Published : Jun 03, 2026, 06:47 AM ISTUpdated : Jun 03, 2026, 10:13 PM IST

Karnataka News Live: Secret Tips - ನೀರಿಗೆ ಕರ್ಪೂರ ಹಾಕಿಕೊಂಡು ಸ್ನಾನ ಮಾಡಿದರೆ ಏನಾಗುತ್ತದೆ? ಇಲ್ಲಿದೆ ಜ್ಯೋತಿಷ್ಯಶಾಸ್ತ್ರದ ರಹಸ್ಯ!

ಸಾರಾಂಶ

ನವದೆಹಲಿ: ಕರ್ನಾಟಕದ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರನ್ನಾಗಿ ನೇಮಕ ಮಾಡಿ ಪಕ್ಷವು ಮಂಗಳವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ. ಈವರೆಗೆ ಸಿಎಂ ಆಗಿದ್ದ ಸಿದ್ದರಾಮಯ್ಯ ಸಿಡಬ್ಲ್ಯುಸಿಯ ಪದನಿಮಿತ್ತ ಸದಸ್ಯರಾಗಿದ್ದರು. ಈಗ ಸಿಎಂ ಸ್ಥಾನದಿಂದ ನಿರ್ಗಮನದ ಕಾರಣ ಕಾಯಂ ಸದಸ್ಯರೆಂದು ನೇಮಿಸಲಾಗಿದೆ.

Camphor

10:13 PM (IST) Jun 03

Secret Tips - ನೀರಿಗೆ ಕರ್ಪೂರ ಹಾಕಿಕೊಂಡು ಸ್ನಾನ ಮಾಡಿದರೆ ಏನಾಗುತ್ತದೆ? ಇಲ್ಲಿದೆ ಜ್ಯೋತಿಷ್ಯಶಾಸ್ತ್ರದ ರಹಸ್ಯ!

ಕರ್ಪೂರ ಸ್ನಾನವು ಆರೋಗ್ಯಕರವಾಗಿದ್ದರೂ, ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸ್ನಾನದ ನೀರಿಗೆ ಅತಿಯಾದ ಕರ್ಪೂರ ಹಾಕಬೇಡಿ; ಒಂದು ಚಿಟಿಕೆ ಪುಡಿ ಸಾಕು. ಈ ನೀರು ನೇರವಾಗಿ ಕಣ್ಣುಗಳಿಗೆ ಬೀಳದಂತೆ ಜಾಗ್ರತೆ ವಹಿಸಿ.

 

Read Full Story

09:29 PM (IST) Jun 03

₹422 ಕೋಟಿ ವೆಚ್ಚದಲ್ಲಿ ಜಿಲ್ಲೆಯ ರೈಲ್ವೆ ಅಭಿವೃದ್ಧಿ - ಚೆನ್ನೈ ಬುಲೆಟ್ ಟ್ರೈನ್ ಮೈಸೂರಿಗೆ ವಿಸ್ತರಿಸಲು ಸಂಸದರ ಮನವಿ

ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಮೈಸೂರು ರೈಲು ನಿಲ್ದಾಣದ ಮೇಲ್ದರ್ಜೆಗೇರಿಕೆ, ತೃತೀಯ ಪ್ರವೇಶ ದ್ವಾರ ನಿರ್ಮಾಣ ಹಾಗೂ ಚೆನ್ನೈ-ಮೈಸೂರು ಬುಲೆಟ್ ಟ್ರೈನ್ ಸಂಪರ್ಕ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೊಡಗಿನಲ್ಲಿ ಯಾವುದೇ ಹೊಸ ರೈಲು ಮಾರ್ಗ ನಿರ್ಮಾಣದ ಪ್ರಸ್ತಾವನೆ ಇಲ್ಲವೆಂದು ಸಚಿವರು ಸ್ಪಷ್ಟಪಡಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
Read Full Story

09:12 PM (IST) Jun 03

ಮನೆ ನಿರ್ಮಾಣ,ಸಂಘಕ್ಕೆ 10 ಲಕ್ಷ ರೂ ಸೇರಿ ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

ಮನೆ ನಿರ್ಮಾಣಕ್ಕೆ ಒಸಿ ಸಿಸಿ ತಲೆನೋವಿಲ್ಲ, ನಿರುದ್ಯೋಗಿಗಳಿಗೆ ತರಬೇತಿ ಹಾಗೂ ಉದ್ಯೋಗ ಅವಕಾಶ, ಉಚಿತ ಬಸ್ ಬಾಸ್ ಸೇರಿ 6 ಮಹತ್ವದ ಘೋಷಣೆ ಹೊರಬಿದ್ದಿದೆ. ಸಿಎಂ ಡಿಕೆ ಶಿವಕುಮಾರ್ ಮಾಡಿದ 6 ಘೋಷಣೆ ವಿವರ ಇಲ್ಲಿದೆ.

