Published : Apr 07, 2026, 06:49 AM ISTUpdated : Apr 07, 2026, 11:37 PM IST

Karnataka News Live: ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು

ಸಾರಾಂಶ

ಉಡುಪಿ: ಆಯತಪ್ಪಿ ಬಾವಿಗೆ ಬಿದ್ದಿದ್ದ ವೃದ್ಧರೊಬ್ಬರು 3 ದಿನ ಪಂಪ್‌ ಮೇಲೆ ಕೂತು ಜೀವ ಉಳಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಶ್ರೀನಿವಾಸ ಆಚಾರ್ಯ (63) ಸಾವನ್ನು ಗೆದ್ದು ಬಂದವರು. ನಿರ್ಜನ ಪ್ರದೇಶದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಅವರು, ತೋಟಕ್ಕೆ ನೀರುಣಿಸಲು ಹೋದಾಗ ಆಯತಪ್ಪಿ ಬಾವಿಗೆ ಬಿದ್ದಿದ್ದರು. 

30 ಅಡಿಯ ಬಾವಿಯಲ್ಲಿ ಸಾಕಷ್ಟು ನೀರಿತ್ತು. ಆಗ ಅದರಲ್ಲಿದ್ದ ಸಬ್‌ ಮರ್ಸಿಬಲ್ ಪಂಪಿನ ಮೇಲೆ ಕುಳಿತು ಮೇಲೆತ್ತುವಂತೆ ಕೂಗಿದರೂ, ಯಾರಿಗೂ ಕೇಳಲಿಲ್ಲ. ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ನೀಡಲು ಬಂದಾಗ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ತೋಟದಲ್ಲಿ ಹುಡುಕಿದಾಗ ಆಚಾರ್ಯರು ಪಂಪಿನ ಮೇಲೆ ಕೂತಿರೋದು ಕಂಡುಬಂತು. ಅಗ್ನಿಶಾಮಕ ದಳ ಸಿಬ್ಬಂದಿ ಕರೆಸಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.

11:37 PM (IST) Apr 07

ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು

ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು, 10 ಸ್ನೇಹಿತರು ವಾಹನ ನಿಲ್ಲಿಸಿ ವಿರಾಮ ಪಡೆಯುತ್ತಿದ್ದ ವೇಳೆ ಇನ್ನೋವಾ ಕಾರು ಡಿಕ್ಕಿಯಾಗಿದೆ.

Read Full Story

11:04 PM (IST) Apr 07

ಮಡಿಕೇರಿ ಬೆನ್ನಲ್ಲೇ ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿ ಪ್ರವಾಸಿ ಯುವತಿ ನಾಪತ್ತೆ

ಮಡಿಕೇರಿ ಬೆನ್ನಲ್ಲೇ ಚಿಕ್ಕಮಗಳೂರು ಚಂದ್ರದ್ರೋಣ ಪರ್ವತದಲ್ಲಿ ಪ್ರವಾಸಿ ಯುವತಿ ನಾಪತ್ತೆ, ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದ ಯುವತಿ ಚಾರಣದ ವೇಳೆ ನಾಪತ್ತೆಯಾಗಿದ್ದಾಳೆ. ಹುಡುಕಾಟ ತೀವ್ರಗೊಂಡಿದೆ.

 

Read Full Story

10:38 PM (IST) Apr 07

ಸಂಬಂಧಿಕರ ಮನೆಯಿಂದ ಮರಳುವಾಗ ಮಹಿಳೆಗೆ ಮುಳುವಾದ ಸೀರೆ, ಕ್ಷಣಾರ್ಧದಲ್ಲೇ ಹೋಯ್ತು ಪ್ರಾಣ

ಸಂಬಂಧಿಕರ ಮನೆಯಿಂದ ಮರಳುವಾಗ ಮಹಿಳೆಗೆ ಮುಳುವಾದ ಸೀರೆ, ಕ್ಷಣಾರ್ಧದಲ್ಲೇ ಹೋಯ್ತು ಪ್ರಾಣ, ಕಾರ್ಯಕ್ರಮ ಮುಗಿಸಿ ಸಂಭ್ರಮದಲ್ಲಿದ್ದ ಮಹಿಳೆಗೆ ಈಕೆಯ ಸೀರೆಯೇ ಪ್ರಾಣಕ್ಕೆ ಕುತ್ತು ತಂದಿದೆ.

