ಬೆಂಗಳೂರು: ದೇವರು, ಜ್ಯೋತಿಷ್ಯ, ವಾಸ್ತು ವಿಚಾರಗಳಲ್ಲಿ ಅಪಾರ ನಂಬಿಕೆಯುಳ್ಳ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇನ್ನು ಮುಂದೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಗೆ ತಮ್ಮ ಕುರ್ಚಿಯನ್ನು ಉತ್ತರಕ್ಕೆ ಮುಖ ಮಾಡುವಂತೆ ವ್ಯವಸ್ಥೆ ಮಾಡಲು ಸೂಚಿಸಿದ ಘಟನೆ ನಡೆಯಿತು.
ಸಂಪುಟ ಸಭೆ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಮೊದಲ ಸುದ್ದಿಗೋಷ್ಠಿಗೆ ಆಗಮಿಸಿದ ಮುಖ್ಯಮಂತ್ರಿ ಅವರು, ತಾವು ಮತ್ತು ಸಂಪುಟ ಸಹೋದ್ಯೋಗಿಗಳು ಕುಳಿತುಕೊಳ್ಳಲು ದಕ್ಷಿಣಕ್ಕೆ ಮುಖ ಮಾಡಿರುವುದು ಕಂಡಿತು. ಇದನ್ನು ಗಮನಿಸಿದ ಶಿವಕುಮಾರ್ ಅವರು, ಬದಲಾವಣೆ ಮಾಡಲು ಸೂಚಿಸಿದರು. ಆದರೆ ವಿದ್ಯುನ್ಮಾನ ಮಾಧ್ಯಮದ ಸ್ನೇಹಿತರು ‘ಸರ್ ನಾವಾಗಲೇ ಲೈವ್ ಕವರೇಜಿಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈಗ ಬದಲಾವಣೆ ಮಾಡುವುದು ಕಷ್ಟವಾಗುತ್ತದೆ’ ಎಂದರು. ಆಗ, ಡಿ.ಕೆ.ಶಿವಕುಮಾರ್ ಅವರು, ಇನ್ನು ಮುಂದೆ ಪತ್ರಿಕಾಗೋಷ್ಠಿಗೆ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳುವಂತೆ ಕುರ್ಚಿ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
10:22 PM (IST) Jun 04
09:54 PM (IST) Jun 04
ರಸ್ತೆ ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಗೆ ಬೈಕ್ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಅವರ ಪತಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ..
09:36 PM (IST) Jun 04
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಹಿರಿಯ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳ ಅನುಭವವನ್ನು ಪಡೆದು ಆಡಳಿತ ನಡೆಸುವುದಾಗಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ..
09:34 PM (IST) Jun 04
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ 13 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಿಯಾಂಕ್ ಖರ್ಗೆಗೆ ಗೃಹ ಇಲಾಖೆ ಸಿಕ್ಕರೆ, ಜಲಸಂಪನ್ಮೂಲ ಖಾತೆ ನೀಡಿದ್ದಕ್ಕೆ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರಿಗೆ ಯಾವ ಖಾತೆ ನೀವೇ ನೋಡಿ..
09:33 PM (IST) Jun 04
ಜಾಲಹಳ್ಳಿ ಈಸ್ಟ್‌ನ 'ಶ್ರೀರಾಮ್ ಸಮೀಕ್ಷಾ' ಅಪಾರ್ಟ್‌ಮೆಂಟ್ ನಿವಾಸಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರತಿ ವರ್ಷ ತಮ್ಮ ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಭೂ ವಿವಾದದ ಕಾರಣ ಅಭಿವೃದ್ಧಿ ಕಾಣದ ಈ ರಸ್ತೆಯು ಕಸದ ಡಂಪ್‌ಯಾರ್ಡ್ ಆಗಿ ಮಾರ್ಪಟ್ಟಿದೆ.
08:53 PM (IST) Jun 04
08:50 PM (IST) Jun 04
'ಬ್ಲಾಸ್ಟ್' ಸಿನಿಮಾ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ನಟ ಅರ್ಜುನ್ ಸರ್ಜಾ, ತಾವು ಬಾಲನಟನಾಗಿದ್ದಾಗ ನಡೆದ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ನಿರ್ದೇಶಕರೊಬ್ಬರು ತನಗೆ ಕಪಾಳಮೋಕ್ಷ ಮಾಡಿದ್ದರಂತೆ.
08:49 PM (IST) Jun 04
ಬಿಗ್ ಬಾಸ್ ಕನ್ನಡ ಒಟಿಟಿ ಸೋನು ಶ್ರೀನಿವಾಸ್ ಗೌಡ ಅವರು ಹೊಸ ಕಾರ್ ತಗೊಂಡಿದ್ದಾರೆ. 25 ಲಕ್ಷ ರೂಪಾಯಿ ಕಾರ್‌ಗೆ ಎಲ್ಲಿಂದ ಹಣ ಬಂತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದು, ಈ ಬಗ್ಗೆ Sonu Srinivas Gowda ಅವರು ಮಾತನಾಡಿದ್ದಾರೆ.
