- Home
- Entertainment
- TV Talk
- Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ
Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ
Sankeerthana movie: ಕೆ ಪದ್ಮಕಲಾ ಗುಂಡೂರಾವ್, ಸ್ನೇಹಿತರು ನಿರ್ಮಾಣ ಮಾಡಿರುವ, ಡಿ.ಎಸ್ ಮಂಜುನಾಥ್ (ಕಲಾ ಗಂಗೋತ್ರಿ ಮಂಜು) ನಿರ್ದೇಶಿಸಿರುವ, ಜೆ ಎಂ ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ‘ಸಂಕೀರ್ತನ’ ಸಿನಿಮಾದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿದ್ದ ಶ್ರೇಷ್ಠ ಸಂತರ, ಹರಿದಾಸರ ಕಥೆಯಿದೆ.

ಜೆ ಎಂ ಪ್ರಹ್ಲಾದ್ ಏನು ಹೇಳಿದರು?
ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ. ಜೆ ಎಂ ಪ್ರಹ್ಲಾದ್ ಮಾತನಾಡಿ, “ಹದಿನೈದು ವರ್ಷದ ಹಿಂದೆ ಹೆಳವನಕಟ್ಟೆ ಗಿರಿಯಮ್ಮ ಧಾರಾವಾಹಿಗಾಗಿ ಬರೆದಿದ್ದೆ. ಆ ಧಾರಾವಾಹಿ ಜನರ ಮೆಚ್ಚುಗೆ ಪಡೆದುಕೊಂಡಿತ್ತು. ಆಗ ನನಗೆ ಜನರಿಗೆ ದಾಸ ಸಾಹಿತ್ಯದ ಬಗ್ಗೆ ಒಲವಿದೆ ಎನ್ನುವುದು ತಿಳಿಯಿತು. ದಾಸ ಸಾಹಿತ್ಯದ ಬಗ್ಗೆ ನಟಿ ಪದ್ಮ ಕಲಾ ಅವರಿಗೆ ಒಲವಿತ್ತು. ನಾವೆಲ್ಲಾ ಸೇರಿ ವಾಹಿನಿಯೊಂದಕ್ಕೆ ಧಾರಾವಾಹಿ ಮಾಡಲು ಚರ್ಚೆ ಕೂಡ ನಡೆಸಿದ್ದೆವು. ಆದರೆ ಕಾರಣಾಂತರದಿಂದ ಅದು ಆಗಲಿಲ್ಲ. ನಂತರ ಸಿನಿಮಾ ಮಾಡಲು ನಿರ್ಧರಿಸಿದೆವು.
ಇದು ಹದಿನಾರನೇ ಶತಮಾನದಲ್ಲಿ ವಿಜಯ ನಗರ ಸಾಮ್ರಾಜ್ಯದಲ್ಲಿದ್ದ ಸಂತರ ಹಾಗೂ ಹರಿದಾಸರನ್ನು ಕುರಿತಾದ ಚಿತ್ರ. ಶ್ರೀಪಾದರಾಜರು, ವ್ಯಾಸರಾಜರು, ವಾದಿರಾಜರು, ವೈಕುಂಠದಾಸರು, ಪುರಂದರದಾಸರು, ಕನಕದಾಸರೆ ಮೊದಲಾದ ಜ್ಞಾನಿವರೇಣ್ಯರ ಕುರಿತು ತಿಳಿಸುವ ಪ್ರಯತ್ನವನ್ನು ‘ಸಂಕೀರ್ತನ’ ಸಿನಿಮಾದಲ್ಲಿ ಮಾಡಿದ್ದೇವೆ. ನನಗೆ ಈ ಚಿತ್ರದ ಕಥೆ ಬರೆಯಲು ಬೋಲೂರು ಕೇಶವದಾಸರ "ಕರ್ನಾಟಕ ಭಕ್ತ ವಿಜಯ" ಪುಸ್ತಕ ಸಾಕಷ್ಟು ಸಹಕಾರಿಯಾಯಿತು. ನವರಾತ್ರಿಗೆ ಹಂಪಿಗೆ ಬರುವ ವ್ಯಾಪಾರಿಗಳಿಂದ ಈ ಚಿತ್ರದ ಕಥೆ ಪ್ರಾರಂಭವಾಗುತ್ತದೆ. ಚಿತ್ರದಲ್ಲಿ ಹದಿನೈದು ಹಾಡುಗಳಿದ್ದು, ಪ್ರವೀಣ್ ಡಿ ರಾವ್ ಸಂಗೀತ ನೀಡಿದ್ದಾರೆ ಎಂದು ಹೇಳಿದರು.
