LIVE NOW
Published : Jan 03, 2026, 06:54 AM ISTUpdated : Jan 03, 2026, 11:46 PM IST

Karnataka News Live: ದುಡಿದ ಸಂಬಳ ಕೇಳಿದ್ದಕ್ಕೆ ಆಂಬ್ಯುಲೆನ್ಸ್ ಚಾಲಕನ ಮೇಲೆ ಮಾಲೀಕನಿಂದ ಭೀಕರ ಹಲ್ಲೆ!

ಸಾರಾಂಶ

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆ ಹಿನ್ನೆಲೆಯಲ್ಲಿ ನಡೆದ ಗುಂಪು ಘರ್ಷಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ರೆಡ್ಡಿ ಸಾವಿಗೆ ಸಂಬಂಧಿಸಿದಂತೆ ನಗರದ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ.ಪ್ರತ್ಯೇಕ ದೂರು ಆಧರಿಸಿ ಮೂರು (01/2026, 02/2026, 03/2026) ಎಫ್‌ಐಆರ್‌ ಮತ್ತು ಬಳ್ಳಾರಿ ನಗರ ಡಿವೈಎಸ್‌ಪಿ ಚಂದ್ರಕಾಂತ ನಂದಾ ರೆಡ್ಡಿ ಅವರ ದೂರಿನ ಆಧಾರದಲ್ಲಿ ಒಂದು ಸ್ವಯಂ ಪ್ರೇರಿತ ಪ್ರಕರಣ (04/2026)ವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರನ ಕೊಲೆ, ಜಾತಿ ನಿಂದನೆ, ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ನೀಡಲಾದ ದೂರು ಆಧರಿಸಿ ಪ್ರಕರಣ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಎಲ್ಲ ಪ್ರಕರಣಗಳಲ್ಲಿಯೂ ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಕ್ರಮವಾಗಿ ಎ1, ಎ2, ಎ3 ಆರೋಪಿಗಳನ್ನಾಗಿ ಮಾಡಲಾಗಿದೆ. ಪೊಲೀಸರು ದಾಖಲು ಮಾಡಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಸಹಚರರ ಜೊತೆಗೆ, ಭರತ್‌ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದ

11:46 PM (IST) Jan 03

ದುಡಿದ ಸಂಬಳ ಕೇಳಿದ್ದಕ್ಕೆ ಆಂಬ್ಯುಲೆನ್ಸ್ ಚಾಲಕನ ಮೇಲೆ ಮಾಲೀಕನಿಂದ ಭೀಕರ ಹಲ್ಲೆ!

ಬೆಂಗಳೂರಿನಲ್ಲಿ, ಎರಡು ತಿಂಗಳ ಬಾಕಿ ಸಂಬಳ ಕೇಳಿದ ಆಂಬ್ಯುಲೆನ್ಸ್ ಚಾಲಕ ಕಿರಣ್ ಮೇಲೆ ಮಾಲೀಕ ನಾಗರಾಜ್ ಮತ್ತು ಇನ್ನೊಬ್ಬ ಚಾಲಕ ಸೇರಿ ನೈಸ್ ರಸ್ತೆಯಲ್ಲಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಸಂಬಳ ಕೊಡುವ ನೆಪದಲ್ಲಿ ಕರೆಸಿ ದೌರ್ಜನ್ಯ ಎಸಗಲಾಗಿದ್ದು, ಸಂತ್ರಸ್ತರು ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲು

Read Full Story

11:03 PM (IST) Jan 03

Yellapur Ranjitha murder case - ಶಾಸಕ ಶಿವರಾಮ್ ಹೆಬ್ಬಾರ್ ಕೆಂಡಾಮಂಡಲ, ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ

ಯಲ್ಲಾಪುರದಲ್ಲಿ ನಡೆದ ರಂಜಿತಾ ಬನಸೋಡೆ ಅವರ ಭೀಕರ ಕೊಲೆಯನ್ನು ಶಾಸಕ ಶಿವರಾಮ ಹೆಬ್ಬಾರ್ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಅಮಾನವೀಯ ಕೃತ್ಯವೆಂದು ಬಣ್ಣಿಸಿದ ಅವರು, ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಆರೋಪಿಯನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
Read Full Story

10:47 PM (IST) Jan 03

ಸುದ್ದಿ ನಿಷೇಧಕ್ಕೆ ದುರುದ್ದೇಶದ ಅರ್ಜಿ, ರಿಪೋರ್ಟರ್ ಟಿವಿಗೆ ದಂಡ ವಿಧಿಸಿದ ಬೆಂಗಳೂರು ಕೋರ್ಟ್

ಸುದ್ದಿ ನಿಷೇಧಕ್ಕೆ ದುರುದ್ದೇಶದ ಅರ್ಜಿ, ರಿಪೋರ್ಟರ್ ಟಿವಿಗೆ ದಂಡ ವಿಧಿಸಿದ ಬೆಂಗಳೂರು ಕೋರ್ಟ್, ರಿಪೋರ್ಟ್ ಟಿವಿ ವಾಹನಿ ತೀವ್ರ ಮುಖಭಂಗಕ್ಕೀಡಾಗಿದೆ. ರಿಪೋರ್ಟ್ ಟಿವಿಗೆ ಛೀಮಾರಿ ಹಾಕಿದ್ದು ಮಾತ್ರವಲ್ಲ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

 

Read Full Story

10:38 PM (IST) Jan 03

ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆಯುತ್ತಿದೆ; ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ಲಕ್ಷ್ಮಣ್ ಸವದಿ ವಾಗ್ದಾಳಿ

ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರು ತಮ್ಮ ವಿರುದ್ಧ ಕಳೆದ ಎರಡು ತಿಂಗಳಿಂದ ವ್ಯವಸ್ಥಿತ ರಾಜಕೀಯ ಸಂಚು ನಡೆಯುತ್ತಿದೆ ಎಂದು ಗಂಭೀರ ಆರೋಪ. ಡಿಸಿಸಿ ಬ್ಯಾಂಕ್ ಅಧಿಕಾರಿಯಾಗಿದ್ದ ತಮ್ಮ ಸಂಬಂಧಿಕನ ವರ್ಗಾವಣೆ ಹಿಂದೆ ಷಡ್ಯಂತ್ರವಿದೆ ಎಂದು ಹೇಳುವ ಮೂಲಕ, ಪರೋಕ್ಷವಾಗಿ ಜಾರಕಿಹೊಳಿ ಸಹೋದರರ ವಿರುದ್ಧ ವಾಗ್ದಾಳಿ

Read Full Story

10:18 PM (IST) Jan 03

ಅಮಾನತ್ತಿನಿಂದ ಆಘಾತ ಆದ್ರೆ ಆತ್ಮ0ತ್ಯೆಗೆ ಪ್ರಯತ್ನಿಸಿಲ್ಲ, ಸ್ಫೋಟಕ ಮಾಹಿತಿ ಹಂಚಿಕೊಂಡ SP ನೆಜ್ಜೂರು ತಂದೆ

ಅಮಾನತ್ತಿನಿಂದ ಆಘಾತ ಆದ್ರೆ ಆತ್ಮ0ತ್ಯೆಗೆ ಪ್ರಯತ್ನಿಸಿಲ್ಲ, ಸ್ಫೋಟಕ ಮಾಹಿತಿ ಹಂಚಿಕೊಂಡ SP ನೆಜ್ಜೂರು ತಂದೆ, ಬಳ್ಳಾರಿ ಗಲಭೆ ಪ್ರಕರಣ , ದಕ್ಷ ಅಧಿಕಾರಿ ಪವನ್ ನೆಜ್ಜೂರ್ ನಿರ್ವಹಿಸಿದ ರೀತಿ ಹಾಗೂ ನಂತರದ ಬೆಳವಣಿಗೆ ಕುರಿತು ಪೊಲೀಸ್ ಅಧಿಕಾರಿ ತಂದೆ ಮಾಹಿತಿ ಹಂಚಿಕೊಂಡಿದ್ದಾರೆ.

Read Full Story

09:38 PM (IST) Jan 03

Ballari Banner Fight - ಸಿಎಂ ಭೇಟಿಯಾದ ಶಾಸಕ ಭರತ್ ರೆಡ್ಡಿ,ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸಾಥ್!

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದ ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ನಾಯಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಘಟನೆಯ ಕುರಿತು ವರದಿ ಪಡೆದು, ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಎಂ ಮುಂದಾಗಿದ್ದಾರೆ.
Read Full Story

09:13 PM (IST) Jan 03

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ - 10 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಮೂವರು ಅಂತರರಾಜ್ಯ ದಂಧೆಕೋರರ ಬಂಧನ!

ಬೀದರ್ ಜಿಲ್ಲೆಯ ಸಂತಪೂರ್ ಪೊಲೀಸರು ತೆಲಂಗಾಣದಿಂದ ನಡೆಯುತ್ತಿದ್ದ ಅಕ್ರಮ ಗಾಂಜಾ ಸಾಗಾಟ ಜಾಲವನ್ನು ಯಶಸ್ವಿಯಾಗಿ ಬೇಧಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ, ಮೂವರು ಆರೋಪಿಗಳನ್ನು ಬಂಧಿಸಿ 10 ಲಕ್ಷ ಮೌಲ್ಯದ 20.63 ಕೆಜಿ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ್ದ ಆಟೋ ವಶಪಡಿಸಿಕೊಂಡಿದ್ದಾರೆ.

Read Full Story

08:43 PM (IST) Jan 03

Yellapur Ranjitha murder case - ಹಿಂದೂ ಮಹಿಳೆಯ ಕಗ್ಗೊಲೆ, ಲವ್ ಜಿಹಾದ್ ಶಂಕೆ, ನಾಳೆ ಯಲ್ಲಾಪುರ ಬಂದ್‌ಗೆ ಕರೆ

ಉತ್ತರ ಕನ್ನಡದ ಯಲ್ಲಾಪುರದಲ್ಲಿ ರಫೀಕ್ ಎಂಬಾತನಿಂದ ಚಾಕು ಇರಿತಕ್ಕೊಳಗಾಗಿದ್ದ ರಂಜಿತಾ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಯಲ್ಲಾಪುರ ಬಂದ್‌ಗೆ ಕರೆ ನೀಡಿವೆ, ಹಾಗೂ ಪೊಲೀಸರು ಆರೋಪಿಗಾಗಿ ತನಿਖೆ ಚುರುಕುಗೊಳಿಸಿದ್ದಾರೆ.
Read Full Story

08:06 PM (IST) Jan 03

ಜನರೊಳಗೆ ಮಾನಭಂಗ ಮಾಡಿದವರಿಗೆ ಒಳ್ಳೆಯದಾಗಲಿ - ದಿಢೀರ್​ ಲೈವ್​ಗೆ ಬಂದ Anchor Anushree ಹೇಳಿದ್ದೇನು?

