08

ರಾಜ್ಯದ ಜನತೆಗೆ ನಿರಂತರ ದರ ಏರಿಕೆ ಶಾಕ್, ಈಗ ಖಾಸಗಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಫಿಕ್ಸ್

ಹಾಲಿನ ಬೆಲೆ ಏರಿಕೆ, ಡೀಸೆಲ್ ಮೇಲೆ ಸೆಸ್ ಏರಿಕೆ, ವಿದ್ಯುತ್ ದರ ಏರಿಕೆ, ಕಸದ, ಪಾರ್ಕಿಂಗ್ ಮೇಲೆ ಶುಲ್ಕ ಸೇರಿದಂತೆ ರಾಜ್ಯದಲ್ಲಿ ಜನರು ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಇದೀಗ ಖಾಸಗಿ ಬಸ್ ಟಿಕೆಟ್ ದರ ಏರಿಕೆಯಾಗುತ್ತಿದೆ.

ಪೂರ್ತಿ ಓದಿ

08:22 PM (IST) Apr 08

ಬಾಂಗ್ಲಾದೇಶದೊಂದಿಗೆ ಸ್ನೇಹ ಬೆಳೆಸಿ ಬೆನ್ನಿಗೆ ಚೂರಿ, ಇಡೀ ಸಮುದ್ರ ಸುತ್ತಿ ನಡು ನೀರಲ್ಲಿ ಕೈ ಬಿಟ್ಟ ಪಾಕ್!

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಪತನದ ನಂತರ ಬಾಂಗ್ಲಾ-ಪಾಕ್ ಸ್ನೇಹ ಸಂಬಂಧ ಹತ್ತಿರವಾಗಿತ್ತು. ಆದರೆ ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ನೀಡಿದ ಭರವಸೆಯನ್ನು ಈಡೇರಿಸದೆ, ನಡು ನೀರಿನಲ್ಲಿ ಕೈಬಿಟ್ಟಿದೆ.

ಪೂರ್ತಿ ಓದಿ

08:03 PM (IST) Apr 08

Breaking ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಆಸ್ಪತ್ರೆ ದಾಖಲು

ಕೇಂದ್ರ ಮಾಜಿ ಸಚಿವ, ಪಿ ಚಿದಂಬಂರ ಆರೋಗ್ಯದಲ್ಲಿ ಏರುಪೇರಾಗಿದೆ. ಕಾರ್ಯಕ್ರಮದಲ್ಲಿರುವಾಗಲೇ ಅಸ್ವಸ್ಥಗೊಂಡ ನಾಯಕ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಚಿದಂಬರಂ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ.

ಪೂರ್ತಿ ಓದಿ

07:58 PM (IST) Apr 08

ವಿಶ್ವಸಂಸ್ಥೆಯಲ್ಲಿ ನಡೆಯಲಿರುವ ಯೂತ್ ಫೋರಂ ಶೃಂಗಸಭೆಗೆ ಮಡಿಕೇರಿಯ ಯದೀಶ್ ಆಯ್ಕೆ!

ಮಡಿಕೇರಿಯ ಯದೀಶ್ ಕುಂಬಳತ್ತಿಲ್ ರಮೇಶ್ ಅವರು ಯುನೈಟೆಡ್ ನೇಷನ್ಸ್ ಯೂತ್ ಫೋರಂಗೆ ಭಾರತದಿಂದ ಆಯ್ಕೆಯಾಗಿದ್ದಾರೆ. 138 ದೇಶಗಳ ಪ್ರತಿನಿಧಿಗಳು ಭಾಗವಹಿಸುವ ಈ ಸಮಾವೇಶವು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

ಪೂರ್ತಿ ಓದಿ

07:45 PM (IST) Apr 08

ಭಾರತದ ವಾಯು ರಕ್ಷಣಾ ಬಲ ವರ್ಧಿಸಿದ ಮೂರು ಆಧುನಿಕ ಕ್ಷಿಪಣಿ ವ್ಯವಸ್ಥೆಗಳು

ಭಾರತೀಯ ಸೇನೆಯು ಮೂರು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಸೇರಿಸಿಕೊಳ್ಳುವ ಮೂಲಕ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಕ್ಷಿಪಣಿಗಳು ಭಾರತದಲ್ಲೇ ನಿರ್ಮಾಣವಾಗಿದ್ದು, ವೈಮಾನಿಕ ಅಪಾಯಗಳನ್ನು ತಡೆಯಲು ಸಮರ್ಥವಾಗಿವೆ.

ಪೂರ್ತಿ ಓದಿ

07:41 PM (IST) Apr 08

ಈ ರಾಜ್ಯದ ಕಾರಿನ ರಿಜಿಸ್ಟ್ರೇಶನ್ ನಂಬರ್ 45 ಲಕ್ಷ ರೂಗೆ ಹರಾಜು, ಈ ನಂಬರ್‌ನಲ್ಲಿ ಏನಿದೆ?

