ತುಮಕೂರಿಗೆ ಪ್ರಸ್ತಾಪಿತ ಮೆಟ್ರೋ ರೈಲು ಯೋಜನೆಯು ಅನುಕೂಲಕ್ಕಿಂತ ಅನಾನುಕೂಲವನ್ನೇ ಹೆಚ್ಚು ತರಲಿದೆ ಎಂದು ಜನಸಂಗ್ರಾಮ ಪರಿಷತ್ ವಿರೋಧ ವ್ಯಕ್ತಪಡಿಸಿದೆ. 25 ಸಾವಿರ ಕೋಟಿ ವೆಚ್ಚ, ಅಧಿಕ ಪ್ರಯಾಣ ದರ ಮತ್ತು ಸಮಯವನ್ನು ಉಲ್ಲೇಖಿಸಿ, ಅಸ್ತಿತ್ವದಲ್ಲಿರುವ ಸಾಮಾನ್ಯ ರೈಲು ಸೇವೆಯೇ ಉತ್ತಮ ಪರ್ಯಾಯ ಎಂದು ಪ್ರತಿಪಾದಿಸಿದೆ.
ತುಮಕೂರು: ಮೆಟ್ರೋ ರೈಲು ಲಾಭದಾಯಕವಾಗಿದ್ದರೆ ಶೇಕಡ 50ರಷ್ಟು ಬೆಂಗಳೂರಿನಲ್ಲಿ ಬೆಲೆ ಜಾಸ್ತಿ ಯಾಕೆ ಮಾಡುತ್ತಿದ್ದರು? ಕ್ರಮೇಣ ಇದು ರೋಗಗ್ರಸ್ತ ಯೋಜನೆಯಾಗಿ 25 ಸಾವಿರ ಕೋಟಿ ವಸೂಲಾಗದ ಸಾಲದ ಪಟ್ಟಿಗೆ ಸೇರಬಹುದು ಎಂದು ಜನಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ ಜವಾಹರ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಯೋಜನೆಯಿಂದ ಜನರಿಗೆ ಯಾವುದೇ ಲಾಭವಾಗುವುದಿಲ್ಲ. ಲಾಭವಾಗುವುದು ಏನಾದರೂ ಇದ್ದರೆ ಅದು ಗುತ್ತಿಗೆದಾರರು ಹಾಗೂ ನಮ್ಮನ್ನು ಆಳುವ ಜನರಿಗೆ ಮಾತ್ರ ಎಂದು ಹೇಳಿದ್ದಾರೆ.
40 ಸ್ಟೇಷನ್‌ನಲ್ಲಿ ಒಂದೂವರೆ ನಿಮಿಷ ನಿಲುಗಡೆ
ತುಮಕೂರಿಗೆ ಮೆಟ್ರೋ ರೈಲು ತರುವ ಪ್ರಯತ್ನಗಳು ನಡೆಯುತ್ತಿದ್ದು ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿರುವುಪದರಿಂದ ತುನಮಕೂರಿಗೆ ಮೆಟ್ರೋ ಬೇಡವೇ ಬೇಡ. ಈ ಯೋಜನೆಗೆ ಸುಮಾರು 25 ಸಾವಿರ ಕೋಟಿ ಹೂಡಿಕೆ ಬೇಕಾಗುತ್ತದೆ. ತುಮಕೂರಿಂದ ಬೆಂಗಳೂರಿನವರೆಗೆ ಸುಮಾರು 40 ಸ್ಟೇಷನ್ ಗಳು ರೈಲು ಯೋಜನೆಯಲ್ಲಿ ಇರುತ್ತದೆ. ಒಂದೊಂದು ಸ್ಟೇಷನ್ನಲ್ಲಿ ಒಂದುವರೆ ನಿಮಿಷ ನಿಲುಗಡೆ ಇರುತ್ತದೆ ಒಟ್ಟು 40 ಸ್ಟೇಷನ್ ಗಳಿಂದ ಒಂದು ಗಂಟೆ ನಿಲುಗಡೆ ಸಮಯವಿರುತ್ತದೆ ಇನ್ನು ಒಂದು ಗಂಟೆ ಪ್ರಯಾಣದ ಅವಧಿಯಾಗುತ್ತದೆ.
ಮೆಟ್ರೋ ಮತ್ತು ಸಾಮಾನ್ಯ ರೈಲಿಗೆ ಹೋಲಿಕೆ
ಸುಮಾರು 250 ರಿಂದ 300 ರು. ವರೆಗೆ ಬೆಂಗಳೂರಿಗೆ ಚಾರ್ಜ್ ಇರಬಹುದು. ಕುಳಿತುಕೊಳ್ಳುವ ವ್ಯವಸ್ಥೆ ಶೇಕಡ 30 ರಷ್ಟು ಜನರಿಗೆ ಮಾತ್ರ ಇರುತ್ತದೆ ಇನ್ನ ಶೇಕಡ 70 ರಷ್ಟು ಜನರು ನಿಂತುಕೊಂಡೇ ಹೋಗಬೇಕು. ವಯಸ್ಸಾದವರು ಗರ್ಭಿಣಿಯರು ಹಾಗೂ ಹೆಚ್ಚಿನ ಲಗೇಜ್ ಕೊಂಡೋಯ್ಯುವವರು ಪರಿಸ್ಥಿತಿ ಹೇಳಲಾಗದು. ಮಾಮೂಲು ರೈಲಿನ ವ್ಯವಸ್ಥೆ ತುಂಬಾ ಚೆನ್ನಾಗಿದೆ ಎಂದು ಹೇಳಿದರು.
ಕೇವಲ 20 ರು.ಕೊಟ್ಟು ಡೆಮೋ ರೈಲಿನಲ್ಲಿ ಒಂದುವರೆ ಗಂಟೆ ಪ್ರಯಾಣದ ಅವಧಿಯಲ್ಲಿ ಬೆಂಗಳೂರು ತಲುಪಬಹುದು. ಎಕ್ಸಪ್ರೆಸ್ ಟ್ರೈನ್ ನಲ್ಲಿ ಪ್ರಯಾಣದ ಅವಧಿ ಕೇವಲ ಒಂದು ಗಂಟೆ. ಇದನ್ನು ಬಿಟ್ಟು ರೂ.300 ಕೊಟ್ಟು 80 ಮೆಟ್ಟಿಲು ಹತ್ತಿ ಎರಡು ಗಂಟೆ ಪ್ರಯಾಣದ ಅವಧಿಯಲ್ಲಿ ನಿಂತುಕೊಂಡು ಬೆಂಗಳೂರು ತಲುಪುವುದು ಉತ್ತಮ ಪ್ರಯಾಣವೇ ಎಂದಿದ್ದಾರೆ.
ಇದನ್ನೂ ಓದಿ: ಮೈಸೂರಿನಿಂದ ವಿಶಾಖಪಟ್ಟಣಂಗೆ ನೇರ ರೈಲು ಸೇವೆ ಆರಂಭಕ್ಕೆ ಮನವಿ; ರೂಟ್ ಈ ರೀತಿಯಾಗಿರಲಿದೆ
ಮೆಟ್ರೋ ಬೇಡ ಅಂತ ಹೇಳಲು ಪ್ರಮುಖ ಕಾರಣಗಳು
- ಸುಮಾರು 25 ಸಾವಿರ ಕೋಟಿ ಹೂಡಿಕೆ
- ಇದು ಸಹ ಒಂದು ಗಂಟೆಯ ಪ್ರಯಾಣದ ಅವಧಿ
- ಸುಮಾರು 250 ರಿಂದ 300 ರೂಪಾಯಿ ಟಿಕೆಟ್ ದರ ಸಾಧ್ಯತೆ
- ಶೇ.30ರಷ್ಟು ಮಾತ್ರ ಆಸನ ವ್ಯವಸ್ಥೆ
- ಡೆಮೋ ರೈಲಿನಲ್ಲಿ 20 ರೂಪಾಯಿಯಲ್ಲಿ ಬೆಂಗಳೂರಿಗೆ ಹೋಗಬಹುದು
- ಎಕ್ಸಪ್ರೆಸ್ ಟ್ರೈನ್ ನಲ್ಲಿ ಪ್ರಯಾಣದ ಅವಧಿ ಕೇವಲ ಒಂದು ಗಂಟೆ
ಇದನ್ನೂ ಓದಿ: ಬೆಂಗಳೂರು-ತುಮಕೂರು ಚತುಷ್ಪಥ ರೈಲ್ವೆ ಮಾರ್ಗಕ್ಕೆ 6000 ಕೋಟಿಯ ಕ್ರಿಯಾ ಯೋಜನೆ ಘೋಷಣೆ