 

Read Full Story

09:06 PM (IST) Jun 03

ಡಿಕೆಶಿ ಮುಖ್ಯಮಂತ್ರಿ ಆಗುತ್ತಲೇ ನಟಿ ರಮ್ಯಾ ರಾಜಕೀಯಕ್ಕೆ ರೀ-ಎಂಟ್ರಿ? ಮೋಹಕತಾರೆ ಹೇಳಿದ್ದೇನು

ಡಿ.ಕೆ.ಶಿವಕುಮಾರ್ ಅವರ ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ನಟಿ ರಮ್ಯಾ ಭಾಗವಹಿಸಿದ್ದರು. ಡಿಕೆಶಿ ಅವರ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ತಮ್ಮ ರಾಜಕೀಯ ಮರುಪ್ರವೇಶದ ಕುರಿತ ಪ್ರಶ್ನೆಗೆ 'ಕಾಲ ಕೂಡಿ ಬರಬೇಕು' ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
Read Full Story

08:43 PM (IST) Jun 03

ಕೆಪಿಸಿಸಿಗೆ ಹೊಸ ಸಾರಥಿ - ಬಿ.ಕೆ. ಹರಿಪ್ರಸಾದ್ ನೂತನ ರಾಜ್ಯಾಧ್ಯಕ್ಷ; ಅಧಿಕೃತ ಆದೇಶ ಹೊರಡಿಸಿದ ಎಐಸಿಸಿ!

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ, 'ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ' ನೀತಿಯಂತೆ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕವಾಗಿದೆ. ಎಐಸಿಸಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಈ ಸ್ಥಾನಕ್ಕೆ ನೇಮಿಸಿ ಅಧಿಕೃತ ಆದೇಶ ಹೊರಡಿಸಿದೆ.
Read Full Story

08:39 PM (IST) Jun 03

ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್, ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿವಕುಮಾರ್ ಘೋಷಣೆ

ಮುಖ್ಯಮಂತ್ರಿಯಾಗಿ ಸಚಿವ ಸಂಪುಟ ಸಭೆ ನಡೆಸಿದ ಡಿಕೆ ಶಿವಕುಮಾರ್ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ. ಮೊದಲ ಸುದ್ದಿಗೋಷ್ಠಿಯಲ್ಲಿ ಬಂಪರ್ ಕೊಡುಗೆ ಘೋಷಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ್ದಾರೆ.

 

Read Full Story

08:37 PM (IST) Jun 03

ಕಾಣಿಯೂರು-ಸುಳ್ಯ-ಕೊಡಗು ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಮಾರ್ಗ ಪ್ರಸ್ತಾವನೆ ಇಲ್ಲ! ಯಾಕಿಷ್ಟು ಗೊಂದಲವಾಯ್ತು?

ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು, ಕೊಡಗು ಜಿಲ್ಲೆಯ ಮೂಲಕ ಯಾವುದೇ ಹೊಸ ರೈಲು ಮಾರ್ಗದ ಪ್ರಸ್ತಾವನೆ ಸದ್ಯಕ್ಕೆ ರೈಲ್ವೆ ಸಚಿವಾಲಯದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವರೊಂದಿಗಿನ ಭೇಟಿಯ ನಂತರ, ಈ ಹಿಂದೆ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Read Full Story

08:04 PM (IST) Jun 03

DK Shivakumar - ಇಂದು-ನಿನ್ನೆಯದಲ್ಲ ಈ ಹೋರಾಟ, 8 ವರ್ಷಗಳ ಯಜ್ಞ; ಪಕ್ಕಾ ಪ್ಲಾನ್, ಪಕ್ಕಾ ಆಪರೇಷನ್!