ಭಾರತದಲ್ಲಿ ವಾಹನಕ್ಕೆ ನಿಮಗಿಷ್ಟದ ನಂಬರ್ ಪಡೆಯಲು ಹರಾಜಿನ ಮೂಲಕ ಖರೀದಿಸಬೇಕು. ಇದೀಗ ಭಾರತದ ಅತೀ ಗರಿಷ್ಠ ಮೊತ್ತಕ್ಕೆ ಹರಾಜಾದ ನಂಬರ್ ಪ್ಲೇಟ್ ಅನ್ನೋ ಹೆಗ್ಗಳಿಕೆಗೆ ಈ ನಂಬರ್ ಪಾತ್ರವಾಗಿದೆ. ಈ ನಂಬರ್ ಯಾವ ರಾಜ್ಯದಲ್ಲಿ ಹರಾಜಾಗಿದೆ? ಈ ನಂಬರ್‌ನಲ್ಲಿ ಅಂತಾದ್ದೇನಿದೆ?

ಪೂರ್ತಿ ಓದಿ

07:34 PM (IST) Apr 08

ಟಾಪ್ 10 ಅತಿದೊಡ್ಡ ವಜ್ರದ ಗಣಿಗಳು: ಭಾರತದಲ್ಲಿ ಎಷ್ಟಿವೆ?

ವಿಶ್ವದ ಟಾಪ್ 10 ಅತಿದೊಡ್ಡ ವಜ್ರದ ಗಣಿಗಳ ಬಗ್ಗೆ ತಿಳಿಯಿರಿ. ರಷ್ಯಾದ ಐಖಲ್‌ನಿಂದ ಹಿಡಿದು ಕೆನಡಾದ ಏಕಾಟಿಯವರೆಗೆ, ಈ ಗಣಿಗಳು ವಜ್ರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭಾರತದಲ್ಲಿ ಗಣಿಗಳ ವಿವರ ಇಲ್ಲಿದೆ.

ಪೂರ್ತಿ ಓದಿ

07:28 PM (IST) Apr 08

'ಎಂಜಲು ತಾಕಿಸೋದಿಲ್ಲ..' ಮಲ್ಹಾರ್ ಮಾಂಸ ಎಂದರೇನು? ವಿವಾದ ಎಬ್ಬಿಸಿದ '100% ಹಿಂದೂ' ಮಟನ್!

ಮಹಾರಾಷ್ಟ್ರದಲ್ಲಿ 'ಮಲ್ಹಾರ್ ಪ್ರಮಾಣೀಕರಣ' ವಿವಾದ ಭುಗಿಲೆದ್ದಿದೆ. ಇದು 'ಜಟ್ಕಾ' ಮಾಂಸ ಮಾರಾಟ ಮಾಡುವ ಹಿಂದೂ ಅಂಗಡಿಗಳಿಗೆ ಮಾತ್ರ ನೀಡಲಾಗುವುದು. ಈ ಕ್ರಮವು ರಾಜಕೀಯ ಚರ್ಚೆಗೆ ಕಾರಣವಾಗಿದೆ, ವಿರೋಧ ಪಕ್ಷಗಳು ಸಮಾಜವನ್ನು ವಿಭಜಿಸುವ ಆರೋಪ ಮಾಡಿವೆ.

ಪೂರ್ತಿ ಓದಿ

07:26 PM (IST) Apr 08

ಬೆಂಗಳೂರು: ಇನ್ಫೋಸಿಸ್ ಉದ್ಯೋಗಿ, ಬೈಕ್ ಟ್ಯಾಕ್ಸಿ ಡ್ರೈವರ್ ಆದ ಕಥೆ!

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಬೈಕ್ ಟ್ಯಾಕ್ಸಿ ಬುಕ್ ಮಾಡಿದಾಗ ಇನ್ಫೋಸಿಸ್ ಉದ್ಯೋಗಿಯೊಬ್ಬರು ಡ್ರೈವರ್ ಆಗಿ ಬಂದಿದ್ದಾರೆ. ಹೆಚ್ಚುವರಿ ಹಣ ಗಳಿಸಲು ಮತ್ತು ಒಂಟಿತನ ಹೋಗಲಾಡಿಸಲು ಉದ್ಯೋಗಿ ಈ ರೀತಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ತಿ ಓದಿ

07:03 PM (IST) Apr 08

ವೆಜ್​ ಬಿರಿಯಾನಿಯಲ್ಲಿ ಸಿಕ್ಕಿದ್ದು ಚಿಕನ್​ ಪೀಸ್​! ಸಸ್ಯಾಹಾರಿಗೆ ಹಬ್ಬದ ದಿನವೇ ನಾನ್​ವೆಜ್​ ತಿನಿಸಿದ 'ಸ್ವಿಗ್ಗಿ'- ಬಂಧನ


ಹಬ್ಬದ ದಿನ ವೆಜ್​ ಬಿರಿಯಾನಿ ಆರ್ಡರ್​ ಮಾಡಿದ್ದ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ನಾನ್​ವೆಜ್​ ನೀಡಿರುವ ಘಟನೆ ನಡೆದಿದೆ. ರೆಸ್ಟೋರೆಂಟ್​ ಸಿಬ್ಬಂದಿ ಅರೆಸ್ಟ್​ ಆಗಿದ್ದಾನೆ. ಆಗಿದ್ದೇನು? 
 

