ಬಿಹಾರದ ಬಿಹಾರ್ ಶರೀಫ್‌ನಲ್ಲಿ ಹೊಸ ಗಡಿಯಾರ ಗೋಪುರ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಸ್ಥಗಿತಗೊಂಡಿದೆ. ಕಳಪೆ ವಿನ್ಯಾಸ ಮತ್ತು ದುಬಾರಿ ವೆಚ್ಚದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದು ಭ್ರಷ್ಟಾಚಾರದ ಸಂಕೇತವೆಂದು ಟೀಕಿಸಿದ್ದಾರೆ.

ನವದೆಹಲಿ (ಏ.8): ಬಿಹಾರದ ಬಿಹಾರ್ ಶರೀಫ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಗಡಿಯಾರ ಗೋಪುರ ಉದ್ಘಾಟನೆ ಆದ ಒಂದೇ ದಿನಕ್ಕೆ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಬಿಹಾರದ ಅವಸ್ಥೆಗೆ ಹಿಡಿದ ಕನ್ನಡಿ ಎನ್ನುವಂತೆ ಟ್ರೋಲ್‌ ಮಾಡಲಾಗುತ್ತದೆ. ಸಾಮಾನ್ಯ ಮೆಟ್ರೋ ಪಿಲ್ಲರ್‌ ಮೇಲೆ ಗಡಿಯಾರ ಇಟ್ಟಂತೆ ಕಾಣುವ ಈ ಗೋಪುರಕ್ಕೆ 40 ಲಕ್ಷ ವೆಚ್ಚವಾಗಿದನ್ನೂ ಕೇಳಿ ಹೌಹಾರಿದ್ದಾರೆ. ಈ ಕ್ಲಾಕ್‌ ಟವರ್‌ನ ವಿನ್ಯಾಸ ಮತ್ತು ಕಾರ್ಯಕ್ರಮತೆ ಎರಡೂ ಕೂಡ ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಫೋಟೋ ವೈರಲ್‌, ಸಾರ್ವಜನಿಕರ ಆಕ್ರೋಶ: ಎಕ್ಸ್‌ನಲ್ಲಿ ಕ್ಲಾಕ್‌ ಟವರ್‌ನ ಚಿತ್ರಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಅದರೊಂದಿಗೆ ಕ್ಲಾಕ್‌ ಟವರ್‌ ಅಲ್ಲ ಇದು ಬರೀ ಬೋಳು ಗೋಪುರ ಇದಕ್ಕೆ 40 ಲಕ್ಷ ಖರ್ಚು ಮಾಡಿದ್ದಾರೆ ಎಂದರೆ ಅಚ್ಚರಿಯಾಗದೇ ಇರದು. ಸಾರ್ವಜನಿಕರ ತೆರಿಗೆ ಹಣ ಯಾವ ರೀತಿಯಲ್ಲಿ ಪೋಲಾಗುತ್ತಿದೆ ಅನ್ನೋದಕ್ಕೆ ಇದೇ ಉದಾಹರಣೆ. ಕ್ಲಾಕ್‌ ಟವರ್‌ಗೆ ಮಾಡಿರುವ ಅಷ್ಟೂ ಖರ್ಚುಗಳು ವ್ಯರ್ಥ ಎಂದು ಹೇಳಿದ್ದಾರೆ.

ಗಡಿಯಾರವು ಕಾರ್ಯನಿರ್ವಹಿಸಲು ಪ್ರಾರಂಭಿಸಿದ 24 ಗಂಟೆಗಳ ಒಳಗೆ ಅದು ಕೆಲಸ ಮಾಡುವುದನ್ನು ನಿಲ್ಲಿಸಿರುವುದನ್ನು ಜನರು ಗಮನಿಸಿದಾಗ ವಿವಾದ ಮತ್ತಷ್ಟು ಹೆಚ್ಚಾಯಿತು. ಇದು ಬಿಹಾರದ ಕ್ಲಾಕ್‌ ಟವರ್‌. ದಿನಕ್ಕೆ ಎರಡು ಬಾರಿ ಮಾತ್ರವೇ ಇದು ಸರಿಯಾದ ಸಮಯ ತೋರಿಸುತ್ತದೆ ಎಂದ ಲೇವಡಿ ಮಾಡಿದ್ದಾರೆ.

