ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ಏನೋ ಕೆಲಸಕ್ಕೆ ಹೋಗಿರಬೇಕಷ್ಟೆ ಹೋಗ್ಲಿ. ನಾವು ಹೋಗ್ಬೇಡ ಅಂತ ಹೇಳೋಕೆ ಆಗುತ್ತಾ.? ಹೈಕಮಾಂಡ್ ಮನಸ್ಸು ಮಾಡಿದರೆ ಯಾರು ಬೇಕಾದ್ರು ಇಳಿಯಬಹುದು.
ಕೊಳ್ಳೇಗಾಲ (ಡಿ.03): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಗೆ ಏನೋ ಕೆಲಸಕ್ಕೆ ಹೋಗಿರಬೇಕಷ್ಟೆ ಹೋಗ್ಲಿ. ನಾವು ಹೋಗ್ಬೇಡ ಅಂತ ಹೇಳೋಕೆ ಆಗುತ್ತಾ.? ಹೈಕಮಾಂಡ್ ಮನಸ್ಸು ಮಾಡಿದರೆ ಯಾರು ಬೇಕಾದ್ರು ಇಳಿಯಬಹುದು. ನಾನು ಬೇಕಾದ್ರು ಇಳಿಯಬಹುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಕೊಳ್ಳೇಗಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಿಜಯೇಂದ್ರನನ್ನ ಇಳಿಸಿ ಎನ್ ಮಾಡ್ತಾರಂತೆ ಇವರು..? ಅವರು ಹತ್ತೊಕೆ ಆಗುತ್ತಾ..? ಆಗಲ್ಲ , ಯಾರಿಗೆ ಜನ ಬೆಂಬಲವಿದೆ ಎಂದು ಗುರುತಿಸಿ ಹೈಕಮಾಂಡ್ ಅಧಿಕಾರ ಕೊಡಲಿದೆ, ವಿಜಯೇಂದ್ರ ಅಧ್ಯಕ್ಷರಾಗಿರುವದರಿಂದ ಯಾವುದೇ ಸಮಸ್ಯೆ ಇಲ್ಲಾ ಎಂದ ಅವರು ನರಿ ಕೂಗು ಗಿರಿ ಮುಟ್ಟಲ್ಲ ಎಂದು ಭಿನ್ಬಮತಿಯರಿಗೆ ಟಾಂಗ್ ನೀಡಿದ್ದಾರೆ.
ರಾಗಾ ಧರ್ಮ ಕೆದಕಿ ಆಕ್ರೋಶ: ಇನ್ನು, ರಾಹುಲ್ ಗಾಂಧಿ ಧರ್ಮ ಕೆದಕಿ ಕಿಡಿಕಾರಿದ ಛಲವಾದಿ, ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಹಿಂದೂ ವಿರೋಧಿ ಪಕ್ಷ, ಆ ಮೆದುಳಿಗೆ ನಾಲಿಗೆಗೂ ಕನೆಕ್ಷನ್ ಇಲ್ದೆ ಇರೋರು ವಿರೋಧ ಪಕ್ಷದ ನಾಯಕರಾಗಿ ದೆಹಲಿಯಲ್ಲಿ ಕುಳಿತಿದ್ದಾರೆ, ಶಾರುಕ್ ಖಾನ್ ಮದ್ವೆಯಾಗಿದ್ದು ಹಿಂದೂ ಯುವತಿಯನ್ನ ಅವರಿಗೆ ಮಕ್ಕಳಾಯ್ತಲ ಅವರು ಹಿಂದುಗಳಾ? ಮುಸ್ಲಿಂ ಆಗಿದ್ದಾರೆ. ಅದೇ ರೀತಿ, ಗಾಂಧಿ ಕುಟುಂಬದ ಧರ್ಮ ಯಾವುದು ಎಂದು ಪ್ರಶ್ನಿಸಿದರು.
ಜನರು ಪ್ರಶ್ನೆ ಮಾಡುತ್ತಿದ್ದಾರೆ
ಇಂದಿರಾಗಾಂಧಿ ಮದ್ವೆ ಆಗಿದ್ದು ಫಿರೋಜ್ ಖಾನ್ ನಾ, ರಾಜೀವ್ ಗಾಂಧಿ ಕ್ರಿಶ್ಚಿಯನ್ ನ ಮದ್ವೆಯಾದರು, ಪ್ರಿಯಾಂಕ ಗಾಂಧಿ ಕ್ರಿಶ್ಚಿಯನ್‌ನ್ನ ಮದ್ವೆಯಾದ್ರು, ಇವರೆಲ್ಲ ಬೇರೆ ಬೇರೆ ಧರ್ಮದವರನ್ನ ಮದ್ವೆಯಾಗಿ ಅದ್ಯಾಗೆ ಬ್ರಾಹ್ಮಣರಾಗಿ ಉಳಿದಿದ್ದಾರೆ ಎಂಬುದನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇವರು ಖಾನ್ ನ ಮದ್ವೆಯಾಗಿ ಖಾನ್ ಆಗಿಲ್ಲ ಹಿಂದುಗಳಾಗಿ ಉಳಿಯುತ್ತಾರೆ ಅದು ಹೇಗೆ ಎಂದು ಟೀಕಿಸಿದರು.