ಡಿ.ಕೆ.ಶಿವಕುಮಾರ್.. ರಾಜಕೀಯದಲ್ಲಿ ಪಕ್ಕಾ ಚದುರಂಗದಾಟಗಾರ.. ಯಾವ ಸಮಯದಲ್ಲಿ ಯಾವ ಕಾಯಿನ್ ಮೂವ್ ಮಾಡಿದ್ರೆ ಏನಾಗುತ್ತೆ ಅನ್ನೋದರ ಕ್ಲಾರಿಟಿ ಅವರಿಗಿದೆ. ಅದೇ ಕ್ಲಾರಿಟಿಯನ್ನ ಇಡ್ಕೊಂಡು, ಪ್ಲಾನ್ ಮಾಡಿ ಸಿಎಂ ಸಿಂಹಾಸನವನ್ನ ತಮ್ಮದಾಗಿಕೊಂಡಿದ್ದಾರೆ ಕನಕಾಧಿಪತಿ.

Read Full Story

07:31 PM (IST) Jun 03

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಬಿ.ಕೆ. ಹರಿಪ್ರಸಾದ್ ಸೇರಿ ನಾಲ್ವರಿಗೆ ಹೈಕಮಾಂಡ್ ಮಣೆ!

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತನ್ನ ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅನುಮೋದಿಸಿದ ಈ ಪಟ್ಟಿಯಲ್ಲಿ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ. ಮೋಹನ್, ಮತ್ತು ಶಿವಣ್ಣ ಮಳವಳ್ಳಿ ಸ್ಥಾನ ಪಡೆದಿದ್ದಾರೆ.
Read Full Story

07:27 PM (IST) Jun 03

ಕೊಡಗಿನ ಮೂಲಕ ರೈಲು ಮಾರ್ಗಕ್ಕೆ ಯಾವುದೇ ಪ್ರಸ್ತಾವನೆ ಇಲ್ಲ - ಸಂಸದ ಯದುವೀರ್ ಒಡೆಯರ್ ಸ್ಪಷ್ಟನೆ

ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ. 

Read Full Story

07:15 PM (IST) Jun 03

ಅರಣ್ಯ ಇಲಾಖೆ ಜೀಪನ್ನೇ ಕದ್ದ ಖದೀಮ - ಆದರೆ ಮಾಡಿದ ಒಂದು ತಪ್ಪಿನಿಂದ ಸಿಕ್ಕಿಬಿದ್ದ!

ಮಂಗಳೂರಿನಲ್ಲಿ ಅರಣ್ಯ ಇಲಾಖೆಯ ಜೀಪನ್ನೇ ಎಗರಿಸಿದ ಖದೀಮನನ್ನು ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಪಡೀಲ್‌ ಅರಣ್ಯ ಇಲಾಖೆಯ ವಸತಿಗೃಹ..

Read Full Story

06:39 PM (IST) Jun 03

ಕಾರು, ಭದ್ರತೆ ಇಲ್ಲದೇ ರಾಜಭವನದಿಂದ ವಿಧಾನಸೌಧಕ್ಕೆ ನಡೆದಕೊಂಡು ಬಂದ ಸಿಂಪಲ್ ಸಚಿವ ಕೃಷ್ಣಬೈರೇಗೌಡ!

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕೃಷ್ಣಬೈರೇಗೌಡರು, ಟ್ರಾಫಿಕ್ ಜಾಮ್‌ನಿಂದಾಗಿ ಮೊದಲ ಸಂಪುಟ ಸಭೆಗೆ ತಡವಾಗಬಾರದೆಂದು ರಾಜಭವನದಿಂದ ವಿಧಾನಸೌಧಕ್ಕೆ ನಡೆದುಕೊಂಡೇ ಬಂದರು. ಅವರ ಈ ಸರಳ ಮತ್ತು ಸಮಯಪ್ರಜ್ಞೆಯ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
Read Full Story

05:37 PM (IST) Jun 03

ಸಿಎಂ ಡಿಕೆ ಶಿವಕುಮಾರ್, 14 ಸಚಿವರ ಪ್ರಮಾಣವಚನ, ಕ್ಯಾಮೆರಾ ಕಣ್ಣಿನಲ್ಲಿ ನಾಯಕರ ಪ್ರತಿಜ್ಞಾವಿಧಿ

ಡಿಕೆ ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಡಿಕೆಶಿ ಜೊತೆಗೆ 13 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಂತ್ರಿಗಳ ಪ್ರಮಾಣವಚನ ಸ್ವೀಕಾರದ ಫೋಟೋ ಇಲ್ಲಿದೆ.