ಪೂರ್ತಿ ಓದಿ

06:59 PM (IST) Apr 08

ವಿದ್ಯಾರ್ಥಿನಿಯರ ಕೋಣೆಗೆ ಕರೆಸುತ್ತಿದ್ದ ಕಾಲೇಜು ಉಪನ್ಯಾಸಕ, ವಿಡಿಯೋ ಹೊರಬಿದ್ದ ಬೆನ್ನಲ್ಲೇ ಅರೆಸ್ಟ್

ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಿ ಕೋಣೆಗೆ ಕರೆಸುತ್ತಿದ್ದ. ಹಲವು ವಿಡಿಯೋಗಳು ಬಹಿರಂಗವಾಗುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ. ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪೂರ್ತಿ ಓದಿ

06:54 PM (IST) Apr 08

ಹೋಮ್‌ ಲೋನ್‌ ಪಡೆದವರಿಗೆ ಸುಗ್ಗಿ, ಶೇ. 8ಕ್ಕಿಂತ ಕೆಳಗಿಳಿಯಲಿದೆ ಬಡ್ಡಿ!

ಆರ್‌ಬಿಐ ರೆಪೊ ದರ ಕಡಿತದ ನಿರೀಕ್ಷೆಯಿದ್ದು, ಗೃಹ ಸಾಲದ ಬಡ್ಡಿ ದರಗಳು ಶೇ.8ಕ್ಕೆ ಇಳಿಯುವ ಸಾಧ್ಯತೆ ಇದೆ. ವಿವಿಧ ಬ್ಯಾಂಕುಗಳ ಗೃಹ ಸಾಲದ ಬಡ್ಡಿ ದರಗಳ ವಿವರ ಇಲ್ಲಿದೆ.

ಪೂರ್ತಿ ಓದಿ

06:31 PM (IST) Apr 08

AAI ನೇಮಕಾತಿ 2025: ಬೆಂಗಳೂರು ಏರ್ಪೋರ್ಟ್‌ನಲ್ಲಿ 309 ಜೂ. ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪದವೀಧರರು ಆನ್‌ಲೈನ್ ಮೂಲಕ ಏಪ್ರಿಲ್ 25, 2025 ರೊಳಗೆ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ

06:11 PM (IST) Apr 08

ಭಾರತದ ಈ ಗ್ರಾಮದ ಜನರಿಗೆ ಹೆಸ್ರೇ ಇಲ್ಲ! ಹಾಡು, ಶಿಳ್ಳೆಗಳಿಂದಲೇ ಸಂವಹನ... ವಿಚಿತ್ರ ಊರಿನ ವಿಡಿಯೋ ನೋಡಿ...

ಮೇಘಾಲಯದಲ್ಲಿರುವ ಗ್ರಾಮವೊಂದರಲ್ಲಿ ನೆಲೆಸಿರುವ ಬುಡಕಟ್ಟು ಜನರು ಹೆಸರಿನ ಬದಲು ಹಾಡು, ಶಿಳ್ಳೆಗಳಿಂದಲೇ ಸಂವಹನ ನಡೆಸುತ್ತಾರೆ. ವಿಚಿತ್ರ ಎನಿಸುವ ಪದ್ಧತಿಯ ವಿಡಿಯೋ ವೈರಲ್​ ಆಗಿದೆ. 
 

ಪೂರ್ತಿ ಓದಿ

06:07 PM (IST) Apr 08

ಯುದ್ಧಕಾಂಡ ಸಿನಿಮಾಗಾಗಿ ಪ್ರೀತಿಯ BMW ಮಾರಿದ ಅಜಯ್‌ ರಾವ್‌, ಕಾರ್‌ನ ಮುಂದೆ ನಿಂತು ಬಿಕ್ಕಳಿಸಿ ಅತ್ತ ಮಗಳು ಚೆರಿಷ್ಮಾ!

