ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಕ್ಲಬ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ಮೌಲ್ಯದ ಅಕ್ರಮಗಳ ಕುರಿತು ಪ್ರಧಾನಮಂತ್ರಿಗಳ ಕಚೇರಿಗೆ ದೂರು ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಕಾರ್ಯಾಲಯವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಕೋರಿದೆ.
ವರದಿ: ಚೇತನ್, ಕ್ರೈಂ ಬ್ಯೂರೋ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಐಷಾರಾಮಿ ಕ್ಲಬ್ ವಿರುದ್ಧ ಪ್ರಧಾನಮಂತ್ರಿಗಳ ಕಚೇರಿಗೆ ದೂರು ಸಲ್ಲಿಕೆಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಕಾರ್ಯಾಲಯ, ಕ್ಲಬ್ ವಿರುದ್ಧದ ಅಕ್ರಮಗಳ ಆರೋಪದ ಕುರಿತು ಮಾಹಿತಿ ಕೇಳಿದೆ. ನಗರದ ಪ್ರಖ್ಯಾತ ಬೌರಿಂಗ್ ಕ್ಲಬ್ ನಲ್ಲಿ ಅಕ್ರಮ ನಡೆದಿದೆ ಎಂದು ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಕೆಯಾಗಿತ್ತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಪ್ರಧಾನಿ ಕಚೇರಿ ಮಾಹಿತಿ ಕೇಳಿದೆ.
ಬೌರಿಂಗ್ ಕ್ಲಬ್ ವಿರುದ್ಧ ಕೇಳಿ ಬಂದ ಆರೋಪಗಳೇನು?
- ಕ್ಲಬ್ ನಿಯಮಗಳ ಉಲ್ಲಂಘಿಸಿ 400 ಕೋಟಿಯಷ್ಟು ಖರ್ಚು ಮಾಡಿರುವ ಆರೋಪ
- ಬಾಗೇಪಲ್ಲಿ ಬಳಿ 10 ಕೋಟಿ ಬೆಲೆ ಬಾಳುವ ಜಮೀನಿಗೆ 90 ಕೋಟಿ ಕೊಟ್ಟು ಖರೀದಿ
- ಸರ್ಕಾರದಿಂದ ಲೀಸ್ ಪಡೆದ ಜಾಗದಲ್ಲಿ ಅಕ್ರಮ ನಿರ್ಮಾಣ
- ಅಕ್ರಮದ ತನಿಖೆ ಮಾಡುವವರಿಗೆಲ್ಲ ಕ್ಲಬ್ ಸದಸ್ಯತ್ವ
- ಕ್ಲಬ್ ಸದಸ್ಯರ ಸಂಖ್ಯೆ ಮೀರಿದ್ರು ಹಣ ಪಡೆದು ಹೊಸ ಸದಸ್ಯರ ನೇಮಕ
ಮುಖ್ಯಮಂತ್ರಿಗಳಿಗೂ ದೂರು ಸಲ್ಲಿಕೆ
ಈ ಕ್ಲಬ್ ಅಕ್ರಮದ ಬಗ್ಗೆ ಸಿಎಂ ಕಚೇರಿಗೂ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಅಗತ್ಯ ತನಿಖೆ ನಡೆಸುವಂತೆ ಸಹಕಾರ ಸಂಘಗಳ ನಿಬಂಧಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಉಲ್ಲಂಘನೆ
ಬೌರಿಂಗ್ ಕ್ಲಬ್‌ನಲ್ಲಿ ಹಲವು ಐಎಸ್ಎಸ್ ಮತ್ತು ಐಪಿಎಸ್ ಅಧಿಕಾರಿಗಳು ರಿಯಾಯಿತಿ ದರದಲ್ಲಿ ಸದಸ್ಯತ್ವ ಪಡೆದುಕೊಂಡಿರುವ ಆರೋಪ ಸಹ ಕೇಳಿ ಬಂದಿದೆ. ಬೌರಿಂಗ್ ಕ್ಲಬ್ ಸದಸ್ಯತ್ವಕ್ಕೆ 15 ಲಕ್ಷ ರೂ. ಪಾವತಿಸಬೇಕು. ಆದ್ರೆ ಅಧಿಕಾರಿಗಳು 5 ಲಕ್ಷ ರೂ.ಗೆ ಸದಸ್ಯತ್ವ ಪಡೆದುಕೊಂಡಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಉದ್ಯೋಗಕ್ಕೆ ಅಗ್ಗದ ದುಡಿಮೆ ಅಗತ್ಯ ಎಂಬ ಕಲ್ಪನೆ, ಕರ್ನಾಟಕದಲ್ಲಿ ಕನಿಷ್ಠ ವೇತನ ಹೆಚ್ಚಳದಿಂದ ಉದ್ಯೋಗ ನಷ್ಟವಾಗುವುದೇ?
ಯಾವುದೇ ಸರ್ಕಾರಿ ಅಧಿಕಾರಿ ಲಕ್ಷಾಂತರ ರೂಪಾಯಿ ರಿಯಾಯತಿ ಪಡೆಯಬೇಕು ಎಂದರೆ ಸರ್ಕಾರಕ್ಕೆ ಮಾಹಿತಿ ನೀಡಬೇಕು, ಪೂರ್ವಾನುಮತಿ ಪಡೆದುಕೊಳ್ಳಬೇಕು. ಆದರೆ ಇದ್ಯಾವುದು ಇಲ್ಲದೇ ಸರ್ಕಾರಿ ಅಧಿಕಾರಿಗಳು ಸದಸ್ಯತ್ವ ಪಡೆದುಕೊಂಡಿರುವ ಆರೋಪಗಳು ಕೇಳಿ ಬಂದಿವೆ.
ಇದನ್ನೂ ಓದಿ: ಕಾರು, ಭದ್ರತೆ ಇಲ್ಲದೇ ರಾಜಭವನದಿಂದ ವಿಧಾನಸೌಧಕ್ಕೆ ನಡೆದಕೊಂಡು ಬಂದ ಸಿಂಪಲ್ ಸಚಿವ ಕೃಷ್ಣಬೈರೇಗೌಡ!