 

Read Full Story

05:31 PM (IST) Jun 03

ವಿಧಾನಸೌಧದ ಮೆಟ್ಟಿಲುಗಳಿಗೆ ಅಕ್ಷತೆ ಪ್ರೋಕ್ಷಣೆ ಮಾಡಿ ಒಳಹೊಕ್ಕ ನೊಣವಿನಕೆರೆ ಅಜ್ಜಯ್ಯ

ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುವ ಮುನ್ನ, ಅವರ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯನವರು ವಿಧಾನಸೌಧಕ್ಕೆ ಆಗಮಿಸಿದರು. ಅವರು ಸಿಎಂ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಶುದ್ಧೀಕರಣ ಮಾಡಿ, ಡಿಕೆಶಿ ಅವರ ಆಡಳಿತ ಸುಗಮವಾಗಿರಲೆಂದು ಪ್ರಾರ್ಥಿಸಿದರು.
Read Full Story

05:29 PM (IST) Jun 03

ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆ ಟ್ರಾಫಿಕ್‌ನಲ್ಲಿ ಪರದಾಟ - ಬೆಂಗಳೂರಿನ ವಿರುದ್ಧ ನೆಟ್ಟಿಗರ ಆಕ್ರೋಶ

ಬೆಂಗಳೂರಿನ ಟ್ರಾಫಿಕ್‌ ಮತ್ತು ಮೂಲಸೌಕರ್ಯ ಸಮಸ್ಯೆಗಳು ಹೊಸತೇನಲ್ಲ. ಆದರೆ, ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆಯೊಬ್ಬರಿದ್ದ ಆಂಬುಲೆನ್ಸ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಘಟನೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ..

Read Full Story

05:28 PM (IST) Jun 03

ವಿಧಾನಸೌಧ ಪ್ರವೇಶಕ್ಕೂ ವಾಸ್ತು; ಉತ್ತರ ಬಾಗಿಲಿನಿಂದ ಹೊಸ ಸಿಎಂ ಡಿ.ಕೆ. ಶಿವಕುಮಾರ್ ಪ್ರವೇಶ!

ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ, ಜ್ಯೋತಿಷಿಗಳ ಸಲಹೆಯಂತೆ ವಾಸ್ತು ಪ್ರಕಾರ ವಿಧಾನಸೌಧದ ಸಾಂಪ್ರದಾಯಿಕ ಪಶ್ಚಿಮ ದ್ವಾರದ ಬದಲು 'ಉತ್ತರ ದ್ವಾರ'ದ ಮೂಲಕ ಪ್ರವೇಶಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ.

Read Full Story

04:39 PM (IST) Jun 03

ವಿಧಾನಸೌಧದಲ್ಲಿ ಕಳಚಿದ 'ಮುಖ್ಯಮಂತ್ರಿ ಸಿದ್ದರಾಮಯ್ಯ' ಬೋರ್ಡ್‌, ಬಿತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಾಮಫಲಕ

ಡಿಕೆ ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಸಿದ್ದರಾಮಯ್ಯ ಅವರ ನಾಮಫಲಕವನ್ನು ತೆಗೆದು ಡಿಕೆ ಶಿವಕುಮಾರ್ ಅವರ ಹೊಸ ನಾಮಫಲಕವನ್ನು ಅಳವಡಿಸಲಾಯಿತು.
Read Full Story

04:38 PM (IST) Jun 03

ಕೊಡಗು ಜೈಲಿನಲ್ಲಿ ಇರಿತಕ್ಕೊಳಗಾದ ಖೈದಿ ಮೈಸೂರು ಆಸ್ಪತ್ರೆಯಲ್ಲಿ ಸಾವು - ಕುಟುಂಬದ ಗಂಭೀರ ಆರೋಪವೇನು?

ಮೂರು ದಿನದ ಹಿಂದೆ ಕೊಡಗಿನ ಜೈಲಿನಲ್ಲಿ ಇರಿತಕ್ಕೆ ಒಳಗಾಗಿದ್ದ ವಿಚಾರಣಾಧೀನ ಖೈದಿ ಇಂದು ಮೈಸೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಖೈದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು..

Read Full Story

04:19 PM (IST) Jun 03

ಆರ್‌ವಿ ರೋಡ್‌-ಜಯನಗರ ಸ್ಟೇಷನ್‌ ನಡುವೆ ಮೆಟ್ರೋ ರೈಲು ನಿಧಾನವಾಗಿ ಚಲಿಸೋದೇಕೆ? ಇಲ್ಲಿದೆ ಅಸಲಿ ರೀಸನ್‌

ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದ ಆರ್‌ವಿ ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ 'ಹನಿಕಾಂಬ್' ಎಂಬ ಗಂಭೀರ ರಚನಾತ್ಮಕ ದೋಷ ಪತ್ತೆಯಾಗಿದೆ. ಈ ಕಾರಣದಿಂದ ರೈಲುಗಳ ವೇಗವನ್ನು ಕಡಿಮೆ ಮಾಡಲಾಗಿದೆ.