ನಟ ಅಜಯ್ ರಾವ್ ಅಭಿನಯದ ಯುದ್ಧಕಾಂಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ನಿರ್ಮಾಣಕ್ಕಾಗಿ ಅಜಯ್ ರಾವ್ ತಮ್ಮ BMW ಕಾರನ್ನು ಮಾರಾಟ ಮಾಡಿದ್ದು, ಮಗಳು ಚೆರಿಷ್ಮಾ ಕಾರ್ ಬಿಟ್ಟುಕೊಡಲು ನಿರಾಕರಿಸಿದ ವಿಡಿಯೋ ವೈರಲ್ ಆಗಿದೆ.

ಪೂರ್ತಿ ಓದಿ

05:55 PM (IST) Apr 08

ಈ ಸಲ ಕಪ್ ಆರ್‌ಸಿಬಿದೇ; ಬೆಂಗಳೂರು ಆರ್ಭಟ ನೋಡಿ ಉಲ್ಟಾ ಹೊಡೆದ ರಾಯುಡು!

ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಅಂಬಟಿ ರಾಯುಡು ಆರ್‌ಸಿಬಿ ಈ ಬಾರಿ ಐಪಿಎಲ್ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಪೂರ್ತಿ ಓದಿ

05:50 PM (IST) Apr 08

ಉದ್ವಿಘ್ನತೆ ನಡುವೆ ಕೊನೆಗೂ ಅಮೆರಿಕ ಇರಾನ್ ಪರಮಾಣು ಮಾತುಕತೆ, ಮಹತ್ವದ ಘೋಷಣೆ

ಅಮೆರಿಕ ಹಾಗೂ ಇರಾನ್ ನಡುವಿನ ವೈಮನಸ್ಸು ಹೆಚ್ಚಾಗುತ್ತಿದ್ದಂತೆ ಹಲವು ಸುತ್ತಿನ ಮಾತುಕಗಳು ಮುರಿದು ಬಿದ್ದಿತ್ತು. ಹೀಗಾಗಿ ಪರಮಾಣು ಆತಂಕ, ಯುದ್ಧ ಭೀತಿ ಹೆಚ್ಚಾಗಿತ್ತು. ಇದೀಗ ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಇರಾನ್ ಮಾತುಕತೆಗೆ ಒಪ್ಪಿದೆ. 

ಪೂರ್ತಿ ಓದಿ

05:36 PM (IST) Apr 08

ಅಮೆರಿಕ ಏರ್ಪೋರ್ಟ್‌ನಲ್ಲಿ ಭಾರತೀಯ ಮಹಿಳಾ ಉದ್ಯಮಿಗೆ ಅಧಿಕಾರಿಗಳ ಕಿರುಕುಳ 8 ಗಂಟೆ ಬಂಧನ! ಕಾರಣ ಇದು

ಭಾರತೀಯ ಉದ್ಯಮಿ ಶ್ರುತಿ ಚತುರ್ವೇದಿ ಅವರನ್ನು ಅಮೆರಿಕದ ವಿಮಾನ ನಿಲ್ದಾಣದಲ್ಲಿ 8 ಗಂಟೆಗಳ ಕಾಲ ಬಂಧಿಸಿ ಅವಮಾನಿಸಲಾಗಿದೆ. ಪವರ್ ಬ್ಯಾಂಕ್ ನೆಪದಲ್ಲಿ ಎಫ್‌ಬಿಐ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪೂರ್ತಿ ಓದಿ

05:31 PM (IST) Apr 08

ನನ್ನ ತಂಗಿಯದ್ದು ಆತ್ಮಹತ್ಯೆಯಲ್ಲ, ಕೊಲೆ: ಬಾಹರ್‌ ಆಸ್ಮಾ ಸಹೋದರಿ ಸಂಕಟ!

ಬೆಂಗಳೂರಿನಲ್ಲಿ ಪತಿಯ ಅನೈತಿಕ ಸಂಬಂಧದಿಂದ ಬೇಸತ್ತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಪೋಷಕರು ಇದು ಕೊಲೆ ಎಂದು ಆರೋಪಿಸಿದ್ದಾರೆ, ಪತಿ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದನೆಂದು ಹೇಳಿದ್ದಾರೆ.

ಪೂರ್ತಿ ಓದಿ

05:00 PM (IST) Apr 08

ಆಂಕರ್ ಅನುಶ್ರೀ ನಿರೂಪಣೆ ಸಂಬಳವನ್ನೇ ಮೀರಿಸುತ್ತಾ ಯೂಟ್ಯೂಬ್ ಆದಾಯ? ಲೆಕ್ಕಾಚಾರ ಬಿಚ್ಚಿಟ್ಟ ಪ್ರಶಾಂತ್!

ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನೆಲ್‌ನಿಂದ ಎಷ್ಟು ಆದಾಯ ಗಳಿಸುತ್ತಾರೆ? ಅವರ ವಿಡಿಯೋಗಳ ವೀಕ್ಷಣೆ ಮತ್ತು ಗಳಿಕೆಯ ವಿವರ ಇಲ್ಲಿದೆ. ಆಂಕರಿಂಗ್ ಸಂಬಳವನ್ನೇ ಮೀರಿಸುತ್ತಾ ಯೂಟೂಬ್ ಆದಾಯ ನೀವೇ ನೋಡಿ..

