ಬೆಲಗೂರಿನಿಂದ ಶೃಂಗೇರಿಗೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಗೊಂಡಿದ್ದು, ಎನ್.ಆರ್.ಪುರ ಬಸ್ ನಿಲ್ದಾಣದಲ್ಲಿ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು. ಈ ಹೊಸ ಸೇವೆಯು ಶಕ್ತಿ ಯೋಜನೆಯಡಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಇತರ ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ನರಸಿಂಹರಾಜಪುರ: ಬೆಲಗೂರಿನಿಂದ ಶೃಂಗೇರಿಗೆ ನೂತನ ಬಸ್ ಸಂಚಾರ ಪ್ರಾರಂಭಿಸಿರುವುದು ಮಹಿಳಾ ಪ್ರಯಾಣಿಕರಿಗೆ ಅತ್ಯಂತ ಅನುಕೂಲವಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಇಂದಿರಾನಗರ ರಘು ಹರ್ಷ ವ್ಯಕ್ತಪಡಿಸಿದರು. ಮಂಗಳವಾರ ಬೆಲಗೂರಿನಿಂದ ಶೃಂಗೇರಿ ಮಾರ್ಗಕ್ಕೆ ಕೆಎಸ್.ಆರ್.ಟಿ. ಬಸ್ ನೂತನವಾಗಿ ಸಂಚಾರ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೃಂಗೇರಿ ಕ್ಷೇತ್ರದ ಶಾಸಕರು ಹಾಗೂ ಹೊಸದುರ್ಗ ಶಾಸಕರು ಈ ಬಸ್ ಸಂಚಾರಕ್ಕಾಗಿ ಶ್ರಮವಹಿಸಿದ್ದು ಇದರಿಂದ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರವಾಗಿದೆ. ಈ ಮಾರ್ಗವೂ ಕೂಡ ಸೂಕ್ತ ಮಾರ್ಗವಾಗಿದೆ. ಈ ಬಸ್ಸಿನ ಸದುಪಯೋಗವನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲ

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಈ ಬಸ್ ಸಂಚಾರದಿಂದ ಮಹಿಳಾ ಯಾತ್ರಿಕರಿಗೆ ಧಾರ್ಮಿಕ ಸ್ಥಳಕ್ಕೆ ತೆರಳಲು ಹಾಗೂ ತರೀಕೆರೆ ಮಾರ್ಗಕ್ಕೆ ಅಧಿಕಾರಿಗಳಿಗೆ, ಕುವೆಂಪು ಯೂನಿವರ್ಸಿಟಿಗೆ ತೆರಳುವ ವಿದ್ಯಾರ್ಥಿಗಳಿಗೂ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಪೂಜೆ ಸಲ್ಲಿಸಿ ಸಿಹಿ ಹಂಚಿಕೆ

ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಬಸ್‌ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ, ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಇದೇ ಸಂದರ್ಭದಲ್ಲಿ ನೂತನ ಬಸ್‌ನ ಚಾಲಕ ಹಾಗೂ ನಿರ್ವಾಹಕರಿಗೆ ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಬೇಸಿಲ್, ನಾಗರಾಜ್, ಹೂವಮ್ಮ, ನಿತ್ಯಾನಂದ, ಕಾಂಗ್ರೆಸ್ ಪಕ್ಷದ ಮುಖಂಡರಾದ ಈಚಿಕೆರೆ ಸುಂದರೇಶ್, ಸಮೀರಾ ನಹೀಂ, ಬಿ.ವಿ.ಉಪೇಂದ್ರ, ಸುನೀಲ್‌ಕುಮಾರ್, ನಾಗೇಶ್‌ಪೂಜಾರಿ, ಪೊಲೀಸ್ ಠಾಣಾಧಿಕಾರಿ ನೂತನ್ ಮತ್ತಿತರರು ಇದ್ದರು.