Read Full Story

04:19 PM (IST) Jun 03

ಸಂವಿಧಾನ ಹಿಡಿದು 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಡಿ.ಕೆ. ಶಿವಕುಮಾರ್!

ಡಿ.ಕೆ. ಶಿವಕುಮಾರ್ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಡಾ.ಜಿ. ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಹಾಗೂ 12 ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ವಿದ್ಯಾರ್ಥಿ ನಾಯಕತ್ವದಿಂದ ಮುಖ್ಯಮಂತ್ರಿ ಹುದ್ದೆಯವರೆಗಿನ ಅವರ ರಾಜಕೀಯ ಪ್ರಯಾಣದ ಸಂಪೂರ್ಣ ಚಿತ್ರಣ ಇಲ್ಲಿದೆ.
Read Full Story

03:35 PM (IST) Jun 03

'ಈ ಬಂಡೆ ಸುಮ್ಮನೆ ರೂಪುಗೊಂಡಿಲ್ಲ!' - ತಂದೆಯ ಶ್ರಮದ ದಿನಗಳನ್ನು ನೆನೆದು ಕಣ್ಣಾಲಿ ತುಂಬಿಕೊಂಡ ಐಶ್ವರ್ಯಾ ಹೆಗ್ಡೆ

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ, ಅವರ ಪುತ್ರಿ ಐಶ್ವರ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ತಂದೆಯನ್ನು 'ಬಂಡೆ' ಎಂದು ಕರೆಯುವುದರ ಹಿಂದಿನ ಕಠಿಣ ಶ್ರಮವನ್ನು ನೆನಪಿಸಿಕೊಂಡಿದ್ದಾರೆ.

Read Full Story

01:58 PM (IST) Jun 03

ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಾಧ್ಯತೆ! ಡಿಕೆಶಿ ಹಿಂದೆ ಮಾತು ಕೊಟ್ಟಿದ್ದೇನು?

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆಯೇ ಅಥವಾ ಹಿರಿಯ ಶಾಸಕ ರಾಮಲಿಂಗಾರೆಡ್ಡಿಗೆ ನೀಡುತ್ತಾರೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಿದೆ.

Read Full Story

12:57 PM (IST) Jun 03

ಡಿಕೆ ಶಿವಕುಮಾರ್ ಸಂಪುಟದ ಮೊದಲ ಹೆಜ್ಜೆ - 13 ಸಚಿವರು, 14 ಘಟಾನುಘಟಿ ನಾಯಕರಿಗೆ ನಿರಾಸೆ?

ಡಿಕೆ ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಅವರೊಂದಿಗೆ 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆಗಳಿದ್ದು, ಮೊದಲ ಪಟ್ಟಿಯಲ್ಲಿ ಹಲವು ಘಟಾನುಘಟಿ ನಾಯಕರಿಗೆ ಸ್ಥಾನ ಸಿಕ್ಕಿಲ್ಲ.
Read Full Story

12:56 PM (IST) Jun 03

Karnataka CM Oath ceremony - ವಿಜಯಾನಂದ ಕಾಶಪ್ಪನವರ್‌ಗೆ ಕೈ ತಪ್ಪಿದ ಸಚಿವ ಸ್ಥಾನ, ಪ್ರತಿಭಟನೆ ನಡೆಸಿದ ಬೆಂಬಲಿಗರು ಪೊಲೀಸರ ವಶಕ್ಕೆ

ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂಭ್ರಮದ ನಡುವೆಯೇ, ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಭದ್ರತಾ ಕಾರಣಗಳಿಂದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
Read Full Story

12:53 PM (IST) Jun 03

ಮುಖ್ಯಮಂತ್ರಿ ಆಗುವ ಮುನ್ನವೇ ರಾಜಕೀಯ ತಂತ್ರಗಾರಿಕೆ, 13 ಮಂದಿ ಸಚಿವರಾಗಿ ಪದಗ್ರಹಣ, ಡಿಕೆಶಿ ಸೈನ್ಯದ ಪಟ್ಟಿ ಇಲ್ಲಿದೆ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್, ಪ್ರಮಾಣ ವಚನಕ್ಕೂ ಮುನ್ನ ಹಿರಿಯ ನಾಯಕರಾದ ಯಡಿಯೂರಪ್ಪ ಹಾಗೂ ದೇವೇಗೌಡರನ್ನು ಭೇಟಿ ಮಾಡಿ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸಿದ್ದಾರೆ. ಇದರೊಂದಿಗೆ, ತಮ್ಮ ಸಚಿವ ಸಂಪುಟದಲ್ಲಿ ಎಲ್ಲಾ ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ಸಮೀಕರಣವನ್ನೂ ಸಾಧಿಸಿದ್ದಾರೆ.
Read Full Story