ಪೂರ್ತಿ ಓದಿ

04:51 PM (IST) Apr 08

ಸಣ್ಣ ಜ್ವರಕ್ಕೆ 82 ಲಕ್ಷ ಬಿಲ್‌: ಮಗಳ ನೋಡಲು ಕೆನಡಾಗೆ ಹೋಗಿದ್ದ ಮಹಿಳೆಗೆ ಆಘಾತ

ವಿದೇಶಕ್ಕೆ ಹೋಗಿದ್ದ ವ್ಯಕ್ತಿಗೆ ಅಲ್ಲಿ ಕೇವಲ ಜ್ವರ ಬಂದ ಕಾರಣಕ್ಕೆ 88 ಲಕ್ಷ ರೂಪಾಯಿ ಆಸ್ಪತ್ರೆ ಬಿಲ್ ಭರಿಸಬೇಕಾದಂತಹ ಸ್ಥಿತಿ ನಿರ್ಮಾಣವಾದಂತಹ ಘಟನೆ ನಡೆದಿದೆ.

ಪೂರ್ತಿ ಓದಿ

04:49 PM (IST) Apr 08

ಕ್ಲೀನರ್​ ನೆಲ ಒರೆಸೋ ಸ್ಟೈಲ್​ಗೆ ಎಂಬಿಬಿಎಸ್​ ವೈದ್ಯೆ ಫಿದಾ-ಅದ್ಧೂರಿ ಮದ್ವೆ: ಕುತೂಹಲದ ಲವ್​ಸ್ಟೋರಿ ಕೇಳಿ...

ಎಂಬಿಬಿಎಸ್​ ಪದವೀಧರೆ ವೈದ್ಯೆಯೊಬ್ಬಳು, ತಮ್ಮದೇ ಆಸ್ಪತ್ರೆಯಲ್ಲಿ ನೆಲ ಒರೆಸುವ ಕ್ಲೀನರ್​ ಸ್ಟೈಲ್​ಗೆ ಫಿದಾ ಆಗಿ ಮದುವೆಯಾಗಿರುವ ಕುತೂಹಲದ ಲವ್​ ಸ್ಟೋರಿ ಇದು...
 

ಪೂರ್ತಿ ಓದಿ

04:32 PM (IST) Apr 08

ಟೀಮ್‌ ಇಂಡಿಯಾ , RCB ಮಾಜಿ ಪ್ಲೇಯರ್‌, ಚೆನ್ನೈ ತಂಡದಲ್ಲಿ ಧೋನಿ ಫೇವರಿಟ್‌ ಆಟಗಾರ ಬಿಜೆಪಿಗೆ ಸೇರ್ಪಡೆ!

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಕೇದಾರ್ ಜಾಧವ್ ಬಿಜೆಪಿಗೆ ಸೇರಿದ್ದಾರೆ. ಮಹಾರಾಷ್ಟ್ರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಅವರು ಪಕ್ಷದ ಬಾವುಟ ಹಿಡಿದಿದ್ದಾರೆ. ಈ ಮೂಲಕ ಕ್ರಿಕೆಟ್ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದ್ದಾರೆ.

ಪೂರ್ತಿ ಓದಿ

04:27 PM (IST) Apr 08

ಮಲೈಕಾ ಅರೋರಾಗೆ ಶಾಕ್, ನಟಿ ವಿರುದ್ದ ವಾರೆಂಟ್ ಹೊರಡಿಸಿದ ಮುಂಬೈ ಕೋರ್ಟ್

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಮುಂಬೈ ಕೋರ್ಟ್ ಶಾಕ್ ನೀಡಿದೆ. ನಟಿ ವಿರುದ್ಧ ಕೋರ್ಟ್ ವಾರೆಂಟ್ ಹೊರಡಿಸಿದೆ. ಅಷ್ಟಕ್ಕೂ ಮಲೈಕಾ ಅರೋರಾಗೆ ಕೋರ್ಟ್ ವಾರೆಂಟ್ ಕೊಟ್ಟಿದ್ದೇಕೆ?

