ತಮಿಳುನಾಡಿನ ಶಾಲೆಯೊಂದರ ಮಕ್ಕಳು ಥಾಯ್ ಹಾಡಿಗೆ ಡಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಥ ಗೊತ್ತಿಲ್ಲದಿದ್ದರೂ ಈ ಹಾಡಿಗೆ ಮಕ್ಕಳು ಸೊಗಸಾಗಿ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾರು ಹೇಗೆ ವೈರಲ್ ಆಗ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಸೋಶಿಯಲ್ ಮೀಡಿಯಾಗಿರುವ ಪ್ರಭಾವ ಅಂತಹದ್ದು, ಅದೇ ರೀತಿ ಈಗ ಪುಟ್ಟ ಮಕ್ಕಳ ಡಾನ್ಸೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಹಾಡಿಗೆ ತಮಿಳುನಾಡಿನ ಸರ್ಕಾರಿ ಶಾಲೆಯೊಂದರ ಮಕ್ಕಳು ಮಾಡಿರುವ ಡಾನ್ಸ್ ವೀಡಿಯೋವೊಂದು ಈಗ ಸಖತ್ ವೈರಲ್ ಆಗಿ ಲಕ್ಷಾಂತರ ಜನ ಆ ವೀಡಿಯೋವನ್ನು ವೀಕ್ಷಿಸಿದ್ದಾರೆ. ಶಾಲೆಯ ಯುನಿಫಾರ್ಮ್‌ ತೊಟ್ಟ ಪುಟ್ಟ ಮಕ್ಕಳು ಈ ಹಾಡಿಗೆ ಸೊಗಸಾಗಿ ಹೆಜ್ಜೆ ಹಾಕಿದ್ದಾರೆ. ಆ ಹಾಡು ಯಾವುದು ಅಂತೀರಾ ಅದೇ ಥೈಲ್ಯಾಂಡ್ ಮೂಲದ 'ಅನಾನಾ ಪಾತಿಯಾ ಆಪಾತಾ ಕೇಟಿಯಾ' ಎಂಬ ಹಾಡು ಇದಾಗಿದೆ. ಬಹುತೇಕರಿಗೆ ಈ ಹಾಡಿನ ಅರ್ಥವೇ ಗೊತ್ತಿಲ್ಲ, ಆದರೂ ಈ ಹಾಡಿಗೆ ಬಹುತೇಕ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹೆಜ್ಜೆ ಹಾಕಿದ್ದು, ಥೈ ಮೂಲದ ಈ ಹಾಡನ್ನು ಜಗದ್ವಿಖ್ಯಾತಗೊಳಿಸಿದೆ. 

ಅಂದಹಾಗೆ ಈ ಹಾಡಿಗೆ ಸರ್ಕಾರಿ ಶಾಲಾ ಮಕ್ಕಳು ಮಾಡಿದ ಡಾನ್ಸ್‌ನ ವೀಡಿಯೋವನ್ನು ಶಿಕ್ಷಕಿಯೊಬ್ಬರು ಶೇರ್ ಮಾಡಿದ್ದಾರೆ. ತಮಿಳುನಾಡಿನ ತೆರ್ಕಮೂರ್‌ ಬಳಿಯ ಮೇಲೂರು ಪಂಚಾಯತ್‌ ಯೂನಿಯನ್‌ ಕಿಂಡರ್‌ಗಟನ್ ಹಾಗೂ ಮಾಧ್ಯಮಿಕ ಶಾಲೆಯ ಮಕ್ಕಳು ಈ ಹಾಡಿಗೆ ತಮಗೆ ತಿಳಿದಂತೆ ಮುದ್ದಾಗಿ ಡಾನ್ಸ್ ಮಾಡಿದ್ದು, ಶಿಕ್ಷಕಿ ಈ ಮುದ್ದು ಮಕ್ಕಳ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ವೀಡಿಯೋದಲ್ಲಿ ಓರ್ವ ಬಾಲಕ ಮಧ್ಯೆ ನಿಂತಿದ್ದರೆ, ಆತನ ಅಕ್ಕಪಕ್ಕ ಹಾಗೂ ಹಿಂದೆ ಇತರ ಪುಟ್ಟ ಬಾಲಕಿಯರು ಕ್ರಮವಾಗಿ ನಿಂತು ಈ ಹಾಡನ್ನು ಹಾಡುತ್ತಾ ಹೆಜ್ಜೆ ಹಾಕಿದ್ದಾರೆ. ಈ ಥೈಲ್ಯಾಂಡ್ ಹಾಡು ಅನಾನ ಪಾತಿಯಾ ಅಪಾತ ಕೇತಿಯಾ ಎಂಬುದು ತಮಿಳು ಭಾಷೆಯಂತೆ ಕೇಳುತ್ತದೆಯಂತೆ ತಮಿಳಿನಲ್ಲಿ ಅನಾನ ಪಾತಿಯಾ ಅಪಾತ ಕೇತಿಯಾ ನನ್ನ ಅಣ್ಣನ ನೋಡಿದೆಯೇ ಅಪ್ಪನ ಹತ್ತಿರ ಕೇಳಿದೆಯಾ ಎಂದು, ಹೀಗಾಗಿ ಈ ಲೀರಿಕ್ಸ್ ತಮಿಳಿನ ಮಕ್ಕಳಿಗೆ ಇನ್ನಷ್ಟು ಹತ್ತಿರವಾಗಿದೆ. ಕೇವಲ ತಮಿಳು ಭಾಷಿಕರಿಗೆ ಮಾತ್ರವಲ್ಲದೇ ಈ ಹಾಡು ಭಾರತದೆಲ್ಲೆಡೆಯ ಸೋಶಿಯಲ್ ಮೀಡಿಯಾ ಬಳಕೆದಾರರು ಹಾಗೂ ಇನ್‌ಫ್ಲುಯೆನ್ಸರ್‌ಗಳಿಗೆ ಇಷ್ಟವಾಗಿದ್ದು, ಮಕ್ಕಳು ಈ ಹಾಡಿಗೆ ಇಷ್ಟಪಟ್ಟು ಡಾನ್ಸ್‌ ಮಾಡಿದ್ದಾರೆ.

ಕಾರ್‌ನಲ್ಲಿ ನಡೆದು ಹೋಯ್ತು ಖುಲ್ಲಂ ಖುಲ್ಲಾ; ಹೊರಗೆ ಬರ್ತಿದ್ದಂತೆ ಹೇಗಾಯ್ತು ಎಂದು ಕೇಳಿದ ಗೆಳತಿ, ಯುವತಿ ಶಾಕ್!

ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಇಂದು ಸಾಕಷ್ಟು ಪ್ರಭಾವಶಾಲಿಯಾಗಿದ್ದು, ಜಗತ್ತಿನ ಯಾವುದೋ ಮೂಲೆಯ ಸಂಸ್ಕೃತಿಗಳು, ಆಚಾರ ವಿಚಾರಗಳು, ಜಗತ್ತಿನ ಇನ್ಯಾವುದೋ ಮೂಲೆಯನ್ನು ತಲುಪುತ್ತಿದೆ. ಇಂಟರ್‌ನೆಟ್‌ ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ಇದು ಸಾಧ್ಯವಾಗಿದೆ. 

View post on Instagram