 

Read Full Story

10:20 PM (IST) Apr 07

ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು

Actress Amrutha Roopesh: ನನ್ನಮ್ಮ ಸೂಪರ್‌ಸ್ಟಾರ್‌ ಶೋನಲ್ಲಿ ಅಮೃತಾ ರೂಪೇಶ್‌, ಮಗಳು ಸಮನ್ವಿ ಜೊತೆ ಭಾಗವಹಿಸಿದ್ದರು. ಸಮನ್ವಿ ಮುದ್ದಾದ, ಪ್ರತಿಭಾನ್ವಿತ ಮಗಳು. ದುರದೃಷ್ಟವಶಾತ್‌ ಸಮನ್ವಿ ಅಪಘಾತದಲ್ಲಿ ನಿಧನರಾದರು. ಮಗಳ ಸಾವಿನ ಬಗ್ಗೆ ಸುಮನ್‌ ಟಿವಿ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

 

Read Full Story

09:43 PM (IST) Apr 07

ಅಲ್ಲು ಅರ್ಜುನ್‌ ಸಿನಿಮಾವನ್ನು ಕಸದ ಬುಟ್ಟಿಗೆ ಹಾಕ್ರೀ...; ಮಗನ ಸಿನಿಮಾ ಬಗ್ಗೆ ಅಲ್ಲು ಅರವಿಂದ್‌ ಇಂಥ ಮಾತು.. ಛೇ

Actor Allu Arjun Movie: ನಿರ್ಮಾಪಕರಾಗಿ ಅಲ್ಲು ಅರವಿಂದ್‌ಗೆ ದಶಕಗಳ ಅನುಭವವಿದೆ. ಆದರೆ, ಸ್ವತಃ ತಮ್ಮ ಮಗ ಅಲ್ಲು ಅರ್ಜುನ್ ಸಿನಿಮಾದ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದರು. ಸಿನಿಮಾ ನೋಡಿ, ಇದನ್ನ ಗೋಡೌನ್‌ಗೆ ಹಾಕಿಬಿಡಿ ಎಂದು ಹೇಳಿದ್ದರು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

 

Read Full Story

09:25 PM (IST) Apr 07

ರನ್ಯಾ ರಾವ್ ಬಳಿಕ ಮತ್ತೊಂದು ಸ್ಮಗ್ಲಿಂಗ್, ಬೆಂಗಳೂರು ಏರ್ಪೋರ್ಟ್‌ನಲ್ಲಿ 5 ಕೋಟಿ ಮೌಲ್ಯದ ಚಿನ್ನ ಸಹಿತ ಆರೋಪಿಗಳು ವಶಕ್ಕೆ!

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಆರೋಪಿಗಳು ದೇಹದ ಖಾಸಗಿ ಭಾಗಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಈ ಜಾಲದಲ್ಲಿ ಏರ್ಪೋರ್ಟ್ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.
Read Full Story

09:02 PM (IST) Apr 07

Sankeerthana Movie - ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ

Sankeerthana movie: ಕೆ ಪದ್ಮಕಲಾ ಗುಂಡೂರಾವ್, ಸ್ನೇಹಿತರು ನಿರ್ಮಾಣ ಮಾಡಿರುವ, ಡಿ.ಎಸ್ ಮಂಜುನಾಥ್ (ಕಲಾ ಗಂಗೋತ್ರಿ ಮಂಜು) ನಿರ್ದೇಶಿಸಿರುವ, ಜೆ ಎಂ ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ‘ಸಂಕೀರ್ತನ’ ಸಿನಿಮಾದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿದ್ದ ಶ್ರೇಷ್ಠ ಸಂತರ, ಹರಿದಾಸರ ಕಥೆಯಿದೆ.

 

Read Full Story

07:40 PM (IST) Apr 07

ಮೈಸೂರು ರೈಲ್ವೆಯಲ್ಲಿ ಮಹತ್ವದ ಬದಲಾವಣೆಗಳು, ಅತ್ಯಾಧುನಿಕ ಎಲ್‌ಎಚ್‌ಬಿ ಬೋಗಿ, ವಂದೇ ಭಾರತ್ ರೈಲು ಡಿಪೊ!

ನೈಋತ್ಯ ರೈಲ್ವೆಯು ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ಗೆ ಆಧುನಿಕ ಎಲ್.ಎಚ್.ಬಿ ಬೋಗಿಗಳನ್ನು ಅಳವಡಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಮೈಸೂರು ವಿಭಾಗವು ಪ್ರಯಾಣಿಕ ಮತ್ತು ಸರಕು ಸಾಗಣೆಯಿಂದ ಕ್ರಮವಾಗಿ ₹449.13 ಕೋಟಿ ಹಾಗೂ ₹900.19 ಕೋಟಿ ಆದಾಯ ಗಳಿಸಿ ಉತ್ತಮ ಸಾಧನೆ ಮಾಡಿದೆ. ಮೈಸೂರಿನಲ್ಲಿ ವಂದೇ ಭಾರತ್ ಡಿಪೋ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ.