ಪೂರ್ತಿ ಓದಿ

03:58 PM (IST) Apr 08

ಮುದ್ದಿನ ಮಗಳ ಕೊಂದ ಪಾಪಿಗೆ ಗುಂಡಿಕ್ಕಿ ಕೊಂದು ಸುದ್ದಿಯಾಗಿದ್ದ ಕೇರಳದ ಶಂಕರನಾರಾಯಣನ್‌ ನಿಧನ

ಕೇರಳದಲ್ಲಿ ಮಗಳ ಹಂತಕನನ್ನು ಕೊಂದ ತಂದೆ ಶಂಕರನಾರಾಯಣನ್‌ ನಿಧನರಾಗಿದ್ದಾರೆ. 24 ವರ್ಷಗಳ ಹಿಂದೆ ನಡೆದ ಕೃಷ್ಣಪ್ರಿಯ ಕೊಲೆ ಪ್ರಕರಣದಲ್ಲಿ ಆರೋಪಿಯನ್ನು ತಂದೆಯೇ ಕೊಂದಿದ್ದರು.

ಪೂರ್ತಿ ಓದಿ

03:36 PM (IST) Apr 08

ದೇಶದಾದ್ಯಂತ ಶೀಘ್ರ ಗ್ಯಾಸ್ ಸಿಲಿಂಡರ್ ಬೆಲೆ ₹500ಕ್ಕೆ ಇಳಿಕೆ; ಮಾಜಿ ಸಂಸದ ಪ್ರತಾಪ್ ಸಿಂಹ

ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆ ಮಾಡಿದೆ ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಪೈಪ್ ಡು ಗ್ಯಾಸ್ ಅಳವಡಿಸಿದರೆ ಗ್ಯಾಸ್ ಬೆಲೆ ಇಳಿಕೆಯಾಗುತ್ತದೆ ಎಂದರು. ಡಿಸಿ ಅರೇಬಿಕ್ ಶಾಲೆಗೆ ಅನುಮತಿ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪೂರ್ತಿ ಓದಿ

03:34 PM (IST) Apr 08

ಮನಾಲಿಯಲ್ಲಿ ಆಜ್ ಕಿ ರಾತ್, ನವ ಜೋಡಿಯ ರೋಮ್ಯಾಂಟಿಕ್ ಹನಿಮೂನ್ ವಿಡಿಯೋ ವೈರಲ್

ಮದುವೆಯಾದ ನವ ಜೋಡಿಯ ರೋಮ್ಯಾಂಟಿಕ್ ಹನಿಮೂನ್ ವಿಡಿಯೋ ಒಂದು ವೈರಲ್ ಆಗಿದೆ. ಕ್ಯಾಂಡಲ್‌ಲೈಟ್ ಡಿನ್ನರ್, ಶಾಂಪೇನ್, ಕೇಕ್, ಸಿಂಗರಿಸಿದ ಬೆಡ್ ಸೇರಿದಂತೆ ಕೆಲ ಪ್ರಮುಖ ವಿಚಾರಗಳು ಈ ವಿಡಿಯೋದಲ್ಲಿದೆ.
 

ಪೂರ್ತಿ ಓದಿ

03:32 PM (IST) Apr 08

ಭಾರತಕ್ಕೆ ತಹವ್ವೂರ್ ರಾಣಾ ಹಸ್ತಾಂತರ ಪಕ್ಕಾ, ಮೇಲ್ಮನವಿ ಅರ್ಜಿ ತಿರಸ್ಕರಿಸಿದ ಅಮೆರಿಕ ಸುಪ್ರೀಂ ಕೋರ್ಟ್‌

2008ರ ಮುಂಬೈ ದಾಳಿಯ ಆರೋಪಿ ತಹಾವೂರ್ ಹುಸೇನ್ ರಾಣಾ ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯುವಂತೆ ಕೋರಿದ್ದ ಅರ್ಜಿಯನ್ನು ಯುಎಸ್ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈತನನ್ನು ಭಾರತಕ್ಕೆ ಗಡೀಪಾರು ಮಾಡದಂತೆ ರಾಣಾ ಅರ್ಜಿ ಸಲ್ಲಿಸಿದ್ದ.

ಪೂರ್ತಿ ಓದಿ

03:28 PM (IST) Apr 08

ಇದು ಬಿಹಾರ ಮಾದರಿ..ಉದ್ಘಾಟನೆಯಾದ ಮರುದಿನವೇ ಕೆಲಸ ನಿಲ್ಲಿಸಿದ 40 ಲಕ್ಷ ವೆಚ್ಚದ ಕ್ಲಾಕ್‌ ಟವರ್‌!

ಬಿಹಾರದ ಬಿಹಾರ್ ಶರೀಫ್‌ನಲ್ಲಿ ಹೊಸ ಗಡಿಯಾರ ಗೋಪುರ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಸ್ಥಗಿತಗೊಂಡಿದೆ. ಕಳಪೆ ವಿನ್ಯಾಸ ಮತ್ತು ದುಬಾರಿ ವೆಚ್ಚದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದು ಭ್ರಷ್ಟಾಚಾರದ ಸಂಕೇತವೆಂದು ಟೀಕಿಸಿದ್ದಾರೆ.

