ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಭಿನ್ನಮತಗೊಂಡಿರುವ ಕಾಂಗ್ರೆಸ್ ಘಟಕಗಳಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟಿಸ ಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅದ್ಯಕ್ಷ ಬಿ.ಕೆ.ಹರಿಪ್ರಾಸದ್ ಸೂಚನೆ ನೀಡಿದರು.
ಗಂಗಾವತಿ (ಜೂ.04): ಗಂಗಾವತಿ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಭಿನ್ನಮತಗೊಂಡಿರುವ ಕಾಂಗ್ರೆಸ್ ಘಟಕಗಳಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟಿಸ ಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅದ್ಯಕ್ಷ ಬಿ.ಕೆ.ಹರಿಪ್ರಾಸದ್ ಸೂಚನೆ ನೀಡಿದರು ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಬಿ.ಕೆ.ಹರಿಪ್ರಸಾದ್ ಅವರ ನಿವಾಸಕ್ಕೆ ತೆರಳಿ ಶುಭಕೋರಿದ ನಂತರ ದೂರವಾಣಿ ಮೂಲಕ ಪತ್ರಕರ್ತರ ಜೊತೆ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸಾರಿಥ್ಯವನ್ನು ನನಗೆ ನೀಡಿದ ಅವಧಿಯಲ್ಲಿ ಪಕ್ಷ ಸಂಘಟಿಸಿ ಬರುವ 2028 ರ ಚುನಾವಣೆಯಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ.
ರಾಜಕೀಯ ನನಗೆ ಗೊತ್ತಿದೆ
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಂತೆ ತಿಳಿಸಿದ್ದಾರೆಂದು ಹೇಳಿದರು. ಗಂಗಾವತಿ ಕಾಂಗ್ರೆಸ್ ರಾಜಕೀಯ ನನಗೆ ಗೊತ್ತಿದೆ ಎಲ್ಲಾ ಮುಖಂಡರು ತಮ್ಮ ಭಿನ್ನಮತ ಬಿಟ್ಟು ಒಗ್ಗಟ್ಟಾಗಿ ಶ್ರಮಿಸಿರಿ ಎಂದು ತಿಳಿಸಿದ್ದು. ಈ ಹಿನ್ನೆಲೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದರು.
ತಾವು ಮತ್ತು ಮುಖ್ಯಮಂತ್ರಿಗಳು ರಾಜ್ಯದ ಪ್ರವಾಸದ ಜೊತೆಗೆ ಸರಕಾರದ ಅಭಿವೃದ್ದಿ ಕಾರ್ಯಗಳ ಅನುಷ್ಠಾನಗೊಂಡಿರುವದರ ಬಗ್ಗೆ ಪ್ರಚಾರ ಮತ್ತು ಪಕ್ಷದ ಸಂಘಟನೆಗೆ ರಾಜ್ಯ ಪ್ರವಾಸ ಕೈಗೊಳ್ಳುವದಾಗಿ ಹರಿಪ್ರಸಾದ್ ತಿಳಿಸಿದ್ದಾರೆಂದು ಹೇಳಿದರು.