Read Full Story

06:53 PM (IST) Apr 07

ತುಮಕೂರು - ಸತ್ಯಮಂಗಲದಲ್ಲಿ ಬಯಲಾದ 700 ವರ್ಷಗಳ ಹಿಂದಿನ ರಹಸ್ಯ! ಅಪರೂಪದ ವಿಶೇಷ ವೀರಗಲ್ಲು ಶಾಸನ ಪತ್ತೆ

ತುಮಕೂರಿನ ಸತ್ಯಮಂಗಲದಲ್ಲಿ 14ನೇ ಶತಮಾನದ, ವಿಜಯನಗರ ಪೂರ್ವದ ಅಪರೂಪದ ವೀರಗಲ್ಲು ಶಾಸನ ಪತ್ತೆಯಾಗಿದೆ. ಇದು ಅಂದಿನ 'ಮುರುಗಲು ರಾಜ್ಯ'ದ ಬಗ್ಗೆ ತಿಳಿಸುತ್ತದೆ. ದೇವಸ್ಥಾನದ ಜಾತ್ರೆಗೆ ತೆರಳುತ್ತಿದ್ದ ಜನರನ್ನು ರಕ್ಷಿಸಲು ಹೋರಾಡಿ ಮಡಿದ ವೀರನ ಸ್ಮರಣಾರ್ಥ ಇದನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಅಂದಿನ ಸಾಂಸ್ಕೃತಿಕ ಆಚರಣೆಗಳ ಚಿತ್ರಣ ಮತ್ತು ಸತ್ಯಮಂಗಲ ಗ್ರಾಮದ ಉಲ್ಲೇಖವಿದೆ.

Read Full Story

06:26 PM (IST) Apr 07

ಕಳಪೆ ಗೋವಿನ ಜೋಳದ ಬೀಜದಿಂದ ಬೆಳೆ ಹಾನಿ - ಧಾರವಾಡ ರೈತನಿಗೆ ₹5 ಲಕ್ಷ ಪರಿಹಾರ

ದೂರುದಾರರು ತಮ್ಮ ಜಮೀನನ್ನು ಸರಿಯಾಗಿ ಉಳುಮೆಮಾಡಿ ಅದಕ್ಕೆ ಬೇಕಾದ ಗೊಬ್ಬರ ಇತ್ಯಾದಿಗಳನ್ನು ಉಪಯೋಗಿಸಿ ಸಾಕಷ್ಟು ಹಣ ಖರ್ಚು ಮಾಡಿ ತಮ್ಮ 35 ಎಕರೆಯಲ್ಲಿ ಸದರಿ ಗೋವಿನ ಜೋಳದ ಬೀಜ ಹಾಕಿಸಿದ್ದರು.

Read Full Story

06:25 PM (IST) Apr 07

ಬೇಕು ಅಂತಲೇ ಗಂಡ ತೀರಿಕೊಂಡ ಮಹಿಳೆಯನ್ನು ಮದುವೆಯಾಗಿರೋ Su From So Movie ಬಾವ; ಇದು ಅರೇಂಜ್‌ ಮ್ಯಾರೇಜ್

Su From So ಸಿನಿಮಾದಲ್ಲಿ ಬಾವ ಎಂಬ ಪಾತ್ರದಲ್ಲಿ ನಟಿಸಿ, ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದ ನಟ ಪುಷ್ಪರಾಜ್‌ ಬೋಳಾರ್‌ ಅವರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಗಂಡ ತೀರಿಕೊಂಡ ಮಹಿಮೆಯನ್ನು ಮದುವೆಯಾಗಿದ್ದು ಯಾಕೆ ಎಂದು ಹೇಳಿದ್ದಾರೆ.

 

Read Full Story

06:16 PM (IST) Apr 07

ಎರಡು ವರ್ಷ ಡೇಟಿಂಗ್​, ಜ್ಯೂಸ್​ನಲ್ಲಿ ಏನಾದ್ರೂ ಮಿಕ್ಸಿಂಗ್​ - Anchor Anushree ರೋಚಕ ಲವ್​ ಸ್ಟೋರಿ

ನಿರೂಪಕಿ ಅನುಶ್ರೀ ಅವರು ತಮ್ಮ ಪತಿ ರೋಷನ್ ಜೊತೆಗಿನ ಎರಡು ವರ್ಷಗಳ ರಹಸ್ಯ ಡೇಟಿಂಗ್ ಮತ್ತು ಪ್ರೇಮಕಥೆಯನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ತಮ್ಮಿಬ್ಬರ ಪ್ರೇಮಕ್ಕೆ ನಟ ರಾಜ್ ಬಿ. ಶೆಟ್ಟಿ ಹೇಗೆ ಪ್ರಮುಖ ಪಾತ್ರ ವಹಿಸಿದರು ಎನ್ನುವ ಸ್ವಾರಸ್ಯಕರ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ.
Read Full Story

05:42 PM (IST) Apr 07

ಸ್ಯಾನಿಟರಿ ಪ್ಯಾಡ್ ಆರ್ಡರ್ ಮಾಡಿದ್ದನ್ನು ಗೌಪ್ಯವಾಗಿ ಪ್ಯಾಕ್ ಮಾಡಿದ್ದಕ್ಕೆ ಮಹಿಳೆ ಆಕ್ರೋಶ, ಆನ್‌ಲೈನಲ್ಲಿ ಚರ್ಚೆ

