- Home
- Karnataka Districts
- ಉಚಿತ ಬಸ್ ಪಾಸ್ಗೆ ಅರ್ಜಿ ಸಲ್ಲಿಸೋದು ಹೇಗೆ? ವಿದ್ಯಾರ್ಥಿಗಳಿಗೆ ಹಂತ ಹಂತದ ಮಾಹಿತಿ ಇಲ್ಲಿದೆ
ಉಚಿತ ಬಸ್ ಪಾಸ್ಗೆ ಅರ್ಜಿ ಸಲ್ಲಿಸೋದು ಹೇಗೆ? ವಿದ್ಯಾರ್ಥಿಗಳಿಗೆ ಹಂತ ಹಂತದ ಮಾಹಿತಿ ಇಲ್ಲಿದೆ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿದ್ದಾರೆ. ಈ ಮೊದಲು ಶುಲ್ಕವಿದ್ದ ಬಸ್ ಪಾಸ್‌ಗಳು ಈಗ ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿದ್ದು, ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ನಿನ್ನೆ (ಮೇ 4) ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಲೇ ಆರು ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್. ಈ ಮೊದಲು 150 ರೂಪಾಯಿಗಳಿಂದ 1,830 ರೂಪಾಯಿಗಳವರೆಗೆ ಈ ದರವಿತ್ತು. ಅದೀಗ ಸಂಪೂರ್ಣ ಮನ್ನಾ ಮಾಡಿ ನೂತನ ಸಿಎಂ ಡಿಕೆಶಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹೆಣ್ಣುಮಕ್ಕಳಿಗೆ ಇದಾಗಲೇ ಫ್ರೀ ಇದ್ದು, ಗಂಡು ಮಕ್ಕಳು ಉಚಿತವಾಗಿ ಇನ್ನು ಪಾಸ್ ಪಡೆಯಬಹುದು.
ಈ ಮೊದಲು ದರ ಎಷ್ಟಿತ್ತು
ಈ ಮೊದಲು 150 ರೂ. ಸೇವಾ ಶುಲ್ಕ ಸೇರಿ ಒಟ್ಟೂ ಮೊತ್ತ ಹೀಗಿದ್ದವು.
1 ರಿಂದ 7ನೇ ತರಗತಿ 150 ರೂ.
8 ರಿಂದ 10ನೇ ತರಗತಿ (ಬಾಲಕರಿಗೆ) 750 ರೂ.
11 ಮತ್ತು 12ನೇ ತರಗತಿ (ಪಿಯುಸಿ) – 1,050 ರೂ.
ಪದವಿ ಮತ್ತು ಸ್ನಾತಕೋತ್ತರ – 1,300 ರೂ.
ತಾಂತ್ರಿಕ ಮತ್ತು ವೈದ್ಯಕೀಯ – 1,830 ರೂ. ಇತ್ತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 150 ರೂ. ಸೇವಾ ಶುಲ್ಕ ಮಾತ್ರ ಇತ್ತು. ಈಗ ಎಲ್ಲರಿಗೂ ಫ್ರೀ.
ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅದರ ಲಿಂಕ್: https://sevasindhuservices.karnataka.gov.in/buspassservices/
ತಮ್ಮ ಮೊಬೈಲ್ ಫೋನ್ , ಸೈಬರ್ ಸೆಂಟರ್ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಸೈಬರ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸುವವರಿಗೆ ಫಾರ್ಮ್ ಗೆ 10 ರೂ. ಹಾಗೂ ಆನ್ ಲೈನ್ ಸೇವೆಗಾಗಿ 100 ರೂ. ಸೇವಾ ಶುಲ್ಕ ವಿಧಿಸಲಾಗುತ್ತದೆ.
ಏನೇನು ಬೇಕು?
ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಆಧಾರ್ ಕಾರ್ಡ್ , ಪ್ರಸ್ತುತ ಶೈಕ್ಷಣಿಕ ವರ್ಷದ ಕಾಲೇಜು ಅಥವಾ ಶಾಲಾ ಪ್ರವೇಶಾತಿ ರಶೀದಿ ಮತ್ತು ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು ಅಗತ್ಯವಾಗಿವೆ. ಆನ್ ಲೈನ್ ಅರ್ಜಿ ಸಲ್ಲಿಸಿದ ಬಳಿಕ ವಿದ್ಯಾರ್ಥಿಯು ತನ್ನ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ (ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾಯರು) ಸಹಿ ಮತ್ತು ಸಂಸ್ಥೆಯ ಸೀಲು ಪಡೆದುಕೊಳ್ಳಬೇಕು.
ನಂತರ ಅರ್ಜಿಯನ್ನು ಬಿಎಂಟಿಸಿ- ಕೆಎಸ್ಆರ್ಟಿಸಿ ಪಾಸ್ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಅರ್ಜಿ ಅನುಮೋದನೆಯಾದ ಬಳಿಕ ವಿದ್ಯಾರ್ಥಿಯ ಮೊಬೈಲ್ ಸಂಖ್ಯೆಗೆ ಎಸ್ ಎಂಎಸ್ ಸಂದೇಶ ಕಳುಹಿಸಲಾಗುತ್ತದೆ.
ಮೊಬೈಲ್ ಗೆ ಸಂದೇಶ ಬಂದ ನಂತರ ಬೆಂಗಳೂರಿನ ವಿದ್ಯಾರ್ಥಿಗಳು ಮೆಜೆಸ್ಟಿಕ್ , ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಆನೇಕಲ್ ಬಸ್ ನಿಲ್ದಾಣಗಳ ಟಿಟಿಎಂಸಿ ಕೇಂದ್ರಗಳಿಗೆ ಭೇಟಿ ನೀಡಿ ಬಸ್ ಪಾಸ್ ಪಡೆದುಕೊಳ್ಳಬಹುದು.
ಬೆಂಗಳೂರೇತರ ವಿದ್ಯಾರ್ಥಿಗಳ ಕೌಂಟರ್ಗಳು
ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ತಮ್ಮ ಮೊಬೈಲ್ ಫೋನ್ , ಸೈಬರ್ ಸೆಂಟರ್ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಸೈಬರ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸುವವರಿಗೆ ಫಾರ್ಮ್ ಗೆ 10 ರೂ. ಹಾಗೂ ಆನ್ ಲೈನ್ ಸೇವೆಗಾಗಿ 100 ರೂ. ಸೇವಾ ಶುಲ್ಕ ವಿಧಿಸಲಾಗುತ್ತದೆ.
123 ಪಾಸ್ ವಿತರಣಾ ಕೌಂಟರ್‌ಗಳ
ಕ.ರಾ.ರ.ಸಾ.ನಿಗಮ ವ್ಯಾಪ್ತಿಯ 123 ಪಾಸ್ ವಿತರಣಾ ಕೌಂಟರ್‌ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ. ನಿಗಮದ ವೆಬ್ ಸೈಟ್ ವಿಳಾಸ: https://ksrtc.karnataka.gov.in/studentpass
ಹೆಚ್ಚಿನ ಮಾಹಿತಿಗೆ ಸೇವಾ ಸಿಂಧು ಪೋರ್ಟ್ https://ksrtc.karnataka.gov.in/50/%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%20%E0%B2%AC%E0%B2%B8%E0%B3%8D%E2%80%8C%20%E0%B2%AA%E0%B2%BE%E0%B2%B8%E0%B3%8D/kn
ಕ್ಲಿಕ್ ಮಾಡಿ

