ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಕೋರ್ಟ್‌ಗೆ ಗೈರಾದ ಹಿನ್ನೆಲೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ದರ್ಶನ್‌ಗೆ ಎಚ್ಚರಿಕೆ ನೀಡಲಾಗಿದೆ. ಮೇ 20ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಬೆಂಗಳೂರು (ಏ.8): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಹಾಗೂ ಪ್ರಮುಖ ಆರೋಪಿಯಾಗಿರುವ ದರ್ಶನ್‌ ತೂಗುದೀಪಗೆ ಕೋರ್ಟ್‌ ಮಹತ್ವದ ಎಚ್ಚರಿಕೆ ನೀಡಿದೆ. ಈ ಪ್ರಕರಣದಲ್ಲಿ ಇಂದು ಬೆಂಗಳೂರಿನ ಸಿಸಿಎಚ್‌ 57ನೇ ನ್ಯಾಯಾಲಯದಲ್ಲಿ ವಿಚಾರಣೆ ದಿನಾಂಕ ನಿಗದಿಯಾಗಿತ್ತು. ಪ್ರಕರಣದ ಎ1 ಆರೋಪಿಯಾಗಿರುವ ದರ್ಶನ್‌ ಗೆಳತಿ ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು.

ಆದರೆ, ಬೆನ್ನುನೋವಿನ ಕುಂಟುನೆಪ ಹೇಳಿ ದರ್ಶನ್‌ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಇದರಿಂದ ಸಿಟ್ಟಾದ ನ್ಯಾಯಾಧೀಶರು ದರ್ಶನ್‌ ಪರ ವಕೀಲರಿಗೆ ಕೋರ್ಟ್‌ನಲ್ಲಿಯೇ ಎಚ್ಚರಿಕೆ ನೀಡಿದೆ. ವಿಚಾರಣೆ ಇದ್ದಾಗ ಆರೋಪಿ ಕಡ್ಡಾಯವಾಗಿ ಕೋರ್ಟ್‌ನಲ್ಲಿ ಇರಬೇಕು. ಈ ಬಗ್ಗೆ ತಿಳಿಸಿಹೇಳಿ ಎಂದು ತಿಳಿಸಿದೆ. ದರ್ಶನ್‌ ಗೈರಾಗಿದ್ದು ಏಕೆ: ಜಾಮೀನು ಸಿಕ್ಕ ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ದರ್ಶನ್‌, ಬೆನ್ನುನೋವಿನ ಕಾರಣ ನೀಡಿ ಕೋರ್ಟ್‌ ಹಾಜರಾತಿಗೆ ವಿನಾಯಿತಿ ಕೋರಿದ್ದರು.

ಜಾಮೀನು ಸಿಕ್ಕ ಬಳಿಕ ಡೆವಿಲ್‌ ಸಿನಿಮಾದ ಶೂಟಿಂಗ್‌ನಲ್ಲಿ ದರ್ಶನ್‌ ಭಾಗಿಯಾಗಿದ್ದಾರೆ. ರಾಜಸ್ಥಾನದಲ್ಲಿ ಸಿನಿಮಾದ ಚಿತ್ರೀಕರಣ ನಡೆದಿತ್ತು. ಅಲ್ಲಿ ಸುಮಾರಿ 28 ಗಂಟೆಗಳ ಕಾಲ ಸತತವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದರಿಂದಾಗಿ ಬೆನ್ನುನೋವಿನ ಸಮಸ್ಯೆ ಹೆಚ್ಚಾಗಿದ್ದರಿಂದ ವಿಚಾರಣೆಗೆ ಗೈರಾಗಿದ್ದರು. 

ಇಂದು ವಿಚಾರಣೆಯ ವೇಳೆ ದರ್ಶನ್‌ ಪರ ವಕೀಲರು ಈ ವಿಚಾರವನ್ನು ಜಡ್ಜ್‌ಗೆ ತಿಳಿಸಿದರು. ಆದರೆ, ಅವರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ವಿಚಾರಣೆ ನಡೆಯುವಂಥ ಸಂದರ್ಭದಲ್ಲಿ ಆರೋಪಿಗಳು ಕಡ್ಡಾಯವಾಗಿ ಕೋರ್ಟ್‌ನಲ್ಲಿ ಹಾಜರಿರಬೇಕು ಎಂದು ಹೇಳಿದರು.ಇದೇ ವೇಳೆ ಹೈಕೊರ್ಟ್ ಜಾಮೀನು ಷರತ್ತಿನಲ್ಲಿ ಬೆಂಗಳೂರು ವ್ಯಾಪ್ತಿ ಬಿಟ್ಟು ತೆರಳಲು ಅನುಮತಿ ನೀಡಿತ್ತು ಎಂದು ತಿಳಿಸಿ ಆದೇಶ ಪ್ರತಿಯನ್ನು ನ್ಯಾಯಾಧೀಶರಿಗೆ ವಕೀಲರು ನೀಡಿದರು.

ದರ್ಶನ್‌ ಅಣ್ಣ ಮನೆಯಲ್ಲಿ ಮುದ್ದು ರಾಕ್ಷಸಿ ಅಂತ ಕರೆದಿರುವುದು ನಾನೇ ನೋಡಿದ್ದೀನಿ: ಧನ್ವೀರ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಎಲ್ಲರಿಗೂ ಹೈಕೋರ್ಟ್‌ ಜಾಮೀನು ನೀಡಿದೆ. ಆದರೆಮ ದರ್ಶನ್‌ ಸೇರಿದಂತೆ ಹಲವರ ಜಾಮೀನು ರದ್ದು ಮಾಡುವಂತೆ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಗೂ ಒಪ್ಪಿಗೆ ನೀಡಿದೆ. ಇಂದಿನ ವಿಚಾರಣೆಯಲ್ಲಿ ದರ್ಶನ್ ಒಬ್ಬರನ್ನು ಹೊರತುಪಡಿಸಿ ಇನ್ನುಳಿದ ಆರೋಪಿಗಳಾದ ಪವಿತ್ರಾ ಗೌಡ, ನಂದಿಶ್, ಜಗದೀಶ್, ನಾಗರಾಜ್, ವಿನಯ್, ಪವನ್, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತಿಕ್ ಕೇಶವ ಮೂರ್ತಿ ಎಲ್ಲರೂ ಹಾಜರಾಗಿದ್ದರು. ಈ ವೇಳೆ ಆರೋಪಿಗಳು ಪೊಲೀಸರು ವಶಪಡಿಸಿಕೊಂಡಿರುವ ತಮ್ಮ ಮೊಬೈಲ್​ಗಳನ್ನು ಮರಳಿಸಬೇಕು ಎಂದು ಮನವಿ ಸಲ್ಲಿಸಿದರು. ಬಳಿಕ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಗಿದೆ.

ಕಾನೂನು ಸಂಕಷ್ಟಕ್ಕೆ ಸಿಲುಕಿ ನಲುಗಿದ ಸ್ಟಾರ್ ನಟರು!.. ಅಲ್ಲು ಅರ್ಜುನ್‌ನಿಂದ ದರ್ಶನ್ ವರೆಗೆ, ಯಾರೆಲ್ಲಾ?!