08:44 PM (IST) Jun 04
ಪ್ರತಿದಿನ ಸೋಪು, ಶಾಂಪೂ ಮತ್ತು ಗಟ್ಟಿಯಾದ ನೀರಿನ (Hard water) ನಿರಂತರ ಸಂಪರ್ಕಕ್ಕೆ ಬರುವುದರಿಂದ ಪ್ಲಾಸ್ಟಿಕ್ ಬಕೆಟ್‌ಗಳ ಮೇಲೆ ಉಪ್ಪಿನಂಶದ ಬಿಳಿ ಕಲೆಗಳು ಮತ್ತು ಜಿಡ್ಡು ಕುಳಿತುಕೊಳ್ಳುವುದು ಸಾಮಾನ್ಯ. ಅನೇಕ ಬಾರಿ ನಾವು ಇವುಗಳನ್ನು ಸ್ವಚ್ಛಗೊಳಿಸಲು ಕಷ್ಟಪಟ್ಟು ಉಜ್ಜುತ್ತೇವೆ ಅಥವಾ ಹೊಸ ಬಕೆಟ್ ಖರೀದಿಸಲು ಆಲೋಚಿಸುತ್ತೇವೆ. ಆದರೆ, ಹೀಗೆ ಮಾಡಿ!
08:15 PM (IST) Jun 04
Kannada Actress Photos: ನಟಿ ಶುಭಾ ಪೂಂಜ ಅವರು ಮದುವೆಯಾಗಿ ನಾಲ್ಕು ವರ್ಷಗಳಾಗಿತ್ತು. ಪ್ರೀತಿಸಿ ಮದುವೆಯಾದ ಈ ಜೋಡಿ ಈಗ ಕೋರ್ಟ್ ಮೆಟ್ಟಿಲೇರಿದೆ. ಹೀಗೆ ಬಹಳ ಕಡಿಮೆ ಟೈಮ್‌ಗೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿ ದೂರ ಆದ ಕನ್ನಡ ನಟಿಯರು ಇವರು! ಯಾರು? ಯಾರು?
08:13 PM (IST) Jun 04
ದಶಕಗಳ ನಂತರ 'ನ್ಯೂ ವರ್ಲ್ಡ್ ಸ್ಕ್ರೂವರ್ಮ್' ಎಂಬ ಮಾಂಸ ತಿನ್ನುವ ಪರಾವಲಂಬಿ ಹುಳ ಮತ್ತೆ ಕಾಣಿಸಿಕೊಂಡಿದೆ. ಇದು ಗಾಯಗಳಲ್ಲಿ ಮೊಟ್ಟೆಯಿಟ್ಟು, ಮಾಂಸವನ್ನು ತಿನ್ನುವ ಮೂಲಕ ಮಾರಣಾಂತಿಕವಾಗಬಲ್ಲದು. ಇದನ್ನು ನಿಯಂತ್ರಿಸಲು ಕೃಷಿ ಇಲಾಖೆ ಕ್ವಾರಂಟೈನ್ ಮತ್ತು ಸಂತಾನಶಕ್ತಿಹೀನ ನೊಣಗಳ ತಂತ್ರವನ್ನು ಬಳಸುತ್ತಿದೆ.
07:06 PM (IST) Jun 04
06:19 PM (IST) Jun 04
ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು, ಇದು ಕೇವಲ ಸೌಜನ್ಯ ಭೇಟಿಯಾಗಿದ್ದು, ಯಾವುದೇ ರಾಜಕೀಯ ಅಜೆಂಡಾ ಅಥವಾ ವಿಶೇಷ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
05:58 PM (IST) Jun 04
ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ತಾವು ಈ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಅಂತಿಮ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್‌ನದ್ದೇ ಆಗಿದ್ದು, ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
05:41 PM (IST) Jun 04
ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳ ನಡುವೆಯೇ ವಿಧಾನಸಭೆ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಸಚಿವ ಸ್ಥಾನ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
05:41 PM (IST) Jun 04
05:26 PM (IST) Jun 04
ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಭಿನ್ನಮತಗೊಂಡಿರುವ ಕಾಂಗ್ರೆಸ್ ಘಟಕಗಳಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟಿಸ ಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅದ್ಯಕ್ಷ ಬಿ.ಕೆ.ಹರಿಪ್ರಾಸದ್ ಸೂಚನೆ ನೀಡಿದರು.