ಕಳ್ಳತನ, ಕೆಟ್ಟ ಡಿಸೈನ್‌ಗೆ ಟೀಕೆ: ಗೋಪುರದ ಒಳಗಿನಿಂದ ಕಳ್ಳರು ತಾಮ್ರದ ಕೇಬಲ್‌ಗಳನ್ನು ಕದ್ದ ನಂತರ ಗಡಿಯಾರವು ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚಿನವರಿಗೆ ಈ ಕ್ಲಾಕ್‌ ಟವರ್‌ನ ಡಿಸೈನ್‌ ಬಗ್ಗೆಯೇ ಅಸಮಾಧಾನ ಉಂಟಾಗಿದೆ.

ಯೂಸರ್‌ಗಳು ಹಂಚಿಕೊಂಡಿದ್ದ ಫೋಟೋಗಳಲ್ಲಿ, ಒರಟು ಕಾಂಕ್ರೀಟ್ ಅಂಚುಗಳು, ವಿವರವಾದ ವಿನ್ಯಾಸದ ಕೊರತೆ ಮತ್ತು ಬರೀ ಬಿಳಿ ಬಣ್ಣವನ್ನು ಬಡಿದ ಗೋಪುರ ಕಂಡಿದೆ. ಇನ್ನೂ ಕೆಲವರು ಕ್ಲಾಕ್‌ ಟವರ್‌ನ ಹೇಗೆ ವಿನ್ಯಾಸ ಮಾಡಬೇಕಿತ್ತು ಅನ್ನೋದರ ಪ್ಲಾನ್‌ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಪ್ಲ್ಯಾನ್‌ಗಿಂತ ತುಂಬಾ ಭಿನ್ನವಾಗಿ ಕ್ಲಾಕ್‌ ಟವರ್‌ ನಿರ್ಮಾಣವಾಗಿದೆ.

 "'ಸ್ಮಾರ್ಟ್ ಸಿಟಿ' ಯೋಜನೆಯಡಿಯಲ್ಲಿ ನಿರ್ಮಿಸಲಾದ ಬಿಹಾರ ಶರೀಫ್‌ನಲ್ಲಿರುವ ಈ ಕಳಪೆ ಬಣ್ಣ ಬಳಿದ, ಕಳಪೆಯಾಗಿ ಪೂರ್ಣಗೊಂಡ ಕಾಂಕ್ರೀಟ್ ಗಡಿಯಾರ ಗೋಪುರವು ಉದ್ಘಾಟನೆಯಾದ 24 ಗಂಟೆಗಳಲ್ಲಿ ತನ್ನ ಕೆಲಸ ನಿಲ್ಲಿಸಿತು. ವೆಚ್ಚ ಎಷ್ಟು ಎಂದು ಊಹಿಸಿ? ಕೇವಲ 40 ಲಕ್ಷ ರೂ!" ಎಂದು ಎಕ್ಸ್‌ನಲ್ಲಿ ಯೂಸರ್‌ ಒಬ್ಬರು ಬರೆದಿದ್ದಾರೆ.

