- Home
- Entertainment
- TV Talk
- ಬಿಗ್ ಬಾಸ್ ಟಾಸ್ಕ್‌ನಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಸ್ಪಂದನಾ ಸೋಮಣ್ಣ; ನಡೆಯಲೂ ಆಗದಷ್ಟು ನೋವು!
ಬಿಗ್ ಬಾಸ್ ಟಾಸ್ಕ್‌ನಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಸ್ಪಂದನಾ ಸೋಮಣ್ಣ; ನಡೆಯಲೂ ಆಗದಷ್ಟು ನೋವು!
ಬಿಗ್ ಬಾಸ್ ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಸ್ಪರ್ಧಿ ಸ್ಪಂದನಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲ್ ಸಂಗ್ರಹಿಸುವ ಆಟದಲ್ಲಿ ಸಹ ಸ್ಪರ್ಧಿಗಳು ಮೇಲೆ ಬಿದ್ದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕಾಲು ಮುರಿದುಕೊಂಡ ಸ್ಪಂದನಾ
ಬಿಗ್ ಬಾಸ್ ಮನೆಯಲ್ಲಿ ಈ ವಾರ ಎಲ್ಲ ಸ್ಪರ್ಧಿಗಳನ್ನು ಜೋಡಿಗಳನ್ನಾಗಿ ಮಾಡಿ ಕ್ಯಾಪ್ಟನ್ಸಿ ಟಾಸ್ಕ್ ಕೊಡಲಾಗಿದೆ. ಈ ಟಾಸ್ಕ್‌ನಲ್ಲಿ ಎಲ್ಲ ಸ್ಪರ್ಧಿಗಳ ಕಾಲಿಗೆ (ಒಬ್ಬರು ಪುರುಷ-ಒಬ್ಬರು ಮಹಿಳೆ-ಒಟ್ಟು 7 ಜೋಡಿ) ಹಗ್ಗವನ್ನು ಕಟ್ಟಿ ಬಾಲ್‌ಗಳನ್ನು ಸಂಗ್ರಹಿಸುವ ಸವಾಲು ನೀಡಲಾಗಿತ್ತು. ಈ ವೇಳೆ ನಟಿ ಸ್ಪಂದನಾ ಗಾಯ ಮಾಡಿಕೊಂಡಿದ್ದಾರೆ.
ದೈಹಿಕ ಶ್ರಮದ ಟಾಸ್ಕ್‌ನಲ್ಲಿ ಗಾಯ
ಬಿಗ್ ಬಾಸ್ ನೀಡುವ ಟಾಸ್ಕ್‌ಗಳು ಈ ಬಾರಿ ಅತ್ಯಂತ ಸುಲಭವಾಗುದ್ದವು. ಯಾವುದೇ ಟಾಸ್ಕ್‌ಗಳು ದೈಹಿಕವಾಗಿ ಹೆಚ್ಚು ಶ್ರಮ ಹಾಕುವಂತಹ ಟಾಸ್ಕ್‌ಗಳು ಇರಲಿಲ್ಲ. ಈವರೆಗೆ ಎಲ್ಲ ಸ್ಪರ್ಧಿಗಳು ಕೂಡ ತಮ್ಮ ದೈಹಿಕ ಶ್ರಮಕ್ಕಿಂತ ಮಾನಸಿಕವಾಗಿ ಗೇಮ್ ಆಡಿಕೊಂಡೇ ಅರ್ಧ ಶೋ ಮುಗಿಸಿದ್ದಾರೆ.
ಕ್ಯಾಪ್ಟನ್ ಆಯ್ಕೆಗೆ ಜೋಡಿ ಟಾಸ್ಕ್
ಇದೀಗ ಬಿಗ್ ಬಾಸ್ ಶೋನಲ್ಲಿ 9 ವಾರಗಳು ಮುಗಿದ ನಂತರ ಅಸಲಿ ಟಾಸ್ಕ್‌ಗಳನ್ನು ಆರಂಭಿಸಿಲಾಗಿದೆ. ಈ ವಾರದಲ್ಲಿ ಕ್ಯಾಪ್ಟನ್ ಆಯ್ಕೆ ಮಾಡುವುದಕ್ಕೆ ಜೋಡಿಗಳನ್ನು ಮಾಡಿ ಟಾಸ್ಕ್ ಕೊಡಲಾಗಿದ್ದು, ಬಾಲ್‌ಗಳನ್ನು ಸಂಗ್ರಹಿಬೇಕಾಗಿದೆ.
ಅಭಿಷೇಕ್‌ಗೆ ಸ್ಪಂದನಾ ಜೋಡಿ
ಇದರಲ್ಲಿ ಅಭಿಷೇಕ್ ಜೊತೆಗೆ ಜೋಡಿಯಾಗಿರುವ ಸ್ಪಂದನಾ ಆರಂಭದಿಂದಲೇ ತುಂಬಾ ಸಾಫ್ಟ್ ಆಗಿ ಸ್ಲೋ ಆಗಿಯೇ ಆಟವಾಡಲು ಮುಂದಾಗಿದ್ದರು. ಇನ್ನು ಆಟವು ರೋಚಕತೆ ಪಡೆದಂತೆ ಎಲ್ಲರೂ ವಾಲ್‌ಗಳನ್ನು ಕಸಿಯುವುದಕ್ಕೆ ಮುಂದಾಗಿದ್ದಾರೆ. ಆಗ ಸ್ಪಂದನಾ ಕೈಲಿದ್ದ ಬಾಲ್ ಅನ್ನು ಕಸಿದುಕೊಳ್ಳಲು ಹೋದಾಗ ಅವರು ಕೆಳಗೆ ಬಿದ್ದಿದ್ದಾರೆ.