ತಮ್ಮನ್ನು ಟ್ರೋಲ್ ಮಾಡಿದವರಿಗೆ ನಿರೂಪಕಿ ಅನುಶ್ರೀ ಖಡಕ್ ಉತ್ತರ ನೀಡಿದ್ದಾರೆ. ತಿಮ್ಮಪ್ಪನ ದರ್ಶನದ ವೇಳೆ ಡಾ. ರಾಜ್‌ಕುಮಾರ್ ಕಂಡಿದ್ದರು ಎಂಬ ಹೇಳಿಕೆಗೆ ಟ್ರೋಲ್ ಆಗಿದ್ದ ಅವರು, ಕನಕದಾಸರ ಪದ್ಯವನ್ನು ಹೇಳುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
Read Full Story

08:04 PM (IST) Jan 03

ರಾಯಚೂರು - ಅಂಬಾ ದೇವಿಯ ದರ್ಶನ ಆಗಿದ್ದು ನನ್ನ ಪುಣ್ಯ - ಸಿಎಂ ಸಿದ್ದರಾಮಯ್ಯ

ರಾಯಚೂರಿನ ಸಿಂಧನೂರಿನ ಅಂಬಾಮಠ ಜಾತ್ರೆಯಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ, ಹಲವು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದರು. ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮನರೇಗಾ ಯೋಜನೆ ಬದಲಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
Read Full Story

07:41 PM (IST) Jan 03

ಗದಗ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರ ಆತ್ಮ೧ಹತ್ಯೆ; ಪತ್ತೆಯಾದ ಡೆತ್ ನೋಟ್‌ನಲ್ಲೇನಿದೆ?

Gadag Ayurvedic Hospital incident: ಗದಗ ಜಿಲ್ಲೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಡಿ ಗ್ರೂಪ್ ನೌಕರ ಮಹಾಲಿಂಗೇಶ್ವರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಅಸ್ಪಷ್ಟವಾಗಿ ಬರೆದ ಡೆತ್ ನೋಟ್ ಪತ್ತೆಯಾಗಿದೆ.

Read Full Story

07:14 PM (IST) Jan 03

BBK - ಅವನ ನೋಡಿದ್ದು ಕಣ್ಣು, ಪ್ರೀತಿಸಿದ್ದು ಮನಸ್ಸು, ಬ್ರೇಕ್​ ಆಗಿದ್ದು ಹಾರ್ಟು! ಲವ್​ ಫೇಲ್​ ಬಗ್ಗೆ ರಕ್ಷಿತಾ ಶೆಟ್ಟಿ ಹೇಳಿಕೆ!

ಬಿಗ್ ಬಾಸ್ ಫೈನಲಿಸ್ಟ್ ರಕ್ಷಿತಾ ಶೆಟ್ಟಿ ಅವರು ತಮ್ಮ ಪ್ರೀತಿ ಹಾಗೂ ಲವ್ ಬ್ರೇಕಪ್ ಕುರಿತು ಮಾತನಾಡಿದ್ದಾರೆ. ಹುಡುಗನನ್ನು ನೋಡಿ ಪ್ರೀತಿಯಾಗಿ, ಮನಸ್ಸಿಗೆ ಖುಷಿಯಾಗಿ, ನಂತರ ಬ್ರೇಕಪ್ ಆದಾಗ ಹೃದಯ ಒಡೆಯುತ್ತದೆ. ಅಂತಿಮವಾಗಿ, ನೋಡಿದ ಕಣ್ಣುಗಳೇ ಅಳುವ ಮೂಲಕ ಶಿಕ್ಷೆ ಅನುಭವಿಸುತ್ತವೆ ಎಂದಿದ್ದಾರೆ.

Read Full Story

07:06 PM (IST) Jan 03

ಶಾಸಕ ಲಕ್ಷ್ಮಣ ಸವದಿ ಅಂಡ್ ಸನ್ಸ್‌ನಿಂದ ಡಿಸಿಸಿ ಬ್ಯಾಂಕ್ ನೌಕರನ ಮೇಲೆ ಹಲ್ಲೆ; ಮನೆಗೆ ಕರೆಸಿಕೊಂಡು ಥಳಿತ!

ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಅವರ ಪುತ್ರ ಚಿದಾನಂದ ಸವದಿ ಅವರು ಡಿಸಿಸಿ ಬ್ಯಾಂಕ್ ನೌಕರ ಹಾಗೂ ಹಾಲುಮತ ಸಮಾಜದ ಮುಖಂಡರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಸತ್ಯಪ್ಪ ಬಾಗನ್ನವರ್ ಗಂಭೀರ ಆರೋಪ ಮಾಡಿದ್ದಾರೆ. ಶಾಸಕ ಮತ್ತು ಅವರ ಪುತ್ರನ ತಕ್ಷಣದ ಬಂಧನಕ್ಕೆ ಆಗ್ರಹಿಸಲಾಗಿದೆ.

Read Full Story

07:06 PM (IST) Jan 03

ಲೋಕಲ್ ಕ್ರಿಕೆಟ್ ಟೂರ್ನಿಯಲ್ಲಿ ಪುಟ್ಟ ಬಾಲಕನ ಕನ್ನಡ-ಇಂಗ್ಲೀಷ್ ಕಮೆಂಟರಿ ವಿಡಿಯೋ ಜನ ಪಿಧಾ

ಲೋಕಲ್ ಕ್ರಿಕೆಟ್ ಟೂರ್ನಿಯಲ್ಲಿ ಪುಟ್ಟ ಬಾಲಕನ ಕನ್ನಡ-ಇಂಗ್ಲೀಷ್ ಕಮೆಂಟರಿ ವಿಡಿಯೋ ಜನ ಪಿಧಾ, ಈ ಬಾಲಕನಿಗೆ ರವಿ ಶಾಸ್ತ್ರಿ ಹಾಗೂ ಹರ್ಷಾ ಬೋಗ್ಲೆ ಕೋಚಿಂಗ್ ನೀಡಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

 

Read Full Story

06:52 PM (IST) Jan 03

Bigg Bossನಲ್ಲಿ ನನ್ನ ಸಾಯಿಸೋ ಪ್ರಯತ್ನ ನಡೆದಿತ್ತು - ಆ ದಿನ ನಡೆದ ಶಾಕಿಂಗ್​ ಘಟನೆ ನೆನೆದ ಸಂಗೀತಾ ಶೃಂಗೇರಿ

ಬಿಗ್ ಬಾಸ್ 10 ಖ್ಯಾತಿಯ ಸಂಗೀತಾ ಶೃಂಗೇರಿ ತಮ್ಮ ಹೊಸ ಆಲ್ಬಂ ಹಾಡಿನ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ, ಕಾರ್ತಿಕ್ ಮಹೇಶ್ ಜೊತೆಗಿನ ಜಗಳದ ಬಗ್ಗೆ ಮಾತನಾಡಿದ ಅವರು, ಬಿಗ್ ಬಾಸ್ ಮನೆಯಲ್ಲಿ ತನ್ನನ್ನು ಸಾಯಿಸುವ ಯತ್ನ ನಡೆದಿತ್ತು ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.
Read Full Story

06:36 PM (IST) Jan 03

ಒಂದೇ ಭಾರತ್ ರೈಲಿನಲ್ಲಿ ರೋಮ್ಯಾನ್ಸ್ ಮಾಡಿ ವೈರಲ್ ಆದ ಜೋಡಿಗೆ ಮದುವೆ ಭಾಗ್ಯ

ವಂದೇ ಭಾರತ್ ರೈಲಿನಲ್ಲಿ ಅಸಭ್ಯವಾಗಿ ವರ್ತಿಸಿ ವೈರಲ್ ಆಗಿದ್ದ ಜೋಡಿಯ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಎರಡೂ ಕುಟುಂಬದವರು ಸೇರಿ ಈ ಜೋಡಿಗೆ ಮದುವೆ ಮಾಡಲು ಮುಂದಾಗಿದ್ದಾರೆ.

Read Full Story

06:30 PM (IST) Jan 03

ಮೊದಲ ಮಹಡಿಯಲ್ಲಿ ನಿಂತು ಸತ್ತೋಗ್ತೀನಿ ಎಂದು ಬೊಬ್ಬೆ ಹಾಕಿದ ಯುವಕ; ಈತನ ರಂಪಾಟಕ್ಕೆ ಪೊಲೀಸರೇ ತಬ್ಬಿಬ್ಬು!

ಚಿಕ್ಕಮಗಳೂರು ನಗರದ ನೆಹರೂ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಟ್ಟಡದ ಮೇಲೇರಿ ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿದ್ದ. ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಹೈಡ್ರಾಮಾದಲ್ಲಿ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಯಶಸ್ವಿಯಾಗಿ ರಕ್ಷಿಸಿದರು.

Read Full Story

06:23 PM (IST) Jan 03

ಇದೇ ಮೊದಲ ಬಾರಿಗೆ ಸಕಾಲದಲ್ಲಿ ಬೆಂ. ದಕ್ಷಿಣ ಹೊಸ ಸಾಧನೆ, ಅಗ್ರ ಮೂರನೇ ಸ್ಥಾನ, ಫಸ್ಟ್ ಪ್ಲೇಸ್ ಯಾವ ಜಿಲ್ಲೆಗೆ?

ಸಕಾಲ ಯೋಜನೆಯಡಿ ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಸ್ವೀಕರಿಸಿದ 57,001 ಅರ್ಜಿಗಳ ಪೈಕಿ 53,955 ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಲಾಗಿದೆ.  

Read Full Story

06:04 PM (IST) Jan 03

Ballari Banner row - ರಾಜ್ಯ ಸರ್ಕಾರಕ್ಕೆ ಕಾನೂನು ಕಾಪಾಡಲು ಸಾಧ್ಯವಾಗದಿದ್ರೆ, ಕೇಂದ್ರ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ - ಪ್ರಲ್ಹಾದ್ ಜೋಶಿ ಎಚ್ಚರಿಕೆ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬಳ್ಳಾರಿ ಗುಂಡಿನ ಚಕಮಕಿ ಮತ್ತು ಕೋಗಿಲು ಬಡಾವಣೆ ತೆರವು ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವ ಬದಲು ಶಾಸಕರನ್ನು ರಕ್ಷಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

Read Full Story

06:02 PM (IST) Jan 03

ಬಳ್ಳಾರಿ ಗಲಾಟೆ - ಮೃತ ಕೈ ಕಾರ್ಯಕರ್ತ ರಾಜಶೇಖರ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಕೊಟ್ಟ ಸಚಿವ ಜಮೀರ್!

ಬಳ್ಳಾರಿ ಬ್ಯಾನರ್ ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅವರ ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ ಖಾನ್ 25 ಲಕ್ಷ ರೂ. ವೈಯಕ್ತಿಕ ನೆರವು ನೀಡಿದ್ದಾರೆ. ಜನಾರ್ದನ ರೆಡ್ಡಿ ಅವರ ಚಿಲ್ಲರೆತನದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿದ ಅವರು, ಕುಟುಂಬಕ್ಕೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು.
Read Full Story

05:51 PM (IST) Jan 03

ಹುಬ್ಬಳ್ಳಿ - ಕೋರ್ಟ್ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುತ್ತಿದ್ದಾಗಲೇ ಪೊಲೀಸ್ ಅಧಿಕಾರಿಯ ಅಪ್ಪ ಹೃದಯಾಘಾತದಿಂದ ನಿಧನ

ಹುಬ್ಬಳ್ಳಿಯ ಸಿವಿಲ್ ಕೋರ್ಟ್‌ನಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ, ಪೊಲೀಸ್ ಅಧಿಕಾರಿಯ ತಂದೆಯಾದ ಕೃಷ್ಣ ಲಕ್ಷಣಸಾ ಪವಾರ್ ಅವರು ಸಾಕ್ಷಿ ಹೇಳುವಾಗಲೇ ಹೃದಯಾಘಾತದಿಂದ ನಿಧನರಾದರು. ಈ ಅನಿರೀಕ್ಷಿತ ದುರ್ಘಟನೆಯು ನ್ಯಾಯಾಲಯದ ಆವರಣದಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿತು.
Read Full Story

05:43 PM (IST) Jan 03

ಸಕ್ಕರೆ ನಾಡು ಕೆಂಪಣ್ಣ, ಕಬ್ಜಾ ಶರಣ್‌ಗೆ ಮಾಗಡಿ ಜನ ಕೊಟ್ರು ಗುನ್ನಾ; ಪೊಲೀಸರಿಂದ ರಿವೀಲಾಯ್ತು ಅಸಲಿ ಕಾರಣ!

ಹೊಸ ವರ್ಷದ ಪಾರ್ಟಿ ನಂತರ 'ಸಕ್ಕರೆ ನಾಡು ಕೆಂಪಣ್ಣ' ಮತ್ತು 'ಕಬ್ಜಾ ಶರಣ್' ಎಂಬ ರೀಲ್ಸ್ ಸ್ಟಾರ್‌ಗಳು ಮಾಗಡಿಯಲ್ಲಿ ಸಾರ್ವಜನಿಕರಿಂದ ಹಲ್ಲೆಗೊಳಗಾಗಿದ್ದಾರೆ. ಆದರೆ, ಜನರು ಯಾಕೆ ಹಲ್ಲೆ ಮಾಡಿದ್ದಕ್ಕೆ ಕಾರಣ ರಿವೀಲ್ ಆಗಿದೆ. ಜೊತೆಗೆ,   ಘಟನೆಯಿಂದ ಕಬ್ಜಾ ಶರಣ್ ಸೋಶಿಯಲ್ ಮೀಡಿಯಾಗೆ ವಿದಾಯ ಹೇಳಿದ್ದಾರೆ.

Read Full Story

05:18 PM (IST) Jan 03

'ನಿಮಗೆ ಯಾರು ಮಾಹಿತಿ ನೀಡಿದ್ದು..?' ಎಸ್‌ಪಿ ಪವನ್ ನೆಜ್ಜೂರ್ ಆತ್ಮ೧ಹತ್ಯೆ ಯತ್ನ ಸುಳ್ಳು ಎಂದ ಗೃಹಸಚಿವ!

ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಕರ್ತವ್ಯಲೋಪದ ಮೇಲೆ ಅಮಾನತುಗೊಂಡಿರುವ ಎಸ್ಪಿ ಪವನ್ ನೆಜ್ಜೂರ್ ಅವರು ಆತ್ಮಹ೧ತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಯನ್ನು ಗೃಹ ಸಚಿವ ಪರಮೇಶ್ವರ್ ತಳ್ಳಿಹಾಕಿದ್ದಾರೆ. ಪವನ್ ನೆಜ್ಜೂರ್ ಸಂಪೂರ್ಣ ಆರೋಗ್ಯವಾಗಿದ್ದು, ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ ಎಂದು ಅವರು ಸ್ಪಷ್ತನೆ.

Read Full Story

05:14 PM (IST) Jan 03

Bengaluru - ಇನ್ಫೋಸಿಸ್‌ನಿಂದ 685 ಕೋಟಿ ರೂಪಾಯಿ ಸಿಎಸ್‌ಆರ್‌ ನಿಧಿ!

ಕರ್ನಾಟಕ ಸಚಿವ ಸಂಪುಟವು ಕಾರ್ಪೊರೇಟ್‌ ಕಂಪನಿಗಳ ಸಿಎಸ್‌ಆರ್‌ ನಿಧಿಯನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಡ್ಡಾಯವಾಗಿ ಬಳಸುವ ಹೊಸ ನೀತಿಗೆ ಅನುಮೋದನೆ ನೀಡಿದೆ. ಈ ನೀತಿಯಡಿ, ವಾರ್ಷಿಕ 8500 ಕೋಟಿ ರೂ. ನಿಧಿಯನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳ ನಿರ್ಮಾಣ ಮತ್ತು ಮೂಲಸೌಕರ್ಯಕ್ಕೆ ಬಳಸಲಾಗುವುದು. 

Read Full Story

05:06 PM (IST) Jan 03

ಫ್ರೀ ಎಣ್ಣೆ ಕೊಡದಿದ್ದಕ್ಕೆ ಬಾರ್ ಗೆ ಬೆಂಕಿಯಿಟ್ಟ ಪುಂಡರು! ಓನರ್‌ ಕಾರಿಗೂ ಬೆಂಕಿ ಹಚ್ಚಿ ಪರಾರಿ

ಮಂಡ್ಯದ ಕೆ.ಆರ್.ಪೇಟೆಯಲ್ಲಿ ಉಚಿತವಾಗಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಪುಂಡರು ಬಾರ್ ಮತ್ತು ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ದುಷ್ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
Read Full Story

04:48 PM (IST) Jan 03

Ballari Banner Row - ಎಸ್ಪಿ ಪವನ್ ನೆಜ್ಜೂರ್ ದುಡುಕಿನ ನಿರ್ಧಾರಕ್ಕೆ ಸರ್ಕಾರದ ಒತ್ತಡವೇ ಕಾರಣ - ಸಂಸದ ರಾಘವೇಂದ್ರ

ಸಂಸದ  ರಾಘವೇಂದ್ರ ಅವರು, ಎಸ್ಪಿ ಪವನ್ ನೆಜ್ಜೂರ್ ಆತ್ಮಹ೧ತ್ಯೆ ಯತ್ನಕ್ಕೆ ಸರ್ಕಾರದ ಒತ್ತಡವೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ಜನಾರ್ದನ ರೆಡ್ಡಿ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ, ಕೋಗಿಲು ಬಡಾವಣೆ ಅಕ್ರಮ ನಿವಾಸಿಗಳಿಗೆ ಮನೆ ನೀಡುವುದನ್ನು ವಿರೋಧಿಸಿ, ಇವಿಎಂ ಆರೋಪಗಳಿಗೆ ತಿರುಗೇಟು ನೀಡಿದರು.

Read Full Story

04:15 PM (IST) Jan 03

BBK 12 - ಖಡಕ್‌ ಆಗಿ ಗಿಲ್ಲಿ ನಟನ ತಪ್ಪು ಹೇಳಿದ ಕಿಚ್ಚ ಸುದೀಪ್‌; ಈ ವಾರ ಮಾರಿಹಬ್ಬ ಮಿಸ್‌ ಆಗಲ್ಲ!

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಾರ ಗಿಲ್ಲಿ ನಟ ಅವರು ಕ್ಯಾಪ್ಟನ್‌ ಆಗಿದ್ದರು. ಬೇರೆಯವರ ಕ್ಯಾಪ್ಟನ್ಸಿಯಲ್ಲಿ ಗಿಲ್ಲಿ ನಟ ಅವರು ಕೆಲಸ ಮಾಡಿರಲಿಲ್ಲ. ಈ ಬಾರಿ ಅವರು ಬೇರೆಯವರ ಬಳಿ ಕೆಲಸ ಮಾಡಿಸಬೇಕಿತ್ತು.

 

Read Full Story

04:07 PM (IST) Jan 03

ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ವೇಳೆ ಬಂದ ಸುಂಟರಗಾಳಿ; ಕೂದಲೆಳೆ ಅಂತರದಲ್ಲಿ ಬದುಕುಳಿದ ಸತೀಶ್ ಜಾರಕಿಹೊಳಿ!

ರಾಣೆಬೆನ್ನೂರಿನಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ, ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲೆ ಸುಂಟರಗಾಳಿಗೆ ಬೃಹತ್ ಪೆಂಡಾಲ್ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಸಚಿವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಬಗ್ಗೆ ವಿವರ ತಿಳಿಯಿರಿ.

 

Read Full Story

03:13 PM (IST) Jan 03

ದರ್ಶನ್ ಹೋದ್ಮೇಲೆ ಸುದೀಪ್ ಜಾಸ್ತಿ ನಿಗರಾಡ್ತವ್ರೆ ಎಂದ ಆರ್ಯವರ್ಧನ್ ಗುರೂಜಿ; ಬಾಲ ಕತ್ತರಿಸಿದ ಕಿಚ್ಚನ ಫ್ಯಾನ್ಸ್!

ಖಾಸಗಿ ಯೂಟ್ಯೂಬ್ ವಾಹಿನಿಯೊಂದರಲ್ಲಿ ನಟ ಕಿಚ್ಚ ಸುದೀಪ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್ಯವರ್ಧನ್ ಗುರೂಜಿ, ತೀವ್ರ ವಿವಾದಕ್ಕೆ ಗುರಿಯಾಗಿದ್ದರು. ಸುದೀಪ್ ಅಭಿಮಾನಿಗಳು ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಗುರೂಜಿ ಬೇಷರತ್ ಕ್ಷಮೆ ಕೋರಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
Read Full Story

03:11 PM (IST) Jan 03

50 ವರ್ಷಗಳಲ್ಲಿ 1000 ಸಿನಿಮಾ, 6 ವರ್ಷಗಳಲ್ಲಿ 54 ಸಿನಿಮಾ ಹೀರೋ; ದೇಶದಲ್ಲೇ ದಾಖಲೆ ಬರೆದ ಕನ್ನಡ ನಟ ಯಾರು?

Kannada Actor Movies: ತೆಲುಗು ಚಿತ್ರರಂಗದಲ್ಲಿ ಅನೇಕ ಹಿರಿಯ ನಟರಿದ್ದಾರೆ. ಅವರಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಪ್ರತಿಭೆ, ತಮ್ಮದೇ ಆದ ದಾಖಲೆಗಳಿವೆ. ಸ್ಟಾರ್‌ಡಮ್ ಇಲ್ಲದಿದ್ದರೂ ಅದ್ಭುತಗಳನ್ನು ಮಾಡಿದ ಅನೇಕರಿದ್ದಾರೆ. ಅವರಲ್ಲಿ 1000 ಚಿತ್ರಗಳ ದಾಖಲೆ ಹೊಂದಿರುವ ನಟನ ಬಗ್ಗೆ ನಿಮಗೆ ಗೊತ್ತಾ?

 

Read Full Story

02:38 PM (IST) Jan 03

BBK 12 ಟ್ರೋಫಿ ಹೊಡಿತಾರೆ ಎನ್ನುವಷ್ಟರಲ್ಲಿ ಭಾರೀ ಎಡವಟ್ಟು ಮಾಡ್ಕೊಂಡ Gilli Nata; ಬೆಲೆ ತೆರಬೇಕಾಗತ್ತಾ?

ಇನ್ನೇನು ಹದಿನೈದು ದಿನಗಳಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ತೆರೆ ಬೀಳುವುದು. ಯಾರು ವಿಜೇತರಾಗುತ್ತಾರೆ ಎಂಬ ಕುತೂಹಲವಿದೆ. ಇನ್ನು ಗಿಲ್ಲಿ ನಟ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಕೂಡ ಇದೆ. ಇವರು ವಿನ್‌ ಆಗ್ತಾರೆ ಎಂಬ ನಿರೀಕ್ಷೆ ಮಧ್ಯೆ ಕೆಲ ತಪ್ಪುಗಳನ್ನು ಮಾಡಿಕೊಂಡಿದ್ದಾರೆ. 

Read Full Story

02:38 PM (IST) Jan 03

ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಭಾಗ್ಯ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಎಂಟ್ರಿ, ಜಾಮೀನು ರದ್ದತಿ ಕ್ರಮ

ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್, ಯುವತಿಯನ್ನು ಪ್ರೀತಿಸಿ, ಗರ್ಭವತಿಯನ್ನಾಗಿಸಿ ವಂಚಿಸಿದ ಪ್ರಕರಣಕ್ಕೆ ರಾಜಕೀಯ ತಿರುವು ಸಿಕ್ಕಿದೆ. ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಎಂದು ಸಾಬೀತಾದರೂ, ಮದುವೆಗೆ ನಿರಾಕರಿಸಿ 50 ಲಕ್ಷ ರೂ. ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ. 

Read Full Story

02:11 PM (IST) Jan 03

ಬಳ್ಳಾರಿ ಗಲಭೆಗೆ ತಲೆದಂಡವಾಗಿದ್ದ ಎಸ್ಪಿ ಪವನ್ ನೆಜ್ಜೂರು ಆತ್ಮ*ಹತ್ಯೆಗೆ ಯತ್ನ - ಅಮಾನತು ಬೆನ್ನಲ್ಲೇ ಮಾತ್ರೆ ಸೇವನೆ

ಬಳ್ಳಾರಿ ಹಿಂಸಾಚಾರದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಂಡಿದ್ದ ಎಸ್‌ಪಿ ಪವನ್ ನೆಜ್ಜೂರು ಅವರು ತೀವ್ರ ಮನನೊಂದು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ತುಮಕೂರಿನ ತಮ್ಮ ನಿವಾಸದಲ್ಲಿ ಅತಿಯಾದ ಮಾತ್ರೆ ಸೇವಿಸಿದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story

01:34 PM (IST) Jan 03

ಜನಾರ್ದನ ರೆಡ್ಡಿ ಕೊಲೆ ಸಂಚು ಆರೋಪ ಬರೀ ಡ್ರಾಮಾ; ನಮ್ಮ ಶಾಸಕ ಗಲಾಟೆ ಕಂಟ್ರೋಲ್‌ಗೆ ಹೋಗಿದ್ದು-ಡಿಕೆಶಿ

ಬಳ್ಳಾರಿಯಲ್ಲಿ ನಡೆದ ಗಲಾಟೆಗೆ ಜನಾರ್ಧನ ರೆಡ್ಡಿ ಕಾರಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಅವರ ಕೊಲೆ ಯತ್ನದ ಆರೋಪವನ್ನು 'ಡ್ರಾಮಾ' ಎಂದು ತಳ್ಳಿಹಾಕಿ, ಕೋಟೆ ಕಟ್ಟಿಕೊಂಡು ಕುಳಿತಿರುವ ಅವರಿಗೆ ಯಾರಿಂದಲೂ ಭಯವಿಲ್ಲ, ಬದಲಿಗೆ ಅವರಿಂದಲೇ ಜನರಿಗೆ ಭಯವಿದೆ ಎಂದು ಹೇಳಿದರು.

Read Full Story

01:24 PM (IST) Jan 03

ತುಂಗಭದ್ರಾ ನದಿಯಲ್ಲಿ ಬಲೆಗೆ ಬಿದ್ದ ಅಪರೂಪದ ದೈತ್ಯ ಹದ್ದು ಮೀನು, ಬರೋಬ್ಬರಿ 12,800ಕ್ಕೆ ಮಾರಾಟ!

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಬಳಿ ತುಂಗಭದ್ರಾ ನದಿಯಲ್ಲಿ ಮೀನುಗಾರರ ಬಲೆಗೆ 32 ಕೆಜಿ ತೂಕದ, ಎರಡು ಮೀಟರ್ ಉದ್ದದ ಬೃಹತ್ ಹದ್ದು ಮೀನು ಸಿಕ್ಕಿದೆ. ಈ ಅಪರೂಪದ ಮೀನನ್ನು ನೋಡಲು ಜನರು ಮುಗಿಬಿದ್ದಿದ್ದು, ಇದು ಸ್ಥಳೀಯರಲ್ಲಿ ನದಿಯ ಜೀವವೈವಿಧ್ಯದ ಬಗ್ಗೆ ಕುತೂಹಲ ಮೂಡಿಸಿದೆ.
Read Full Story

01:20 PM (IST) Jan 03

ಸುಗುಣ, ಸುಂದರ ಪತಿ ಇದ್ರೂ ಹೆಣ್ಣು ಪರಪುರುಷನಿಗೆ ಅಟ್ರ್ಯಾಕ್ಟ್​ ಆಗೋದ್ಯಾಕೆ? ಗಂಡಂದಿರಿಗೆ ಡಾ.ಸೌಜನ್ಯ ಕಿವಿ ಮಾತೇನು?

ವಿವಾಹಿತ ಮಹಿಳೆಯರು ಪರಪುರುಷರತ್ತ ಆಕರ್ಷಿತರಾಗಲು ಮುಖ್ಯ ಕಾರಣ ಪತಿಯಿಂದ ಸಿಗದ ಪ್ರಶಂಸೆ ಮತ್ತು ಹೊಗಳಿಕೆ. ಈ ಭಾವನಾತ್ಮಕ ಕೊರತೆಯನ್ನು ಬೇರೊಬ್ಬ ವ್ಯಕ್ತಿ ತುಂಬಿದಾಗ, ಅದು ದೈಹಿಕ ಆಕರ್ಷಣೆಗಿಂತ ಹೆಚ್ಚಾಗಿ ಮಾನಸಿಕ ಆಕರ್ಷಣೆಗೆ ಕಾರಣವಾಗುತ್ತದೆ ಎಂದು ಮನೋತಜ್ಞೆ ಡಾ.ಸೌಜನ್ಯ ವಶಿಷ್ಠ ವಿವರಿಸುತ್ತಾರೆ.
Read Full Story

12:54 PM (IST) Jan 03

ಛತ್ತೀಸ್‌ಗಡದಲ್ಲಿ ಮಾವೋವಾದಿಗಳ ವಿರುದ್ಧ ಭಾರೀ ಕಾರ್ಯಾಚರಣೆ, ಕನಿಷ್ಠ 14 ನಕ್ಸಲರ ಹತ್ಯೆ! ಮುಂದುವರೆದ ಗುಂಡಿನ ಚಕಮಕಿ

ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಬೃಹತ್ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಕನಿಷ್ಠ 14 ನಕ್ಸಲರು ಹತರಾಗಿದ್ದಾರೆ. ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಈ ಘಟನೆ ನಡೆದಿದೆ.

Read Full Story

12:41 PM (IST) Jan 03

BBK 12 - ಇಂಥಾ ಟೈಮ್‌ನಲ್ಲಿ ಈ ರೀತಿ ಮಾತು ಬೇಕಿತ್ತಾ? ಕಿಚ್ಚ ಸುದೀಪ್ ಖಡಕ್ ಕ್ಲಾಸ್

ವೀಕೆಂಡ್‌ ಸಂಚಿಕೆಯ ಪ್ರೋಮೋದಲ್ಲಿ ಕಿಚ್ಚ ಸುದೀಪ್, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ಜಗಳದ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೆ, ಗೆದ್ದರೂ ಸಂಭ್ರಮಿಸಲು ಆಗದಿರುವ ಧನುಷ್ ಮತ್ತು ಕ್ಯಾಪ್ಟನ್ಸಿ ಟಾಸ್ಕ್‌ನ ಗೊಂದಲಗಳ ಬಗ್ಗೆಯೂ ಚರ್ಚೆಯ ಸುಳಿವು ನೀಡಿದ್ದಾರೆ.
Read Full Story

12:33 PM (IST) Jan 03

Bigg Boss ಮನೆಯಲ್ಲಿ ಗಿಲ್ಲಿ ನಟ ಎಂಥ ಕಿಲಾಡಿ ಎನ್ನೋದಿಕ್ಕೆ ಬಲವಾದ ಸಾಕ್ಷಿಗಳಿವು! ಎಲ್ರಿಗೂ ಕಾಣಿಸಿಲ್ಲ!

BBK 12 Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿರುವ ಗಿಲ್ಲಿ ನಟ ಈಗಾಗಲೇ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದಾರೆ. ಅವರು ಈ ಶೋನಲ್ಲಿ ಕಾಮಿಡಿ ಮಾಡಿ, ತಕ್ಷಣ ಪ್ರತಿಕ್ರಿಯೆ ನೀಡಿ ಹೆಸರು ಗಳಿಸಿದ್ದಾರೆ. ಆಟದ ವಿಚಾರದಲ್ಲಿ ಕೂಡ ಅವರು ಬುದ್ಧಿವಂತಿಕೆ ತೋರಿಸಿದ್ದರು.

 

Read Full Story

12:29 PM (IST) Jan 03

150 ಬಾಡಿ ಗಾರ್ಡ್​ ಹೊಂದಿದ್ದಾರೆ ಈ Bigg Boss ಚೆಲುವೆ? ಯಾರೀಕೆ? ಏನಿದರ ಅಸಲಿಯತ್ತು?

ಬಿಗ್‌ಬಾಸ್‌ 19ರ ಫೈನಲಿಸ್ಟ್  ತಮಗೆ 150 ಅಂಗರಕ್ಷಕರು ಇದ್ದಾರೆ ಎಂದು ಹೇಳಿ ಸುದ್ದಿಯಾಗಿದ್ದರು. ಆದರೆ, ಶೋ ಮುಗಿದ ನಂತರ ತಮ್ಮ ಹೇಳಿಕೆಯನ್ನು ನಿರಾಕರಿಸಿರುವ ಅವರು, ತನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾರೀಕೆ?

Read Full Story

More Trending News