ಇನ್ಸ್ಟಾಮಾರ್ಟ್‌ನಲ್ಲಿ ಆರ್ಡರ್ ಮಾಡಿದ ಸ್ಯಾನಿಟರಿ ಪ್ಯಾಡ್ ಅನ್ನು ಗೌಪ್ಯವಾಗಿ ಪ್ಯಾಕ್ ಮಾಡಿದ್ದಕ್ಕೆ ಮಹಿಳೆಯೊಬ್ಬರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಈ ಘಟನೆಯು ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದು, ಕೆಲವರು ಇದನ್ನು ಗೌಪ್ಯತೆಯ ಗೌರವವೆಂದರೆ, ಇತರರು ಮುಟ್ಟಿನ ಬಗೆಗಿನ ಕೀಳರಿಮೆಯ ಸಂಕೇತವೆಂದು ವಾದಿಸಿದ್ದಾರೆ.
Read Full Story

05:16 PM (IST) Apr 07

2500 ಕೋಟಿ ರೂ ಆಸ್ತಿ ಇದ್ರೂ, ಒಂದು ಸಿನಿಮಾಕ್ಕೆ 100 ಕೋಟಿ ತಗೊಂಡ್ರೂ ಅಕ್ಷಯ್‌ ಕುಮಾರ್‌ಗೆ ಬಟ್ಟೆ ಗತಿ ಇಲ್ವಾ?

Actor Akshay Kumar: ಬಾಲಿವುಡ್ ನಟ ಅಕ್ಷಯ್ ಕುಮಾರ್, ನಿರ್ದೇಶಕ ಪ್ರಿಯದರ್ಶನ್ ಅವರ 'ಭೂತ್ ಬಂಗ್ಲಾ' ಸಿನಿಮಾದ ಟ್ರೈಲರ್ ಲಾಂಚ್‌ಗೆ ಬಂದಿದ್ದರು. ಈ ವೇಳೆ ಅವರು ಹಾಕಿದ್ದ ಶರ್ಟ್ ನೋಡಿ ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

04:36 PM (IST) Apr 07

3 ದಿನ ಬಾವಿಯಲ್ಲಿ ಬಿದ್ದ ಉಡುಪಿಯ ವೃದ್ಧನ ಜೀವ ಉಳಿಸಿದ ಸಿಲಿಂಡರ್​ OTP- ವಿಡಿಯೋ ಇಲ್ಲಿದೆ

ಉಡುಪಿಯ ಕಂಬಳಕಟ್ಟೆಯಲ್ಲಿ 62 ವರ್ಷದ ಶ್ರೀನಿವಾಸ ಆಚಾರ್ಯ ಎಂಬ ವೃದ್ಧರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಸಿಲುಕಿಕೊಂಡಿದ್ದರು. ಗ್ಯಾಸ್ ಸಿಲಿಂಡರ್ ಡೆಲಿವರಿಗಾಗಿ ಬಂದ ಓಟಿಪಿ ವಿಚಾರಣೆಯಿಂದಾಗಿ ಅವರು ಬಾವಿಯಲ್ಲಿರುವುದು ಬೆಳಕಿಗೆ ಬಂದು, ಅಗ್ನಿಶಾಮಕ ದಳದವರು ಅವರನ್ನು ರಕ್ಷಿಸಿದ್ದಾರೆ.
Read Full Story

04:13 PM (IST) Apr 07

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಘಟಿಕೋತ್ಸವ - ರಾಜ್ಯಪಾಲರಿಂದ ಸ್ವಾಮೀಜಿಗೆ ಡಾಕ್ಟರೇಟ್ ಪದವಿ ಪ್ರದಾನ

ಥಾವರ್ ಚಂದ್ ಗೆಹ್ಲೋಟ್‌ರವರಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಪೀಠಾಧಿಪತಿಗಳಾದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ವಿದ್ಯಾವಾರಾಧಿ ( ಪಿಎಚ್‌ಡಿ) ಪದವಿ ಪ್ರಮಾಣಪತ್ರ ಪಡೆದರು.