12:37 PM (IST) Jun 03

ಪ್ರಮಾಣ ವಚನಕ್ಕೂ ಮುನ್ನ BS ಯಡಿಯೂರಪ್ಪ, HD ದೇವೇಗೌಡರನ್ನು ಭೇಟಿಯಾದ ಡಿಕೆ ಶಿವಕುಮಾರ್

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ, ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ರಾಮನಗರ ಜಿಲ್ಲೆಯಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.
Read Full Story

12:04 PM (IST) Jun 03

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಮತ್ತೆರಡು ಚಾಲಕ ರಹಿತ ರೈಲು ಸೇರ್ಪಡೆ, ಸೇವಾ ಅವಧಿ ಮತ್ತೆ ಪರಿಷ್ಕರಣೆ

ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (ಆರ್‌ವಿ ರಸ್ತೆ - ಬೊಮ್ಮಸಂದ್ರ) ಎರಡು ಹೊಸ ಚಾಲಕರಹಿತ ರೈಲುಗಳನ್ನು ಸೇರಿಸಲಾಗಿದೆ. ಇದರಿಂದಾಗಿ ಪೀಕ್ ಅವರ್‌ನಲ್ಲಿ ರೈಲುಗಳ ಕಾಯುವಿಕೆ ಸಮಯ 9 ನಿಮಿಷದಿಂದ 7 ನಿಮಿಷಕ್ಕೆ ಇಳಿಕೆಯಾಗಿದ್ದು, ಎಲೆಕ್ಟ್ರಾನಿಕ್ಸ್ ಸಿಟಿ ಭಾಗದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಿದೆ.
Read Full Story

11:33 AM (IST) Jun 03

DK Shivakumar - ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್, ದೊಡ್ಡ ಗೌಡರ ವಿರುದ್ಧವೇ ಸ್ಪರ್ಧಿಸಿ ಗೆದ್ದಿದ್ದ ಬಂಡೆ, ರಾಜಕೀಯ ಜೀವನವೇ ರೋಚಕ!

ಕಾಂಗ್ರೆಸ್ ಪಕ್ಷದ 'ಟ್ರಬಲ್ ಶೂಟರ್' ಎಂದೇ ಖ್ಯಾತರಾದ ಡಿ.ಕೆ. ಶಿವಕುಮಾರ್, ತಮ್ಮ ರಾಜಕೀಯ ಚಾಕಚಕ್ಯತೆಯಿಂದ ಗುರುತಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿಂದೆ ಹಲವು ಖಾತೆಗಳ ಸಚಿವರಾಗಿದ್ದರು.

Read Full Story

11:06 AM (IST) Jun 03

ಡಬಲ್ ಗುಡ್‌ನ್ಯೂಸ್‌ ನಿರೀಕ್ಷೆಯಲ್ಲಿದ್ದ ಸತೀಶ್ ಜಾರಕಿಹೊಳಿಗೆ ಶಾಕ್; ಬಿಕೆ ಹರಿಪ್ರಸಾದ್‌ಗೆ ಜಾಕ್‌ಪಾಟ್

ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿದೆ ಎನ್ನಲಾಗಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೇ ಖುದ್ದು ಕರೆ ಮಾಡಿ ಸೂಚನೆ ನೀಡಿದ್ದು, ಹರಿಪ್ರಸಾದ್ ಅವರು ಈ ಹುದ್ದೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read Full Story

10:46 AM (IST) Jun 03

ಬೆಂಗಳೂರು ಪೊಲೀಸ್ ಸರ್ಪಗಾವಲು - ರಾಜಧಾನಿ ಅಲರ್ಟ್!