ಪೂರ್ತಿ ಓದಿ

02:55 PM (IST) Apr 08

ಮುಜುಗರ,ಭಯದಿಂದಲೇ ಕಿಸ್ ಮಾಡಿದ್ದ ಈ ಜೋಡಿ, ಸಿನಿಮಾ ಸೂಪರ್ ಹಿಟ್ ಆಗಿ ದಾಖಲೆ ಗಳಿಕೆ

ಕಿಸ್ಸಿಂಗ್ ಸೀನ್ ಮಾಡಲಲು ಇಬ್ಬರಿಗೂ ತೀವ್ರ ಮುಜುಗರ. ಹೀರೋ ಹಾಗೂ ಹೀರೋಯಿನ್ ಇಬ್ಬರೂ ಈ ದೃಶ್ಯ ಬೇಡವೇ ಬೇಡ ಎಂದಿದ್ದಾರೆ. ಆದರೆ ನಿರ್ದೇಶಕರು ಬಿಡಲೇ ಇಲ್ಲ. ಕೊನೆಗೂ ಕಿಸ್ಸಿಂಗ್ ಸೀನ್ ಮಾಡಿದ ನಾಯಕ-ನಾಯಕಿಗೆ ಇದು ಸಿನಿಮಾ ಇತಿಹಾಸದ ಅತ್ಯಂತ ಕೆಟ್ಟ ಕಿಸ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಇದೇ ಕಿಸ್ಸಿಂಗ್ ಸೀನ್ ಸಿನಿ ರಸಿಕರನ್ನು ರಂಜಿಸಿ ಸಿನಿಮಾ ಸೂಪರ್ ಹಿಟ್ ಆಗುವಂತೆ ಮಾಡಿತ್ತು.

ಪೂರ್ತಿ ಓದಿ

02:34 PM (IST) Apr 08

ಅಲ್ಲು ಅರ್ಜುನ್ @43: ಐಷಾರಾಮಿ ಕಾರು ಕಲೆಕ್ಷನ್‌ನಲ್ಲಿ ಸಲ್ಮಾನ್, ಶಾರುಖ್ ಲೆಕ್ಕಕ್ಕೇ ಇಲ್ಲ!

ದಕ್ಷಿಣ ಭಾರತೀಯ ನಟ ಅಲ್ಲು ಅರ್ಜುನ್ 43ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರ ಬಳಿ ದುಬಾರಿ ವ್ಯಾನಿಟಿ ವ್ಯಾನ್ ಮತ್ತು ರೇಂಜ್ ರೋವರ್, ರೋಲ್ಸ್ ರಾಯ್ಸ್ ಸೇರಿದಂತೆ ಐಷಾರಾಮಿ ಕಾರುಗಳಿವೆ.

ಪೂರ್ತಿ ಓದಿ

02:25 PM (IST) Apr 08

ರೇಣುಕಾಸ್ವಾಮಿ ಮರ್ಡರ್‌ ಕೇಸ್‌: ಆರೋಪಿ ದರ್ಶನ್‌ಗೆ ನ್ಯಾಯಾಲಯದ ಖಡಕ್‌ ಎಚ್ಚರಿಕೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಕೋರ್ಟ್‌ಗೆ ಗೈರಾದ ಹಿನ್ನೆಲೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ದರ್ಶನ್‌ಗೆ ಎಚ್ಚರಿಕೆ ನೀಡಲಾಗಿದೆ. ಮೇ 20ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಪೂರ್ತಿ ಓದಿ

02:17 PM (IST) Apr 08

ಥೈ ಹಾಡಿಗೆ ಸರ್ಕಾರಿ ಶಾಲೆಯ ಮಕ್ಕಳು ಮಾಡಿದ ಡಾನ್ಸ್ ಈಗ ಸಖತ್ ವೈರಲ್

ತಮಿಳುನಾಡಿನ ಶಾಲೆಯೊಂದರ ಮಕ್ಕಳು ಥಾಯ್ ಹಾಡಿಗೆ ಡಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಥ ಗೊತ್ತಿಲ್ಲದಿದ್ದರೂ ಈ ಹಾಡಿಗೆ ಮಕ್ಕಳು ಸೊಗಸಾಗಿ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆದಿದೆ.

ಪೂರ್ತಿ ಓದಿ

01:24 PM (IST) Apr 08

ಮುಂದಿನ ತಿಂಗಳು ಅಯೋಧ್ಯೆಯ ರಾಜನಾಗಿ ಶ್ರೀರಾಮನ ಪಟ್ಟಾಭಿಷೇಕ!