03:56 PM (IST) Jun 04
ಬೆಂಗಳೂರಿನ 17 ವರ್ಷದ ವಿದ್ಯಾರ್ಥಿನಿ ದಿವಾ ಉತ್ಕರ್ಷ, ತಮ್ಮ 'ಪ್ರಾಜೆಕ್ಟ್ ಸೂರ್ಯ' ಸಂಸ್ಥೆಯ ಮೂಲಕ ಮಾಡಿದ ಸಮಾಜ ಸೇವೆಗಾಗಿ 'ಫೋರ್ಬ್ಸ್ 30 ಅಂಡರ್ 30 ಏಷ್ಯಾ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ಸಹೋದರನಿಗೆ ಟೈಪ್ 1 ಮಧುಮೇಹ ಪತ್ತೆಯಾದ ನಂತರ ಪ್ರೇರಿತರಾಗಿ ಸ್ಥಾಪಿಸಿದ ಈ ಸಂಸ್ಥೆ ನೆರವು ನೀಡಿದೆ.
02:39 PM (IST) Jun 04
ಕರ್ನಾಟಕ ಪೊಲಿಟಿಕ್ಸನಲ್ಲಿ ಡಿಕೆಶಿ ಅನ್ನೊ ಹೊಸ ಸುನಾಮಿ ಎದ್ದಿದೆ. ಇಷ್ಟು ದಿನ ಉಪ ಮುಖ್ಯಮಂತ್ರಿ ಆಗಿದ್ದ ಡಿಕೆ ಶಿವಕುಮಾರ್, ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ರಾಜಕಾರಣ ಅನ್ನೋ ಕಾರ್ಕೋಟಕವನ್ನ ಗಟ ಗಟ ಅಂತ ಕುಡಿದು ಅರಗಿಸಿಕೊಂಡಿರೋ ಕನಕಪುರದ ಬಂಡೆ ರಾಜಕಾರಣಕ್ಕೆ ಬರೋ ಮೊದಲು ಏನಾಗಿದ್ರು ಅಂತ ನೋಡಿದ್ರೆ ಅಲ್ಲಿ ಸಿಗೋದು ಸಿನಿಮಾ ನಂಟು!
01:26 PM (IST) Jun 04
01:13 PM (IST) Jun 04
01:09 PM (IST) Jun 04
12:51 PM (IST) Jun 04
ತೋಕಸಂದ್ರ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಹೊರಗುತ್ತಿಗೆ ನೌಕರನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
12:27 PM (IST) Jun 04
ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಕ್ಲಬ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ಮೌಲ್ಯದ ಅಕ್ರಮಗಳ ಕುರಿತು ಪ್ರಧಾನಮಂತ್ರಿಗಳ ಕಚೇರಿಗೆ ದೂರು ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಕೋರಿದೆ.
11:42 AM (IST) Jun 04
ತುಮಕೂರು ವಿಶ್ವವಿದ್ಯಾಲಯದ 19 ನೇ ಘಟಿಕೋತ್ಸವದಲ್ಲಿ ಗೋಲ್ಡ್ ಮೆಡಲಿಸ್ಟ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು ಹಣದ ಚೆಕ್ ನೀಡಿರುವುದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿನ್ನದ ಪದಕ ತಯಾರಿಕೆ, ವಿತರಣೆಗೆ ಗುತ್ತಿಗೆ ನೀಡಿದ್ದ ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ಹಣದೊಂದಿಗೆ ನಾಪತ್ತೆ!
11:33 AM (IST) Jun 04
ಕರ್ನಾಟಕದ ಕನಿಷ್ಠ ವೇತನ ಹೆಚ್ಚಳವು ಉದ್ಯೋಗದಾತರಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ಜಾಗತಿಕ ಸಂಶೋಧನೆಗಳು ಮತ್ತು ಆರ್ಥಿಕ ವಿಶ್ಲೇಷಣೆಗಳು ವೇತನ ಹೆಚ್ಚಳದಿಂದ ಉದ್ಯೋಗ ನಷ್ಟವಾಗುವುದಿಲ್ಲ, ಬದಲಿಗೆ ಸಣ್ಣ ಉದ್ಯಮಗಳ ಸಂಕಷ್ಟಕ್ಕೆ ಮಾರುಕಟ್ಟೆಯಲ್ಲಿನ ದೈತ್ಯ ಕಂಪನಿಗಳ ಏಕಸ್ವಾಮ್ಯವೇ ಪ್ರಮುಖ ಕಾರಣ
11:23 AM (IST) Jun 04
09:57 AM (IST) Jun 04
08:54 AM (IST) Jun 04
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಗಳ ಮಠದ ಹುಂಡಿಯಲ್ಲಿ ಈ ಬಾರಿಯೂ ದಾಖಲೆ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 22 ದಿನಗಳಲ್ಲಿ ಒಟ್ಟು 4 ಕೋಟಿ 35 ಲಕ್ಷ 25 ಸಾವಿರ 136 ರೂಪಾಯಿ ಸಂಗ್ರಹವಾಗಿದೆ. ಆದರೆ ಈ ಬಾರಿ ಚಿನ್ನ ಬೆಳ್ಳಿ ಕಾಣಿಕೆ ಇಳಿಮುಖವಾಗಿದೆ.