ಬೆಂಗಳೂರಿನ ಲೋಕಭವನದಲ್ಲಿ ನಡೆಯಲಿರುವ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ. ಸುಮಾರು 4,800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಶ್ವಾನದಳ ಮತ್ತು ಬಾಂಬ್ ಪತ್ತೆ ದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಸಮಾರಂಭದ ವೇಳೆ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ

Read Full Story

10:06 AM (IST) Jun 03

ಹಲ್ಕೆ–ಮುಪ್ಪಾನೆ ಮಾರ್ಗದ ಲಾಂಚ್ ಸೇವೆ ಸ್ಥಗಿತ; ಕರೂರು, ಭಾರಂಗಿ ಸಂಪರ್ಕಿಸುವ ಜಲಮಾರ್ಗ

ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ಕುಸಿದ ಕಾರಣ, ಹಲ್ಕೆ–ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ಸುರಕ್ಷತಾ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿದೆ. ಮಳೆ ಬಂದು ನೀರಿನ ಮಟ್ಟ ಏರುವವರೆಗೂ ಸಾಗರ ತಾಲೂಕಿನ ಈ ಪ್ರಮುಖ ಜಲಮಾರ್ಗ ಬಂದ್ ಆಗಿರಲಿದೆ.
Read Full Story

09:52 AM (IST) Jun 03

ರುಕ್ಮಿಣಿ ವಸಂತ ಡೀಪ್‌ಫೇಕ್ ವಿಡಿಯೋ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ; ಸಿಸಿಬಿ ತನಿಖೆ

ನಟಿ ರುಕ್ಮಿಣಿ ವಸಂತ್ ಅವರ ಡೀಪ್‌ಫೇಕ್ ಅಶ್ಲೀಲ ವಿಡಿಯೋ ವಿವಾದಕ್ಕೆ ಸಂಬಂಧಿಸಿದಂತೆ, ಅವರು ನೀಡಿದ ದೂರಿನ ಅನ್ವಯ ಸಿಸಿಬಿ ಸೈಬರ್ ಕ್ರೈಂ ಪೊಲೀಸರು 29 ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕೃತಕ ಬುದ್ಧಿಮತ್ತೆ ಬಳಸಿ ತಮ್ಮ ಗೌರವಕ್ಕೆ ಧಕ್ಕೆ ತಂದಿರುವ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
Read Full Story

09:00 AM (IST) Jun 03

DK Shivakumar - ವಾಸ್ತು ಪ್ರಕಾರ ವಿಧಾನಸೌಧದ ಸಿಎಂ ಕಚೇರಿಯಲ್ಲಿ ಅಜ್ಜಯ್ಯನ ಫೋಟೋ!

ಡಿ.ಕೆ.ಶಿವಕುಮಾರ್‌ ಅವರ ಆಪ್ತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಆರಾಧ್ಯ ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಯ ವಾಸ್ತು ಪರಿಶೀಲನೆ ನಡೆಸಿದ್ದಾರೆ. ಡಿಕೆಶಿ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯನ ಫೋಟೋ ಇಟ್ಟು ವಿಶೇಷ ಪೂಜೆ ನೆರವೇರಿಸಲಾಗಿದೆ.

Read Full Story

08:28 AM (IST) Jun 03

DK Shivakumar - ಡಿಕೆಶಿವಕುಮಾರ್ ಮುಖ್ಯಮಂತ್ರಿ ಪದಗ್ರಹಣಕ್ಕೆ ದೆಹಲಿಯಿಂದ ಗಣ್ಯರ ದಂಡೇ ಬರುತ್ತಿದೆ!

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಸಮಾರಂಭಕ್ಕೆ ರಾಹುಲ್ ಗಾಂಧಿ ಸೇರಿದಂತೆ ದೆಹಲಿಯ 50ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಲಾಗಿದೆ.
Read Full Story

08:27 AM (IST) Jun 03

ಸಿಲ್ಕ್‌ಬೋರ್ಡ್‌ To ಹೆಬ್ಬಾಳದ 17 ಕಿ.ಮೀ ಉದ್ದದ ಸುರಂಗ ಗುತ್ತಿಗೆ ಅದಾನಿ ಕಂಪನಿಗೆ - 22 ಸಾವಿರ ಕೋಟಿಗೆ ಬಿಡ್

ಬೆಂಗಳೂರಿನ ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳದವರೆಗಿನ 17 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ನೀಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಅಂದಾಜಿಗಿಂತ 4,600 ಕೋಟಿ ರೂ. ಹೆಚ್ಚು, ಅಂದರೆ 22,267 ಕೋಟಿ ರೂ.ಗೆ ಅದಾನಿ ಸಂಸ್ಥೆ ಬಿಡ್ ಮಾಡಿದ್ದು, ಅಂತಿಮ ನಿರ್ಧಾರ ಸಚಿವ ಸಂಪುಟ ಸಭೆಯಲ್ಲಿ ಆಗಲಿದೆ.
Read Full Story