Read Full Story

04:10 PM (IST) Apr 07

ಪರ್ಫೆಕ್ಟ್ ಯಾರ್ಕರ್ ಮೂಲಕ ರಿಷಭ್ ಪಂತ್ ಕಂಗೆಡಿಸಿದ ಅರ್ಜುನ್ ತೆಂಡೂಲ್ಕರ್! ಸಚಿನ್ ಪುತ್ರನ ಬೌಲಿಂಗ್‌ಗೆ ನೆಟ್ಟಿಗರು ಫಿದಾ

ಲಖನೌ ಸೂಪರ್ ಜೈಂಟ್ಸ್ ತಂಡದ ನೆಟ್ಸ್‌ನಲ್ಲಿ ನಾಯಕ ರಿಷಭ್ ಪಂತ್‌ಗೆ ಅರ್ಜುನ್ ತೆಂಡೂಲ್ಕರ್ ನಿಖರ ಯಾರ್ಕರ್‌ಗಳನ್ನು ಎಸೆದು ಗಮನ ಸೆಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮುಂಬರುವ ಪಂದ್ಯಗಳಲ್ಲಿ ಅರ್ಜುನ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
Read Full Story

04:02 PM (IST) Apr 07

ಕೊಡವ ಆಭರಣದಲ್ಲಿ ರಶ್ಮಿಕಾ ಮಿಂಚಿಂಗ್, ಹುಟ್ಟೂರು ವಿರಾಜಪೇಟೆಯಲ್ಲಿ ತೆಲುಗು ಸೊಸೆಯ ಅದ್ಧೂರಿ ಆರತಕ್ಷತೆ!

ಉದಯಪುರದಲ್ಲಿ ವಿವಾಹವಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ, ಇದೀಗ ರಶ್ಮಿಕಾ ಹುಟ್ಟೂರಾದ ಕೊಡಗಿನಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ರಶ್ಮಿಕಾ ಸಂಪೂರ್ಣ ಕೊಡವ ಸಂಪ್ರದಾಯದಂತೆ ಕೆಂಪು ಸೀರೆ ಮತ್ತು ಪತ್ತಕ್, ಜೋಮಾಲೆಯಂತಹ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ಮಿಂಚಿದ್ದಾರೆ.
Read Full Story

03:36 PM (IST) Apr 07

ಚಿಕ್ಕಮಗಳೂರು - ಮಧ್ಯಪ್ರಾಚ್ಯ ಯುದ್ಧದಿಂದಾಗಿ ದರ ಏರಿಕೆ - ಡ್ರೈಫ್ರೂಟ್ಸ್‌ ಮಾತ್ರ ಕದ್ದ ಕಳ್ಳ

ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬೆ ದೇಗುಲದ ಬಳಿಯ ಅಂಗಡಿಯೊಂದರಲ್ಲಿ ಕಳ್ಳನೊಬ್ಬ 10 ಕೆಜಿಗೂ ಅಧಿಕ ಬಾದಾಮಿ, ಪಿಸ್ತಾ, ಗೋಡಂಬಿ ಹಾಗೂ 80 ಸಾವಿರ ನಗದನ್ನು ಕದ್ದೊಯ್ದಿದ್ದಾನೆ. ಕಳ್ಳತನದ ಈ ಕೃತ್ಯವು ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ..

Read Full Story

03:29 PM (IST) Apr 07

ಸ್ನ್ಯಾಪ್‌ಚಾಟ್ ಮೂಲಕ ಮಹಿಳೆ ಬಲೆಗೆ ಬಿಳಿಸಿದ್ದ ಹ್ಯಾಂಡ್ಸಮ್ ಹುಡುಗ - 40 ಲಕ್ಷ ಹಣ, 1 ಕೆಜಿ ಚಿನ್ನ ಲೂಟಿ!

ಹೆಣ್ಣು ಮಕ್ಕಳೇ ಸೋಷಿಯಲ್ ಮೀಡಿಯಾದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಎಚ್ಚರ. ಅದರಲ್ಲೂ ಅಪರಿಚಿತ ಹುಡುಗ ಹ್ಯಾಂಡ್ಸಮ್ ಆಗಿದ್ದಾನೆ ಅಂತಾ ಮರುಳಾದ್ರೆ ನಿಮ್ಮ ಕಥೆ ಗೋವಿಂದ.

Read Full Story

03:01 PM (IST) Apr 07

ಸಿಎಂ ಬದಲಾವಣೆ ವಿಚಾರದಲ್ಲಿ ಸಿದ್ದು ಬಿಟ್ಟು ಉಳಿದವರ ಮಾತು ನಗಣ್ಯ - ಡಿ.ಕೆ.ಶಿವಕುಮಾರ್

ಜನ ನಮ್ಮ ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

Read Full Story

02:42 PM (IST) Apr 07

ಕಾಂಗ್ರೆಸ್ಸಿಗೆ ಚುನಾವಣೆ ಖಚಿತ, ಸೋಲು ನಿಶ್ಚಿತ - ಛಲವಾದಿ ನಾರಾಯಣಸ್ವಾಮಿ ಭವಿಷ್ಯ

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತಿದ್ದು, ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

Read Full Story

02:35 PM (IST) Apr 07

ಹುಬ್ಬಳ್ಳಿ ಕೇಸ್ ಬಳಿಕ ಎಚ್ಚೆತ್ತ ಪೊಲೀಸ್; ಲವ್ ಜಿಹಾದ್‌ಗಳ ಅಡ್ಡೆ ಆಗ್ತಿರೋ ಜಿಮ್‌ಗಳ ಮೇಲೆ ಖಾಕಿ ಕಣ್ಣು

ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಜಿಮ್ ಟ್ರೇನರ್‌ಗಳಿಂದ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದಾಗಿ ಪೊಲೀಸರು ಜಿಮ್‌ಗಳ ಮೇಲೆ ಗುಮಾನಿ ವ್ಯಕ್ತಪಡಿಸಿದ್ದಾರೆ. ಈ ಘಟನೆಗಳು ಜಿಮ್‌ಗಳ ಸುರಕ್ಷತೆ, ತರಬೇತುದಾರರ ಅರ್ಹತೆ ಮತ್ತು ಅವುಗಳ ಪರವಾನಗಿ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. 

Read Full Story

02:07 PM (IST) Apr 07

Lakshmi Nivasa Serial - ಜಾನು ಸಾವಿನಲ್ಲೂ, ಲಕ್ಷ್ಮೀ-ಶ್ರೀನಿವಾಸ್‌ ಷಷ್ಠಿಪೂರ್ತಿಯಲ್ಲೂ ಅದೊಂದು ಮಿಸ್‌ ಆಯ್ತು!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್‌ ಏನು ಎನ್ನೋದು ಎಲ್ಲರಿಗೂ ಗೊತ್ತಾಗಿದೆ. ಅತ್ತ ಜಾಹ್ನವಿ ಬದುಕಿರುವ ವಿಷಯ ಕೂಡ ಗೊತ್ತಾಗಿದೆ. ಜಯಂತ್‌ ಹಾಗೂ ಜಾಹ್ನವಿ ಒಟ್ಟಾಗಿ ಬಾಳ್ತಾರಾ ಎಂಬ ಪ್ರಶ್ನೆ ಇದೆ. ಸಂತೋಷ್‌, ಹರೀಶ್‌ ತಪ್ಪುಗಳು ಆಗಿದೆ, ಶ್ರೀನಿವಾಸ್‌ ಷಷ್ಠಿಪೂರ್ತಿಯಲ್ಲೂ ಒಂದು ವಿಷಯ ಮಿಸ್‌ ಆಗಿದೆ. 

 

Read Full Story

01:58 PM (IST) Apr 07

ಮುಟ್ಟಿನ ಬಗ್ಗೆ ನಟಿ ಶ್ರೀಲೀಲಾ ಮುಕ್ತ ಮಾತು - ಡಾಕ್ಟರ್​ ಆಗಿ ಹೀಗೆ ಹೇಳೋದಾ? ಶುರುವಾಗಿದೆ ಭಾರಿ ಚರ್ಚೆ

ನಟಿ ಹಾಗೂ ವೈದ್ಯೆ ಶ್ರೀಲೀಲಾ, ಮುಟ್ಟನ್ನು ಒಂದು ನೆಪವಾಗಿ ಬಳಸಬಾರದು ಮತ್ತು ಮಹಿಳೆಯರು ಆ ಸಮಯದಲ್ಲಿ ತಮ್ಮನ್ನು ತಾವು ಹುರಿದುಂಬಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಗೆ ಪರ-ವಿರೋಧ ಚರ್ಚೆಗಳು ಶುರುವಾಗಿದ್ದು, ಹಲವರು ನಟಿಯ ಮಾತನ್ನು ವಿರೋಧಿಸಿದ್ದು ಏಕೆ?

Read Full Story

01:39 PM (IST) Apr 07

ಕರ್ನಾಟಕದಲ್ಲಿ ಲೋಕಾಯುಕ್ತರ ಮಿಂಚಿನ ದಾಳಿ - 5 ಅಧಿಕಾರಿಗಳ ಮನೆಗೆ ಏಕಾಏಕಿ ದಾಳಿ, ದಾಖಲೆಗಳ ಪರಿಶೀಲನೆ

ಕರ್ನಾಟಕದ 5 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಚಿತ್ರದುರ್ಗ, ಮೈಸೂರು, ಬಳ್ಳಾರಿ, ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಹಲವು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ.
Read Full Story

01:24 PM (IST) Apr 07

ರೇಣುಕಾಸ್ವಾಮಿ ಕೊಲೆ ಆಧರಿತ ಸಿನಿಮಾಗೆ ರೆಡ್‌ ಸಿಗ್ನಲ್‌? ತಡೆಯಾಜ್ಞೆ ತಂದ ನಟ ದರ್ಶನ್‌

 'ಬಾಸ್' ಚಿತ್ರದ ಬಿಡುಗಡೆಗೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮ ಘನತೆಗೆ ಧಕ್ಕೆಯಾಗುತ್ತದೆ ಎಂದು ದರ್ಶನ್ ಮತ್ತು ವಿಜಯಲಕ್ಷ್ಮಿ ಸಲ್ಲಿಸಿದ್ದ ದಾವೆಯ ಮೇರೆಗೆ, ಚಿತ್ರಮಂದಿರ, ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡದಂತೆ ನ್ಯಾಯಾಲಯ ನಿರ್ದೇಶಿಸಿದೆ.

