ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಅಮೂಲ್ಯ, ಕೇವಲ ಮೂರು ತಿಂಗಳಿಗೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಮನೆಯವರ ಕಿರುಕುಳವೇ ಸಾವಿಗೆ ಕಾರಣ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಡಿ.3): ಸರಿಯಾಗಿ ಬುಧವಾರ ಆಕೆ ಮದುವೆಯಾಗಿ ಮೂರು ತಿಂಗಳಾಗಿತ್ತು. ಇಬ್ಬರೂ ಅಕ್ಕಪಕ್ಕದ ಏರಿಯಾದವರು. ತುಂಬಾ ವರ್ಷಗಳಿಂದ ಪ್ರೀತಿ ಮಾಡಿದ್ದರು. ಆದರೆ, ಮದುವೆಯಾಗಿ ಮೂರು ತಿಂಗಳಿಗೆ ಸಂಸಾರ ಸರಿ ಬರದ ಕಾರಣಕ್ಕೆ ನವವಿವಾಹಿತೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳೆಯ ಕುಟುಂಬಸ್ಥರು, ಹುಡುಗನ ಕುಟುಂಬದವರ ಕಿರುಕುಳದಿಂದಾಗಿಯೇ ಆಕೆ ಸಾವು ಕಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತುಂಬಾ ವರ್ಷಗಳ ಕಾಲ ಪ್ರೀತಿ ಮಾಡಿ ಮೂರು ತಿಂಗಳ ಹಿಂದೆ 23 ವರ್ಷದ ಅಮೂಲ್ಯ 30 ವರ್ಷದ ಅಭಿಷೇಕ್‌ ಎನ್ನುವವರನ್ನು ಮದುವೆ ಆಗಿದ್ದರು. ಅದರೆ, ಬುಧವಾರ ಆಕೆ ನೇಣಿಗೆ ಕೊರಳುಕೊಟ್ಟು ಆ*ತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬ್ಯಾಡರಹಳ್ಳಿ ಪೊಲೀಸ್ ಠಾಣವ್ಯಾಪ್ತಿಯ ವಿದ್ಯಾಮಾನ ನಗರದಲ್ಲಿ ಘಟನೆ ನಡೆದಿದೆ.

ಅಭಿಷೇಕ್‌ ಕುಟುಂಬಸ್ಥರ ಮೇಲೆ ಆರೋಪ

ಆಂಧ್ರಹಳ್ಳಿಯಲ್ಲಿ ಅಮೂಲ್ಯ ವಾಸವಾಗಿದ್ದರೆ, ವಿದ್ಯಮಾನ್‌ ನಗರದಲ್ಲಿ ಅಭಿಷೇಕ್‌ ವಾಸವಿದ್ದ. ಅಕ್ಕಪಕ್ಕದ ಏರಿಯಾ ಆಗಿದ್ದರಿಂದ ಇಬ್ಬರೂ ಪರಸ್ಪರ ಪ್ರೀತಿ ಮಾಡಿದ್ದರು. ಮೂರು ತಿಂಗಳ ಹಿಂದೆ ಮನೆಯವರನ್ನ ಒಪ್ಪಿಸಿ ಇಬ್ಬರು ಮದುವೆ ಆಗಿದ್ದರು. ಆದರೆ, ಇಂದು ಏಕಾಏಕಿ ಅಭಿಷೇಕ್‌ ಮನೆಯಲ್ಲಿ ಅಮೂಲ್ಯ ನೇಣಿಗೆ ಶರಣಾಗಿದ್ದಾಳೆ.

ಅಮೂಲ್ಯ ಸಾವಿಗೆ ಅಭಿಷೇಕ್‌ ಕುಟುಂಬಸ್ಥರೆ ಕಾರಣ ಎಂದು ಅಮೂಲ್ಯ ಅವರ ಕುಟುಂಬಸ್ಥರು ಆರೋಪ ಮಾಡಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.