ಆಯುಕ್ತರ ವಿರುದ್ಧ ಟೀಕೆ: ಬಿಹಾರ ಶರೀಫ್ ಪುರಸಭೆ ಆಯುಕ್ತ ದೀಪಕ್ ಕುಮಾರ್ ಮಿಶ್ರಾ ಅವರನ್ನು ಹಲವು ಪೋಸ್ಟ್‌ಗಳಲ್ಲಿ ಟ್ಯಾಗ್‌ ಮಾಡಲಾಗಿದ್ದು, ಇಂಥ ಅದ್ಭುತವಾದ ಕ್ಲಾಕ್‌ ಟವರ್‌ ನಿರ್ಮಾಣ ಮಾಡಿದ್ದಕ್ಕೆ ಧನ್ಯವಾದ ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ವಕ್ಫ್‌ಗೆ ಬೆಂಬಲಿಸೋದಾ ಬೇಡ್ವಾ? ಕಾಂಗ್ರೆಸ್ ಕಾರ್ಯಕರ್ತರಲ್ಲೇ ಗೊಂದಲ: ರಾಹುಲ್ ಭೇಟಿ ಬೆನ್ನಲೇ ಹೊಡೆದಾಟ

ಆಯುಕ್ತರಿಂದ ಸ್ಪಷ್ಟನೆ: ಟೀಕೆಗಳು ವ್ಯಕ್ತವಾದ ಬೆನ್ನಲ್ಲಿಯೇ ದೀಪಕ್‌ ಕುಮಾರ್‌ ಮಿಶ್ರಾ, ಈ ಕ್ಲಾಕ್‌ ಟವರ್‌ ಇನ್ನೂ ಉದ್ಘಾಟನೆಯಾಗಿಲ್ಲ ಎಂದು ತಿಳಿಸಿದ್ದಾರೆ. ಸಿಎಂ ನಿತೀಶ್‌ ಕಮಾರ್‌ ಅವರ ಪ್ರಗತಿ ಯಾತ್ರೆ ಸಮಯಕ್ಕೆ ತುರ್ತಾಗಿ ಅನಾವರಣ ಮಾಡಲಾಗಿದೆ. ಅಪರಿಚಿತ ವ್ಯಕ್ತಿಗಳು ವಿದ್ಯುತ್ ಕೇಬಲ್ ಅನ್ನು ಕದ್ದ ನಂತರ ಟವರ್ ಕಾರ್ಯನಿರ್ವಹಿಸಲಿಲ್ಲ ಎಂದು ಅವರು ಹೇಳಿದರು. ಕ್ಲಾಕ್‌ ಟವರ್‌ ಕೆಲಸ ಮಾಡಲು ದುರಸ್ತಿ ಕಾರ್ಯದ ಅಗತ್ಯವಿದೆ ಎಂದಿದ್ದಾರೆ.

ಬಂಗಾರದ ನಿಧಿ ಸಿಕ್ಕರೆ ಭಾರತ ಶ್ರೀಮಂತ ದೇಶ ಕಣ್ರೀ; ಬ್ರಿಟಿಷರಿಗೂ ಟಕ್ಕರ್ ಕೊಟ್ಟ ಗುಹೆ

ವೆಚ್ಚದ ಬಗ್ಗೆ ಅವರು ಸ್ಪಷ್ಟಪಡಿಸಿದ್ದು, ದೊಡ್ಡ ನಾಲಾ ರಸ್ತೆ ಯೋಜನೆಯ ಭಾಗವಾಗಿರುವ ಗಡಿಯಾರ ಗೋಪುರವನ್ನು ಒಳಗೊಂಡಿರುವ ಇಡೀ ಯೋಜನೆಗೆ ಆನ್‌ಲೈನ್‌ನಲ್ಲಿ ಹೇಳಿಕೊಂಡಂತೆ 40 ಲಕ್ಷ ರೂ.ಗಳಲ್ಲ, 20 ಲಕ್ಷ ರೂ.ಗಳ ಅಂದಾಜು ವೆಚ್ಚವಾಗಿದೆ. "ಯೋಜನೆಯ ಉಳಿದ ಭಾಗಗಳ ಜೊತೆಗೆ ಗಡಿಯಾರ ಗೋಪುರದ ನಿರ್ಮಾಣವೂ ಪೂರ್ಣಗೊಳ್ಳುತ್ತದೆ" ಎಂದು ಅವರು ಹೇಳಿದ್ದಾರೆ.

Scroll to load tweet…