2008ರ ಮುಂಬೈ ದಾಳಿಯ ಆರೋಪಿ ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ಕೋರಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ರಾಣಾ, ಭಾರತದ ಜೈಲಿನಲ್ಲಿ ಕಿರುಕುಳದ ಭಯದಿಂದ ಹಸ್ತಾಂತರವನ್ನು ವಿರೋಧಿಸಿದ್ದ. ಈ ಹಿಂದೆ ಅಮೆರಿಕದ ನ್ಯಾಯಾಲಯವು ಹಸ್ತಾಂತರ ಅರ್ಜಿಯನ್ನು ತಿರಸ್ಕರಿಸಿತ್ತು. ರಾಣಾ, ಮುಂಬೈ ದಾಳಿಯ ಸಂಚುಕೋರನೆಂದು ಆರೋಪಿಸಲ್ಪಟ್ಟಿದ್ದು, ಪ್ರಸ್ತುತ ಲಾಸ್ ಏಂಜಲೀಸ್‌ನ ಬಂಧನ ಕೇಂದ್ರದಲ್ಲಿದ್ದಾನೆ.
2008 ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹಾವೂರ್ ಹುಸೇನ್ ರಾಣಾ ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಒಂದು ವೇಳೆ ನನ್ನನ್ನು ಭಾರತಕ್ಕೆ ಗಡೀಪಾರು ಮಾಡಿದರೆ, ನಾನು ಪಾಕಿಸ್ತಾನದ ಮೂಲದ ಮುಸ್ಲಿಂ ಎಂದು ನನಗೆ ಜೈಲಲ್ಲಿ ಹಿಂಸಾತ್ಮಕ ಕಿರುಕುಳ ನೀಡುವ ಸಾಧ್ಯತೆ ಇದೆ. ಇದರಿಂದ ನನ್ನ ಸಾವು ಸಂಭವಿಸಬಹುದು. ಹೀಗಾಗಿ ನನ್ನನ್ನು ಭಾರತಕ್ಕೆ ಗಡೀಪಾರು ಮಾಡಬೇಡಿ ಎಂದು ಹುಸೇನ್ ರಾಣಾ ಅರ್ಜಿ ಸಲ್ಲಿಸಿದ್ದ. ಕಳೆದ ತಿಂಗಳು ಅಮೆರಿಕದ ಉನ್ನತ ನ್ಯಾಯಾಲಯವು ರಾಣಾ ಹಸ್ತಾಂತರದ ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಈಗ ಯುಸ್ ಸುಪ್ರೀಂ ಕೋರ್ಟ್ ಅರ್ಜಿ ತಿರಸ್ಕರಿಸಿ ಭಾರತಕ್ಕೆ ಒಪ್ಪಿಸುವುದಕ್ಕೆ ಅಸ್ತು ಎಂದಿದೆ. 2008ರ ಮುಂಬೈ ಸರಣಿ ಸ್ಫೋಟ ಪ್ರಕರಣದ ರೂವಾರಿ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ 64 ವರ್ಷದ ತಹವ್ವುರ್ ರಾಣಾ ಪ್ರಸ್ತುತ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿದ್ದಾನೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸದ ವೇಳೆ ಭೇಟಿಯಾದ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ರಾಣಾನ ಹಸ್ತಾಂತರಕ್ಕೆ ಅನುಮೋದನೆ ನೀಡಿದ್ದರು. ಯುಸ್ ಸುಪ್ರೀಂ ಕೋರ್ಟ್ ಕೂಡ ಹಸ್ತಾಂತರಕ್ಕೆ ಆದೇಶ ನೀಡಿತ್ತು.
26/11ರ ದಾಳಿ ರೂವಾರಿ ರಾಣಾ ಹಸ್ತಾಂತರಕ್ಕೆ ಮೋದಿಗೆ ಮಾತು ಕೊಟ್ಟ ಟ್ರಂಪ್, ಯಾರು ಈ ಟೆರರ್?
ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ರಾಣಾನನ್ನ ಗಡೀಪಾರು, ಅಮೆರಿಕದ ಕಾನೂನು ಮತ್ತು ಕಿರುಕುಳದ ವಿರುದ್ಧದ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಲಿದೆ. ಏಕೆಂದರೆ ನಾನು ಪಾಕಿಸ್ತಾನಿ ಮೂಲದ ಮುಸ್ಲಿಂ. ಜೊತೆಗೆ ಪಾಕ್ ಸೇನೆಯಲ್ಲೂ ಕಾರ್ಯನಿರ್ವಹಿಸಿದ್ದೆ. ಈ ವಿಷಯಗಳು ಭಾರತದ ಜೈಲುಗಳಲ್ಲಿ ನಮ್ಮ ಮೇಲೆ ಹಿಂಸಾತ್ಮಕ ಕಿರುಕುಳಕ್ಕೆ ಕಾರಣವಾಗಬಹುದು. ಅದು ನನ್ನ ಸಾವಿಗೂ ಕಾರಣವಾಗಬಹುದು ಎಂಬುದಕ್ಕೆ ಹಲವು ಕಾರಣವಿದೆ ಎಂದಿದ್ದ, ಆದರೆ ಈಗ ಸುಪ್ರೀಂ ಕೋರ್ಟ್ ರಾಣಾ ಹಸ್ತಾಂತರಕ್ಕೆ ಒಪ್ಪಿದೆ. 1997 ರಲ್ಲಿ ಎರಡೂ ದೇಶಗಳು ಸಹಿ ಹಾಕಿದ ಭಾರತ-ಅಮೆರಿಕ ಹಸ್ತಾಂತರ ಒಪ್ಪಂದದ ಆಧಾರದ ಮೇಲೆ ರಾಣಾ ಅವರನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ.
ಪಾಕಿಸ್ತಾನದಲ್ಲಿ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆ ವಿದ್ಯಾಭ್ಯಾಸ ಮಾಡುತ್ತಿದ್ದಾಗ ನಡೆಸಿದ ದಾಳಿಗಳಿಗೆ ಬೇಹುಗಾರಿಕೆಗೆ ಸಹಾಯ ಮಾಡಿದ ಮತ್ತು ಭಯೋತ್ಪಾದಕ ಪಿತೂರಿಯಲ್ಲಿ ಭಾಗವಹಿಸಿದ ಆರೋಪಗಳನ್ನು ರಾಣಾ ಎದುರಿಸುತ್ತಿದ್ದಾನೆ. 26/11 ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಅದೇ ವರ್ಷ ಡ್ಯಾನಿಶ್ ಪತ್ರಿಕೆ ಜಿಲ್ಯಾಂಡ್ಸ್ ಪೋಸ್ಟೆನ್ ಮೇಲಿನ ವಿಫಲ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಆತ ಅಕ್ಟೋಬರ್ 2009 ರಲ್ಲಿ ಚಿಕಾಗೋದಲ್ಲಿ ಬಂಧಿಸಲಾಯಿತು.
ಆತಂಕದ ಬೆನ್ನಲ್ಲೇ ಭಾರತಕ್ಕೆ ಗುಡ್ ನ್ಯೂಸ್ ಕೊಟ್ಟ ಅಮೆರಿಕ ಸುಪ್ರೀಂ ಕೋರ್ಟ್
ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರಾಣಾ
ಇನ್ನು ರಾಣಾ ಮೂತ್ರಕೋಶದ ಕ್ಯಾನ್ಸರ್, ಮೂತ್ರಕೋಶದ ಸಮಸ್ಯೆ, ಅಸ್ತಮಾ, ಕೋವಿಡ್ ಸೇರಿದಂತೆ ವಿವಿಧ ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ರಾಣಾ, 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಲಷ್ಕರ್-ಎ-ತೊಯ್ದಾದ ಡೇವಿಡ್ ಹೆಡ್ಲಿಯೊಂದಿಗೆ ಸಂಬಂಧವನ್ನು ಹೊಂದಿದ್ದಾನೆ ಎನ್ನುವ ಆರೋಪ ಎದುರಿಸುತ್ತಿದ್ದಾನೆ.
1961 ರಲ್ಲಿ ಪಾಕಿಸ್ತಾನದಲ್ಲಿ ಜನಿಸಿದ ರಾಣಾ, 1997 ರಲ್ಲಿ ಕೆನಡಾಕ್ಕೆ ವಲಸೆ ಹೋಗಿ ವಲಸೆ ಸಲಹಾ ವ್ಯವಹಾರವನ್ನು ಸ್ಥಾಪಿಸುವ ಮೊದಲು ಮಿಲಿಟರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ. 2001 ರಲ್ಲಿ ಕೆನಡಾದ ಪೌರತ್ವವನ್ನು ಪಡೆದು ನಂತರ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಚಿಕಾಗೋಗೆ ತೆರಳಿದ. 2009 ರಲ್ಲಿ, ಡ್ಯಾನಿಶ್ ಪತ್ರಿಕೆಯ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಕ್ಕಾಗಿ ಮತ್ತು ಲಷ್ಕರ್-ಎ-ತೈಬಾಗೆ ವಸ್ತು ಬೆಂಬಲವನ್ನು ಒದಗಿಸಿದ್ದಕ್ಕಾಗಿ ಅವರನ್ನು ಅಮೆರಿಕದಲ್ಲಿ ಬಂಧಿಸಲಾಯಿತು.