ಸ್ಪಂದನಾ ಮೇಲೆ ಬಿದ್ದ ಸಹ ಸ್ಪರ್ಧಿಗಳು
ಸ್ಪಂದನಾ ಕೆಳಗೆ ಬಿದ್ದಿದ್ದರೂ ಅಭಿಷೇಕ್ ತನ್ನ ಕೈಲಿದ್ದ ಬಾಲ್ ರಕ್ಷಣೆ ಮಾಡಿಕೊಳ್ಳಲು ನಿಂತುಕೊಂಡು ಸ್ಪಂದನಾಳನ್ನು ಮೇಲೆತ್ತಲು ಪ್ರಯತ್ನಿಸುತ್ತಿರುವಾಗ ಇತರ ಸ್ಪರ್ಧಿಗಳು ಸ್ಪಂದನಾ ಮೇಲೆ ಬಿದ್ದಿದ್ದಾರೆ. ಆಗ ಸ್ಪಂದನಾ ನನ್ನ ಕಾಲು, ಕಾಲು ಎಂದು ಬೊಬ್ಬೆ ಹಾಕಿದರೂ ಯಾರೂ ಕೇಳದೇ ಮೈಮೇಲೆ ಬಿದ್ದು ಬಾಲ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ.
ಆಸ್ಪತ್ರೆಗೆ ರವಾನೆ
ಈ ಘಟನೆಯಲ್ಲಿ ಸ್ಪಂದನಾ ಕಾಲಿನ ಮೂಳೆ ಮುರಿತವಾದಂತಿದೆ. ನಂತರ ಮೇಲೆ ಏಳಲೂ ಆಗದಂತಹ ಸ್ಥಿತಿ ತಲುಪಿದ್ದ ಸ್ಪಂದನಾಳನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಾಲಿಗೆ ಬ್ಯಾಂಡೇಜ್ ಮಾಡಿ ನೇರವಾಗಿಯೇ ಕಾಲನ್ನು ಇಟ್ಟುಕೊಳ್ಳುವುದಕ್ಕೆ ಬೆಲ್ಟ್ ಕೊಡಲಾಗಿದೆ. ಮೊಣಕಾಲಿಗೆ ಗಂಭೀರ ಪೆಟ್ಟಾಗಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ.
ಕಾಲೆಳೆದುಕೊಂಡು ನಡೆಯುವ ಸ್ಟೈಲ್
ಇನ್ನು ಸ್ಪಂದನಾ ಚಿಕಿತ್ಸೆ ಪಡೆದುಕೊಂಡು ಬಂದ ನಂತರ ಅಭಿಷೇಕ್ ಸಹಾಯದಿಂದ ಓಡಾಡುವಾಗ ಇದನ್ನು ಹಾಸ್ಯಕ್ಕೆ ತಿರುಗಿಸಿದ ಗಿಲ್ಲಿ ನಟ, ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ನೋಟ ಸಿಂಗಾರವಾಯಿತೇ ಹಾಡಿನಲ್ಲಿ ಕಾಲೆಳೆದುಕೊಂಡು ನಡೆಯುವ ಸ್ಟೈಲ್ ಅನ್ನು ತೋರಿಸುತ್ತಾ ಮನೆ ಮಂದಿಯನ್ನು ನಗಿಸುತ್ತಾರೆ.
He is an expert in creating moments without any context 😊
This was expected from him when I heard Spandana is injured 😂 🤣 #BBK12#Gillipic.twitter.com/llu1645BkO— ಅಲ್ಪಸಂಖ್ಯಾತ (@alpasankhyata) December 3, 2025
ಎತ್ತರದಲ್ಲಿ ಕಾಲಿಡಲು ಚೇರ್ ಬಳಕೆ
ಜೊತೆಗೆ, ಸ್ಪಂದನಾ ಮುಂದಿನ ಟಾಸ್ಕ್‌ನಲ್ಲಿ ಆಟವಾಡುವುದಕ್ಕೆ ಸಾಧ್ಯವಾಗದೇ ಕುಳಿತುಕೊಂಡಿದ್ದಾರೆ. ಇನ್ನು ತಾವು ಗಾರ್ಡನ್ ಏರಿಯಾದಲ್ಲಿ ಸೋಫಾ ಮೇಲೆ ಕುಳಿತುಕೊಂಡಾಗ ಎತ್ತರದಲ್ಲಿ ಕಾಲಿಡಲು ಚೇರ್ ಒಂದನ್ನು ಬಳಸಿದ್ದಾರೆ. ಆಗ ಕಾಲಿಗೆ ಹಾಕಿರುವ ಬೆಲ್ಟ್ ಸ್ಪಷ್ಟವಾಗಿ ಕಾಣುತ್ತದೆ.
This duo and their nok jok 🥺🙌
Just love Gilli and his Kalle Putti bond🧿 pure Siblings vibe.. 🥰
Getwell soon Spandu 🙏❤️#BBK12#GilliNata#SpandanaSomannapic.twitter.com/F15xnQmN2l— Trupthi '🕊 (@Yrbulbul_DBoss) December 3, 2025
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