ನಿರ್ದೇಶಕ ಕಲಾಗಂಗೋತ್ರಿ ಏನಂದ್ರು?
ನಿರ್ದೇಶಕ ಕಲಾಗಂಗೋತ್ರಿ ಮಂಜು ಮಾತನಾಡಿ, ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಸೆಟ್‌ನಲ್ಲೇ ಆಗಿದೆ. ಆನೆಗುಂದಿ ಮುಂತಾದ ಕಡೆಗಳಲ್ಲೂ ಚಿತ್ರೀಕರಣವಾಗಿದೆ. ಹಿರಿಯ ಕಲಾವಿದರಾದ ಶ್ರೀಧರ್, ರಾಮಕೃಷ್ಣ, ರಮೇಶ್ ಭಟ್, ಅಜಯ್ ರಾಜ್, ಅಶೋಕ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸಿದ್ಧಾರ್ಥ್ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನವಿರುವ ಈ ಚಿತ್ರವನ್ನು ಇದೇ ಹದಿನೇಳನೇ ತಾರೀಖು ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ಪದ್ಮಕಲಾ ಗುಂಡೂರಾವ್ ಏನಂದ್ರು?
ಪದ್ಮಕಲಾ ಗುಂಡೂರಾವ್ ಅವರು, “ಚಿಕ್ಕಂದಿನಿಂದ ದಾಸರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿತ್ತು. 15 ವರ್ಷದ ನಂತರ ಕನಸು ನನಸಾಗಿದೆ. ಜಗನ್ನಾಥದಾಸರು ಸಿನಿಮಾ ವಸ್ತ್ರ ವಿನ್ಯಾಸ ಮಾಡಿದ್ದೆ. ಅದರಿಂದ ಮತ್ತಷ್ಟು ಉತ್ತೇಜನ ಬಂದು ಸಿನಿಮಾ ಮಾಡಿದ್ದೇವೆ. ಕಲಾಗಂಗೋತ್ರಿ ಮಂಜು, ಪ್ರಹ್ಲಾದ್, ವಿಜಯ್ ಭಾಸ್ಕರ್ ಸಹಕಾರದಿಂದ ಸಿನಿಮಾ ಪೂರ್ಣಗೊಂಡಿದೆ. ಜಗತ್ತಿನಾದ್ಯಂತ ಸಿನಿಮಾ ಬಿಡುಗಡೆ ಮಾಡುವ ಉದ್ದೇಶವಿದೆ" ಎಂದು ಹೇಳಿದ್ದಾರೆ.
ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್
ಮೊದಲು ಕರ್ನಾಟಕದಲ್ಲಿ ಏಪ್ರಿಲ್ 17 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. 20 ಲಕ್ಷ ದಲ್ಲಿ ಚಿತ್ರ ಮಾಡೋಣ ಅಂದುಕೊಂಡಿದ್ದೆವು. ಆದರೆ ಅಷ್ಟರಲ್ಲಿ ಆಗಲಿಲ್ಲ. ಮಕ್ಕಳು, ಅಳಿಯಂದಿರು ಸೇರಿದಂತೆ ಕುಟುಂಬದ ಸಹಕಾರ ನೀಡಿದ್ದರಿಂದ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದೇವೆ .ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಪ್ರಧಾನ ನಿರ್ಮಾಪಕಿ, ಕಲಾ ನಿರ್ದೇಶಕಿ ಹಾಗೂ ವಸ್ತ್ರ ವಿನ್ಯಾಸಕಿ ಪದ್ಮಕಲಾ ಹೇಳಿದರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

