- Home
- Entertainment
- TV Talk
- Lakshmi Nivasa Serial: ಜಾನು ಸಾವಿನಲ್ಲೂ, ಲಕ್ಷ್ಮೀ-ಶ್ರೀನಿವಾಸ್ ಷಷ್ಠಿಪೂರ್ತಿಯಲ್ಲೂ ಅದೊಂದು ಮಿಸ್; ವೀಕ್ಷಕರಿಗೆ ಗೊತ್ತಾಯ್ತು
Lakshmi Nivasa Serial: ಜಾನು ಸಾವಿನಲ್ಲೂ, ಲಕ್ಷ್ಮೀ-ಶ್ರೀನಿವಾಸ್ ಷಷ್ಠಿಪೂರ್ತಿಯಲ್ಲೂ ಅದೊಂದು ಮಿಸ್; ವೀಕ್ಷಕರಿಗೆ ಗೊತ್ತಾಯ್ತು
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಏನು ಎನ್ನೋದು ಎಲ್ಲರಿಗೂ ಗೊತ್ತಾಗಿದೆ. ಅತ್ತ ಜಾಹ್ನವಿ ಬದುಕಿರುವ ವಿಷಯ ಕೂಡ ಗೊತ್ತಾಗಿದೆ. ಜಯಂತ್ ಹಾಗೂ ಜಾಹ್ನವಿ ಒಟ್ಟಾಗಿ ಬಾಳ್ತಾರಾ ಎಂಬ ಪ್ರಶ್ನೆ ಇದೆ. ಸಂತೋಷ್, ಹರೀಶ್ ತಪ್ಪುಗಳು ಆಗಿದೆ, ಶ್ರೀನಿವಾಸ್ ಷಷ್ಠಿಪೂರ್ತಿಯಲ್ಲೂ ಒಂದು ವಿಷಯ ಮಿಸ್ ಆಗಿದೆ.

ಮನೆಯಲ್ಲಿ ಏನೇನೋ ನಡೆಯಿತು!
ಇನ್ನೊಂದು ಕಡೆ ಲಕ್ಷ್ಮೀ ಮನೆ ಎರಡು ಭಾಗವಾಗಿ, ಲಕ್ಷ್ಮೀ-ಶ್ರೀನಿವಾಸ್ ಕೂಡ ಬೇರೆ ಬೇರೆಯಾಗಿದ್ದರು. ಮಕ್ಕಳ ಮನೆಯಲ್ಲಿ ಒಬ್ಬೊಬ್ಬರು ಇದ್ದು, ಅಲ್ಲಿ ನೋವನ್ನುಂಡಿದ್ದರು. ಹೀಗಿರುವಾಗ ಅವರ ಹಿರಿಯ ಮಗಳು ಎಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ.
ಹಿರಿಯ ಮಗಳ ಡಿಮ್ಯಾಂಡ್
ನಮ್ಮ ಮನೆಯಲ್ಲಿ ಆ ಕಷ್ಟ ಇದೆ, ಈ ಕಷ್ಟ ಇದೆ ಎಂದು ಮಂಗಳಾ ಗೋಳಾಡುತ್ತಿದ್ದಳು. ತವರು ಮನೆಯಲ್ಲಿ ಏನೇ ಇದ್ದರೂ ಕೂಡ ನನಗೆ ಬೇಕು ಎಂದು ಹೇಳುತ್ತಿದ್ದಳು. ಅಪ್ಪ-ಅಮ್ಮನಿಗೆ ಮಗಳ ಬೇಡಿಕೆ ಈಡೇರಿಸೋದು ಕಷ್ಟ ಆಗುತ್ತಿತ್ತು, ಆದರೂ ಏನೂ ಹೇಳುತ್ತಿರಲಿಲ್ಲ.
ಅಂದು ಭಯಪಟ್ಟಿದ್ದ ಮಂಗಳಾ
ಜಾಹ್ನವಿ ಮದುವೆಯಾದಬಳಿಕ ಅವರ ಮನೆಯಲ್ಲಿ ಏನೇನಿದೆ ಎಂದು ಮಂಗಳಾ ನೋಡಲು ಹೋಗಿದ್ದಳು. ಆಮೇಲೆ ಜಯಂತ್ ನಿಜ ಮುಖ ನೋಡಿ ಭಯಬಿದ್ದಿದ್ದಳು. ಅದಾದ ಬಳಿಕ ಅವಳ ಪತ್ತೆಯೇ ಇಲ್ಲ.
ಮಂಗಳಾ ಪತ್ತೆ ಇಲ್ಲ, ಯಾಕೆ?
ಶ್ರೀನಿವಾಸ್- ಲಕ್ಷ್ಮೀ ತಮ್ಮ ಮನೆಯಿಂದ ಹೊರಬಂದಿದ್ದು, ಜಾನು ಸಾವು ಆಗಿದ್ದು, ಲಕ್ಷ್ಮೀ-ಶ್ರೀನಿವಾಸ್ ಷಷ್ಠಿಪೂರ್ತಿ ಆಗಿದ್ದು, ಎಲ್ಲವೂ ನಡೆದಿದೆ. ಹೀಗಿದ್ದರೂ ಕೂಡ ಎಲ್ಲಿಯೂ ಮಂಗಳಾ ಪತ್ತೆಯೇ ಇಲ್ಲ. ಮಂಗಳಾ ಪಾತ್ರವೇ ಇಲ್ಲದಂತೆ ಮಾಡಿದ್ದಾರೆ. ಇದು ವೀಕ್ಷಕರಿಗೂ ಕೂಡ ಅಚ್ಚರಿ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