Read Full Story

01:12 PM (IST) Apr 07

ದೇವಾಲಯಗಳ ಉಳಿವಿಗಾಗಿ ಬಂಗಾರ, ವಜ್ರದ ಆಭರಣಗಳ ದಾನ ಕೇಳಿದ ತಕ್ಷಣವೇ ಕಳಚಿಕೊಟ್ಟ ಮಹಿಳೆಯರು, Watch Video

ಸೂರತ್‌ನ ಐತಿಹಾಸಿಕ ಗೋಪಿಪುರ ಪ್ರದೇಶದ ಜೈನ ಪವಿತ್ರ ಸ್ಥಳಗಳನ್ನು ರಕ್ಷಿಸಲು ನಡೆದ 'ಊರ್ಜಾ ತೀರ್ಥ ಉದ್ಧಾರ್ ಉತ್ಸವ'ದಲ್ಲಿ ಭಕ್ತರು ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ. ಜೈನ ಮಹಿಳೆಯರು ಸೇರಿದಂತೆ ನೂರಾರು ಜನರು ತಮ್ಮ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದಾನ ಮಾಡಿದ್ದಾರೆ.

Read Full Story

01:10 PM (IST) Apr 07

ಬಂದ ಎರಡೂ ಹಡಗುಗಳನ್ನು ಗುಜರಾತ್‌ಗೆ ಏಕೆ ಕಳುಹಿಸಿದರು - ಜೋಶಿ ರಾಜ್ಯದ ಹಿತಕ್ಕೆ ಕೆಲಸ ಮಾಡಬೇಕು - ಡಿಕೆಶಿ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆ ಹರ್ಮುಜ್ ಜಲಸಂಧಿ ಬಂದ್ ಆಗಿದೆ. ಹೀಗಾಗಿ ಆಟೋ ಚಾಲಕರು ಗ್ಯಾಸ್ ಬಿಟ್ಟು ಪೆಟ್ರೋಲ್ ಬಳಸಬೇಕು ಎಂಬ ಸಚಿವ ಪ್ರಲ್ಹಾದ್ ಜೋಶಿಯವರ ಹೇಳಿಕೆಗೆ ಡಿಸಿಎಂ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು

Read Full Story

01:06 PM (IST) Apr 07

Bengaluru - ಪತ್ನಿಯನ್ನು ಕೊಲ್ಲುವ ಮೊದಲು ಊರಿಗೆ ಬಂದು ಬಾಡೂಟ ಹಾಕಿಸಿದ ಗಂಡ!

ಬೆಂಗಳೂರಿನಲ್ಲಿ ಪತ್ನಿ ಕಾವ್ಯಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿ ದನಿಯಪ್ಪನನ್ನು ಬಂಧಿಸಲಾಗಿದೆ. ರಾಜಕೀಯ ಪ್ರವೇಶಿಸಲು ಬೆಂಗಳೂರಿನ ಆಸ್ತಿ ಮಾರಾಟ ಮಾಡಲು ದನಿಯಪ್ಪ ಮುಂದಾಗಿದ್ದು, ಇದಕ್ಕೆ ಪತ್ನಿ ಒಪ್ಪದ ಕಾರಣ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. 

Read Full Story

01:04 PM (IST) Apr 07

ಅಲ್ಪಸಂಖ್ಯಾತರ ಬಗ್ಗೆ ವಿಜಯೇಂದ್ರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸೋಜಿಗ - ಬಿ.ಕೆ.ಹರಿಪ್ರಸಾದ್

ವಿಜಯೇಂದ್ರ ಅವರು ಇಲ್ಲಿ ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸೋಜಿಗ. ಇವರ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಟ್ಟಿದ್ದಾರೆ ಎನ್ನುವುದು ಯಾರಾದರೂ ಮರೆಯಲು ಸಾಧ್ಯವೇ? ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

Read Full Story

12:49 PM (IST) Apr 07

ಬಿಜೆಪಿಯವರು ಎಂದು ಕೂಡ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ - ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಸ್ವಿಸ್ ಬ್ಯಾಂಕ್ ನಿಂದ ₹15 ಲಕ್ಷ ಹಾಕ್ತಿವಿ ಎಂದು ಮೋದಿ ಹೇಳಿದ್ದರು. ಹದಿನೈದು ಪೈಸೆಯೂ ಬರಲಿಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಅಂದರು, ಪ್ರಧಾನಿ ಆಗಿ 12 ವರ್ಷ ಆಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Read Full Story