ಅಯೋಧ್ಯೆಯ ರಾಮ ಮಂದಿರದಲ್ಲಿ ಶೀಘ್ರದಲ್ಲೇ ಶ್ರೀರಾಮನ ಪಟ್ಟಾಭಿಷೇಕ ನಡೆಯಲಿದೆ. ದೇವಾಲಯದ ಮೊದಲ ಮಹಡಿಯಲ್ಲಿ ರಾಮ ದರ್ಬಾರ್ ಸ್ಥಾಪನೆಯ ನಂತರ ಈ ಸಮಾರಂಭ ನಡೆಯಲಿದೆ. ದೇವಾಲಯದ ನಿರ್ಮಾಣ ಕಾರ್ಯವು ಏಪ್ರಿಲ್ 15 ರ ಸುಮಾರಿಗೆ ಪೂರ್ಣಗೊಳ್ಳಲಿದೆ.

ಪೂರ್ತಿ ಓದಿ

12:59 PM (IST) Apr 08

ದೇಶದ ಪ್ರಥಮ ಪ್ರತ್ಯೇಕ ಸೈಬರ್ ತನಿಖಾ ಘಟಕ ರಾಜ್ಯದಲ್ಲಿ ಶುರು: ರಾಜ್ಯ ಸರ್ಕಾರ ಚಾಲನೆ

ಸೈಬರ್‌ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಗೂ ಆ ಪ್ರಕರಣಗಳ ತನಿಖೆ ಸಲುವಾಗಿ ಪ್ರತ್ಯೇಕವಾಗಿ ಸ್ಥಾಪಿಸಿರುವ ಸೈಬರ್‌ತನಿಖಾ ಘಟಕಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. 

ಪೂರ್ತಿ ಓದಿ

12:58 PM (IST) Apr 08

ಲವರ್‌ ಸಾಹಿಲ್‌ ಜೊತೆ ಸೇರಿ ಗಂಡನನ್ನು ಕೊಂದು ಡ್ರಮ್‌ನಲ್ಲಿ ಹಾಕಿದ್ದ ಮುಸ್ಕಾನ್‌ ಈಗ ಗರ್ಭಿಣಿ!

ಉತ್ತರ ಪ್ರದೇಶದ ಮೀರತ್‌ನಲ್ಲಿ ಪತಿ ಸೌರಭ್ ರಜಪೂತ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮುಸ್ಕಾನ್ ರಸ್ತೋಗಿ ಗರ್ಭಿಣಿ ಎಂದು ತಿಳಿದುಬಂದಿದೆ. ಆಕೆಯ ಪರೀಕ್ಷಾ ಫಲಿತಾಂಶ ಸೋಮವಾರ ದೃಢಪಟ್ಟಿದೆ. ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದಳು.

ಪೂರ್ತಿ ಓದಿ

12:53 PM (IST) Apr 08

Breaking: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಈ ವರ್ಷ 73%, ಬಾಲಕಿಯರೇ ಮೇಲುಗೈ!

2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇಕಡಾ 81.15 ಫಲಿತಾಂಶ ಬಂದಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶವನ್ನು karresults.nic.in ಮತ್ತು kseab.karnataka.gov.in ನಲ್ಲಿ ನೋಡಬಹುದು.

ಪೂರ್ತಿ ಓದಿ

12:51 PM (IST) Apr 08

ಸರ್ಕಾರಿ ಕೆಲಸ ಹುಡುಕುತ್ತಿರುವಿರಾ? 10ನೇ ಕ್ಲಾಸ್​ ಪಾಸಾದ್ರೂ ರೈಲ್ವೆಯಲ್ಲಿ 1007 ಉದ್ಯೋಗ-ಡಿಟೇಲ್ಸ್​ ಇಲ್ಲಿದೆ..

ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ಇಲಾಖೆ ಗುಡ್​ನ್ಯೂಸ್​​ ಕೊಟ್ಟಿದೆ. 1007 ಹುದ್ದೆಗಳಿಗೆ ಎಸ್​ಎಸ್​ಎಸ್​ಸಿ ಸೇರಿದಂತೆ ವಿವಿಧ ಶೈಕ್ಷಣಿಕ ಅರ್ಹತೆಗಳಿಗೆ ಅರ್ಜಿ ಕರೆದಿದೆ. ಡಿಟೇಲ್ಸ್​ ಇಲ್ಲಿದೆ... 
 

ಪೂರ್ತಿ ಓದಿ

12:50 PM (IST) Apr 08

ಪತ್ನಿ ಪರಮಸುಂದರಿಯಾಗಿದ್ದರೂ, ಪರ ಯುವತಿ ಮೇಲೆ ಗಂಡನ ಸಲ್ಲಾಪ; ಪ್ರಾಣ ಬಿಟ್ಟ ಹೆಂಡತಿ!

ಬೆಂಗಳೂರಿನಲ್ಲಿ ಗಂಡನ ಅನೈತಿಕ ಸಂಬಂಧದಿಂದ ಬೇಸತ್ತ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೆಬ್ಬಾಳದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೂರ್ತಿ ಓದಿ

More Trending News