08:12 AM (IST) Jun 03

ಟೆಕ್ಕಿಯನ್ನು ಬಲಿ ಪಡೆದುಕೊಂಡಿದ್ದ ಅಂಡರ್‌ಪಾಸ್‌ಗೆ 3 ವರ್ಷಗಳ ಬಳಿಕ ದುರಸ್ತಿ ಕಾರ್ಯ

ಬೆಂಗಳೂರಿನ ಕೆ.ಆರ್. ಸರ್ಕಲ್‌ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಲ್ಲುವ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪಾಲಿಕೆ ಮುಂದಾಗಿದೆ. ಅಂಡರ್‌ಪಾಸ್‌ನಿಂದ ಬೃಹತ್ ನೀರುಗಾಲುವೆಗೆ 900 ಮಿ.ಮೀ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

Read Full Story

07:46 AM (IST) Jun 03

6 ಕಾರಣಗಳಿಗೆ ತುಮಕೂರಿಗೆ ಮೆಟ್ರೋ ರೈಲು ಯೋಜನೆ ಬೇಡವಂತೆ; ಪತ್ರಿಕಾ ಹೇಳಿಕೆ ಬಿಡುಗಡೆ

ತುಮಕೂರಿಗೆ ಪ್ರಸ್ತಾಪಿತ ಮೆಟ್ರೋ ರೈಲು ಯೋಜನೆಯು ಅನುಕೂಲಕ್ಕಿಂತ ಅನಾನುಕೂಲವನ್ನೇ ಹೆಚ್ಚು ತರಲಿದೆ ಎಂದು ಜನಸಂಗ್ರಾಮ ಪರಿಷತ್ ವಿರೋಧ ವ್ಯಕ್ತಪಡಿಸಿದೆ. 25 ಸಾವಿರ ಕೋಟಿ ವೆಚ್ಚ, ಅಧಿಕ ಪ್ರಯಾಣ ದರ ಮತ್ತು ಸಮಯವನ್ನು ಉಲ್ಲೇಖಿಸಿ, ಅಸ್ತಿತ್ವದಲ್ಲಿರುವ ಸಾಮಾನ್ಯ ರೈಲು ಸೇವೆಯೇ ಉತ್ತಮ ಪರ್ಯಾಯ ಎಂದು ಪ್ರತಿಪಾದಿಸಿದೆ.
Read Full Story

07:27 AM (IST) Jun 03

ಮಾಜಿ ಎಂಎಲ್‌ಸಿ ದಯಾನಂದರೆಡ್ಡಿ ಅಪಹರಣ; ₹10 ಕೋಟಿ ಸುಪಾರಿ, 2 ಕೋಟಿಗೆ ಡಿಮ್ಯಾಂಡ್

ವಿಧಾನ ಪರಿಷತ್‌ ಮಾಜಿ ಸದಸ್ಯ ದಯಾನಂದರೆಡ್ಡಿ ಅವರನ್ನು ಬೆಂಗಳೂರಿನ ಆನೇಕಲ್ ಬಳಿ ಕೇರಳ ಮೂಲದ ಗ್ಯಾಂಗ್ ಅಪಹರಿಸಿದೆ. ₹10 ಕೋಟಿ ಸುಪಾರಿ ನೀಡಲಾಗಿದೆ ಎಂದು ಬೆದರಿಸಿ, ನಂತರ ₹2 ಕೋಟಿಗೆ ಬೇಡಿಕೆಯಿಟ್ಟು, ಹಣ ನೀಡುವುದಾಗಿ ಒಪ್ಪಿದ ನಂತರ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

07:06 AM (IST) Jun 03

ಮೂರು ಜಿಲ್ಲೇಲಿ ಮಳೆಯಬ್ಬರ - ಕರಾವಳಿಗೆ 4 ದಿನ ಯೆಲ್ಲೋ ಅಲರ್ಟ್‌, ಬಳ್ಳಾರೀಲಿ 100 ಮರ ಧರೆಗೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರೆದಿದ್ದು, ಬಳ್ಳಾರಿ, ಮಂಗಳೂರು ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆಯು ಕರಾವಳಿ ಭಾಗಕ್ಕೆ ಜೂ.3 ರಿಂದ 6ರವರೆಗೆ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಜೂ. 4ರಂದು ಮುಂಗಾರು ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ.
Read Full Story

More Trending News