12:45 PM (IST) Apr 07

ಚಿಕ್ಕಮಗಳೂರು - ನಾರಾಯಣ ಹೃದಯಾಲಯದ ನರ್ಸ್‌ ಹೊಳೆಗೆ ಹಾರಿ ಸಾವಿಗೆ ಶರಣು

ನಾರಾಯಣ ಹೃದಯಾಲಯದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನಲ್ಲಿ ಹೊಳೆಗೆ ಹಾರಿ ಸಾವಿಗೆ ಶರಣಾಗಿದ್ದಾರೆ. ಪತಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿರುವ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Read Full Story

12:36 PM (IST) Apr 07

ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬೆಂಗಳೂರು ಮಹಿಳೆಯಿಂದ ಲೈಂಗಿಕ ಕಿರುಕುಳ ಆರೋಪ, ಮಹಿಳಾ ಆಯೋಗಕ್ಕೆ ದೂರು

ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಸ್ವಾಮೀಜಿ ತಮ್ಮ ತೇಜೋವಧೆ ಮಾಡಲು 3 ಕೋಟಿ ರೂಪಾಯಿಗಾಗಿ ಮಹಿಳೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.
Read Full Story

12:31 PM (IST) Apr 07

ಇಂಧನ ಪೂರೈಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ತಾರತಮ್ಯ - ಸಚಿವ ಕೆ.ಎಚ್‌.ಮುನಿಯಪ್ಪ ಬೇಸರ

ಆಟೋ ರಿಕ್ಷಾ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಧನ ಪೂರೈಕೆಯಲ್ಲಿ ಕೇಂದ್ರ ಕೆಲ ರಾಜ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಕರ್ನಾಟಕದ ಬಗ್ಗೆ ತಾರತಮ್ಯ ಅನುಸರಿಸುತ್ತಿದೆ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

Read Full Story

12:19 PM (IST) Apr 07

Bengaluru - ಹ್ಯಾಂಡ್‌ಸಮ್ ಹುಡುಗ ಅಂತ ಪರಿಚಯ ಮಾಡಿಕೊಳ್ಳುವ ಮುನ್ನ ಈ ಸುದ್ದಿ ಓದಿ!

ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಮಹಿಳೆಯರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 571 ಗ್ರಾಂ ಚಿನ್ನ ಮತ್ತು 25 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

Read Full Story

12:14 PM (IST) Apr 07

Karnataka 2nd PUC result 2026 - ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ದಿನಾಂಕ ಫಿಕ್ಸ್, ರಿಸಲ್ಟ್ ನೋಡೋದು ಸುಲಭ, ಇಲ್ಲಿದೆ ಲಿಂಕ್

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 9 ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ, ಮೌಲ್ಯನಿರ್ಣಯ ಮಂಡಳಿ ಖಚಿತಪಡಿಸಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ತಮ್ಮ ರಿಜಿಸ್ಟ್ರೇಶನ್ ನಂಬರ್ ಬಳಸಿ ಫಲಿತಾಂಶವನ್ನು ವೀಕ್ಷಿಸಬಹುದು.

Read Full Story

11:55 AM (IST) Apr 07

ಕಾಂಗ್ರೆಸ್‌ಗೆ ಅದೃಶ್ಯ ಮತದಾರರಿದ್ದು ಎರಡೂ ಕ್ಷೇತ್ರಗಳಲ್ಲಿ ಗೆಲ್ತೇವೆ - ಮಾಜಿ‌ ಸಚಿವ ಕೆ.ಎನ್.ರಾಜಣ್ಣ

ನಾವು ಗ್ಯಾರಂಟಿಗಳನ್ನು ಏನು ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ನಾವು ಬಹಳ ಎಫೆಕ್ಟಿವ್ ಆಗಿ ಇಂಪ್ಲಿಮೆಂಟ್ ಕೂಡ ಮಾಡಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ‌ ಗೆಲ್ಲುತ್ತೇವೆಂದು ಮಾಜಿ‌ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

Read Full Story

11:44 AM (IST) Apr 07

ಪತ್ನಿಯನ್ನು ಕೊನೆಯ ಬಾರಿಯೂ ನೋಡಲು ಬಿಡದ ಕ್ರೂರ ವಿಧಿ - ಪತಿ ದುರ್ಮರಣ, ಮಕ್ಕಳು ಅನಾಥ

ಬೆಳಗಾವಿ ಜಿಲ್ಲೆಯ ಅರವಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಪತ್ನಿ ಆತ್ಮ*ಹತ್ಯೆ ಮಾಡಿಕೊಂಡರೆ, ಆಕೆಯ ಮೃತದೇಹ ನೋಡಲು ಹೊರಟ ಪತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಮೂವರು ಮಕ್ಕಳು ಅನಾಥರಾಗಿದ್ದಾರೆ.

Read Full Story

11:39 AM (IST) Apr 07

ಉಪಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಖಚಿತ - ಬಿ.ವೈ. ವಿಜಯೇಂದ್ರ ಭವಿಷ್ಯ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಶತಃಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

Read Full Story

More Trending News