08:27 AM (IST) Jun 04
ಡಿಕೆ ಶಿವಕುಮಾರ್ ಬಳಿಕ ಕೆಪಿಸಿಸಿ ಅಧ್ಯಕ್ಷರು ಯಾರು ಎಂಬ ಪ್ರಶ್ನೆಗೆ ಸತೀಶ್ ಜಾರಕಿಹೊಳಿ ಎಂಬ ಉತ್ತರ ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿತ್ತು. ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನದ ಜೊತೆ ಕೆಪಿಸಿಸಿ ಸ್ಥಾನವನ್ನು ಸಹ ಜಾರಕಿಹೊಳಿ ಕೇಳಿದ್ರು ಎನ್ನಲಾಗಿತ್ತು.
08:10 AM (IST) Jun 04
ಶಿವಮೊಗ್ಗ-ಶೃಂಗೇರಿ-ಮಂಗಳೂರು ನಡುವಿನ ಹೊಸ ರೈಲು ಸಂಪರ್ಕ ಯೋಜನೆಯಲ್ಲಿ ಹೊಸನಗರ ತಾಲೂಕನ್ನು ಸೇರಿಸದೆ ಅನ್ಯಾಯ ಮಾಡಲಾಗುತ್ತಿದೆ ಎಂದು ವರ್ತಕರ ಸಂಘ ಆರೋಪಿಸಿದೆ. ಅನ್ಯಾಯ ಸರಿಪಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಲಾಗಿದೆ.
08:00 AM (IST) Jun 04
ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ 19 ಸಾವಿರಕ್ಕೂ ಅಧಿಕ ಮತ ಪಡೆದ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ, ತಮ್ಮ ಪಕ್ಷ ಬಿಜೆಪಿಗೆ ಸಹಕರಿಸಿದೆ ಮತ್ತು ಹಣಬಲವಿಲ್ಲದೆ ಇಷ್ಟು ಮತ ಹೇಗೆ ಬಂದವು ಎಂಬ ಕಾಂಗ್ರೆಸ್ ನಾಯಕರ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
07:58 AM (IST) Jun 04
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯಾದಗಿರಿ ಮೂಲದ ಯುವಕನೊಬ್ಬ ಧಾರವಾಡದಲ್ಲಿ ಹೃದಯಾಘಾತದಿಂದ ಮೃತಪಟ್ಟರೆ, ಮತ್ತೊಂದು ಘಟನೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕನಕಗಿರಿ ತಾಲೂಕಿನ ಯುವತಿಯೊಬ್ಬಳು ಆತ್ಮ*ಹತ್ಯೆಗೆ ಶರಣಾಗಿದ್ದಾಳೆ. ಈ ಎರಡೂ ದುರಂತ ಘಟನೆಗಳು ಕುಟುಂಬದಲ್ಲಿ ಶೋಕವನ್ನುಂಟು ಮಾಡಿವೆ.
07:42 AM (IST) Jun 04
ಬೆಲಗೂರಿನಿಂದ ಶೃಂಗೇರಿಗೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಗೊಂಡಿದ್ದು, ಎನ್.ಆರ್.ಪುರ ಬಸ್ ನಿಲ್ದಾಣದಲ್ಲಿ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು. ಈ ಹೊಸ ಸೇವೆಯು ಶಕ್ತಿ ಯೋಜನೆಯಡಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಇತರ ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
07:32 AM (IST) Jun 04
ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಆದೇಶದ ಮೇರೆಗೆ ಮಂಡ್ಯ ಲೋಕಾಯುಕ್ತ ಪೊಲೀಸರು ಬೇಲೂರು ಮತ್ತು ಬೇವಿನಹಳ್ಳಿ ಗ್ರಾಮ ಪಂಚಾಯ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಪಿಡಿಒಗಳ ನಿವಾಸ ಹಾಗೂ ಕಚೇರಿಗಳಲ್ಲಿ ಇ-ಸ್ವತ್ತು, ತೆರಿಗೆ ಸಂಗ್ರಹ, ಲೇ-ಔಟ್ ಶುಲ್ಕ ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿವೆ.
07:24 AM (IST) Jun 04
07:10 AM (IST) Jun 04
ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಒಂದು ವರ್ಷವಾಗಿದೆ. ಈ ಘಟನೆಯಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು.