ಬೆಂಗಳೂರು: ಮುಂದಿನ ವರ್ಷದ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದು, ಮುಖ್ಯಮಂತ್ರಿ ಬದಲಾವಣೆ ನಡೆಯುವುದು ಖಚಿತ ಎಂದು ಕೋಡಿಮಠದ ಶಿವರಾತ್ರಿ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವನ ಮುಡಿಯ ಮೇಲಿರುವ ಮಲ್ಲಿಗೆಯು ಶಿವನ ಪಾದಕ್ಕೆ ಬೀಳಲೇಬೇಕು. ರಾಜ್ಯ ರಾಜಕಾರಣದ ಗೊಂದಲವು ಸಂಪೂರ್ಣವಾಗಿ ಬಗೆಹರಿಯಲಿದ್ದು, ಸುಖಾಂತ್ಯವಾಗಲಿದೆ.
ಮಕರ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದ ನಾಯಕತ್ವದ ಗುದ್ದಾಟವು ಬಗೆಹರಿಯಲಿದೆ ಎಂದು ಹೇಳಿದ್ದಾರೆ. ನಾನು ಶಾಸ್ತ್ರ ಹೇಳುವವನಲ್ಲ ಶಾಸ್ತ್ರಕಾರನಲ್ಲ ಮುಂದೆ ನಡೆಯುವ ವಿಚಾರಗಳನ್ನು ತಿಳಿಸುವ ಶಕ್ತಿ ಹೊಂದಿದ್ದೇನೆ. ಅದೇ ರೀತಿ ರಾಷ್ಟ್ರ ರಾಜಕಾರಣದಲ್ಲಿಯೂ ಕೂಡ ಯುಗಾದಿ ನಂತರ ಸಮಸ್ಯೆಗಳು ಎದುರಾಗಲಿವೆ. ಇತ್ತೀಚಿಗೆ ನಡೆದ ಬಾಂಬ್ ಬ್ಲಾಸ್ಟ್ ನಂತಹ ಅಹಿತಕರ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ನಡೆಯಲಿವೆ ಎಂದು ಎಚ್ಚರಿಸಿದರು.
11:24 PM (IST) Dec 03
ರಾಜಮೌಳಿಗೆ ಜೂ.ಎನ್‌ಟಿಆರ್ ಓಪನ್ ಚಾಲೆಂಜ್ ಹಾಕಿದ್ದಾರೆ. ಶೂಟಿಂಗ್‌ನಲ್ಲಿ ತಮಗೆ ಟಾರ್ಚರ್ ಕೊಡುತ್ತಾರೆ ಎಂದು ದೂರಿದ ತಾರಕ್, 17 ಟೇಕ್‌ಗಳನ್ನು ತೆಗೆದುಕೊಂಡ ಒಂದು ದೃಶ್ಯದ ಬಗ್ಗೆ ಮಾತನಾಡುತ್ತಾ ಜಕ್ಕಣ್ಣನಿಗೆ ಶಾಕ್ ನೀಡಿದ್ದಾರೆ.
11:01 PM (IST) Dec 03
ಇತ್ತೀಚೆಗೆ ಎಐ ಬಳಸಿ ನಟಿಯರ ಫೋಟೋಗಳನ್ನು ಅಸಭ್ಯವಾಗಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇದೀಗ ರಶ್ಮಿಕಾ ಕೂಡ ಎಐನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
10:37 PM (IST) Dec 03
ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಅಗತ್ಯವಾದ ಎಲ್ಲ ಕ್ರಮ ವಹಿಸಬೇಕು. ಜೊತೆಗೆ ಲಿಂಗಾನುಪಾತ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
10:36 PM (IST) Dec 03
ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಅಮೂಲ್ಯ, ಕೇವಲ ಮೂರು ತಿಂಗಳಿಗೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಮನೆಯವರ ಕಿರುಕುಳವೇ ಸಾವಿಗೆ ಕಾರಣ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10:23 PM (IST) Dec 03
ಬಾರಾಬತಿ ಕೋಟೆಯು ಒಡಿಶಾದ ಕಟಕ್‌ನಲ್ಲಿರುವ ಸೋಮವಂಶಿ (ಕೇಸರಿ) ರಾಜವಂಶದ ಮರಕಟ ಕೇಸರಿ ನಿರ್ಮಿಸಿದ ಕೋಟೆಯಾಗಿದೆ. ಕೋಟೆಯ ಅವಶೇಷಗಳು ಅದರ ಕಂದಕ, ದ್ವಾರ ಮತ್ತು ಒಂಬತ್ತು ಅಂತಸ್ತಿನ ಅರಮನೆಯ ಮಣ್ಣಿನ ದಿಬ್ಬದೊಂದಿಗೆ ಉಳಿದಿವೆ.
10:11 PM (IST) Dec 03
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ಏನೋ ಕೆಲಸಕ್ಕೆ ಹೋಗಿರಬೇಕಷ್ಟೆ ಹೋಗ್ಲಿ. ನಾವು ಹೋಗ್ಬೇಡ ಅಂತ ಹೇಳೋಕೆ ಆಗುತ್ತಾ.? ಹೈಕಮಾಂಡ್ ಮನಸ್ಸು ಮಾಡಿದರೆ ಯಾರು ಬೇಕಾದ್ರು ಇಳಿಯಬಹುದು.
09:33 PM (IST) Dec 03
ನಟಿ ಸಮಂತಾ ಎರಡನೇ ಮದುವೆಯಾಗಿದ್ದಾರೆ. ಚಿತ್ರರಂಗದಲ್ಲಿ ನಟಿಯರು ಎರಡನೇ ಮದುವೆಯಾಗುವುದು ಅಪರೂಪ. ಟಾಲಿವುಡ್‌ನಲ್ಲಿ ಇಂತಹ ನಟಿಯರ ಸಂಖ್ಯೆ ತೀರಾ ಕಡಿಮೆ. ಸಮಂತಾರಿಂದ ಹಿಡಿದು ಜಯಸುಧಾವರೆಗೆ ಎರಡನೇ ಮದುವೆಯಾದ ತಾರೆಯರು ಯಾರೆಲ್ಲಾ ಇದ್ದಾರೆ ಗೊತ್ತಾ?
09:11 PM (IST) Dec 03
ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ಇದ್ದು, ಅವುಗಳ ಬದಲಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಂಡಿ ತಿನ್ನುವ ವಿಷಯ ಚರ್ಚೆಯಾಗುತ್ತಿರುವುದು ವಿಪರ್ಯಾಸ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
09:04 PM (IST) Dec 03
ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಟೀ, ಕಪ್ ತೆಗೆದುಕೊಂಡು ಕಾಂಗ್ರೆಸ್‌ನವರು ಹೊಡೆದಾಡಿಕೊಂಡಿದ್ದರು. ಈಗ ಚಾಕು, ಚೂರಿ ಸಂಸ್ಕೃತಿ ಬಂದಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವ್ಯಂಗ್ಯವಾಡಿದರು.
08:50 PM (IST) Dec 03
ಅಖಂಡ 2 ಫಸ್ಟ್ ರಿವ್ಯೂ: 'ಅಖಂಡ 2' ಸಿನಿಮಾ ಇನ್ನು ಮೂರು ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಮೊದಲ ವಿಮರ್ಶೆ ಬಂದಿದೆ. ಹಾಗಾದರೆ ಇದರಲ್ಲಿನ ಹೈಲೈಟ್ಸ್ ಮತ್ತು ಮೈನಸ್‌ಗಳು ಯಾವುವು?
08:25 PM (IST) Dec 03
08:21 PM (IST) Dec 03
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯ ನಂತರ ವಾರ್ಡ್‌ಗಳ ಹೆಸರು ಬದಲಾವಣೆ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಲೇಔಟ್ ವಾರ್ಡ್‌ಗೆ 'ಯಾರಬ್ ನಗರ' ಎಂದು ಮರುನಾಮಕರಣ ಮಾಡಿರುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
08:21 PM (IST) Dec 03
ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್, ದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕತಾ, ಚೈನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಂಗಳೂರಿನ ಖಾದ್ಯ ಸೂಪರ್ ಎಂದಿದ್ದಾರೆ.
08:19 PM (IST) Dec 03
ಅಮಲಾ ಅಕ್ಕಿನೇನಿ, ನಾಗ ಚೈತನ್ಯ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನಾಗ ಚೈತನ್ಯ ಮತ್ತು ಅಖಿಲ್ ಅವರನ್ನು ಹೇಗೆ ಬೆಳೆಸಿದೆವು ಅನ್ನೋದನ್ನು ವಿವರಿಸಿದ್ದಾರೆ. ಆ ವಿವರಗಳು ಈ ಲೇಖನದಲ್ಲಿವೆ.
08:07 PM (IST) Dec 03
08:06 PM (IST) Dec 03
ಬಿಜೆಪಿಯವರು ದೇಶ ಕಟ್ಟುವ ಬದಲು ಧರ್ಮ ಕಟ್ಟುತ್ತಿದ್ದಾರೆ. ಇದರಿಂದ ದೇಶಕ್ಕೆ ಉಪಯೋಗವಿಲ್ಲ, ಅಲ್ಲದೇ ಗಾಂಧಿ, ನೆಹರು ಅವರನ್ನು ಬಿಜೆಪಿಯು ವಿರೂಪಗೊಳಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಗಾಂಧಿ ಚಿಂತನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ.
07:46 PM (IST) Dec 03
ಮೆಟ್ರೋ ಜಾಲವು 2027ರ ವೇಳೆಗೆ 175 ಕಿ.ಮೀ.ಗೆ ವಿಸ್ತರಿಸುವ ಗುರಿ ಹೊಂದಿದೆ, ಇದರಲ್ಲಿ ಹಳದಿ, ಪಿಂಕ್ ಮತ್ತು ನೀಲಿ ಮಾರ್ಗಗಳು ಸೇರಿವೆ. ಸಾರಿಗೆ ಸುಧಾರಣೆ ಜೊತೆಗೆ, ಅಂಗಾಂಗ ಸಾಗಣೆಯಂತಹ ತುರ್ತು ವೈದ್ಯಕೀಯ ಸೇವೆಗಳಿಗೆ 'ಶೂನ್ಯ ಸಂಚಾರ ಕಾರಿಡಾರ್' ಪರಿಕಲ್ಪನೆಯ ಮೂಲಕ ಮೆಟ್ರೋ ಮಹತ್ವದ ಪಾತ್ರ ವಹಿಸುತ್ತಿದೆ.
07:46 PM (IST) Dec 03
ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ರಾಜ್ಯದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದು, ಬೆಂಗಳೂರು-ವಿಜಯಪುರ ಪ್ರಯಾಣ ಸಮಯವನ್ನು 10 ಗಂಟೆಗೆ ಇಳಿಸುವ ಮತ್ತು ಬೆಂಗಳೂರು-ಮಂಗಳೂರು ಮಾರ್ಗವನ್ನು ಜೋಡಿ ಹಳಿಗೇರಿಸುವ ಬಗ್ಗೆ ಚರ್ಚಿಸಿದ್ದಾರೆ.
07:38 PM (IST) Dec 03
07:31 PM (IST) Dec 03
ನಟಿ ಸಮಂತಾ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅವರಿಗಿಂತ ಮೊದಲು ನಯನತಾರಾ, ರೋಜಾ, ಸೋನಾಲಿ ಬೇಂದ್ರೆ ಹೀಗೆ ನಿರ್ದೇಶಕರನ್ನು ಮದುವೆಯಾದ ಬೇರೆ ಸ್ಟಾರ್ ನಟಿಯರು ಯಾರು ಗೊತ್ತಾ?
07:26 PM (IST) Dec 03
07:12 PM (IST) Dec 03
ರಾಜಮೌಳಿ ಅವರ ಮಹಾಭಾರತ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಸಿನಿಮಾದಲ್ಲಿ ಪ್ರಭಾಸ್ ಕರ್ಣನಾಗಿ, ರಾಮ್ ಚರಣ್ ಅರ್ಜುನನಾಗಿ ನಟಿಸಿದರೆ ಹೇಗಿರುತ್ತೆ? ಕೃಷ್ಣನ ಪಾತ್ರಕ್ಕೆ ಯಾರು ಸರಿಹೊಂದುತ್ತಾರೆ? ಇದಕ್ಕೆ ಸಂಬಂಧಿಸಿದ ಎಐ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
07:11 PM (IST) Dec 03
07:10 PM (IST) Dec 03
06:51 PM (IST) Dec 03
ತುಂಗಭದ್ರಾ ಜಲಾಶಯದ ನೂತನ ಗೇಟ್ ಅಳವಡಿಕೆ ಕಾರ್ಯ ಇನ್ನೊಂದು ವಾರದಲ್ಲಿ ಪ್ರಾರಂಭವಾಗಲಿದೆ ಎಂದು ಸಣ್ಣ ನೀರಾವರಿ ಸಚಿವ ಬೋಸರಾಜು ಹೇಳಿದರು. ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
06:44 PM (IST) Dec 03
06:41 PM (IST) Dec 03
ಬಹುಕಾಲದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಹುಚ್ಚ ವೆಂಕಟ್ ತಮ್ಮ ಈಗಿನ ಕಷ್ಟದ ಜೀವನದ ಬಗ್ಗೆ ಮಾತನಾಡಿದ್ದಾರೆ. ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದು, ಆಪರೇಷನ್‌ಗೆ ಹಣವಿಲ್ಲದಿದ್ದರೂ ಜನರ ಬಳಿ ಸಹಾಯ ಕೇಳುವುದಿಲ್ಲ ಎಂದಿದ್ದಾರೆ.
06:12 PM (IST) Dec 03
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರು ಮತ್ತು ಬಾಗಲಕೋಟೆ ನಡುವೆ ಹೊಸ ಎ.ಸಿ. ಸ್ಲೀಪರ್ ಕೋಚ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ರಾತ್ರಿ ವೇಳೆಯಲ್ಲಿ ಸಂಚರಿಸುವ ಈ ಐಷಾರಾಮಿ ಬಸ್‌ನ ಟಿಕೆಟ್ ದರ, ವೇಳಾಪಟ್ಟಿ ಮತ್ತು ಆನ್‌ಲೈನ್ ಬುಕಿಂಗ್ ವಿವರಗಳನ್ನು ಇಲ್ಲಿ ನೀಡಲಾಗಿದೆ.
06:02 PM (IST) Dec 03
05:53 PM (IST) Dec 03
ನಮ್ಮಲ್ಲಿ ಯಾರೇ ಮುಖ್ಯಮಂತ್ರಿ ಆದರೂ ನಾವು ಪಕ್ಷವನ್ನು ಬಿಟ್ಟುಕೊಡೊದಿಲ್ಲ. ಪಕ್ಷಕ್ಕಾಗಿ ನಾವು ಹೋರಾಡುತ್ತೇವೆ. ನಾವು ಬೇಡ ಅಂದರೂ ಸರ್ಕಾರ ಉಳಿಯುತ್ತದೆ ಎಂದು ಸಕ್ಕರೆ ಹಾಗೂ ಕೃಷಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
05:45 PM (IST) Dec 03
ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಯಲ್ಲಿ ನಡೆಯುತ್ತಿರುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಖಾಸಗಿ ಕಂಪನಿಯವರ ಸಹಭಾಗಿತ್ವ ಪಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
05:35 PM (IST) Dec 03
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಬೆಂಗಳೂರು ಸೆಷನ್ಸ್ ಕೋರ್ಟ್‌ನಲ್ಲಿ ನಡೆದಿದ್ದು, ಜೈಲಿನಲ್ಲಿರುವ ಆರೋಪಿಗಳಿಗೆ ಟಿವಿ ಸೌಲಭ್ಯ ನೀಡಲು ಮತ್ತು ದರ್ಶನ್ ಮನೆಯಲ್ಲಿ ಸಿಕ್ಕ ₹82 ಲಕ್ಷವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲು ನ್ಯಾಯಾಲಯ ಆದೇಶಿಸಿದೆ.
05:34 PM (IST) Dec 03
ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 358 ರನ್ ಗಳಿಸಿ ಹರಿಣಗಳಿಗೆ ಕಠಿಣ ಗುರಿ ನೀಡಿದೆ.
05:34 PM (IST) Dec 03
05:32 PM (IST) Dec 03
ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್ ಗೌಡ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.
05:05 PM (IST) Dec 03
ಬಿಗ್ ಬಾಸ್ ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಸ್ಪರ್ಧಿ ಸ್ಪಂದನಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲ್ ಸಂಗ್ರಹಿಸುವ ಆಟದಲ್ಲಿ ಸಹ ಸ್ಪರ್ಧಿಗಳು ಮೇಲೆ ಬಿದ್ದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
04:54 PM (IST) Dec 03
ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ, ಇಬ್ಬರು ಕೂಡ ಕುರ್ಚಿ ಆಸೆಗಾಗಿ ಬ್ರೇಕ್ ಪಾಸ್ಟ್ ಗಿಮಿಕ್ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
04:37 PM (IST) Dec 03
ಕನ್ನಡಿಗರೇ ಸೇರಿ ಮಾಡಿರುವ ಆಜಾದ್ ಭಾರತ್ ಬಾಲಿವುಡ್ ಚಿತ್ರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳಾ ಪಡೆಯನ್ನು ಕಟ್ಟಿದ್ದು ಹೇಗೆ, ಅದರ ಆಲೋಚನೆ ಬಂದಿದ್ದು ಹೇಗೆ, ಆ ಪಡೆ ಹೇಗೆ ಕೆಲಸ ಮಾಡಿತು.
04:20 PM (IST) Dec 03
ದರ್ಶನ್ ನಟನೆಯ ‘ಡೆವಿಲ್’ ಚಿತ್ರದ ಟ್ರೇಲರ್ ಡಿ.5ರಂದು ಬೆಳಿಗ್ಗೆ 10.5 ನಿಮಿಷಕ್ಕೆ ಯೂಟ್ಯೂಬ್‌ನಲ್ಲಿ ಟ್ರೈಲರ್ ರಿಲೀಸ್ ಆಗಲಿದೆ. ಡಿ.11ರಂದು ಬೆಳಿಗ್ಗೆ 6.30ರಿಂದಲೇ ‘ಡೆವಿಲ್’ ಚಿತ್ರದ ಪ್ರದರ್ಶನ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
04:11 PM (IST) Dec 03